ಆತ ನಿವೃತ್ತ ಶಿಕ್ಷಕ (retired teacher ). 72 ವರ್ಷ. ಆಕೆಯೂ ನಿವೃತ್ತ ಶಿಕ್ಷಕಿ. 68 ವರ್ಷ. ಉರ್ದು ಶಾಲೆಯಲ್ಲಿ ಉರ್ದು urdu ಕಲಿತು, ಮುಸ್ಲಿಂ ಮಕ್ಕಳಿಗೆ ಕನ್ನಡ kannada ಹೇಳಿಕೊಟ್ಟವರು. ಶಿಕ್ಷಕರಾಗಿಯೇ ಬದುಕು ಸವೆಸಿದ ದಂಪತಿಗೆ ಶಿವಮೊಗ್ಗದ shivamogga ರಾಗಿಗುಡ್ಡದಲ್ಲಿ ragigudda ನಡೆದ ಗಲಭೆ ಬೆಚ್ಚಿಬೀಳುವಂತೆ ಮಾಡಿದೆ. ಏಕೆಂದರೆ ಅವರು ಊಹಿಸೋಕೂ ಸಾಧ್ಯವಿಲ್ಲದ ರೀತಿಯಲ್ಲಿ ಅವರ ವಿದ್ಯಾರ್ಥಿಗಳೇ ಅವರ ಮನೆಗೆ ಕಲ್ಲು ತೂರಿರುವುದು. Muslim students stone pelting their own teachers house
ನಾವು ಕೆಲವೇ ದಿನಗಳ ಹಿಂದೆ ಗಣೇಶ ಹಬ್ಬವನ್ನು ಒಟ್ಟಾಗಿ ಮಾಡಿದ್ದೆವು. ಸಂಭ್ರಮಿಸಿದ್ದೆವು. ಆದರೆ ಈದ್ ಮಿಲಾದ್ ಹಬ್ಬಕ್ಕೆ ಅವರು ಮಾಡಿಕೊಂಡ ತಯಾರಿಗಳು ಸ್ವಲ್ಪ ಆತಂಕ ಹುಟ್ಟಿಸಿದವು. ಹೀಗಿದ್ದರೂ ಸುತ್ತ ಮುತ್ತ ಇದ್ದವರೆಲ್ಲ ನಮ್ಮ ವಿದ್ಯಾರ್ಥಿಗಳೇ. ಹೀಗಾಗಿ ಏನೂ ಆಗಲ್ಲ ಎಂದುಕೊಂಡಿದ್ದೆವು. ಆದರೂ ಮುಂಜಾಗ್ರತೆಗಾಗಿ ಈದ್ ಮಿಲಾದ ದಿನ ನೆಂಟರ ಮನೆಗೆ ಹೋಗಿ ಬಂದೆವು. ವಾಪಸ್ ಬಂದು ನೋಡಿದಾಗ.. ಶಾಕ್ ಆಗಿತ್ತು.
ನಮ್ಮ ಮನೆಗೆ ಕಲ್ಲು ಹೊಡೆದವರು ನಮ್ಮ ವಿದ್ಯಾರ್ಥಿಗಳೇ. ನಮ್ಮಿಂದ ಅಕ್ಷರ ಕಲಿತವರೇ. ನಾವೇನು ತಪ್ಪು ಮಾಡಿದ್ದೇವೆ. ಇಲ್ಲಿ ಬದುಕಲು ಭಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಶಿಕ್ಷಕ ದಂಪತಿ. ನನ್ನ ಹೆಂಡತಿ ಯಾರ ಬಳಿಯೂ ಏನೂ ಹೇಳಬೇಡಿ. ಅವರು ದ್ವೇಷ ಇಟ್ಟುಕೊಂಡು ಮತ್ತೆ ಹಲ್ಲೆ ನಡೆಸಿದರೆ ಕಷ್ಟ ಎಂದು ಹೇಳಿದರೂ ನನಗೆ ಮನಸ್ಸು ತಡೆಯುತ್ತಿಲ್ಲ. ನಾವೇ ಅಕ್ಷರ ಕಲಿಸಿದವರು ನಮ್ಮ ಮೇಲೆ ಹಲ್ಲೆ ಮಾಡಿದಾಗ, ನಮ್ಮ ಮನೆಗೆ ಕಲ್ಲು ಹೊಡೆದಾಗ ನಾವೇನು ತಪ್ಪು ಮಾಡಿದ್ದೇವೆ ಎಂದು ಭಯವಾಗುತ್ತೆ. ಏಕಾಏಕಿ ಏನಾಯ್ತು ಅಂತಾ ಗೊತ್ತಿಲ್ಲ ಅನ್ನೋದು ಶಿಕ್ಷಕ ದಂಪತಿಯ ಮಾತು.
ರಾಗಿಗುಡ್ಡದಲ್ಲಿ ಹಲ್ಲೆಗೊಳಗಾದ ಜನರಿಗೆ ಪೊಲೀಸರ ಮೇಲೆ ಆಕ್ರೋಶವಿಲ್ಲ. ಅವರು ತಮ್ಮ ಹೆಂಡತಿ, ಮಕ್ಕಳನ್ನು ಬಿಟ್ಟು, ನಮ್ಮ ರಕ್ಷಣೆಗೆ ರಾತ್ರಿಯಿಡೀ ಜಾಗರಣೆ ಮಾಡಿದರು ಎಂದು ಪೊಲೀಸರ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಇದ್ದಕ್ಕಿದ್ದಂತೆ ರಾಗಿಗುಡ್ಡದಲ್ಲಿ ಭಯ ಶುರುವಾಗಿದೆ.
ರಾಗಿಗುಡ್ಡಕ್ಕೆ ಭೇಟಿ ನೀಡಿದ್ದ ಬಿಜೆಪಿ ಸತ್ಯಶೋಧನ ಸಮಿತಿ ಎದುರು ಜನ ಭಯ ತೋಡಿಕೊಂಡಿದ್ದಾರೆ. ಹೊರಗೆ ಹೋಗುವುದಕ್ಕೆ, ಅಂಗಡಿಗೆ ಹೋಗಿ ಏನಾದರೂ ತರುವುದಕ್ಕೂ ಭಯವಾಗುತ್ತಿದೆ. ಮಹಿಳೆಯರ ಅಂಗಾಂಗ ಮುಟ್ಟಿ ದೌರ್ಜನ್ಯ ಎಸಗಿದ್ದಾರೆ. ಯಾರು ಏನು ಮಾಡ್ತಾರೋ ಎಂಬ ಭಯದಲ್ಲಿಯೇ ಬದುಕುವಂತಾಗಿದೆ. ನಾವು ಈ ಏರಿಯಾದಲ್ಲಿ ಇರುವುದೋ ಬಿಡುವುದೋ ಎಂಬ ಆತಂಕದಲ್ಲಿದ್ದೇವೆ ಅನ್ನೋ ಭಯ ಸ್ಥಳೀಯರದ್ದು.
ಆದರೆ ಕಾಂಗ್ರೆಸ್ಸಿಗರು ಹೇಳ್ತಿರೋದೇ ಬೇರೆ. ಹಲ್ಲೆ ಮಾಡುವುದೇ ಬಿಜೆಪಿಯವರ ಉದ್ಯೋಗ ಎನ್ನುವ ಮೂಲಕ ಪರೋಕ್ಷವಾಗಿ ಹಲ್ಲೆ ನಡೆಸಿದ್ದು ಬಿಜೆಪಿಯವರು ಎಂಬ ಆರೋಪ ಮಾಡಿದ್ದಾರೆ ಸಚಿವರಾದ ರಾಮಲಿಂಗಾ ರೆಡ್ಡಿ, ಚಲುವರಾಯಸ್ವಾಮಿ, ದಿನೇಶ ಗುಂಡೂರಾವ್ ಮೊದಲಾದವರು. ರಾಗಿಗುಡ್ಡದ ಜನರಿಗೆ ಕ್ಷಣ ಕ್ಷಣವೂ ಭಯ.



