ಟಗರು (Tagaru) ಒದರಿದರೆ ಮಾತ್ರ ಬಲಿ ಕೊಡ್ತಾರಾ..? ಟಗರು ಒದರದೆ ಇದ್ದರೆ ಬಲಿ ಕೊಡೋದಿಲ್ವಾ..? ಹೀಗೊಂದು ಪ್ರಶ್ನೆ ಹುಟ್ಟುಹಾಕಿರುವುದು ಟಗರುಪಲ್ಯ (tagaru palya). ಇದು ಅಪ್ಪಟ ಮಂಡ್ಯದ ಮಳವಳ್ಳಿಯ (Mandya malavalli) ಕಥೆ. ಬಲಿ ಕೊಡುವುದಕ್ಕೆ ತಂದ ಹರಕೆಯ ಟಗರನ್ನು ಬಲಿ ಕೊಡುವ ಮುನ್ನ ತಲೆ ಒದರಬೇಕು. ಹಾಗೆ ತಲೆ ಒದರದೆ ಇದ್ದರೆ, ಬಲಿ ಕೊಡುವಂತಿಲ್ಲ. ಇದು ನಂಬಿಕೆ. ಆದರೆ ಟಗರುಪಲ್ಯದ (tagaru palya) ಟಗರು ತಲೆ ಒದರಲ್ಲ. ಟಗರು ತಲೆ ಒದರುತ್ತಾ.. ಹರಕೆ ತೀರುತ್ತಾ.. ಇಂಥಾದ್ದೊಂದು ಕುತೂಹಲ ಇಟ್ಟುಕೊಂಡೇ ಬಂದಿರೋ ಟಗರು ಪಲ್ಯ ಅಪ್ಪಟ ದೇಸೀ ಕಥೆ.
ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ (nenapirali Prem) ಪುತ್ರಿ ಅಮೃತಾ ಪ್ರೇಮ್ (actress amrutha prem) ಹೀರೋಯಿನ್ ಆಗಿದ್ದರೆ, ಪೋಷಕ ನಟನಾಗಿ ರಂಜಿಸುತ್ತಿದ್ದ ನಾಗಭೂಷಣ್ (actor nagabhushan) ಹೀರೋ ಆಗಿದ್ದಾರೆ. ಡಾಲಿ ಧನಂಜಯ (dolly Dhananjaya) ತಮ್ಮದೇ ಬ್ಯಾನರಿನಲ್ಲಿ ಮೂರನೇ ನಿರ್ದೇಶಕನನ್ನು ಪರಿಚಯಿಸುತ್ತಿದ್ದಾರೆ. ಉಮೇಶ್ ಕೆ.ಕೃಪಾ ಡೈರೆಕ್ಟರ್. ಒಳ್ಳೆಯ ಕಥೆಗಳನ್ನು ಸಿನಿಮಾ ಮಾಡೋ ಧನಂಜಯ, ಮೂವರು ನಿರ್ದೇಶಕರನ್ನು ನಮ್ಮ ಸಂಸ್ಥೆ ಕೊಟ್ಟಿದೆ ಎನ್ನುವುದೇ ಹೆಮ್ಮೆ ಎನ್ನುತ್ತಾರೆ. ಈ ಬಾರಿ ಅವರ ಸಂಸ್ಥೆ ಹೊಸ ಹೀರೋಯಿನ್ನ್ನೂ ಪರಿಚಯಿಸಿದೆ.
ಅಮೃತಾ ತಂದೆ ಪಾತ್ರದಲ್ಲಿ ರಂಗಾಯಣ ರಘು (rangayana raghu) ಹಾಗೂ ತಾಯಿ ಪಾತ್ರದಲ್ಲಿ ತಾರಾ ಅನುರಾಧಾ (thara anuradha), ಪೂರ್ಣಚಂದ್ರ, ವೈಜನಾಥ್ ಬಿರಾದಾರ್, ಚಿತ್ರಾ ಶೆಣೈ, ಶ್ರೀನಾಥ್ ವಸಿಷ್ಠ ಮುಂತಾದವರು ನಟಿಸಿದ್ದಾರೆ. ಈ ಚಿತ್ರದಲ್ಲಿ ವಾಸುಕಿ ವೈಭವ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.
ಬೇರೆ ಭಾಷೆಯ ಸಿನಿಮಾ ನೋಡಿದಾಗ ನಮ್ಮಲ್ಲಿ ಬರಬೇಕು ಅಂತೀವಲ್ಲ. ಆ ರೀತಿ ಕಥೆ ಇದು. ಬಡವರ ಮನೆ ಮಕ್ಕಳು ಬೆಳೆಯಬೇಕು ಎಂದು ನಾನು ಯಾವತ್ತೂ ನನಗೋಸ್ಕರ ಹೇಳಿಕೊಂಡಿಲ್ಲ. ಅದು ಬೇರೆಯವರಿಗೆ ಸ್ಫೂರ್ತಿ ಆಗಲಿ. ಯಾವುದೇ ಹಿನ್ನಲೆ ಇಲ್ಲದೇ ಬಂದವರು ನಮ್ಮ ಪ್ರೊಡಕ್ಷನ್ ನಿಂದ ಮೂವರು ಜನ ನಿರ್ದೇಶಕರು ಬಂದಿದ್ದಾರೆ ಎಂದಿದ್ದಾರೆ ಧನಂಜಯ.
ಎಲ್ಲ ಓಕೆ, ಮಂಡ್ಯ ಜಿಲ್ಲೆಯ ಭಾಗದಲ್ಲಿ ಟಗರು ತಲೆ ಒದರದಿದ್ದರೆ ಬಲಿ ಕೊಡೋದಿಲ್ವಾ..? ಮಳವಳ್ಳಿಯ ಜನರೇ ಉತ್ತರ ಕೊಡಬೇಕು.



