ಒಂದು ಕುಟುಂಬಕ್ಕೆ ಸಾವನ್ನು ತಡೆದುಕೊಳ್ಳುವುದೇ ಕಷ್ಟ. ಅದರಲ್ಲೂ ಪುನೀತ್ ಅವರಂತಹವರನ್ನು ಕಳೆದುಕೊಂಡ ಅಭಿಮಾನಿಗಳೇ ಇನ್ನೂ ನೋವಿನಿಂದ ಹೊರಬಂದಿಲ್ಲ. ಇನ್ನು ಅವರೊಂದಿಗೆ ಇಷ್ಟು ವರ್ಷ ಬಾಳಿದ್ದವರ ಕಷ್ಟವೇ ಬೇರೆ. ಆದರೆ.. ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಒಂದೇ ಒಂದು ಚಾನ್ಸ್ ಸಿಕ್ಕರೂ ಬಿಡೋದಿಲ್ಲ ಎನ್ನುವಂತೆ ಕಾಡುತ್ತಲೇ ಇದ್ಧಾರೆ. ಈ ಹಿಂದೆಯೂ ಕಾಡಿದ್ದರು. ಈಗಲೂ ಕಾಡುತ್ತಿದ್ಧಾರೆ. ಅದಕ್ಕೆಲ್ಲ ಕಾರಣ ಫ್ಯಾನ್ಸ್ ವಾರ್.
ಫ್ಯಾನ್ ವಾರ್ ಎನ್ನುವುದು ದಿನದಿಂದ ದಿನಕ್ಕೆ ಕೆಳ ಹಂತಕ್ಕೆ ಹೋಗುತ್ತಿದೆ. ಅಸಭ್ಯ ಭಾಷೆ, ಕೊಳಕು ಪದಗಳು, ಬೈಗುಳ, ಅಮ್ಮ.. ಅಕ್ಕ.. ಸೂ..ಮಗ, ಬೋ.. ಮಗ, ಮಿಂ.. ಮಗ.. ಇಂತಹ ಮಾತುಗಳನ್ನೂ ಮೀರಿ.. ಇನ್ನೂ ಅಸಹ್ಯದ ಹಂತಕ್ಕೆ ತಲುಪುತ್ತಿದೆ. ಇಂತಹ ವಿಕೃತ ಮನಸ್ಸಿನವರ ಟಾರ್ಗೆಟ್ ಆಗಿರುವುದು ಅಶ್ವಿನಿ ಪುನೀತ್ ರಾಜಕುಮಾರ್.
ಆರ್ʻಸಿಬಿಯ ಜೆರ್ಸಿ ಲಾಂಚ್ ಈವೆಂಟಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅತಿಥಿಯಾಗಿ ಹೋಗಿದ್ದರು. ಮೊದಲ ಪಂದ್ಯ ಗೆದ್ದ ಆರ್ʻಸಿಬಿ, ಆಮೇಲೆ ಎರಡು ಪಂದ್ಯ ಸೋತಿತ್ತು. ಇದಕ್ಕೆ ಕಾರಣ ಅಶ್ವಿನಿ ಪುನೀತ್ ರಾಜಕುಮಾರ್ ಎಂಬುದು ವಿಕೃತ ಅಭಿಮಾನಿಗಳ ವಾದ. ಇವರ ವಾದಗಳ ಪ್ರಕಾರ ಅಶ್ವಿನಿ ಗಂಡನನ್ನು ಕಳೆದುಕೊಂಡಿರುವ ವಿಧವೆ.
ಹೀಗಾಗಿಯೇ ತಂಡ ಸೋಲುತ್ತಿದೆ ಪೋಸ್ಟ್ʻನಲ್ಲಿ ಇನ್ನೂ ಅಶ್ಲೀಲ ಪದಗಳನ್ನು ಬಳಸಲಾಗಿದ್ದು, ಗಂಡ ಸತ್ತ ಮುಂಡೆ.. ಎಂದೆಲ್ಲ ಹೇಳಲಾಗಿದೆ. ಅಂತಹವರನ್ನು ಮನೆಯ ಶುಭ ಕಾರ್ಯಕ್ಕೇ ಕರೆಯುವುದಿಲ್ಲ. ಇಂತಹವರು ಬಂದಿದ್ದಕ್ಕೇ ಆರ್ʻಸಿಬಿ ಸೋತಿದೆ ಎನ್ನುವುದು ಸ್ಯಾಡಿಸ್ಟುಗಳ ವಾದ. ಅದು ಕೇವಲ ವಾದವಾಗಿಯಷ್ಟೇ ಉಳಿಯದೆ.. ಫೇಸ್ʻಬುಕ್, ಟ್ವಿಟ್ಟರ್, ಇನ್ಸ್ʻಸ್ಟಾಗ್ರಾಂ.. ಗಳಿಗೂ ಹಬ್ಬಿದೆ.


ವಿಕೃತಿಯನ್ನು ಕ್ಲೀನ್ ಮಾಡುವುದಕ್ಕೆ ಸಾಧ್ಯವಾಗದೇ ಹೋದರೂ.. ವಿಕೃತಿಯನ್ನು ಹೊರಗೆ ತೋರಿಸುವ ಕೆಟ್ಟ ಸಂಸ್ಕೃತಿಗೆ ಕಡಿವಾಣ ಹಾಕಬಹುದು.
ಈ ಹಿಂದೆ ಸ್ಟಾರ್ ನಟನೊಬ್ಬ ಅದೃಷ್ಟ ಲಕ್ಷ್ಮಿಯನ್ನು ಮನೆಗೆ ಬಂದಾಗ ಬಟ್ಟೆ ಬಿಚ್ಚಿ ಕೂರಿಸಬೇಕು ಎಂದು ಹೇಳಿದ್ದಕ್ಕೆ.. ಅಶ್ವಿನಿ ಅವರ ಫೋಟೋ ಹಾಕಿ ವಿಕೃತಿ ಮೆರೆದಿದ್ದರು. ಪುನೀತ್ ಅವರ ಮಕ್ಕಳನ್ನೂ ಕೆಟ್ಟದಾಗಿ ಚಿತ್ರಿಸಿದ್ದರು. ಇದೀಗ ಯುವ ಚಿತ್ರವನ್ನೂ ಹಾಗೆಯೇ ಲೇವಡಿ ಮಾಡುತ್ತಿದ್ಧಾರೆ. ಸಿನಿಮಾಗಳನ್ನು ಒಪ್ಪುವುದು ಬಿಡುವುದು ಬೇರೆ. ಟೀಕೆ ಮಾಡುವುದಕ್ಕೂ ದುಡ್ಡು ಕೊಟ್ಟು ಸಿನಿಮಾ ನೋಡಿದ ಪ್ರೇಕ್ಷಕರಿಗೆ ಅರ್ಹತೆ ಇರುತ್ತೆ ಎಂದುಕೊಳ್ಳೋಣ. ಆದರೆ.. ಕುಟುಂಬದವರ ಪರಿಸ್ಥಿತಿಗಳನ್ನೂ ಹೀಯಾಳಿಸುವ, ಆಡಿಕೊಳ್ಳುವ ಮನಸ್ಥಿತಿ ಇದೆಯಲ್ಲ.. ಅದಕ್ಕೆ ಚಿಕಿತ್ಸೆ ಆಗಬೇಕು.



