ಒಂದು ಕಾರು, ಬೈಕು ಅಥವಾ ಮತ್ಯಾವುದೇ ಯಂತ್ರೋಪಕರ ಇರಲಿ, ಮಾರುಕಟ್ಟೆಗೆ ಬಿಡುವ ಮೊದಲು ನೂರಾರು ಬಾರಿ ಚೆಕ್ ಮಾಡಿರುತ್ತಾರೆ. ಹೀಗಿದ್ದೂ, ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತವೆ. ಅವುಗಳನ್ನು ರಿಪೇರಿ ಮಾಡುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದ ಲಕ್ಷಾಂತರ ಬೈಕುಗಳನ್ನು ವಾಪಸ್ ತೆಗೆದುಕೊಳ್ಳೋದಿದ್ಯಲ್ಲ, ಅದು ಅಪರೂಪ. ಅತ್ಯಂತ ಗಂಭೀರ ಪ್ರಕರಣ ಇದ್ದಾಗ ಈ ರೀತಿಯ ಹೆಜ್ಜೆ ಇಡುತ್ತಾರೆ ಉದ್ಯಮಿಗಳು. ಈಗ ಸುಝುಕಿ ಇಂಡಿಯಾದವರದ್ದು ಅದೇ ಕಥೆ ಆಗಿದೆ.
ದೇಶದ ಅಗ್ರ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಇಂಡಿಯಾ, 4 ಲಕ್ಷಕ್ಕೂ ಹೆಚ್ಚು ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ. ಇಗ್ನಿಷನ್ ಕಾಯಿಲ್‌ಗೆ ಸಂಪರ್ಕಗೊಂಡಿರುವ ದೋಷಯುಕ್ತ ಹೈ-ಟೆನ್ಶನ್ ಕಾರ್ಡ್ ಪತ್ತೆಯಾಗಿದೆ. ಬಳಿಕ ಸುಝುಕಿ ಇಂಡಿಯಾ ಒಟ್ಟು 3,88,411 ಸ್ಕೂಟರ್‌ಗಳನ್ನು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ನಿರ್ಧರಿಸಿದೆ.
2022ರ ಏಪ್ರಿಲ್ 30 ಹಾಗೂ 2022ರ ಡಿಸೆಂಬರ್ 3 ರ ನಡುವೆ ಉತ್ಪಾದನೆ ಮಾಡಲಾದ, ಮಾರುಕಟ್ಟೆಯಲ್ಲಿ ಹಾಟ್ ಸೆಲ್ಲಿಂಗ್‌ನಲ್ಲಿರುವ ಆಕ್ಸೆಸ್ 125, ಅವೆನಿಸ್ 125 ಹಾಗೂ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಸ್ಕೂಟರ್-ಬೈಕ್‌ಗಳನ್ನು ಹಿಂಪಡೆಯುವ ಲಿಸ್ಟ್‌ನಲ್ಲಿ ಇರಿಸಲಾಗಿದೆ.
ಬೈಕ್ ವಿಭಾಗಕ್ಕೆ ಬಂದಾಗ, ಟೆಕ್-ಲೋಡೆಡ್ ವಿ-ಸ್ಟ್ರೋಮ್ 800 ಡಿಇ ಕೂಡ ಇದೇ ಸಮಸ್ಯೆಗೆ ಈಡಾಗಿದೆ. ಹಿಂದಿನ ಟೈರ್ ವಿಚಾರದಲ್ಲಿ ಸಮಸ್ಯೆ ಇರೋದನ್ನು ಕಂಪನಿ ಕಂಡಿದೆ. ಬ್ರ್ಯಾಂಡ್ ಹಂಚಿಕೊಂಡ ವಿವರಗಳ ಪ್ರಕಾರ, ಟೈರ್ ಟ್ರೆಡ್‌ನ ಕೆಲವು ಭಾಗವು ಬೇರ್ಪಟ್ಟು ಅದರಲ್ಲಿ ಬಿರುಕುಗಳನ್ನು ಸೃಷ್ಟಿಸಬಹುದು.
ಕಂಪನಿ ಹಿಂಪಡೆಯಲಿರುವ ಲಿಸ್ಟ್‌ನಲ್ಲಿ ನೀವು ಖರೀದಿ ಮಾಡಿದ ಬೈಕ್ ಅಥವಾ ಸ್ಕೂಟರ್‌ಗಳು ಕೂಡ ಇರಬಹುದು. ಅವುಗಳನ್ನು ನೀವು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಪರೀಕ್ಷೆ ಮಾಡಿಕೊಳ್ಳಬಹುದು. ಇಲ್ಲಿ ವಾಹನದ ವಿಐಎನ್ ಹಾಕಿ ನಿಮ್ಮ ಬೈಕ್‌ನಲ್ಲೂ ಬದಲಾವಣೆಯ ಅವಶ್ಯಕತೆ ಇದೆಯೇ ಇಲ್ಲವೇ ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ.
ಸುಜುಕಿ ಇಂಡಿಯಾ, ಭಾರತದಲ್ಲಿ ಸ್ಕೂಟರ್ ಮತ್ತು ಬೈಕ್ ವಿಭಾಗಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದೆ. ಈ ಪಟ್ಟಿಯಲ್ಲಿ ಸೂಪರ್ ಹಿಟ್ ಆಗಿರುವ ಸುಜುಕಿ ಆಕ್ಸೆಸ್ 125, ಸುಜುಕಿ ಬರ್ಗ್‌ಮ್ಯಾನ್, ಮತ್ತು ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125, ಸುಜುಕಿ ಕಟಾನಾ, ಸುಜುಕಿ ಜಿಕ್ಸರ್ ಎಸ್‌ಎಫ್, ಸುಜುಕಿ ಜಿಕ್ಸರ್ 250, ಸುಜುಕಿ ವಿ-ಸ್ಟ್ರೋಮ್ ಎಸ್‌ಎಕ್ಸ್, ಸುಜುಕಿ ಜಿಎಸ್‌ಎಕ್ಸ್-ಆರ್1000ಆರ್ ಸೇರಿದೆ.
ಅಂದಹಾಗೆ ಇದೆಲ್ಲವೂ ಹೆಚ್ಚಾಗಿ ಕಂಡು ಬಂದಿರೋದು 125 ಸಿಸಿ ಬೈಕ್ ಸ್ಕೂಟರ್ʻಗಳಲ್ಲಿ. ಆದರೆ, ಎಲ್ಲ125 ಸಿಸಿಯ ಬೈಕ್ʻಗಳನ್ನೂ ತಪಾಸಣೆ ಮಾಡಲಾಗುತ್ತಿದೆ. ಅಂದಹಾಗೆ ಬೈಕುಗಳನ್ನು ಮಾರುಕಟ್ಟೆಯಿಂದ ವಾಪಸ್ ತೆಗೆದುಕೊಂಡು ಹೊಸ ಬೈಕ್ʻಗಳನ್ನೇನೂ ಕೊಡುವುದಿಲ್ಲ. ಬದಲಿಗೆ ಪ್ರಾಬ್ಲಂ ಸರಿ ಮಾಡಿ ಅದೇ ಬೈಕ್ ವಾಪಸ್ ಕೊಡ್ತಾರೆ. ಏನಂದ್ರೆ ಸರ್ವಿಸ್ ಚಾರ್ಜ್ ಫ್ರೀ.



