ಒಂದು ಸಿನಿಮಾ ರಿಲೀಸ್ ಆಗಿ ಎರಡನೇ ವಾರಕ್ಕೆ ಬರುತ್ತಿರುವಾಗಲೇ ಒಟಿಟಿಗೆ ಬರುತ್ತವೆ. ಇದೀಗ ಹಿಟ್ ಆಗಿರುವ ಕಾಟೇರ ಚಿತ್ರವೂ ಕೂಡಾ ಸರಿಯಾಗಿ 43 ದಿನಕ್ಕೆ ಒಟಿಟಿಗೆ ಬರುತ್ತಿದೆ. ಕಂಟೆಂಟ್ ಮುಖ್ಯ ಎನ್ನುವುದು ನಿಜವಾದರೂ.. ಹಿಟ್ ಆದ ಚಿತ್ರಕ್ಕೆ ಡಿಮ್ಯಾಂಡ್ ಹೆಚ್ಚು. ಹೀಗಿದ್ದರೂ.. ಸೂಪರ್ ಡ್ಯೂಪರ್ ಹಿಟ್ ಆದ ಸಿನಿಮಾವೊಂದು.. ಬಾಕ್ಸಾಫೀಸಿನಲ್ಲಿ 300+ ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರವೊಂದು ಒಟಿಟಿಗೆ ಬರೋದಕ್ಕೆ 9 ತಿಂಗಳು ಕಾಯಬೇಕಾಗಿದ್ದು ಏಕೆ..? ಸಂಥಿಂಗ್ ಈಸ್ ಇಂಟ್ರೆಸ್ಟಿಂಗ್.
ಕೇರಳ ಸ್ಟೋರಿ. ಕಳೆದ ವರ್ಷ ರಿಲೀಸ್ ಆಗಿದ್ದ ಸಿನಿಮಾ. ಚಿತ್ರದಲ್ಲಿ ಇದ್ದದ್ದು ಲವ್ ಜಿಹಾದ್ ಕಥೆ. ಕೇರಳದಲ್ಲಿ ಬೆಳಕಿಗೆ ಬಂದಿದ್ದ ಸತ್ಯ ಕಥೆ ಆಧರಿಸಿದ್ದ ಸಿನಿಮಾ. ಮುಸ್ಲಿಂ ಹುಡುಗರು ಹುಡುಗಿಯರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಯುವತಿಯರನ್ನು ಐಸಿಸ್ ಉಗ್ರರನ್ನಾಗಿಸುವ ಕಥೆ. ಹೀಗಾಗಿಯೇ ಈ ಚಿತ್ರ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ್ದರೂ ಒಟಿಟಿಗೆ ತೆಗೆದುಕೊಳ್ಳೋಕೆ ಹಿಂದೇಟು ಹಾಕಿದ್ದರು.
9 ತಿಂಗಳ ಬಳಿಕ ಕೇರಳ ಸ್ಟೋರಿಗೆ ಒಟಿಟಿ ಭಾಗ್ಯ ಸಿಕ್ಕಿದೆ. ಸುದಿಪ್ತೊ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಸಿನಿಮಾ ಜೀ5 ನಲ್ಲಿ ಫೆಬ್ರವರಿ 16ರಂದು ರಿಲೀಸ್ ಆಗುತ್ತಿದೆ. ಯಾವುದೇ ನಿರೀಕ್ಷೆ ಇಲ್ಲದೇ ಮಾರ್ಚ್ 5ರಂದು ಬಿಡುಗಡೆಯಾಗಿದ್ದ ಸಿನಿಮಾ ನೋಡ ನೋಡುತ್ತಲೇ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿತ್ತು. ಕರ್ನಾಟಕದಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಅದಾ ಶರ್ಮಾ, ಯೊಗಿನಾ ಬಿಹಾನಿ, ಸೋನಿಯಾ ಬಲಾನಿ, ಸಿದ್ದಿ ಇದ್ನಾನಿ, ಪ್ರಣವ್ ಮಿಶ್ರಾ ‘ದಿ ಕೇರಳ ಸ್ಟೋರಿ’ ಕ್ಕೆ ಸುದಿಪ್ತೊ ಸೇನ್ ನಿರ್ದೇಶನವಿತ್ತು. ಚಿತ್ರವನ್ನು ಆಗ ತಮಿಳುನಾಡು, ಪ.ಬಂಗಾಳದಲ್ಲಿ ಬ್ಯಾನ್ ಮಾಡಲಾಗಿತ್ತು. ಕೇರಳದಲ್ಲಿ ಬಿಡುಗಡೆಯಾಗಿತ್ತಾದರೂ.. ಚಿತ್ರಮಂದಿರಗಳ ಮೇಲೆ ದಾಳಿಯಾಗಿತ್ತು. ಇಷ್ಟೆಲ್ಲದರ ನಡುವೆಯೂ ಸಿನಿಮಾ ಹಿಟ್ ಆಗಿತ್ತು ಎನ್ನುವುದು ವಿಶೇಷ.
ಚಿತ್ರದಲ್ಲಿ ಶಾಲಿನಿ, ಗೀತಾಂಜಲಿ ಹಾಗೂ ನಿಮ್ಹಾ ಎನ್ನುವ ಮೂವರು ಯುವತಿಯರು ವಿದ್ಯಾಭ್ಯಾಸಕ್ಕಾಗಿ ಕಾಸರಗೋಡಿನ ಕಾಲೇಜು ಸೇರುತ್ತಾರೆ. ಹಾಸ್ಟೆಲ್ ರೂಮ್ ಮೇಟ್ ಆಸಿಫಾ ಕೇರಳ ಮೂಲದ ಈ ಮೂವರು ಯುವತಿಯರನ್ನು ಮತಾಂತರ ಮಾಡುತ್ತಾಳೆ. ಮತಾಂತರಗೊಂಡವರು ಉಗ್ರರ ಜಾಲಕ್ಕೆ ಸಿಲುಕಿ ಅಲ್ಲಿಂದ ತಪ್ಪಿಸಿಕೊಳ್ಳುವ ಕಥೆಯೇ ದಿ ಕೇರಳ ಸ್ಟೋರಿ.
ಸಿನಿಮಾ ಬಿಡುಗಡೆಯಾದಾಗಲೂ ವಿವಾದವಾಗಿತ್ತು. ಕೇರಳದಲ್ಲಂತೂ ತಾವೇ ಒಪ್ಪಿಕೊಂಡಿದ್ದ ಸತ್ಯವನ್ನು ಸುಳ್ಳು ಎಂದುಬಿಟ್ಟಿತ್ತು ಸರ್ಕಾರ. ಕಾಂಗ್ರೆಸ್, ತೃಣ ಮೂಲ ಕಾಂಗ್ರೆಸ್, ಡಿಎಂಕೆ, ಎಡಪಕ್ಷಗಳು ಬಲವಾಗಿ ವಿರೋಧಿಸಿದ್ದವು. ಚಿತ್ರ ಬಿಡುಗಡೆಯನ್ನೇ ನಿಷೇಧಿಸಿದ್ದ ರಾಜ್ಯಗಳೆಂದರೆ ತಮಿಳುನಾಡು ಹಾಗೂ ಪ.ಬಂಗಾಳ. ಈಗ ಒಟಿಟಿಗೆ ಬರುತ್ತಿದೆ. ಎಲ್ಲ ವಿರೋಧಗಳೂ ಗೊತ್ತಿದ್ದೂ.. ಜೀ5 ಖರೀದಿ ಮಾಡಿದೆ. ಈಗ ಕೇರಳ ಸ್ಟೋರಿಯನ್ನು ಸ್ಟ್ರೀಮೀಂಗ್ ಮಾಡುತ್ತಿರುವ ಜೀ5 ಒಟಿಟಿಯನ್ನೇ ಬ್ಯಾನ್ ಮಾಡ್ತಾರಾ..?



