ಮನೆಗಳಲ್ಲಿ ಕೆಲವ ವಸ್ತುಗಳಿರುತ್ತವೆ. ಅವು ಅತ್ಯಂತ ಅಗತ್ಯ. ಅನಿವಾರ್ಯ. ಅಂತಹ ಕೆಲವು ವಸ್ತುಗಳು ಯಾವುತ್ತೂ, ಯಾವುದೇ ಕಾರಣಕ್ಕೂ ಖಾಲಿಯಾಗಲು ಬಿಡಬಾರದು. ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಮನೆಯಲ್ಲಿ ಇಟ್ಟುಕೊಳ್ಳಬೇಕು. ಅದು ವಾಸ್ತು ಶಾಸ್ತ್ರದ ಪ್ರಕಾರ ಪಾಲಿಸಬೇಕಾದ ಆಚಾರ. ಅಷ್ಟೇ ಅಲ್ಲ, ಈ ರೀತಿ ಇಟ್ಟುಕೊಳ್ಳುವುದರಲ್ಲಿ ಲಕ್ಷ್ಮೀ ಸೂತ್ರವೂ ಇದೆ. ಅಂದರೆ ಬಡತನ, ಶ್ರೀಮಂತಿಕೆಯ ಇದು ಪ್ರಭಾವ ಬೀರುತ್ತದೆ.
ಹರಿಶಿಣದ ಪುಡಿ : ಅಡುಗೆಯಲ್ಲಿ ಅಷ್ಟೇ ಅಲ್ಲ, ಪೂಜೆಯಲ್ಲೂ ಅರಿಷಿಣಕ್ಕೆ ವಿಶೇಷ ಸ್ಥಾನ ಇದೆ. ಅರಿಷಿಣ ಇಲ್ಲದೆ ಪೂಜೆ ಸಂಪನ್ನವಾಗುವುದಿಲ್ಲ. ಅದೇ ಹರಿಸಿನ ಇಲ್ಲದೆ ಅಡುಗೆಯೂ ಪರಿಪೂರ್ಣವಾಗುವುದಿಲ್ಲ. ವಾಸ್ತು ಪ್ರಕಾರ, ಅರಿಶಿನವನ್ನು ಅಡುಗೆಮನೆಯಲ್ಲಿ ಎಂದಿಗೂ ಖಾಲಿಯಾಗಲು ಬಿಡಬಾರದು. ಅರಿಶಿನ ಮುಗಿಯುವ ಮೊದಲೇ ಖರೀದಿ ಮಾಡುವುದು ಒಳ್ಳೆಯದು. ಪುಡಿ ಅಷ್ಟೇ ಅಲ್ಲ, ಅರಿಶಿನದ ಕೊಂಬುಗಳನ್ನಾದರೂ ಇಟ್ಟುಕೊಳ್ಳಿ.
ಸಾಸಿವೆ : ಒಗ್ಗರಣೆಗೆ ಸಾಸಿವೆ ಬೇಕೇ ಬೇಕು. ಈ ಸಾಸಿವೆ ಇಲ್ಲದಿದ್ದರೆ ಒಗ್ಗರಣೆಗೆ ರುಚಿಯೇ ಇರುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಈ ಸಾಸಿವೆ ಖಾಲಿಯಾಗಲು ಬಿಡಬಾರದು.
ಉಪ್ಪು : ಅನೇಕ ಜನರು ಸಂಪೂರ್ಣವಾಗಿ ಖಾಲಿಯಾದ ನಂತರವೇ ಮಸಾಲೆಗಳಂತಹ ಅಡುಗೆ ವಸ್ತುಗಳನ್ನು ಖರೀದಿಸುವ ಅಭ್ಯಾಸ ಹೊಂದಿದ್ದಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ನೀವು ಉಪ್ಪನ್ನು ಇಡುವ ಪಾತ್ರೆಯನ್ನು ಎಂದಿಗೂ ಖಾಲಿಯಾಗಲು ಬಿಡಬಾರದು. ಇದು ಜೀವನದಲ್ಲಿ ನಕಾರಾತ್ಮಕತೆ ಅಂದರೆ ನೆಗೆಟಿವಿಟಿಯನ್ನು ಹೆಚ್ಚಿಸುತ್ತದೆ. ಎರಡೂ ಮಾದರಿಯ ಕಲ್ಲು ಉಪ್ಪು ಮತ್ತು ಪುಡಿ ಉಪ್ಪು ಇದ್ದರೆ ಉತ್ತಮ. ಇಷ್ಟಕ್ಕೂ ಪುಡಿ ಉಪ್ಪು ಇತ್ತೀಚೆಗೆ ಸೇರ್ಪಡೆಯಾಗಿದ್ದು, ಕಲ್ಲು ಉಪ್ಪು ಇದ್ದರೆ ಒಳ್ಳೆಯದು.
ಅಕ್ಕಿ, ರಾಗಿ, ಜೋಳ, ಗೋಧಿ : ಒಂದೊಂದು ಭಾಗದಲ್ಲಿ ಒಂದೊಂದು ವಿಶೇಷ. ಅಂದರೆ ಮೈಸೂರು ಭಾಗದಲ್ಲಿ ರಾಗಿ, ಉತ್ತರ ಕರ್ನಾಟಕ ಭಾಗದಲ್ಲಿ ಜೋಳ, ಉತ್ತರ ಭಾರತ ಪ್ರೇರಣೆ ಪಡೆದವರಲ್ಲಿ ಗೋಧಿ, ಕರಾವಳಿ ಮತ್ತಿತರ ಭಾಗಗಳಲ್ಲಿ ಅಕ್ಕಿ ದಿನನಿತ್ಯದ ಬಳಕೆಗೆ ಉಪಯೋಗವಾಗುತ್ತದೆ. ಇಂತಹ ದೈನಂದಿನ ಬಳಕೆಯ ಆಹಾರದ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಇನ್ನೂ ಸ್ವಲ್ಪ ಇರುವಾಗಲೇ ತಂದಿಟ್ಟುಕೊಳ್ಳಬೇಕು.
ಬೆಲ್ಲ ಅಥವಾ ಸಕ್ಕರೆ : ಬೆಲ್ಲ ಮತ್ತು ಸಕ್ಕರೆಗೂ ಇದೇ ರೀತಿಯ ಸ್ಥಾನ ಮಾನ ಗೌರವ ಇದೆ. ಯಾವುದನ್ನೂ ದೈನಂದಿನ ಬಳಕೆಗೆ ಉಪಯೋಗಿಸುತ್ತೀರೋ.. ಅಂತಹ ವಸ್ತುಗಳು ಸಕ್ಕರೆ ಅಥವಾ ಬೆಲ್ಲ ಯಾವಾಗಲೂ ಮನೆಯಲ್ಲಿ ಇರಬೇಕು. ವಾಸ್ತುಶಾಸ್ತ್ರದ ಪ್ರಕಾರವೂ ಇದು ಒಳ್ಳೆಯದು.
ಮನೆಯಲ್ಲಿನ ಎಲ್ಲಾ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡೋದರಿಂದ, ಕುಟುಂಬದಲ್ಲಿ ಸಕಾರಾತ್ಮಕ ಶಕ್ತಿ ಹರಿಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ತಾಯಿ ಅನ್ನಪೂರ್ಣ ಅಡುಗೆ ಮನೆಯಲ್ಲಿ ವಾಸಿಸುತ್ತಾಳೆ ಎನ್ನುವ ನಂಬಿಕೆ ಹಿಂದೂಗಳದ್ದು. ಅನ್ನಪೂರ್ಣೆ ಎಲ್ಲಿ ಸಂತುಷ್ಟಳಾಗಿರುತ್ತಾಳೋ.. ಅಲ್ಲಿ ಲಕ್ಷ್ಮೀ ದೇವಿಯೂ ಸಂತೃಪ್ತಿಯಿಂದ ನೆಲೆಸಿರುತ್ತಾಳೆ ಎನ್ನುವುದು ನಂಬಿಕೆ. ಹಾಗಾಗಿ ಕೆಲವು ವಸ್ತುಗಳನ್ನು ಅಡುಗೆ ಕೋಣೆಯಲ್ಲಿ ಖಾಲಿ ಮಾಡಬಾರದು.
ವಾಸ್ತು ಶಾಸ್ತ್ರದಲ್ಲಿ, ಅಡುಗೆಮನೆಗೆ ಸಂಬಂಧಿಸಿದ ಅನೇಕ ನಿಯಮಗಳಿವೆ. ಇದರ ಬಗ್ಗೆ ಕಾಳಜಿ ವಹಿಸಿದರೆ, ವ್ಯಕ್ತಿಯು ಜೀವನದಲ್ಲಿ ಶುಭ ಫಲಿತಾಂಶಗಳನ್ನು ಪಡೆಯಬಹುದು. ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯಕ್ತಿಯು ಅದರ ನೆಗೆಟಿವಿಟಿ ಎದುರಿಸುತ್ತಾನೆ ಎನ್ನುತ್ತದೆ ವಾಸ್ತು ಶಾಸ್ತ್ರ.



