ದರ್ಶನ್ ಕೇಸ್ ಚಾರ್ಜ್‌ಶೀಟ್ ರೆಡಿ ಆಗಿದೆ. ಆಲ್ಮೋಸ್ಟ್ ಫೈನಲ್ ಹಂತದಲ್ಲಿದೆ. ಯಾವ ಸಮಯದಲ್ಲಿ ಬೇಕಾದರೂ ಚಾರ್ಜ್‌ಶೀಟ್ ಫೈಲ್ ಆಗಬಹುದು. ಆದರೆ.. ಆ ಮೂವರು ಬಚಾವ್ ಆಗೋ ಚಾನ್ಸ್ ಜಾಸ್ತಿ ಇದೆ. ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿ ಮೂರು ತಿಂಗಳಾಗುತ್ತಾ ಬಂದಿದೆ. ಸೆಪ್ಟೆಂಬರ್ 9ರ ಒಳಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಬೇಕು. ಪೊಲೀಸರು ಇದೀಗ ತಮ್ಮ ತನಿಖೆಯನ್ನು ಪೂರ್ಣಗೊಳಿಸಿದ್ದು, ದರ್ಶನ್ ಹಾಗೂ ಪ್ರಕರಣದ ಇತರೆ ಆರೋಪಿಗಳ ವಿರುದ್ಧ 4ರಿಂದ 4.500 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧರಾಗಿದ್ದಾರೆ.
ಮೂಲಗಳ ಪ್ರಕಾರ ನಿಖಿಲ್ ನಾಯ್ಕ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಕೊಲೆಯಲ್ಲಿ ಭಾಗಿಯಾಗಿಲ್ಲ ಅನ್ನೋ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ. ಎ15 ಕಾರ್ತಿಕ್, ಎ16, ಕೇಶವಮೂರ್ತಿ ಹಾಗೂ ಎ17 ನಿಖಿಲ್. ಈ ಮೂವರ ಪೈಕಿ ಕಾರ್ತಿಕ್ ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ. ರೇಣುಕಾಸ್ವಾಮಿ ಮೃತ ದೇಹವನ್ನ ಸಾಗಿಸಿದ್ದ. ಇನ್ನು, ಎ16 ಕೇಶವಮೂರ್ತಿ 5 ಲಕ್ಷ ಪಡೆದು ಮೃತ ದೇಹ ಸಾಗಿಸುವಲ್ಲಿ ಭಾಗಿಯಾಗಿದ್ದ. ಬಳಿಕ ಪೊಲೀಸರ ಮುಂದೆ ಶರಣಾಗಿದ್ದಾನೆ. ಇನ್ನು, ಈ ಕೇಸ್ನ ಕೊನೆಯ ಆರೋಪಿ ಎ 17 ನಿಖಿಲ್ ಸಹ 5 ಲಕ್ಷ ಹಣ ಪಡೆದು ಮೃತ ದೇಹ ಸಾಗಿಸುವಲ್ಲಿ ಭಾಗಿಯಾಗಿದ್ದ. ಹಣ ಪಡೆದು ಪೊಲೀಸರ ಮುಂದೆ ಸರೆಂಡರ್ ಆಗಿದ್ದ ಎಂಬುದು ಪೊಲೀಸರ ದಾಖಲೆಗಳ ಲೆಕ್ಕಾಚಾರ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸರೆಂಡರ್ ಆಗಿದ್ದವರು ಕೇಸಿನಲ್ಲಿ ಬಚಾವ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಯಾವ ಸುದ್ದಿಗಳೂ ದರ್ಶನ್, ಪವಿತ್ರಾ ಗೌಡ & ಗ್ಯಾಂಗ್ʻಗೆ ಒಳ್ಳೆಯ ಸುದ್ದಿಗಳಂತೂ ಅಲ್ಲ.
ಹೀಗಾಗಿಯೇ ಮೊದಲು ಬಳ್ಳಾರಿ ಜೈಲಿನಲ್ಲಿ ಟಿವಿನೂ ಬೇಡ, ಏನೂ ಬೇಡ ಅಂತಿದ್ದ ದರ್ಶನ್ ಈಗ ಟಿವಿ ಕೇಳಿದ್ದಾರಂತೆ. ಚಾರ್ಜ್‌ಶೀಟ್ ಬಗ್ಗೆ ದರ್ಶನ್ ಪದೇಪದೇ ಜೈಲಿನ ಸಿಬ್ಬಂದಿ ಬಳಿ ಕೇಳುತ್ತಿದ್ದ ದರ್ಶನ್ ಅವರಿಗೆ ಸೂಕ್ತ ಮಾಹಿತಿ ಸಿಕ್ಕಿಲ್ಲ. ಆ ಕಾರಣಕ್ಕಾಗಿ ಟಿವಿ ಮೂಲಕ ತಿಳಿಯಲು ನಿರ್ಧರಿಸಿದ್ದಾರೆ. ಈ ಹಂತದಲ್ಲಿ ನಟ ದರ್ಶನ್ಗೆ ಆತಂಕ ಶುರುವಾಗಿದೆ. ಚಾರ್ಜ್‌ಶೀಟ್ ಬಗ್ಗೆ ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಬಳ್ಳಾರಿ ಜೈಲಿನಲ್ಲಿ ತಮಗೆ ಟಿವಿ ಬೇಕು ಎಂದು ಮೇಲಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕಮಿಷನರ್ ಹೇಳಿದ್ದು ಇಷ್ಟು :
ನಮ್ಮ ತನಿಖೆ ಪೂರ್ಣಗೊಂಡಿದೆ. ಚಾರ್ಜ್ ಶೀಟ್ ಈಗಾಗಲೇ ತಯಾರಾಗಿದೆ. ಆರೋಪ ಪಟ್ಟಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ನೀಡಿ ಸಲಹೆಗಳನ್ನು ಪಡೆಯಲಾಗಿದೆ. ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ. ಆ ಬದಲಾವಣೆಗಳ ಬಳಿಕ ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ’ ಎಂದಿದ್ದಾರೆ ಪೊಲೀಸ್ ಆಯುಕ್ತ ದಯಾನಂದ್.
ಬೆಂಗಳೂರಿನ ಎಲ್ಲ ಎಫ್ಎಸ್ಎಲ್ ವರದಿಗಳು ಈಗಾಗಲೇ ಕೈ ಸೇರಿವೆ. ಆದರೆ, ಹೈದರಾಬಾದ್ನ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಇನ್ನೂ ಕೆಲವು ವರದಿಗಳು ಬರಬೇಕಿವೆ. ಅವುಗಳನ್ನು ಹೊರತುಪಡಿಸಿಯೇ ವರದಿ ಸಲ್ಲಿಸಲಿದ್ದೇವೆ ಎಂದಿದ್ದಾರೆ ಕಮಿಷನರ್ ದಯಾನಂದ್.



