ದೇಶದಲ್ಲಿಯ ಪರಿಸ್ಥಿತಿ ಏನೇ ಇರಲಿ.. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪ್ರಬಲ ಎದುರಾಳಿ ಎಂದೇನಾದರೂ ಇದ್ದರೆ.. ಅದು ಸಿಎಂ ಸಿದ್ದರಾಮಯ್ಯ. ಮೋದಿಯನ್ನು ನೇರವಾಗಿ ಪ್ರಶ್ನೆ ಮಾಡೋ ಸಿದ್ದರಾಮಯ್ಯ ಯಾವ ಪುರುಷಾರ್ಥಕ್ಕೆ ಬಿಜೆಪಿ ಅಧಿಕಾರಕ್ಕೆ ಬರಬೇಕು? ಯಾಕೆ ಮತ್ತೆ ಮೋದಿ ಮತ್ತೆ ಪ್ರಧಾನಿ ಆಗಬೇಕು ಹೇಳಿ? ಎಂದು ಪ್ರಶ್ನಿಸಿದ್ದಾರೆ.
ಹುಣಸೂರಿನ ಸಮಾವೇಶದಲ್ಲಿ ಮಾತನಾಡುತ್ತ ಸಿದ್ದರಾಮಯ್ಯ ದೇಶದ ಜನರಿಗೆ ಬರೀ ಭ್ರಮೆ ಹುಟ್ಟಿಸಿದ್ದಾರೆ ಅಷ್ಟೆ. ದೇಶದ ಜನರಿಗೆ ಬರೀ ಸುಳ್ಳು ಹೇಳಿದ್ದಾರೆ. ಸಂವಿಧಾನ ಬದಲಾವಣೆ ಬಗ್ಗೆ ಮೋದಿ, ಅಮಿತ್ ಶಾ ಇಬ್ಬರು ಬೇರೆಯವರ ಮೂಲಕ ಹೇಳಿಸುತ್ತಾರೆ. ಮೋದಿ, ಅಮಿತ್ ಶಾ ಸಂವಿಧಾನ ಬದಲಾವಣೆ ಬಗ್ಗೆ ಅನಂತಕುಮಾರ್ ಹೆಗಡೆ ಮೂಲಕ ಹೇಳಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮೋದಿ ಬರ್ತಾರೆ, ಬರಗಾಲ ನೋಡೋಕೆ ಪ್ರಧಾನಿ ಬರಲಿಲ್ಲ. ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಬರ್ತಾರೆ. ಪ್ರಧಾನಿ ದೇಶದ ದಾರಿ ತಪ್ಪಿಸುತ್ತಿದ್ದಾರೆ. ಜನರು 10 ವರ್ಷ ಅವರನ್ನು ನೋಡಿದ್ದಾರೆ. ಬಿಜೆಪಿ ವಿರುದ್ಧ ಮತ ಹಾಕುತ್ತಾರೆ. ಬರ ಪರಿಹಾರಕ್ಕಾಗಿ ಸೆಪ್ಟೆಂಬರ್ ತಿಂಗಳಲ್ಲಿ ಮನವಿ ಕೊಟ್ಟಿದ್ದೆವು. ಒಂದು ಪೈಸೆ ದುಡ್ಡು ಕೊಡಲಿಲ್ಲ. ನಿರ್ಮಲಾ ಸೀತಾರಾಮನ್ ನೀತಿ ಸಂಹಿತೆ ಬಂತು ಅಂದ್ರು. ನಾವು ಮನವಿ ಕೊಟ್ಟ ಅನೇಕ ತಿಂಗಳ ಬಳಿಕ ಚುನಾವಣೆ ಬಂತು ಎನ್ನುವ ಮೂಲಕ ಮೋದಿ ಸರ್ಕಾರ ಕರ್ನಾಟಕ ರಾಜ್ಯದ ವಿರೋಧಿ ಎಂಬ ಅಭಿಪ್ರಾಯವನ್ನು ಮಂಡಿಸಿದ್ಧಾರೆ.ಇನ್ನೊಂದೆಡೆ ಮಾತನಾಡಿದ ಸಿದ್ದರಾಮಯ್ಯ ಈ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ. ನೀವೆಲ್ಲರೂ ಯೋಚನೆ ಮಾಡಿ ಮತ ಹಾಕಿ 10 ವರ್ಷಗಳಿಂದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇದೆ. ಬಿಜೆಪಿ ಒಬ್ಬರೇ ಸರ್ಕಾರ ಮಾಡಿಲ್ಲ, ಬೇರೆ ಬೇರೆ ಪಕ್ಷ ಸೇರಿ ಸರ್ಕಾರ ಮಾಡಿವೆ. ಬಿಜೆಪಿಗೆ ಒಂದೇ ಗೆದ್ದು ಅಧಿಕಾರ ಮಾಡುವ ಶಕ್ತಿ ಇಲ್ಲ. ಬಿಜೆಪಿ 28ಕ್ಕೆ 28 ಗೆಲ್ತೀವಿ ಅನ್ನೋರು ಮೈತ್ರಿ ಯಾಕೆ ಮಾಡಿಕೊಂಡ್ರಿ. ಸಣ್ಣ ಪಕ್ಷ ಜೆಡಿಎಸ್ ಜೊತೆಗೆ ಯಾಕೆ ಅಲಯನ್ಸ್ ಮಾಡಿಕೊಂಡ್ರಿ. ಸೋಲುವ ಭಯದಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದಿದ್ದಾರೆ.
ಜೆಡಿಎಸ್ ಸೆಕ್ಯೂಲರ್.. ಬಿಜೆಪಿ ಕಮ್ಯುನಲ್ ಪಾರ್ಟಿ. ಸೆಕ್ಯೂಲರ್ ಕಮ್ಯುನಲ್ ಜೊತೆ ಸೇರಿಕೊಂಡಿದ್ದಾರೆ, ಅದು ಹೇಗೆ ಆಗುತ್ತೆ ಹೇಳಿ..? ನಾಯಿ ಕಾದಿತ್ತು ಅನ್ನ ಹಳಸಿತ್ತು ಎನ್ನೋ ಪರಿಸ್ಥಿತಿ ಜೆಡಿಎಸ್‌ನದ್ದು ಜೆಡಿಎಸ್‌ಗೆ ಮಾನ ಮರ್ಯಾದಿ ಉಂಟಾ..? ಸಿದ್ದಾಂತ ಉಂಟಾ.? ನಮ್ಮ ಮನೆಗೆ ಬಂದ್ರು ಅಂತ ಕುಮಾರಸ್ವಾಮಿ ಹೇಳ್ತಾರೆ. ಆದ್ರೆ ಸಿಎಂ ಆಗಿದ್ದು ನಮ್ಮಿಂದ ಅಲ್ವಾ..? ದೇವೇಗೌಡರು ಪಿಎಂ ಆಗಿದ್ದು ನಮ್ಮಿಂದ ಅಲ್ವಾ. ಪಕ್ಷ ಉಳಿಸಿಕೊಳ್ಳಲು ಕೋಮುವಾದಿಗಳ ಜೊತೆ ಸೇರಿದ್ದಾರೆ. ಜಾತ್ಯಾತೀತ ಬೇಡ ಜಸ್ಟ್ ಜನತಾದಳ ಅಂತ ಇಟ್ಕೊಳಿ ಅಂತ ದೇವೇಗೌಡರಿಗೆ ಹೇಳಿದ್ದೆ. ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ 20 ಸ್ಥಾನ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.
ರಾಜ್ಯದಲ್ಲಿ ಮೋದಿ ಅಲೆ ಇಲ್ಲ, ಬಿಜೆಪಿಗೆ ಸ್ವತಂತ್ರ್ಯ ಅಸ್ಥಿತ್ವ ಇಲ್ಲ. ಮೋದಿಗೆ ಓಟ್ ಕೊಡಿ ಅಂತಾರೆ, ಯಾವ ಆಧಾರದ ಮೇಲೆ ಓಟು ಕೇಳ್ತೀರ..? 10 ವರ್ಷಗಳಲ್ಲಿ ಮೋದಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರಾ..? ಕೆಜಿ ಅಕ್ಕಿಗೆ 34 ರೂ ಕೊಡ್ತೀವಿ ಅಂದ್ರೂ ಕೂಡ ಬಿಜೆಪಿಯವರು ಕೊಡಲು ಬಿಡ್ಲಿಲ್ಲ. ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಮೇಲೆ ಮೋದಿ ಒತ್ತಡ ಹೇರಿದ್ರು. ಮೋದಿ ಅದಾನಿ ಅಂಬಾನಿ ಪರ ಕೆಲಸ ಮಾಡ್ತಿದಾರೆ ಅಷ್ಟೇ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.



