ಇದು ಸಿನಿಮಾ ಸ್ಟೋರಿ ಅಲ್ಲ. ರಿಯಲ್ ಕಥೆ. ಚಿತ್ರರಂಗದಲ್ಲಿ ನಿರ್ದೇಶಕನೊಬ್ಬನನ್ನು ಚಿತ್ರನಟಿ ಸೇರಿದಂತೆ ಹಲವರು ಸೇರಿ ಕಿಡ್ನಾಪ್ ಮಾಡಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಕಿಡ್ನಾಪ್ ಮಾಡಿರುವ ನಟಿಯ ಹೆಸರು ಐಶ್ವರ್ಯ. ವಿಜಯ್ ನಟಿಸಿ ನಿರ್ದೇಶಿಸಿದ್ದ ಭೀಮ ಚಿತ್ರದಲ್ಲೊಂದು ಕ್ಯಾರೆಕ್ಟರ್ ಮಾಡಿದ್ದರಂತೆ. ಈಕೆಗೆ ಸಾಥ್ ಕೊಟ್ಟಿರುವುದು ಇನ್ನೂ 10 ಜನ. ಕಿಡ್ನಾಪ್ ಆಗಿರುವ ನಿರ್ದೇಶಕನ ಹೆಸರು ಅನೀಶ್.
‘ಭರವಸೆಯೇ ಜೀವನ’ ಎಂಬ ಶಾರ್ಟ್ ಮೂವಿ ಮಾಡಿದ್ದ ಅನೀಶ್, ಮಾಡೆಲಿಂಗ್, ಟ್ಯಾಲೆಂಟ್ ಹಂಟ್ ಏಜೆನ್ಸಿ ನಡೆಸ್ತಾ ಇದ್ದ. ಈವೆಂಟ್ ನಡೆಸುತ್ತಿದ್ದ ಆಶೀರ್ವಾದ್, ಐಶ್ವರ್ಯ ಎಂಬ ಮಾಡೆಲ್ (ಭೀಮ ಚಿತ್ರದಲ್ಲಿ ನಟಿಸಿದ್ದ) ಕೂಡಾ ಜೊತೆಗೂಡಿದ್ದರು. ಒಂದು ಸಿನಿಮಾ ಮಾಡಬೇಕು ಎಂಬ ಕನಸು ಕಂಡಿದ್ದವರು ಲೂಸಿಯಾ ಮಾದರಿಯಲ್ಲಿ ಕ್ರೌಡ್ ಫಂಡಿಂಗ್ ಮಾಡಿ ಸಿನಿಮಾ ಮಾಡೋಕೆ ಮುಂದಾಗಿದ್ದರು. ಹಾಗೆ ಮಾಡಿದ್ದ ಸಿನಿಮಾ ಹೆಸರು ʻಜೀವನದ ಭಾಷೆʼ.
ಸಿನಿಮಾಗೆ ಆಶೀರ್ವಾದ್ ಐದು ಲಕ್ಷ ಹಣ ಹಾಕಿದ್ದ. ಆತನಿಗೆ ನಟಿಸುವ ಆಸೆ. ತನಗೊಂದು ಕ್ಯಾರೆಕ್ಟರ್ ಬೇಕು ಎಂದು ಕೇಳಿದ್ದ. ನಿಮಾವನ್ನು ಒಟಿಟಿಗೆ ರಿಲೀಸ್ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದರಾದರೂ, ಸಿನಿಮಾ ಇದ್ದಕ್ಕಿದ್ದಂತೆ ನಿಂತು ಹೋಗಿತ್ತು. ಬೆಂಗಳೂರು ಬಿಟ್ಟ ನಿರ್ದೇಶಕ ಅನೀಶ್ ಮುಂಬೈಗೆ ಶಿಫ್ಟ್ ಆಗಿದ್ದ. ಇತ್ತ ಕ್ಯಾರೆಕ್ಟರ್ ಸಿಗಲಿಲ್ಲ, ಸಿನಿಮಾ ಕೂಡ ಮುಗಿಸಲಿಲ್ಲ. ಹಣವೂ ವಾಪಸ್ಸು ಕೊಟ್ಟಿಲ್ಲಾ ಅಂತಾ ಅನೀಶ್ ಮೇಲೆ ಆಶೀರ್ವಾದ್ ಕೋಪಗೊಂಡಿದ್ದ. ಎಲ್ಲರಿಗೂ ಅರ್ಧಕ್ಕೆ ಕೈ ಕೊಟ್ಟು ಮುಂಬೈಗೆ ಶಿಫ್ಟ್ ಆದ್ನಲ್ಲ ಅಂತಾ ಸಿಟ್ಟಾಗಿದ್ರು. ಹೇಗಾದ್ರು ಮಾಡಿ ವಾಪಸ್ ಕರೆಸ್ಬೇಕು ಅಂತಾ ಕಾಯ್ತಿದ್ರು. ಇದೇ ಸಮಯಕ್ಕೆ ನಟಿ ಐಶ್ವರ್ಯಾಗೆ ಕಾಲ್ ಮಾಡಿದ್ದ ಅನೀಶ್ ತನ್ನೊಂದು ಕಾರ್ ಇದೆ. ಮಾರಾಟ ಮಾಡಬೇಕು ಎಂದು ಹೇಳಿದ್ದ. ಓಕೆ, ಮಾಡಿಸೋಣ ಎಂದು ಹೇಳಿದ್ದ ಐಶ್ವರ್ಯಾ, ಚಿತ್ರತಂಡದ ಎಲ್ಲರಿಗೂ ವಿಷಯ ಮುಟ್ಟಿಸಿದ್ದಳು. ಬೆಂಗಳೂರಿಗೆ ಕರೆಸಿ, ಕಾರಿನಲ್ಲಿ ಎತ್ತಾಕ್ಕೊಂಡ್ ತುಮಕೂರು ಸಮೀಪದ ಮಂದಾರಗಿರಿ ಬೆಟ್ಟದ ಸಮೀಪಕ್ಕೆ ಹೋದರು. ಹಾಕಿ ಸ್ಟಿಕ್, ಕ್ರಿಕೆಟ್ ಸ್ಟಂಪ್‌ಗಳಿಂದ ಚೆನ್ನಾಗಿ ಹೊಡೆದವರು, ಅನೀಶ್ ಮೈಮೆಲಿದ್ದ ಚಿನ್ನಾಭರಣ ಹಾಗೂ ಹಣ ದೋಚಿದ್ರು. ನಂತರ ಹೇಗೋ ಆಸ್ಪತ್ರೆ ಸೇರಿದ ಅನೀಶ್ ಪೊಲೀಸರ ಮೊರೆ ಹೋದ. ಈಗ ಇಡೀ ಟೀಂ ಪೊಲೀಸ್ ವಶದಲ್ಲಿದೆ.ಆಡುಗೋಡಿ ಪೊಲೀಸರು ನಟಿ ಐಶ್ವರ್ಯಾ, ನಟ ಆಶೀರ್ವಾದ್ ಸೇರಿ ಗ್ಯಾಂಗ್ನ ಹನ್ನೊಂದು ಜನರನ್ನ ಅರೆಸ್ಟ್ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸ್ಟಿಕ್ಗಳು, ಕಾರು ಹಾಗೂ ದೋಚಿದ್ದ ಹಣ, ಚಿನ್ನಾಭರಣ ವಶಕ್ಕೆ ಪಡೆದು 11 ಜನರನ್ನು ಜೈಲಿಗೆ ಕಳಿಸಿದ್ದಾರೆ.



