ಯುವ. ಯುವ ರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ. ಆ ಸಿನಿಮಾದಲ್ಲಿ ಫೈಟ್ಸ್, ರೊಮ್ಯಾನ್ಸ್ ಇತ್ತು. ಕಾಲೇಜ್ ಸ್ಟೂಡೆಂಟ್, ಬಾಕ್ಸರ್ ಆಗಿರುವ ನಾಯಕನಾಗಿ ನಟಿಸಿದ್ದ ಯುವ, ಸಿನಿಮಾದಲ್ಲಿ ಎಲ್ಲಿಯೂ ನಗುವುದಿಲ್ಲ. ಫುಲ್ ಸೀರಿಯಸ್. ಸಪ್ತಮಿ ಗೌಡ ಜೊತೆ ರೊಮ್ಯಾನ್ಸ್ ದೃಶ್ಯಗಳಲ್ಲೂ ನಕ್ಕಿದ್ದು ಇಲ್ಲ. ಆದರೆ.. ಎಕ್ಕ ಹಾಗಲ್ಲ. ʻಡೆಲಿವರಿ ಬಾಯ್ʼ ಇಂದ ʻಕ್ಯಾಬ್ ಡ್ರೈವರ್ʼಗೆ ಪ್ರಮೋಷನ್ ಪಡೆದಿರುವ ಯುವ, ಎಕ್ಕ ಚಿತ್ರದಲ್ಲಿ ಕ್ಯಾಬ್ ಡ್ರೈವರ್. ಕ್ಯಾರೆಕ್ಟರಿನಲ್ಲಿ ವೇರಿಯೇಷನ್ಸ್ ಇವೆ.
ಅವರ ಮೊದಲ ಚಿತ್ರದಲ್ಲಿ ಬಾಕ್ಸರ್ ಆಗಿದ್ದರೂ.. ಡೆಲಿವರಿ ಬಾಯ್ ವೃತ್ತಿ ಮಾಡಿದ್ದರು ಯುವ. ಈಗ ಒಂದಿಷ್ಟು ಪ್ರಮೋಷನ್ ಸಿಕ್ಕಿದೆ. ಎಕ್ಕ ಚಿತ್ರದಲ್ಲಿನ ಒಂದು ಥೀಮ್ ಇಷ್ಟೆ.. ʻರಾತ್ರಿ ಮಲಗಿದಾಗ ನೆಮ್ಮದಿಯ ನಿದ್ರೆ ಮಾಡಬೇಕುʼ ಎಂಬ ಗುರಿ ಇಟ್ಟುಕೊಂಡ ಮುತ್ತು, ಕ್ಯಾಬ್ ಡ್ರೈವರ್ ಆಗಿ, ರೌಡಿಯಾಗಿ ಬದಲಾಗುವುದು ಹೇಗೆ.. ಎನ್ನುವುದೇ. ‘ಎಕ್ಕ’. ಸಿನಿಮಾದಲ್ಲಿ ಕಾಮಿಡಿಯೂ ಇದೆ. ಆಕ್ಷನ್ನೂ ಇದೆ. ರೊಮ್ಯಾನ್ಸೂ ಇದೆ. ಅದೂ.. ಒಬ್ಬರಲ್ಲ.. ಇಬ್ಬಿಬ್ಬರ ಜೊತೆ.
ಎಕ್ಕ ಕಥೆಯಲ್ಲಿ ನಾಯಕನ ಪಾತ್ರವನ್ನು ನಿರ್ದೇಶಕ ರೋಹಿತ್ ಪದಕಿ ಅವರು ವಿವರಿಸಿದ ರೀತಿ ಇಷ್ಟವಾಯಿತು. ಇಲ್ಲಿ ನಾನು ‘ಮುತ್ತು’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವ ಯುವ ರಾಜ್ ಮೊದಲ ಸಿನಿಮಾದಲ್ಲಿ ಬಂದ ಒಂದಷ್ಟು ಸಲಹೆಗಳು, ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಿದ್ದೇನೆ ಎನ್ನುತ್ತಾರೆ.
ಯುವ ಸಿನಿಮಾದಲ್ಲಿ ನಾಯಕ ತನ್ನ ಕೋಪವನ್ನು ಅಡಗಿಸಿಟ್ಟುಕೊಂಡು ಸದಾ ಕುದಿಯುತ್ತಲೇ ಇರುತ್ತಾನೆ. ಆದರೆ ಇಲ್ಲಿ ಹಾಗಲ್ಲ. ಮುತ್ತು’ ಪಾತ್ರದಲ್ಲಿ ನಾನು ತಾಯಿ ಜೊತೆ, ಹುಡುಗಿ ಜೊತೆ, ಕೋಪ ಬಂದಾಗ ಅನ್ನೋದು ಸೇರಿ ಎಲ್ಲವು ಸಿನಿಮಾದಲಲ್ಲಿದೆ. ಒಟ್ಟು 05 ಶೇಡ್‌ಗಳಲ್ಲಿ ನಟಿಸಿದ್ದೇನೆ. ರೋಮ್ಯಾಂಟಿಕ್, ಫೈಟ್, ಸೆಂಟಿಮೆಂಟ್ ಹೀಗೆ ಎಲ್ಲವು ಇದರಲ್ಲಿದೆ. ಆ ಎಲ್ಲ ವರ್ಷನ್ ಗಳಲ್ಲಿ ನನ್ನ ನೀವು ತೆರೆ ಮೇಲೆ ನೋಡಬಹುದು.. ಎಂಬ ಕಾನ್ಪಿಡೆನ್ಸ್ ಕೊಡ್ತಾರೆ ಯುವರಾಜ್ ಕುಮಾರ್.
ಚಿತ್ರದ ರಾಯಭಾರಿಯಾಗಿರುವುದು ʻಬ್ಯಾಂಗಲ್ ಬಂಗಾರಿʼ ಹಾಡು. ಉಳಿದಂತೆ ರಿಲೀಸ್ ಆಗಿರುವ ಹಾಡುಗಳೂ ಕೂಡಾ ಹಿಟ್ ಆಗಿವೆ. ಈ ಚಿತ್ರದಲ್ಲಿ ಸಂಜನಾ ಆನಂದ್, ಸಂಪದಾ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಅಮ್ಮ ಶೃತಿಯಿಂದ ಬೈಸಿಕೊಂಡಿದ್ದಾರೆ. ಅತುಲ್ ಕುಲಕರ್ಣಿ, ಆದಿತ್ಯ, ರಾಹುಲ್ ದೇವ್‌ಶೆಟ್ಟಿ.. ಹೀಗೆ ಒಂದು ದೊಡ್ಡ ತಂಡವೇ ಇದೆ. ಕಾಮಿಡಿಯೂ ಇದೆ. ಶೋಕವೂ ಇದೆ. ಸೆಂಟಿಮೆಂಟ್ ಇದೆ. ಒಂದೊಳ್ಳೆ ಕಥೆ ಇದೆ ಎನ್ನುವುದು ರೋಹಿತ್ ಪದಕಿ ಕೊಡುತ್ತಿರುವ ಪ್ರಾಮಿಸ್.ಅಶ್ವಿನಿ ಪುನೀತ್ ರಾಜ್ ಕುಮಾರ್, ಕಾರ್ತಿಕ್ ಗೌಡ, ಜಯಣ್ಣ ಅವರು ಒಟ್ಟಾಗಿ ‘ಎಕ್ಕ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಮೋಡಿ ಮಾಡಿವೆ.



