ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೆ ಎನ್ನುವುದು ರಹಸ್ಯವೇನಲ್ಲ. ಮೊದಲು ಉಗ್ರರಾಗಿದ್ದು ಪಾಕಿಸ್ತಾನದ ಸೈನಿಕರು ಮತ್ತು ರಾಜಕಾರಣಿಗಳು. ಆಮೇಲೆ ಹಂತ ಹಂತವಾಗಿ ಉಗ್ರರಾಗುತ್ತಾ ಹೋದ ಪಾಕಿಸ್ತಾನದಲ್ಲೀಗ ನಾಗರಿಕರೂ ಉಗ್ರ ರಂತೆಯೇ ಆಡ್ತಿದ್ದಾರೆ. ಕ್ರಿಕೆಟರುಗಳೂ ಇದಕ್ಕೆ ಹೊರತಲ್ಲ. ಈ ಹಿಂದೆ ಶಾಹಿದ್ ಆಫ್ರಿದಿ, ಸಯೀದ್ ಅನ್ವರ್, ಮಹಮ್ಮದ್ ಯೂಸುಫ್ (ಮತಾಂತರವಾಗಿರುವ ಕ್ರಿಕೆಟಿಗ ಯೂಸುಫ್ ಯೋಹಾನ), ಶಹೀನ್ ಆಫ್ರಿದಿ.. ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಇವರೆಲ್ಲ ಉಗ್ರರನ್ನು ಬಹಿರಂಗವಾಗಿ ಸಮರ್ಥಿಸಿಕೊಂಡವರೇ. ಈಗ ನಡೆಯತ್ತಿರುವ ಏಷ್ಯಾ ಕಪ್ ಟೂರ್ನಮೆಂಟಿನಲ್ಲೂ ಪಾಕ್ ಕ್ರಿಕೆಟಿಗರ ಉಗ್ರ ಪ್ರೀತಿ, ಅಜ್ಞಾನ ಮತ್ತೊಮ್ಮೆ ಬಯಲಾಗಿದೆ.
ದುಬೈನಲ್ಲಿ ನಡೆದ ಪಾಕ್-ಭಾರತ 2ನೇ ಪಂದ್ಯದಲ್ಲಿ ಪಾಕ್ ತಂಡದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ತಮ್ಮ ಅರ್ಧಶತಕವನ್ನು ಸಂಭ್ರಮಿಸಿದ ಪರಿ ಹಾಗೆಯೇ ಇದೆ. ಫರ್ಹಾನ್ ತಮ್ಮ ಬ್ಯಾಟ್‌ನ್ನು ರೈಫಲ್ ಮಾದರಿಯಲ್ಲಿ ಹಿಡಿದು, ಫೈಯರ್ ಮಾಡುತ್ತಿರುವ ಹಾಗೆ ಸಂಭ್ರಮಾಚರಣೆ ಮಾಡಿದ್ದಾನೆ. ಸಹಜವಾಗಿಯೇ ಅದು ಪಹಲ್ಗಾಂ ಉಗ್ರರ ವರ್ತನೆಯನ್ನು ನೆನಪಿಸಿದೆ. ಪಾಕ್ ಕ್ರಿಕೆಟಿಗರೂ ರಕ್ತಪಿಶಾಚಿಗಳಾದರೆ ಎನ್ನುವುದು ಪ್ರಶ್ನೆ.
ಇನ್ನು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಗೆಲುವಿನ ಸುಳ್ಳು ಪ್ರಚಾರ ನಡೆಸುತ್ತಿರುವ ಪಾಕಿಸ್ತನ, ಭಾರತೀಯ ಸಶಸ್ತ್ರಪಡೆಗಳಿ ತಕ್ಕ ಪಾಠ ಕಲಿಸಿರುವುದಾಗಿ ಸುಳ್ಳು ಹೇಳುತ್ತಿದೆ. ಇದನ್ನೇ ಸತ್ಯವೆಂದು ನಂಬಿರುವ ಪಾಕ್ ತಂಡದ ಆಟಗಾರರೂ ಕೂಡ, ಮೈದಾನದಲ್ಲಿ ಚಿತ್ರ ವಿಚಿತ್ರವಾಗಿ ಸಂಭ್ರಮಿಸುವ ಮೂಲಕ ನಗೆಪಾಟಲಿಗೆ ಗುರಿಯಾಗುತ್ತಿದ್ದಾರೆ. ಪಾಕ್ ಕ್ರಿಕೆಟಿಗರ ಈ ಪೆದ್ದುತನ, ದಡ್ಡತನ, ಮುಠ್ಠಾಳತನಕ್ಕೆ ಜನರೇ ಬಿದ್ದೂ ಬಿದ್ದು ನಗುತ್ತಿದ್ದಾರೆ.
ಇದಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, “ಆಟ ಬೇಡ, ಯುದ್ಧ ಬೇಕು ಎಂದರೆ ರಣಾಂಗಣಕ್ಕೆ ಬರಲಿ” ಎಂದು ಪಾಕ್ ಆಟಗಾರರಿಗೆ ಭಾರತೀಯರಿಗೆ ರಣವೀಳ್ಯೆ ನೀಡಿದ್ದಾರೆ. ಫರ್ಹಾನ್ ಅವರ ʻಗನ್ ಫೈಯರ್ ಸೆಲೆಬ್ರೇಷನ್ʼ ನೋಡಿದವರು “ಇವರೆಲ್ಲಾ ಆಟಗಾರರಾಗಿರದೇ ಜಿಹಾದಿಗಳಾಗಿದ್ದಾರೆ. ತಪ್ಪಾಗಿ ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇವರಿಗೆ ಬಂದೂಕು ಕೊಟ್ಟು ಬಡಿದಾಡು ಎಂದು ಹೇಳುವುದೇ ಸೂಕ್ತ” ಎಂದು ಉತ್ತರ ಕೊಟ್ಟಿದ್ದಾರೆ.
ಅಷ್ಟೇ ಅಲ್ಲ, ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಜೊತೆ ಕಿರಿಕ್ಕು ಮಾಡಿಕೊಂಡಿದ್ದಾರೆ. ಅಭಿಷೇಕ್ ಶರ್ಮಾ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಜೊತೆ ತೀವ್ರ ವಾಗ್ವಾದ ನಡೆದಿದೆ. ಐದನೇ ಓವರ್ ಉದ್ದಕ್ಕೂ ಹ್ಯಾರಿಫ್ ರೌಫ್ ಮತ್ತು ಅಭಿಷೇಕ್ ಶರ್ಮಾ, ಮಾತಿನಲ್ಲಿಯೂ ಗುದ್ದಾಡ್ತಾನೇ ಇದ್ರು. ಪಾಕ್ ಬೌಲರುಗಳನ್ನು ಚೆಂಡಾಡುತ್ತಿದ್ದ ಅಭಿಷೇಕ್ ಶರ್ಮಾ ಏಕಾಗ್ರತೆ ಮಾಡುವ ಆಟ ನಡೀತಾನೆ ಇತ್ತು. ಶಾಹೀನ್ ಆಫ್ರಿದಿ ಕೂಡಾ ಕಿರಿಕ್ ಮಾಡ್ತಾನೇ ಇದ್ರು. ಕೊನೆಗೆ ಗಿಲ್ ರವೂಫ್ ಅವರಿಗೆ ಹೋಗಿ ನೆಟ್ಟಗೆ ಬೌಲಿಂಗ್ ಮಾಡು ಎಂದು ಬೌಲಿಂಗ್ ಪಾಠ ಹೇಳಿ ಕಳಿಸಿದ್ದಾರೆ. ಇದೂ ವೈರಲ್ ಆಗಿದೆ.



