ಒಬ್ಬ ಅಜ್ಮಲ್ ಕಸಬ್ ಅರೆಸ್ಟ್ ಆಗದೇ ಹೋಗಿದ್ದರೆ.. ಮುಂಬೈ ದಾಳಿಯನ್ನು ಹಿಂದೂ ಉಗ್ರರ ಹಣೆಗೆ ಕಟ್ಟುವ ಪ್ರಯತ್ನಗಳು ಯಶಸ್ವಿಯಾಗುತ್ತಿದ್ದವು. ಆಗಿನ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಚಿದಂಬರಂ, ಶಿವರಾಜ್ ಪಾಟೀಲ್, ಅಂತುಲೆ ಮೊದಲಾದವರೆಲ್ಲ ದಾಳಿ ಶುರುವಾಗುತ್ತಿದ್ದಂತೆ ʻಇದು ಹಿಂದೂ ಉಗ್ರರʼ ಕೈವಾಡ ಎಂಬ ಮಾತು ಹೇಳಿ ಆಗಿತ್ತು. ಹಾಗೆ ನೋಡಿದರೆ.. ದೇಶದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳನ್ನು ಹಿಂದೂಗಳ ಹೆಸರಿಗೆ ಕಟ್ಟುವ ಸಂಚುಗಳು ಹೊಸದೇನಲ್ಲ. ಈ ಬಾರಿಯೂ ಅಷ್ಟೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬಿಟ್ಟ ಉಗ್ರರು ಹಿಂದೂಗಳ ಹೆಸರಿಟ್ಟುಕೊಂಡು ಯಾಮಾರಿಸುತ್ತಿದ್ದ ವಿಷಯ ಬಹಿರಂಗವಾಗಿದೆ.
ಅಬ್ದುಲ್ ಮತೀನ್ ವಿಘ್ನೇಶ್ ಆಗಿದ್ದ. ಆಧಾರ್ ಕಾರ್ಡ್ ಕೂಡಾ ಇತ್ತು..!
ಎನ್ ಐ ಎ ಬಿಡುಗಡೆ ಮಾಡಿದ ವಾಂಟೆಡ್ ಲಿಸ್ಟ್ ನಲ್ಲಿ ಅಬ್ದುಲ್ ಮತೀನ್ ಅಹಮದ್ ತಾಹಾ ಹೆಸರಿದೆ. ಈಗ ಹಿಂದೂ ಯುವಕನ ರೀತಿಯಲ್ಲಿದ್ದ ಮಾಹಿತಿ ಬಹಿರಂಗವಾಗಿದೆ. ಬಾಂಬ್ ಬ್ಲಾಸ್ಟ್ ಮಾಡಿದ ಆರೋಪಿ ಅಬ್ದುಲ್ ಮತೀನ್ ತಾಹ ತಾನು ಹಿಂದೂ ಹೆಸರು ಹೇಳಿಕೊಂಡು ದೇಶದ ವಿವಿಧ ನಗರಗಳಲ್ಲಿ ಸಂಚಾರ ಮಾಡುತ್ತಿದ್ದ. ತಲೆ ಮರೆಸಿಕೊಳ್ಳಲು ವಿಘ್ನೇಶ್ ಹಾಗೂ ಸುಮಿತ ಎಂಬ ಹೆಸರನ್ನು ಇಟ್ಟುಕೊಂಡು ಓಡಾಡುತ್ತಿದ್ದ ಮತೀಹ್, ವಿಘ್ನೇಶ್ ಅನ್ನೋ ಹೆಸರಿನಲ್ಲಿ ಆಧಾರ್ ಕಾರ್ಡ್ ಕೂಡಾ ಮಾಡಿಸಿಕೊಂಡಿದ್ದ.
ಇನ್ನು ಬಾಂಬ್ ಹಾಕಿದ ಆರೋಪಿ ಅಬ್ದುಲ್ ಮತೀನ್ ತಾಹನ ಸಹಚರ ಮುಸಾವೀರ್ ಹುಸ್ಸೇನ್ ಶಾಜಿಬ್ ಕೂಡ ತಲೆ ಮರೆಸಿಕೊಂಡಿದ್ದಾನೆ. ಈತ ಹೇಗಿರಬಹುದು ಅನ್ನೋ 3 ಮಾದರಿಯ ಫೋಟೋ ಹಂಚಿಕೊಳ್ಳಲಾಗಿದೆ.
ಮುಸಾವೀರ್ ಹುಸ್ಸೇನ್ ಶಾಜಿಬ್ ಕೂಡ ತನ್ನ ಹೆಸರನ್ನು ಬದಲಿಸಿಕೊಂಡು ದೇಶದ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದಾನೆ. ಈತ ಮಹಮ್ಮದ್ ಜುನೇದ್ ಸೈಯದ್ ಎಂಬ ಹೆಸರಿನಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾನೆ. ಶಂಕಿತರಿಬ್ಬರು ತಮ್ಮ ಐಡೆಂಟಿಟಿ ಮರೆಮಾಚಲು ವಿಗ್ ಹಾಗೂ ನಕಲಿ ಗಡ್ಡ ಮೀಸೆ ಗಳನ್ನ ಬಳಸುತ್ತಿದ್ದಾರೆ ಎಂದು ಎನ್‌ಐಎ ಮಾಹಿತಿ ನೀಡಿದೆ.
ಈತನಷ್ಟೇ ಅಲ್ಲ, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ತನ್ನ ಹೆಸರು ಮತ್ತು ದಾಖಲೆಗಳನ್ನು ಪ್ರೇಮಚಂದ್ರ ಹುಟ್ಟಗಿ, ಅರುಣ್ ಗೌಳಿ ಎಂದೆಲ್ಲ ಇಟ್ಟುಕೊಂಡಿದ್ದ. ಇತ್ತೀಚಿನ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಹಲವು ಉಗ್ರರು ಹಿಂದೂಗಳ ಹೆಸರಿಟ್ಟುಕೊಂಡು ಯಾಮಾರಿಸುತ್ತಿದ್ದರು ಎಂಬ ವಿಷಯ ಬಹಿರಂಗವಾಗಿದೆ.
ಇನ್ನು ಇದೇ ಪ್ರಕರಣದಲ್ಲಿ ಬಾಂಬ್ ತಯಾರಿಕೆಗೆ ಹಾಗೂ ಅವರ ಸಂಚಾರಕ್ಕೆ ಸಿಮ್ ಕೊಟ್ಟ ಮುಜಾಮಿಲ್ ಶರೀಫ್ ಅರೆಸ್ಟ್ ಆಗಿದ್ಧಾನೆ. ಈತ ಚಿಕ್ಕಮಗಳೂರಿನವನು. ಚಿಕ್ಕಮಗಳೂರು ನಗರದ ಅಯ್ಯಪ್ಪ ನಗರ (ದುಬೈ ನಗರ) ಬಡಾವಣೆಯ ಮುಜಮಿಲ್ ಶರೀಫ್ ಹಾಗೂ ಸಂಚುಕೋರ ಮುಜಾಮಿಲ್ ಒಂದೇ ಏರಿಯಾದವರು. ಆರೋಪಿಗಳಾದ ತೀರ್ಥಹಳ್ಳಿಯ ಅಬ್ದುಲ್ ಮಥೀನ್ ಅಹ್ಮದ್ ತಾಹ ಮತ್ತು ಮುಸಾವೀರ್ ಹುಸೇನ್ ಶಾಜೀಬ್ ಇಬ್ಬರಿಗೂ ಸಿಮ್ ಕೊಟ್ಟವನು ಚಿಕ್ಕಮಗಳೂರಿನ ಮುಜಾವಿಲ್.
ಚಿಕ್ಕಮಗಳೂರಿನ ಮುಜಾಮಿಲ್ ಶರೀಫ್ ಕಳಸಾ ಮೂಲದವನು. ಚಿಕ್ಕಮಗಳೂರಿಗೆ ಬಂದು ನೆಲೆಸಿದ್ದವನು, ನಂತರ ಬೆಂಗಳೂರಿನ ಚಿಕನ್ ಕೌಂಟಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಈತನ ತಂಗಿ ಮತ್ತು ತಾಯಿ ಇಬ್ಬರೂ ಅಯ್ಯಪ್ಪ ನಗರದಲ್ಲೇ ಇದ್ಧಾರೆ. ರೋಪಿ ಮುಜಾಮಿಲ್ ಶರೀಫ್‌ನನ್ನು 7 ದಿನಗಳ ಕಾಲ ಎನ್‌ಐಎ ವಶಕ್ಕೆ ಪಡೆಯುವಂತೆ ಕೋರ್ಟ್ ಆದೇಶ ಹೊರಡಿಸಿದೆ.



