ಕಲಬುರಗಿಯ ಚಿತ್ತಾಪುರದಲ್ಲಿ ಕಳೆದ ತಿಂಗಳೇ ನಡೆಯಬೇಕಿದ್ದ RSS ಪಥಸಂಚಲನ ಕೊನೆಗೆ ಒಂದು ತಿಂಗಳು ತಡವಾಗಿ ಆಗಿದೆ. ವಿಶೇಷ ಎಂದರೆ RSSಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಪಥಸಂಚಲನ ಇಲ್ಲದ ರಗಳೆಯಿಂದಾಗಿ ಸುದ್ದಿಯಾಯ್ತು. ಅದೂ ಚಿತ್ತಾಪುರದಲ್ಲಿ ಮಾತ್ರ. ಪ್ರಿಯಾಂಕ್ ಖರ್ಗೆ ಅವರು ವಿಶೇಷ ಆಸಕ್ತಿ ವಹಿಸಿದ್ದರಿಂದಾಗಿ ದೇಶಾದ್ಯಂತ ಸುದ್ದಿಯಾದ ಚಿತ್ತಾಪುರದ RSS ಪಥಸಂಚಲನ ಮುಗಿದ ಮೇಲೆ RSS ಬೆಂಬಲಿಗರು ಇದೀಗ ಪ್ರಿಯಾಂಕ್ ಖರ್ಗೆ ಅವರಿಗೆ ಥ್ಯಾಂಕ್ಸ್ ಹೇಳ್ತಿದ್ದಾರೆ. ಏಕೆಂದರೆ.. ಅದಕ್ಕೆ ಕಾರಣಗಳಿವೆ.
ಪ್ರಿಯಾಂಕ್ ಖರ್ಗೆ ನಿರ್ದಾರದಿಂದಾಗಿ.. ಹಠಮಾರಿತನದಿಂದಾಗಿ ರಾಜ್ಯದ ನೂರಾರು ಕಡೆ ಸದ್ದೇ ಇಲ್ಲದೆ ನಡೆಯುತ್ತಿದ್ದ ಪಥಸಂಚಲನಗಳಿಗೆ ಸಹಜವಾಗಿಯೇ ಮಹತ್ವ ಬಂತು. ಸುದ್ದಿಯಾಯಿತು. ಆಸಕ್ತಿ ಇಲ್ಲದವರೂ ಕೂಡಾ RSS ಎಂದರೆ ಏನು.. ಎತ್ತ ಎಂಬ ಬಗ್ಗೆ ಮಾಹಿತಿ ಪಡೆಯುವಂತಾಯಿತು.
ಸಣ್ಣ ಸಣ್ಣ ಊರುಗಳಲ್ಲಿ ನಡೆಯುತ್ತಿದ್ದ RSS ಪಥಸಂಚಲನಗಳೂ ಕೂಡಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದವು. ಸುದ್ದಿಯಾದವು. ಚರ್ಚೆಯಾದವು. ಕೇವಲ RSS ಬೈಠಕ್ಕುಗಳಲ್ಲಿ, ವಿರೋಧಿಗಳ ಭಾಷಣದಲ್ಲಷ್ಟೇ ಕೇಳುತ್ತಿದ್ದ RSS ಕಥೆಗಳು ಹಾದಿ ಬೀದಿಯಲ್ಲಿ ಚರ್ಚೆಯಾದವು. RSS ಹಿನ್ನೆಲೆ, ಅಲ್ಲಿನ ಹೋರಾಟಗಾರರ ಬಗ್ಗೆ RSS ಹೊರಗಿನವರೂ ತಿಳಿದುಕೊಳ್ಳುವಂತಾಯ್ತು.
RSS ಕುರಿತು ಶುರುವಾದ ಚರ್ಚೆಯಲ್ಲಿ RSS ಸಿದ್ಧಾಂತಗಳ ಬಗ್ಗೆಯೂ ಚರ್ಚೆಯಾಯ್ತು. RSS ಬಯಸುವುದೂ ಇದನ್ನೇ. ಚರ್ಚೆಯಾಗಬೇಕು ಎನ್ನುವುದು. RSS ಯಾಕೆ ನೋಂದಣಿ ಆಗಿಲ್ಲ, RSS ಏನೇನೆಲ್ಲ ಮಾಡ್ತಿದೆ.. RSS ಇತರೆ ಸಂಘಟನೆಗಳು ಯಾವುವು.. RSSನಲ್ಲಿ ಜಾತಿ ವ್ಯವಸ್ಥೆ ಇದೆಯೇ.. ಇಲ್ಲವೇ.. ಎಲ್ಲದರ ಬಗ್ಗೆಯೂ ಚರ್ಚೆಗಳಾದವು.
RSS ವಿರೋಧಿಸುವ ಸಂಘಟನೆಗಳು ಕೂಡಾ ಬೀದಿಗೆ ಬಂದವು. ಆಗ ಆ ಸಂಘಟನೆಗಳ ಬಗ್ಗೆಯೂ ಚರ್ಚೆಯಾದವು. ಸಂಘಟನೆಗಳ ಮುಖ್ಯಸ್ಥರ ಬಗ್ಗೆ ಮಾಹಿತಿ ಗೊತ್ತಾಯಿತು. ವಿಶೇಷವಾಗಿ ಭೀಮ್ ಆರ್ಮಿ, ದಲಿತ ಸೇನೆ ಮೊದಲಾದ ಸಂಘಟನೆಗಳ ಹಿನ್ನೆಲೆ, ಮುಖ್ಯಸ್ಥರ ಬಗ್ಗೆ ಚರ್ಚೆಯಾಯಿತು. ಎಕ್ಸ್‌ಪೋಸ್ ಆದವರನ್ನು ಜನ ನೋಡಿದರು.
ಸಮರ್ಥನೆ ವಿರೋಧಗಳ ಹೇಳಿಕೆಗಳಲ್ಲಿ ಯಾರು ಎಳಸು.. ಯಾರು ಪ್ರಬುದ್ಧ ಎಂಬುದನ್ನೂ ಜನ ತೀರ್ಮಾನ ಮಾಡುವಂತಾಯ್ತು. ಇದೆಲ್ಲದರಿಂದಾಗಿ RSS ಕುರಿತು RSS ಬಗ್ಗೆ ಯಾವುದೇ ಐಡಿಯಾ ಇಲ್ಲದವರೂ ತಿಳಿದುಕೊಳ್ಳುವಂತಾಯ್ತು. ಆ ವಿಷಯಕ್ಕೆ RSS ಬೆಂಬಲಿಗರು ಪ್ರಿಯಾಂಕ್ ಖರ್ಗೆ ಅವರಿಗೆ ಧನ್ಯವಾದ ಹೇಳ್ತಿದ್ದಾರೆ.
ಚಿತ್ತಾಪುರದಲ್ಲೇ ನೋಡಿ.. ಪಥಸಂಚಲನದಲ್ಲಿ ಭಾಗವಹಿಸಿದ್ದು 300+ RSS ಕಾರ್ಯಕರ್ತರು ಮಾತ್ರ. ಆದರೆ.. ಇಡೀ ಪಥಸಂಚಲನದಲ್ಲಿ ಚಿತ್ತಾಪುರಕ್ಕೆ ಚಿತ್ತಾಪುರವೇ ಭಾಗವಹಿಸಿತ್ತು. 10 ಸಾವಿರಕ್ಕೂ ಹೆಚ್ಚು ಜನ ಬೀದಿ ಬೀದಿಗಳಲ್ಲಿ ಹೂಮಳೆ ಸುರಿಸಿದರು. ಸಾವಿರಕ್ಕೂ ಹೆಚ್ಚು ಜನ ಭದ್ರತೆ ಕೊಟ್ಟರು. ಪಥಸಂಚಲನ, ಸಮಾವೇಶ ಎಲ್ಲವನ್ನೂ ನ್ಯೂಸ್ ಚಾನೆಲ್ಲುಗಳು ಸಂಪೂರ್ಣವಾಗಿ ನೇರ ಪ್ರಸಾರ ಮಾಡಿದವು. ದಿನ ಪತ್ರಿಕೆಗಳು ಹೆಡ್ ಲೈನ್ ಮಾಡಿದವು. ಪ್ರಿಯಾಂಕ್ ಖರ್ಗೆ ಇಷ್ಟು ಆಸಕ್ತಿ ವಹಸದೇ ಹೋಗಿದ್ದರೆ.. RSS ಪಥಸಂಚಲನ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿ, ಸದ್ದು ಆಗಿ.. ಚರ್ಚೆಯಾಗುವುದು ಸಾಧ್ಯವೇ ಇರುತ್ತಿರಲಿಲ್ಲ.



