ಸಾಮಾನ್ಯವಾಗಿ ನಟ ನಟಿಯರಾಗಿ ಚಿತ್ರರಂಗಕ್ಕೆ ಬಂದವರು ಓದು ಮುಂದುವರೆಸುವುದು ಅಪರೂಪ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ನಟನೆಯ ಜೊತೆ ಓದನ್ನೂ ಅಷ್ಟೇ ಸೀರಿಯಸ್ ಆಗಿ ತೆಗೆದುಕೊಂಡು ಎಜುಕೇಷನ್ ಕಂಟಿನ್ಯೂ ಮಾಡ್ತಾರೆ. ಮತ್ತೂ ಕೆಲವರು ಇನ್ನೂ ಸೀರಿಯಸ್ ಆಗಿ ಪಿಎಚ್‌ಡಿ ಕೂಡಾ ಮಾಡ್ತಾರೆ. ಹಂಸಲೇಖ, ಜಯಮಾಲ (hamasalekha, Jayamala) ಅಂತಹ ಅಪರೂಪದ ಪ್ರತಿಭೆಗಳು. ಇನ್ನು ನಟನೆಗೆ ಬಂದ ನಂತರವೂ ಎಜುಕೇಷನ್ ಕಂಟಿನ್ಯೂ ಮಾಡಿದವರಲ್ಲಿ ಥಟ್ಟನೆ ನೆನಪಾಗುವ ಹೆಸರು ದಕ್ಷಿಣ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ (South actress Sai pallvi) ಅವರದ್ದು ಮಾತ್ರ. ಆದರೆ ಆ ಲಿಸ್ಟಿಗೆ ಈಗ ಅಮೃತಾ ಪ್ರೇಮ್ ಕೂಡಾ ಸೇರಿಕೊಂಡಿದ್ದಾರೆ.
ನೆನಪಿರಲಿ ಪ್ರೇಮ್ ಮಗಳು ಅಮೃತಾ (Amrutha prem), ತನ್ನ ಮೇಲೆ ಭರವಸೆ ಇಡಿ ಎಂದು ಇಡೀ ಚಿತ್ರರಂಗಕ್ಕೆ ಸಾರಿದ್ಧಾರೆ. ಟಗರುಪಲ್ಯ (Tagarupalya) ಚಿತ್ರದಲ್ಲಿ ನಟಿಸಿರುವ ಅಮೃತಾ, ಮೊದಲ ಚಿತ್ರದಲ್ಲಿಯೇ ಅದ್ಭುತ ಅಭಿನಯ ನೀಡಿದ್ಧಾರೆ. ಚಿತ್ರ ನೋಡಿದವರೆಲ್ಲ ಅಮೃತಾ ಪೇಮ್ ಅವರ ಕ್ಲೈಮಾಕ್ಸ್ ಸೀನ್ ನೋಡಿ ಕಣ್ಣೀರಿಟ್ಟಿದ್ಧಾರೆ. ಪ್ರೇಕ್ಷಕರಷ್ಟೇ ಅಲ್ಲ, ಥಿಯೇಟರಿನಲ್ಲಿ ಮಗಳ ಆಕ್ಟಿಂಗ್ ನೋಡಿದ ಅಪ್ಪ ಪ್ರೇಮ್ (Nenpirali prem) ಕೂಡಾ ಕಣ್ಣೀರಿಟ್ಟಿದ್ದು ಅಮೃತಾ ಪ್ರತಿಭೆಗೆ ಸಾಕ್ಷಿ.
ಇದರ ನಡುವೆಯೇ ಶೈಕ್ಷಣಿಕ ಪರೀಕ್ಷೆಯಲ್ಲಿ ನಟಿ ಅಮೃತಾ ಡಿಸ್ಟಿಂಗ್ಷನ್ನಲ್ಲಿ ಪಾಸ್ ಆಗಿದ್ದಾರೆ. ಅದು ಬೇರೆ ಎಂಜಿನಿಯರಿಂಗ್‌ನಲ್ಲಿ ಫಸ್ಟ್ ಕ್ಲಾಸ್ನಲ್ಲಿ ತೇರ್ಗಡೆ ಆಗಿದ್ದಾರೆ. ಅಮೃತಾ ಅವರು ಮೆಡಿಕಲ್ ಬಯೋ ಎಂಜಿನಿಯರಿಂಗ್ ಪದವಿ ಓದುತ್ತಿದ್ದರು. ಇದೀಗ ಆ ಪರೀಕ್ಷೆಯಲ್ಲೂ ಫಸ್ಟ್ ಕ್ಲಾಸ್‌ನಲ್ಲಿಯೇ ಪಾಸ್ ಆಗಿದ್ದಾರೆ.
ಈ ಮಧ್ಯೆ Dolly Dhananjaya ಡಾಲಿ ಧನಂಜಯ ನಿರ್ಮಾಣದ ಟಗರುಪಲ್ಯ ಚಿತ್ರ, ಬಾಕ್ಸಾಫೀಸಿನಲ್ಲಿ ಭರ್ಜರಿ ಕಲೆಕ್ಷನ್ Box office collection ಮಾಡುತ್ತಿದೆ. ಹಳ್ಳಿ ಸೊಗಡಿನ ಕಥೆಯ ಜೊತೆ ಅದ್ಭುತ ಸಂದೇಶವೂ ಇರುವ ಟಗರುಪಲ್ಯ ಚಿತ್ರ ಹಿಟ್ ಆಗಿದೆ. ಹೀರೋ ಆಗಿ ನಾಗಭೂಷಣ್ (Actor Nagabhushan), ನಾಯಕಿಯಾಗಿ ಅಮೃತಾ ಪ್ರೇಮ್, ರಂಗಾಯಣ ರಘು-ತಾರಾ (Rangayana Raghu, thara) ಅವರ ಅದ್ಭುತ ನಟನೆ, ಬಿರಾದಾರ್ ಅವರ ಕಾಮಿಡಿ, ವಾಸುಕಿ ವೈಭವ್ (Vasuki vaibhav) ಅವರ ಮುಗ್ಧಪೆದ್ದುತನ.. ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಂಬಂಜ ಅನ್ನೋದು ದೊಡ್ದು ಕನಾ.. ಹಾಡು ಕೂಡಾ ಪ್ರೇಕ್ಷಕರ ಮನ ಗೆದ್ದಿದೆ.



