ಕಾರುಗಳಲ್ಲಿ (CAR) ಒಂದೇ ಒಂದು ತಾಂತ್ರಿಕ ಸಮಸ್ಯೆ ಎದುರಾದರೂ, ಕಾರ್`ನ್ನ ಓಡಿಸೋಕೆ ಆಗಲ್ಲ. ಯಾವ ವೆಹಿಕಲ್ ಆದ್ರೂ ಅಷ್ಟೇ ರೀ.. ಡ್ರೈವ್ ಮಾಡೋದಕ್ಕೆ ಆಗಲ್ಲ ಅಂತೀರ.. ಅಂತಹ ಸಮಸ್ಯೆ ಇರುವ ಕಾರುಗಳನ್ನು (CAR) ವಾಪಸ್ ತೆಗೆದುಕೊಳ್ಳಲು ಮಾರುತು ಸುಜುಕಿ (Maruthi Suzuki) ಮುಂದಾಗಿದೆ. ಹಾಗಂತ ಇದು ಎಲ್ಲ ಕಾರುಗಳಿಗೂ ಅಲ್ಲ. ಮಾರುತಿ ಎಕೋ (Maruthi Eeco) ಮತ್ತು ಎಸ್-ಪ್ರೆಸ್ಸೋ (S-presso) ಕಾರುಗಳಿಗೆ ಮಾತ್ರ ಅನ್ವಯ. ಅದೂ ಕೂಡಾ 2021ರ ಜುಲೈ 5ರಿಂದ 2023ರ ಫೆಬ್ರವರಿ 15ರವರೆಗೆ ಮಾರಾಟವಾದ ಕಾರುಗಳಿಗೆ ಮಾತ್ರ ಈ ರೀತಿಯ ಎಕ್ಸ್`ಚೇಂಜ್ ಆಫರ್ ಇರಲಿದೆ.
ಈ ಅವಧಿಯಲ್ಲಿ ತಯಾರಿಸಲಾದ ವಾಹನಗಳಲ್ಲಿನ (Maruthi Eeco & S-presso) ಸ್ಟೀರಿಂಗ್ ಟೈ ರಾಡ್ನಲ್ಲಿನ ಕೆಲವು ಸಮಸ್ಯೆಗಳು ಕಂಡಿವೆ. ಸ್ಟೀರಬಿಲಿಟಿ ಅಂದರೆ ವಾಹನವನ್ನು ತಿರುಗಿಸುವ ವೇಳೆ ಸಮಸ್ಯೆ ಕಂಡುಬಂದಿದೆ. ಸ್ಟೀರಿಂಗ್`ನಲ್ಲಿ ಬಳಸಿರುವ ರಾಡ್ ಕ್ಷಮತೆ ಇಲ್ಲ. ಇದರಿಂದಾಗಿ ಕಾರ್`ನ ವೇಗ ಮತ್ತು ಬ್ರೇಕ್ ಹಾಕುವಾಗ ಸಮಸ್ಯೆ ಆಗಲಿದೆ ಎನ್ನುವುದು ಮಾರುತಿ ಸುಜುಕಿಯವರ ಮಾತು.
ದೇಶದ ಅತಿದೊಡ್ಡ ಕಾರ್ ಮೇಕರ್ ಆಗಿರುವ ಮಾರುತಿ ಸುಜುಕಿ ಇಂಡಿಯಾ ಕಂಪನಿ (Maruthi Suzuki) ಬರೋಬ್ಬರಿ 87,599 ಕಾರುಗಳನ್ನು ರಿಕಾಲ್ ಮಾಡುತ್ತಿದೆ. Maruthi Eeco & S-presso ಕಾರುಗಳಲ್ಲಿನ ಸ್ಟೀರಿಂಗ್ ಪರಿಶೀಲಿಸಿ, ಬದಲಾವಣೆ ಮಾಡುತ್ತಿದೆ. ಸ್ಟೀರಿಂಗ್ ಸಮಸ್ಯೆ ಇದ್ದರೆ ಅದನ್ನು ಉಚಿತವಾಗಿ ನಿರ್ವಹಿಸಲಾಗುತ್ತದೆ. ಮಾರುತಿ ಸುಜುಕಿ ಅಧಿಕೃತ (Maruthi Suzuki) ಡೀಲರ್ ವರ್ಕ್ಶಾಪ್ಗಳಿಂದ ದೋಷಯುಕ್ತ ಭಾಗವನ್ನು ತಪಾಸಣೆ ಮತ್ತು ಬದಲಿ ಉಚಿತವಾಗಿ ಆಗಲಿದೆ.
ತಾವೇ ತಯಾರಿಸಿದ Maruthi Eeco & S-presso ಕಾರುಗಳಲ್ಲಿ ಈ ರೀತಿಯ ದೋಷ ಕಂಡುಬರುವುದು ಕಂಪೆನಿಯ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಗೆ ಎಫೆಕ್ಟ್ ಆಗಲಿದೆ. ಮಾರುತಿ (Maruthi Suzuki) ಎಂದರೆ ಕೇವಲ ಕಾರ್ ಅಲ್ಲ, ಬ್ರಾಂಡ್ ಕೂಡಾ ಹೌದು. ಅಲ್ಲದೆ ಕಂಪೆನಿಯವರು ಈಗ ಹೇಳುತ್ತಿರುವುದು 2021ರ ಜುಲೈನಿಂದ 2023ರ ಫೆಬ್ರವರಿ ಸಮಯದ ಅವಧಿಯಲ್ಲಿ. ಈ ಅವಧಿಯ ನಡುವೆ Maruthi Eeco & S-presso ಕಾರು ಖರೀದಿಸಿದವರು, ಈಗಾಗಲೇ ಕಾರನ್ನು ಸಾಕಷ್ಟು ಡ್ರೈವ್ ಮಾಡಿರುತ್ತಾರೆ. ಕಂಪೆನಿಯವರ ಸಮಸ್ಯೆಯಿಂದ ಉದ್ಭವವಾದ ಪ್ರಾಬ್ಲಂ ರಿಪೇರಿಗೂ ದುಡ್ಡು ಕಟ್ಟಿರುತ್ತಾರೆ. ತಾಂತ್ರಿಕ ಸಮಸ್ಯೆ ಇರುವ ಕಾರುಗಳಿಗೂ ಫುಲ್ ಪೇಮೆಂಟ್ ಮಾಡಿರುತ್ತಾರೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಇದು ಕಂಪೆನಿಯವರು ಗ್ರಾಹಕರಿಗೆ ಮಾಡಿದ ಮೋಸ ಎಂದೂ ಹೇಳಬಹುದು.
ಮಾರುತಿಯಲ್ಲಿ (Maruthi Suzuki) ಇತ್ತೀಚೆಗೆ ಇಂತಹ ಟೆಕ್ನಿಕಲ್ ಸಮಸ್ಯೆಗಳು ಉದ್ಭವವಾಗುತ್ತಿವೆ. ಮಾರುತಿ ಸುಜುಕಿ (Maruthi Suzuki) ಹಾಲಿ ವರ್ಷ ಮೂರನೇ ಬಾರಿ ತನ್ನ ವಾಹಗಳನ್ನು ರಿಕಾಲ್ ಮಾಡಿದೆ. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ರಿಕಾಲ್ ಆಗಿರುವುದು ಇದೇ ಮೊದಲು.ಇದಕ್ಕೂ ಮುನ್ನ ಜನವರಿಯಲ್ಲಿ ಕಂಪನಿ 17362 ಕಾರುಗಳನ್ನು ಹಾಗೂ ಏಪ್ರಿಲ್ನಲ್ಲಿ 7213 ಕಾರುಗಳನ್ನು ರಿಕಾಲ್ ಮಾಡಿಕೊಂಡಿತ್ತು. ಮಾರುತಿ ಸುಜಿಕಿ ಇದನ್ನು ತಿಳಿಸಿದ ಬೆನ್ನಲ್ಲಿಯೇ ಸೋಮವಾರ, ಕಂಪನಿಯ ಷೇರುಗಳು (Maruthi Suzuki Shares) ಎನ್ಎಸ್ಇಯಲ್ಲಿ (NSE) 0.77% ಕುಸಿದು 9,694.8 ರೂಪಾಯಿಗೆ ಮುಟ್ಟಿದೆ. ಮಾರುತಿ ಕಾರುಗಳಲ್ಲಿ ಒಂದು ಸಮಸ್ಯೆ ಖಂಡಿತಾ ಇದೆ. ಅಂದಹಾಗೆ ನಿಮ್ಮ ಬಳಿ ಇರೋ ಕಾರು ಯಾವುದು.. ಮಾರುತಿಯಾ.. (Maruthi Suzuki)



