ಜಾತಿ ಗಣತಿ ಕುರಿತಂತೆ ವಿವಿಧ ಸಮುದಾಯಗಳು ಸರ್ಕಾರದ ವಿರುದ್ಧ, ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿವೆ. ವಿಶೇಷ ಅಂದ್ರೆ ಹೀಗೆ ತಿರುಗುಬಿದ್ದಿರುವುದು ಕೇವಲ ವೀರಶೈವ ಲಿಂಗಾಯತ, ಒಕ್ಕಲಿಗರಷ್ಟೇ ಅಲ್ಲ, ಬ್ರಾಹ್ಮಣರಷ್ಟೇ ಅಲ್ಲ, ಗೊಲ್ಲ ಯಾದವ, ರೆಡ್ಡಿಗಳೂ ತಿರುಗಿಬಿದ್ದಿದ್ದಾರೆ. ಅಚ್ಚರಿ ಎಂಬಂತೆ ದಲಿತರೂ ವಿರೋಧ ವ್ಯಕ್ತಪಡಿಸಿದ್ದಾರೆ.
ಒಕ್ಕಲಿಗ, ಲಿಂಗಾಯತರ ಒಗ್ಗಟ್ಟಿನ ಹೋರಾಟದ ಸಿಗ್ನಲ್
ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಲಿಂಗಾಯತರದ್ದೇ ಪ್ರತ್ಯೇಕ ಜಾತಿ ಗಣತಿ ಮಾಡಿಸುವ ಹೇಳಿಕೆ ನೀಡಿದ್ದರು. ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಕೆಂಚಪ್ಪಗೌಡ, ನಾವೂ ಸಹ ನಮ್ಮ ಒಕ್ಕಲಿಗ ಸಮುದಾಯದ ಪ್ರತ್ಯೇಕ ಸಮೀಕ್ಷೆ ಮಾಡಿಸುತ್ತೇವೆ ಎಂದಿದ್ದಾರೆ. ಸರ್ಕಾರದ ವಿರುದ್ಧ ಸಮರ ಘೋಷಿಸಿರುವ ರಾಜ್ಯ ಒಕ್ಕಲಿಗರ ಸಂಘ, ಹಿಂದೆಂದೂ ಕಾಣದ ರೀತಿಯಲ್ಲಿ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಘೋಷಿಸಿದೆ. ಇಷ್ಟೇ ಅಲ್ಲದೆ, ಲಿಂಗಾಯತ ಸಮುದಾಯದ ನಾಯಕರ ಬಳಿಯೂ ಜಂಟಿ ಹೋರಾಟ ಮಾಡುವ ಸಂಬಂಧ ಮಾತುಕತೆ ನಡೆಸಲು ಒಕ್ಕಲಿಗರ ಸಂಘ ಮುಂದಾಗಿದೆ.
ಒಂದು ವೇಳೆ ವರದಿ ಜಾರಿಗೊಳಿಸಿದರೆ ಸರ್ಕಾರ ಉಳಿಯುವುದಿಲ್ಲ ಮತ್ತು ಕರ್ನಾಟಕ ಬಂದ್ ರೀತಿಯ ಹೋರಾಟ ಮಾಡುತ್ತೇವೆ. ರಾಜ್ಯದ 224 ಕ್ಷೇತ್ರದಲ್ಲಿ ಒಕ್ಕಲಿಗರು ಕೇವಲ 61ಲಕ್ಷ ಮಾತ್ರ ಇರಲು ಸಾಧ್ಯವೇ ಇಲ್ಲ. ಒಂದೊಂದು ತಾಲೂಕಲ್ಲೂ 60 ಸಾವಿರದಿಂದ 1ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಜನರಿದ್ದಾರೆ. ಆದರೆ ಈ ವರದಿಯಲ್ಲಿ ನಮ್ಮ ಜನಾಂಗವನ್ನ 6ನೇ ಸ್ಥಾನದಲ್ಲಿ ಇರಿಸಲಾಗಿದೆ. ಇದು ಬೇರೆ ಜನಾಂಗಕ್ಕೆ ಮೀಸಲಾತಿ ನೀಡುವ ಉದ್ದೇಶದಿಂದ ಮಾಡುವ ಹುನ್ನಾರ ಎಂದು ವಾದಿಸಿದ್ದಾರೆ ಕೆಂಚಪ್ಪ ಗೌಡ. ಕೋನಪ್ಪ ರೆಡ್ಡಿ ಅವರಂತೂ ಸಿದ್ದರಾಮಯ್ಯ, ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣರ ವಿರೋಧಿ ಎಂದು ಗುಡುಗಿದ್ದಾರೆ.
ಗೊಲ್ಲ, ಯಾದವರ ವಿರೋಧ ಏಕೆ..?
ಕಾಂಗ್ರೆಸ್ ಮುಖಂಡರೇ ಆಗಿರುವ ನಾಗರಾಜ್ ಯಾದವ್ ಅವರ ಪ್ರಕಾರ ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚು ಯಾದವರು, ಗೊಲ್ಲರು ಇದ್ದಾರೆ. ಆದರೆ ಈ ಸಮೀಕ್ಷೆಯಲ್ಲಿ ಕೇವಲ 10 ಲಕ್ಷ ತೋರಿಸಲಾಗಿದೆ. ಕೆನೆ ಪದರವನ್ನೂ ಸಮೀಕ್ಷೆಗೆ ಸೇರಿಸಿ ಅನ್ಯಾಯ ಮಾಡಲಾಗಿದೆ. ಇದನ್ನು ಒಪ್ಪುವುದದಕ್ಕೆ ಸಾಧ್ಯವಿಲ್ಲ.
ದಲಿತರ ವಿರೋಧ ಏಕೆ..?
ಹಿಂದೂ ಧರ್ಮದ ಬಗ್ಗೆ ಇಷ್ಟವಿಲ್ಲದೆ ಮತಾಂತರವಾದವರು ಕೂಡಾ ಜಾತಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಜಾತಿಗಳ ಪಟ್ಟಿಯಲ್ಲಿ ವಿಶ್ವಕರ್ಮ ಕ್ರಿಶ್ಚಿಯನ್ , ವೊಡ್ಡ ಕ್ರಿಶ್ಚಿಯನ್ , ವಿಶ್ವಕರ್ಮ ಬ್ರಾಹ್ಮಣ ಕ್ರಿಶ್ಚಿಯನ್ , ಒಕ್ಕಲಿಗ
ವಾಲ್ಮೀಕಿ , ವೈಶ್ಯ/ಶೆಟ್ರು ಕ್ರಿಶ್ಚಿಯನ್ , ತಿಗಳ, ಸಿರಿಯನ್ ,ಸೆಟ್ಟಿ ಬಲಿಜ, ಎಸ್ಸಿ ಕ್ರಿಶ್ಚಿಯನ್
ಪಡಯಾಚಿ ಕ್ರಿಶ್ಚಿಯನ್, ನೇಕಾರ ,ಮೊದಲಿಯಾರ್, ಮಾಂಗ, ಮಾಲ , ಮಹಾರ್ ಕ್ರಿಶ್ಚಿಯನ್
ಮಾದಿಗ ಕ್ರಿಶ್ಚಿಯನ್ , ಲಂಬಾಣಿ, ಕುರುಬ , ಕಮ್ಮನಾಯ್ಡು, ಕಮ್ಮ , ಜಲಗಾರ ಕ್ರಿಶ್ಚಿಯನ್
ಚರೋಡಿ, ಬ್ರಾಹ್ಮಣ, ಬಿಲ್ಲವ, ಬಂಜಾರ, ಬಣಜಿಗ, ಅಕ್ಕಸಾಲಿಗ, ಆದಿ ಕರ್ನಾಟಕ ಕ್ರಿಶ್ಚಿಯನ್
ಆದಿ ದ್ರಾವಿಡ , ಆದಿ ಆಂಧ್ರ,ಬಾರಿಕಾರ್ , ಬುಡುಗ ಜಂಗಮ, ದೇವಾಂಗ , ಗೊಲ್ಲ ಕ್ರಿಶ್ಚಿಯನ್
ಗೊಂಡ ಲಾಲಗೊಂಡ , ಗೌಡಿ ಹೊಲೆಯ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್.. ಹೀಗೆ ಕ್ರಿಶ್ಚಿಯನ್ನರೂ ಜಾತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಮುಸ್ಲಿಂ ಉಪಪಂಗಡಗಳ ಹೆಸರಿವೆ. ಲೆಕ್ಕ ಇಲ್ಲ..!
ಇನ್ನು ಮುಸ್ಲಿಮರಿಗಾಗಿ ಅತಾರಿ, ಅಥರಿ , ಬೇಗ್ ಮುಸ್ಲಿಂ. ಬಂಗಾಡಿವಾಲ ಮುಸ್ಲಿಂ, ಬ್ಯಾರಿ ಮುಸ್ಲಿಂ, ದರ್ಜಿ ಮುಸ್ಲಿಂ , ದಖನಿ ಮುಸ್ಲಿಂ, ದರ್ವೇಸು ಮುಸ್ಲಿಂ, ದವರೇವಾಲೆ ಮುಸ್ಲಿಂ. ಧೋಬಿ ಮುಸ್ಲಿಂ, ಫಕೀರ್ ಮುಸ್ಲಿಂ, ಫುಲ್ ಮಾಲಿ ಮುಸ್ಲಿಂ, ಗವಂಡಿ ಮುಸ್ಲಿಂ, ಘ್ಯಾರೆ ಮುಸ್ಲಿಂ, ಗೌಳಿ ಮುಸ್ಲಿಂ, ಗೌಂಡಿ ಮುಸ್ಲಿಂ, ಗೋವಂಡಿ ಮುಸ್ಲಿಂ, ಹಜಾಮ್ ಮುಸ್ಲಿಂ, ಇರಾನಿ ಮುಸ್ಲಿಂ, ಜೋಹರಿ ಮುಸ್ಲಿಂ, ಜುಲಾಹಿ ಮುಸ್ಲಿಂ, ಕಲೈಗರ್ ಮುಸ್ಲಿಂ, ಕಸಾಯಿ ಮುಸ್ಲಿಂ, ಕಸ್ಟಾನ್ ಮುಸ್ಲಿಂ, ಕಸ್ಟಿನ್ ಮುಸ್ಲಿಂ, ಕಸಾಬ್ ಮುಸ್ಲಿಂ, ಖದೀರ್ ಮುಸ್ಲಿಂ, ಕಾಕರ್ ಮುಸ್ಲಿಂ, ಖಲೀಫ ಮುಸ್ಲಿಂ, ಲದಾಫ್ ಮುಸ್ಲಿಂ, ಲುಹಾರ್ ಮೊಗಲ್, ಮೊಮಿನ್, ಮೌಝಾನ್, ಮೊಯೆನ್, ಮುಜಾವರ್, ಮುಲ್ಲಾ, ಒಟರಿ, ಪಟ್ಟೇಕಾರಿ, ಪಠಾಣ್, ಫುಲಾರಿ, ಫುಲ್ ಮಾಲಿ, ಫುಲ್ ಮಾಅ, ಪಿಂಜಾರ, ಪಿಂಜಾರಿ, ಖ್ವಾಜಿ, ಕುರೇಶಿ, ರಂಗ್ರೇಜ್, ಸಲಾಫಿ, ಶೇಖ್, ಸುನಾರ್, ಸುನ್ನಿ, ಟಕನ್ ಕರ್.. ಹೀಗೆ ಹಲವು ಪಂಗಡಗಳಿವೆ. ಆದರೆ ಒಟ್ಟಾರೆ ಲೆಕ್ಕ ಕೊಡುವಾಗ ಕೇವಲ ಮುಸ್ಲಿಂ ಎಂದಷ್ಟೇ ಹೇಳಲಾಗಿದೆ. ಜಾತಿಗಳ ಪ್ರತ್ಯೇಕವಾರು ಲೆಕ್ಕ ಕೊಟ್ಟಿಲ್ಲ.



