ವೇದ ಸುಳ್ಳಾದರೂ ಗಾದೆ ಸುಳ್ಳಾಗದು.. ಇದು ಗಾದೆಗಳ ಬಗ್ಗೆಯೇ ಇರುವ ಗಾದೆ. ಇನ್ನು ಕಟ್ಟಿಕೊಂಡವಳು ಕಡೆಯ ತನಕ.. ಇಟ್ಟುಕೊಂಡವಳು ಇರುವ ತನಕ ಎನ್ನುವುದು ಮತ್ತೊಂದು ಗಾದೆ. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ.. ಎನ್ನವುದು ಇನ್ನೊಂದು ಗಾದೆ. ಇಂತಹ ಗಾದೆ ಮಾತುಗಳಿಗೇನೂ ಬರವಿಲ್ಲ. ಆ ಗಾದೆಗಳು ದರ್ಶನ್ ವಿಷಯದಲ್ಲೂ ಸುಳ್ಳಾಗಿಲ್ಲ. ಅಂದಹಾಗೆ ದರ್ಶನ್ ಹುಟ್ಟುಹಬ್ಬಕ್ಕೆ ಪವಿತ್ರಾ ಗೌಡ ಹ್ಯಾಪಿ ಬರ್ತ್ ಡೇ ಹೇಳಲೇ ಇಲ್ಲ..!
ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಬೇಲ್ ಬಳಿಕ ಹೊರಗೆ ಬಂದ್ಮೇಲೆ ತಮ್ಮ ಫ್ಯಾಷನ್ ಉದ್ಯಮಕ್ಕೆ ಹೊಸ ಟಚ್ ಕೊಡ್ತಿದ್ದಾರೆ. ಕುಂಭಮೇಳ, ದೇವಸ್ಥಾನ ಅಂತೆಲ್ಲ ಸುತ್ತಾಡ್ತಾ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದು ದಿನಕ್ಕೊಂದು ಪೋಸ್ಟ್ ಮಾಡ್ತಿದ್ದಾರೆ. ಆದರೆ ಪವಿತ್ರಾ ಗೌಡ ತಮ್ಮ ಗೆಳೆಯನ ಹುಟ್ಟುಹಬ್ಬದ ದಿನ ವಿಶ್ ಮಾಡಲೇ ಇಲ್ಲ. ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಶೇರ್ ಮಾಡಿಲ್ಲ.
ಪವಿತ್ರಾ ಅವರು ಅರೆಸ್ಟ್ ಆಗುವ ಮೊದಲು ದರ್ಶನ್ ಜೊತೆಯಲ್ಲಿದ್ದ ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ದಿನಕ್ಕೊಂದು ವಿಡಿಯೋ ಅಥವಾ ಪೋಸ್ಟ್ ಹಾಕಿ ವಿಜಯಲಕ್ಷ್ಮಿಗೆ ಟಾಂಗ್ ಕೊಡ್ತಾ ಇದ್ರು. ಬಹುಶಃ ಆ ವೇಳೆಯಲ್ಲಿಯೇ ವಿಜಯಲಕ್ಷ್ಮಿ ಮತ್ತು ದರ್ಶನ್ ಇನ್ನಷ್ಟು ಹತ್ತಿರವಾದರು ಎನ್ನುತ್ತಾರೆ ಹತ್ತಿರದಿಂದ ಅವರನ್ನು ಬಲ್ಲವರು. ಪವಿತ್ರಾ ಗೌಡ ಅವರನ್ನು ಹೊರಗಿಟ್ಟು, ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು ದರ್ಶನ್ ಮತ್ತು ವಿಜಯಲಕ್ಷ್ಮಿ. ಇನ್ನು ಈ ವೇಳೆಯಲ್ಲಿಯೇ ರೇಣುಕಾಸ್ವಾಮಿ ಅವರ ಬಾಳಲ್ಲಿ ಎಂಟ್ರಿ ಕೊಟ್ಟಿದ್ದ. ಆಮೇಲೆ ಕೊಲೆಯೂ ಆದ.
ಆದರೆ ಆ ಕೊಲೆ ಕೇಸಿನಲ್ಲಿ ಅರೆಸ್ಟ್ ಆಗಿ ಜಾಮೀನಿನ ಮೇಲೆ ಹೊರಗೆ ಬಂದ ನಂತರ ಪವಿತ್ರಾ ಗೌಡ ಅವರು ಅಷ್ಟಾಗಿ ಆ್ಯಕ್ಟಿವ್ ಆಗಿರಲಿಲ್ಲ. ಇನ್ನು ಪವಿತ್ರಾ ಅವರ ರೆಡ್ ಕಾರ್ಪೆಟ್ ರೀ-ಲಾಂಚ್ ವೇಳೆ ದರ್ಶನ್ ಅವರು ಆಬ್ಸೆಂಟ್ ಆಗಿದ್ದರು. ದರ್ಶನ್ ಅವರ ಆಪ್ತರು ಕೂಡಾ ರೀ-ಲಾಂಚ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಪವಿತ್ರಾ ಗೌಡ ಅವರ ಬಿಸಿನೆಸ್ ಶುಭಾರಂಭ ಮಾಡಿದ್ದ ನಟಿಯರೆಲ್ಲ ದರ್ಶನ್ ಗ್ಯಾಂಗಿನವರೇ.
ಇನ್ನು ಪವಿತ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಾಯಿಯನ್ನು ಹೊಗಳಿ ಬರೆದಿದ್ದರು. ದರ್ಶನ್ ವಿಷಯವನ್ನು ಅಪ್ಪಿತಪ್ಪಿಯೂ ಬರೆದಿರಲಿಲ್ಲ.
ದರ್ಶನ್ ಜೊತೆಗಿದ್ದ ಫೋಟೋ, ವಿಡಿಯೋ ಹಾಕಿಕೊಂಡ ವಿಷಯಕ್ಕೇ ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ಅವರ ಸೋಷಿಯಲ್ ಮೀಡಿಯಾ ವಾರ್ ನಡೆದಿತ್ತು. ಇನ್ನು ವಿಜಯಲಕ್ಷ್ಮಿ ಅವರು ದರ್ಶನ್ ಅವರು ತಮ್ಮ ಹೆಗಲ ಮೇಲೆ ತಲೆಯಿಟ್ಟು ಮಲಗಿರುವ ಫೋಟೋ ಹಾಕಿ ವಿಷ್ ಮಾಡಿದ್ದರೆ, ಮಗ ವಿನೀಶ್ ಅಪ್ಪ ಐ ಲವ್ ಯೂ ಎಂದು ಪೋಸ್ಟ್ ಹಾಕಿ ವಿಷ್ ಮಾಡಿದ್ದಾರೆ.
ಅಲ್ಲಿಗೆ ಒಂದು ಕೊಲೆ ಕೇಸು, ಹೆಚ್ಚೂ ಕಡಿಮೆ 6 ತಿಂಗಳ ಜೈಲುವಾಸ ದರ್ಶನ್ ಅವರನ್ನು ಬದಲಾಯಿಸಿದೆ. ತಪ್ಪು ತಿದ್ದಿಕೊಳ್ಳೋ ಹಾಗೆ ಮಾಡಿದೆ. ಕಟ್ಟಿಕೊಂಡವಳು ಕಡೇ ತಂಕ ಅನ್ನೋ ಗಾದೆ ಮತ್ತೊಮ್ಮೆ ಋಜುವಾತಾಗಿದೆ.



