ದರ್ಶನ್ ಮಾತಿಗೆ ಉಮಾಪತಿ ಕೊಟ್ಟ ಕೌಂಟರ್ ಒಂದಲ್ಲ.. ಎರಡಲ್ಲ.ದರ್ಶನ್ ಮಾತುಗಳೂ ಅಷ್ಟೇ. ಖಾರಖಾರ. ದರ್ಶನ್ ಅವರು ತಮ್ಮದೇ ಚಿತ್ರ ನಿರ್ಮಾಣ ಮಾಡಿದ್ದ ಉಮಾಪತಿ ಅವರಿಗೆ ಬಳಸಿದ್ದ ಪದಗಳು ನಿಂದನಾತ್ಮಕವಾಗಿವೆ. ಅಯ್ಯೋ ತಗಡೇ.. ಗುಮ್ಮಿಸ್ಕೋತೀಯಾ ಅಂತೆಲ್ಲ ಬಳಸಿರೋದು ವಿವಾದ ಹುಟ್ಟುಹಾಕಿದೆ. ಇವುಗಳಿಗೆಲ್ಲ ನಿರ್ಮಾಪಕರೂ ಆಗಿರುವ ಉಮಾಪತಿ ಉತ್ತರ ಕೊಟ್ಟಿದ್ಧಾರೆ. ಹಲವ್ ಮಾಧ್ಯಮಗಳಲ್ಲಿ ಮಾತನಾಡಿರುವ ಉಮಾಪತಿ ಕೊಟ್ಟಿರುವ ತಿರುಗೇಟುಗಳು ಕೂಡಾ ಅಷ್ಟೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.
ಅವರು ವಯಸ್ಸಿನಲ್ಲಿ ದೊಡ್ಡವರು. ನಾನು ಕೈಲಾಗದ ವ್ಯಕ್ತಿ ಅಲ್ಲ. ತಿರುಗಿಸಿ ಹೇಳೋಕೆ ಒಂದೇ ನಿಮಿಷ. ತಾಕತ್ತು ಇರೋದಕ್ಕೇ ನಿರ್ಮಾಪಕನಾಗಿ ಇಲ್ಲಿ ನಿಂತಿದ್ದೀನಿ. ಯಾವನಿಗೂ ಹೆದರೋ ಅಗತ್ಯ ಇಲ್ಲ. ಪದಗಳನ್ನ ಬಳಸೋವಾಗ ಎಚ್ಚರಿಕೆ, ಜವಾಬ್ದಾರಿ ಇರಬೇಕು.
ಗುಮ್ಮುವ ಟೈಮ್‌ನಲ್ಲಿ ನಾನೂ ಗುಮ್ಮಿದ್ದೀನಿ. ಅದು ದರ್ಶನ್ ಅವರಿಗೂ ಗೊತ್ತಿದೆ. ನಾನು ಹೇಗೆ ಗುಮ್ಮಿದ್ದೀನಿ ಅಂತ. ಮೀಡಿಯಾದವರು ಇಂತಹ ಪದಗಳನ್ನ ಬಳಸಿದ್ದಕ್ಕೇ ೨ ವರ್ಷಗಳ ಹಿಂದೆ ಬ್ಯಾನ್ ಮಾಡಿದ್ರು. ಸ್ಟೇಜ್ ಸಿಕ್ತು ಅಂತಾ ಬಾಯಿಗೆ ಬಂದಂಗೆ ಮಾತನಾಡಬಾರದು. ಯಾವತ್ತು ಬುದ್ದಿ ಕಲೀತಾರೆ ದರ್ಶನ್.
ಯಾರು ಯಾರಿಗೆ ಗುಮ್ತಾರೆ.. ಇವರೇನು ರಾಜವಂಸ್ಥರಾ? ನಾನೂ ರಾಜವಂಶಸ್ಥ ಅಲ್ಲ. ಅವರೂ ಅಲ್ಲ. ಎಲ್ಲರೂ ಕಷ್ಟಪಟ್ಟೇ ಬದುಕ್ತಾ ಇರೋದು. ವೇದಿಕೆ ಸಿಕ್ತು ಅಂಥಾ ಮಾತನಾಡಬಾರದು. ನಾನು ದುಡ್ಡು ಹಾಕದೇ ಇದ್ರೆ ಕೆಲಸ ಆಗಿರೋದಾ? ಇವತ್ತು ಯಾರು ಯಾವ ಕೆಲ್ಸ ಫ್ರೀಯಾಗಿ ಮಾಡ್ತಾರೆ..?
ಇದೇ ತಗಡು ತಾನೇ ಅವತ್ತು ‘ರಾಬರ್ಟ್’ ಸಿನಿಮಾ ಮಾಡಿದ್ದು? ಫೇಸ್ ಆಫ್ ದಿ ಪ್ರಾಜೆಕ್ಟ್ ದರ್ಶನ್ ಅವರೇ. ಅದನ್ನ ನಾನು ಒಪ್ಪಿಕೊಳ್ತೀನಿ. ನಾನು ಮಾಡಿರೋದನ್ನ ಮಾಡಿದ್ದೀನಿ ಅಂತಲೇ ಒಪ್ಪಿಕೊಳ್ತೀನಿ. ಸಿನಿಮಾ ಆಗೋವರೆಗೂ ನಿರ್ಮಾಪಕರು. ಸಿನಿಮಾ ಆದ್ಮೇಲೆ ತಗಡು.
ನಮ್ಮ ದೇಹ ತೂಕ ಇದ್ದರೆ ಸಾಲದು, ಮಾತೂ ತೂಕ ಇರಬೇಕು. ಶಿಳ್ಳೆ ಹಾಕೋರೆಲ್ಲಾ ಅನ್ನ ಹಾಕಲ್ಲ. ನಾವು ಚಪ್ಪಲಿಗಳಾಗಿ ದರ್ಶನ್ ಮನೆಯವರೆಗೂ ಹೋಗ್ತೀವಿ. ಕೊನೆಗೆ ಮನೆಯ ಹೊರಗೆ ಉಳಿದುಕೊಳ್ತೀವಿ. ಚಪ್ಪಲಿಗಳು ಮನೆಯೊಳಗೆ ಹೋಗೋಕೆ ಆಗ್ತದಾ? ಗೌರವ ಇಲ್ಲದ ಕಡೆ ನಮ್ಮ ಚಪ್ಪಲಿಯೂ ಹೋಗಬಾರದು.
ನಮ್ಮ ದೇಹ ತೂಕ ಇದ್ದರೆ ಸಾಲದು, ಮಾತೂ ತೂಕ ಇರಬೇಕು. ಶಿಳ್ಳೆ ಹಾಕೋರೆಲ್ಲಾ ಅನ್ನ ಹಾಕಲ್ಲ.
ಹೀಗೆ ಒಟ್ಟಾರೆಯಾಗಿ ದರ್ಶನ್ ಅವರ ವಿರುದ್ಧ ಕೌಂಟರ್ ಮೇಲೆ ಕೌಂಟರ್ ಕೊಟ್ಟಿದ್ಧಾರೆ. ಆದರೆ, ಇದಕ್ಕೆ ಮತ್ತೆ ದರ್ಶನ್ ರಿಯಾಕ್ಟ್ ಮಾಡಿಲ್ಲ.



