ಪ್ರೀತಿಸುವಾಗ ಎಲ್ಲವೂ ಮಧುರ. ಎಲ್ಲವೂ ಅದ್ಭುತ. ಪ್ರೀತಿ-ಪ್ರೇಮ-ಪ್ರಣಯ ಎಲ್ಲ ಮುಗಿದ ಮೇಲೆ.. ಅದೇ ಪ್ರೀತಿಯಲ್ಲಿ ಅನುಮಾನ ಸುಳಿದುಬಿಟ್ಟರೆ.. ಆಗುವುದೇ ಬೇರೆ. ಬೆಂಗಳೂರಿನಲ್ಲಿ ಪ್ರೀತಿಸಿ ಒಟ್ಟಿಗೇ ವಾಸ ಮಾಡುತ್ತಿದ್ದ ಜೋಡಿಯ ಲವ್ ಸ್ಟೋರಿ, ಪ್ರಿಯಕರನ ಕೊಲೆಯಲ್ಲಿ ಅಂತ್ಯ ಕಂಡಿದೆ.
ಕೇರಳ (Kerala) ರಾಜ್ಯ ಕಣ್ಣೂರು ಮೂಲದ ಜಾವೇದ್ (Javed) ಹಾಗೂ ಬೆಳಗಾವಿ ಜಿಲ್ಲೆಯ ರೇಣುಕಾ (Renuka) ಲಿವಿಂಗ್ ಟುಗೆದರ್ ರಿಲೇಷನ್ಶಿಪ್ನಲ್ಲಿದ್ದು (Live in together) , ಮೂರೂವರೆ ವರ್ಷಗಳಿಂದ ಒಟ್ಟಿಗೇ ವಾಸಿಸುತ್ತಿದ್ದರು. ಕಳೆದ 3 ದಿನಗಳಿಂದ ಅಕ್ಷಯ್ ನಗರದ ಸರ್ವಿಸ್ ಅಪಾರ್ಚ್ಮೆಂಟ್ನಲ್ಲಿ ್ತದ್ದರು. ಸ್ನೇಹಿತ ರಶೀದ್ ಮೂಲಕ ಅಕ್ಷಯ್ ನಗರದ ಸರ್ವಿಸ್ ಅಪಾರ್ಚ್ಮೆಂಟ್ನಲ್ಲಿ ಫ್ಲ್ಯಾಟ್ ಬುಕ್ ಮಾಡಿಸಿದ್ದ. ಆದರೆ ಪ್ರತಿ ದಿನ ಜಾವೇದ್ ಹಾಗೂ ರೇಣುಕಾ ಮಧ್ಯೆ ಜಗಳವಾಗುತ್ತಿತ್ತು.ಏಕೆಂದರೆ ಜಾವೇದ್, ಪ್ರೇಯಸಿ ರೇಣುಕಾಳ ಶೀಲದ ಬಗ್ಗೆ ಡೌಟ್ ಪಡುತ್ತಿದ್ದ. ರೇಣುಕಾ ಇನ್ಯಾರದ್ದೋ ಜೊತೆ ಅಫೇರ್ ಇಟ್ಟುಕೊಂಡಿದ್ದಾಳೆದು ಅನುಮಾನ ಪಡುತ್ತಿದ್ದ. ರೇಣುಕಾ ಈಗಾಗಲೇ ಮದುವೆಯಾಗಿ ಮಗು ಇದ್ದವರು. ರೇಣುಕಾಗೆ 34 ವರ್ಷವಾದರೆ, ಜಾವೇದ್`ಗೆ 28 ವರ್ಷ. ಹೀಗೆ ಸಂಸಾರವನ್ನೇ ಬಿಟ್ಟು, ಪ್ರೀತಿಗಾಗಿ ಜಾವೇದ್ ಜೊತೆ ಬಂದರೂ (Live in relationship) ತನ್ನನ್ನೇ ಅನುಮಾನ ಪಡುತ್ತಿದ್ದಾನಲ್ಲ ಎಂದು ರೇಣುಕಾ ಆಕ್ರೋಶಗೊಂಡಿದ್ದರು.
ಇದೇ ಕಾರಣಕ್ಕೆ ರೇಣುಕಾ ಮತ್ತು ಜಾವೇದ್ ಜಗಳವಾಡಿಕೊಂಡಿದ್ದಾರೆ. ಗಲಾಟೆ ವಿಪರೀತಕ್ಕೆ ಹೋಗಿದೆ. ಈ ಹಂತದಲ್ಲಿ ಕೆರಳಿದ ರೇಣುಕಾ, ಜಾವೇದ್ಗೆ ಎದೆಗೆ ಚಾಕುವಿನಿಂದ ಇರಿದಿದ್ದಾಳೆ. ಆಗ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯ ನಿವಾಸಿಗಳು, ಕೂಡಲೇ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಜಾವೇದ್ ಮೃತಪಟ್ಟಿದ್ದಾನೆ. ಬಳಿಕ ಅಪಾರ್ಚ್ಮೆಂಟ್ ಮಾಲಿಕ ಗಣೇಶ್ ದೂರು ಆಧರಿಸಿ ರೇಣುಕಾಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾವೇದ್ ಮೊಬೈಲ್ ರಿಪೇರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇನ್ನು ರೇಣುಕಾಳಿಗೆ ನಿಶ್ಚಿತ ಉದ್ಯೋಗವಿರಲಿಲ್ಲ. ಪಬ್ಗಳಿಗೆ ಒಂಟಿಯಾಗಿ ಹೋಗುವ ಪುರುಷರ ಜತೆ ತಾತ್ಕಾಲಿಕ ಸಂಗಾತಿಯಾಗಿ ಆಕೆ ಹೋಗುತ್ತಿದ್ದಳು. ಇದರಿಂದ ರೇಣುಕಾಳಿಗೆ ಹಣ ಸಿಗುತ್ತಿತ್ತು. ಅಲ್ಲದೆ ಐಷಾರಾಮಿ ಜೀವನಕ್ಕೆ ಆಕೆ ಮಾರು ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪಬ್`ಗಳಿಗೆ ಹೋಗುವ ಪುರುಷರ ಜೊತೆ ಸಂಗಾತಿಯ ಜೊತೆ ಹೋಗುತ್ತಿದ್ದ ರೇಣುಕಾಳ ವರ್ತನೆ, ಜಾವೇದ್`ಗೆ ಹಿಡಿಸುತ್ತಿರಲಿಲ್ಲ. ಹೀಗಾಗಿಯೇ ಜಗಳ ಮಾಡುತ್ತಿದ್ದ ಎನ್ನಲಾಗಿದೆ.



