ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ ತಿಂಗಳು ಈ ಮೂರು ರಾಶಿಯವರಿಗೆ ಮಾತ್ರ ಸಾಕಷ್ಟು ಕಷ್ಟವನ್ನು ಹೊತ್ತು ತರಲಿದೆ. ಯಾಕೆಂದರೆ ಆಗಸ್ಟ್ ತಿಂಗಳಿನಲ್ಲಿ ಶನಿಯ ಜೊತೆಗೆ ರಾಹುವಿನ ಪ್ರಕೋಪ ಕೂಡ ಹೆಚ್ಚಾಗಿ ಕಂಡು ಬರಲಿದೆ.
ಸೂರ್ಯ ಹಾಗೂ ಶನಿ ತಮ್ಮ ರಾಶಿಗಳಲ್ಲಿ ʻಸಮಸಪ್ತಕ ಯೋಗʼವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಸೂರ್ಯ ಹಾಗೂ ರಾಹುವಿನ ʻಶಡಷ್ಟಕ ಯೋಗʼವೂ ನಿರ್ಮಾಣವಾಗುತ್ತಿದೆ.
ಆಗಸ್ಟ್ ತಿಂಗಳಿನಲ್ಲಿ ಸೂರ್ಯ ಎರಡು ಗ್ರಹಗಳ ಜೊತೆಗೆ ಈ ರೀತಿಯ ವಿಶೇಷ ಯೋಗವನ್ನು ನಿರ್ಮಾಣ ಮಾಡುತ್ತಿದ್ದು, ಕೆಲವರಿಗೆ ಲಾಭವಾಧರೆ, ಕೆಲವರಿಗೆ ಎಚ್ಚರಿಕೆಯಿಂದರಬೇಕಾದ ಸಮಯ. ಇದೇ ಕಾರಣಕ್ಕಾಗಿ ಕೆಲವು ರಾಶಿಯವರಿಗೆ ಈ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಹುಷಾರಾಗಿರಬೇಕು.
ಆಗಸ್ಟ್ 16ರಂದು ಸೂರ್ಯ ತನ್ನ ಸ್ವಂತ ರಾಶಿ ಆಗಿರುವಂತಹ ಸಿಂಹ ರಾಶಿಗೆ ಕಾಲಿಡುತ್ತಿದ್ದಾನೆ. ಆಗಸ್ಟ್ 16ರಂದು ಸೂರ್ಯ ತನ್ನ ಸ್ವಂತ ರಾಶಿ ಆಗಿರುವಂತಹ ಸಿಂಹ ರಾಶಿಗೆ ಕಾಲಿಡುತ್ತಿದ್ದಾನೆ. ಇದೇ ಸಂದರ್ಭದಲ್ಲಿ ಸೂರ್ಯ ಹಾಗೂ ಶನಿ ಇಬ್ಬರೂ ತಮ್ಮ ತಮ್ಮ ರಾಶಿಗಳಲ್ಲಿ 180 ಡಿಗ್ರಿ ನೇರಕ್ಕೆ ಬಂದು ನಿಲ್ಲಲಿದ್ದಾರೆ. ಮುಖಾಮುಖಿಯಾಗಲಿದ್ದಾರೆ. ಹೀಗಾಗಿ ರಾಶಿಯಲ್ಲಿ ಸಂಚಾರ ಮಾಡುವಾಗ ಪರಸ್ಪರ ದೃಷ್ಟಿ ತಾಕಲಿದೆ. ಇದರಿಂದಾಗಿ ಗ್ರಹಗತಿಗಳ ಮೇಲೆ ಸಾಕಷ್ಟು ಅಶುಭವಾದಂತಹ ಪರಿಣಾಮಗಳು ಹೆಚ್ಚಾಗಿ ಕಂಡುಬರುತ್ತವೆ.
ಮೇಷ ರಾಶಿ :
ಆಗಸ್ಟ್ ತಿಂಗಳಿನಲ್ಲಿ ಮೇಷ ರಾಶಿಯವರು ಸ್ವಲ್ಪ ಹೆಚ್ಚೇ ಜಾಗ್ರತೆ ವಹಿಸಬೇಕು. ಅಪಾಯದ ಪ್ರಮಾಣ ಹೆಚ್ಚು.
ಸಮಸಪ್ತಕ ಹಾಗೂ ಷಡಷ್ಟಕ ಯೋಗ ಇರುವ ಕಾರಣ, ಡ್ರೈವಿಂಗ್ ಮತ್ತು ದೂರ ಪ್ರಯಾಣವನ್ನು ಅವಾಯ್ಡ್ ಮಾಡಬೇಕು. ಇನ್ನು ಕೆಲಸದ ಸ್ಥಳದಲ್ಲಿ ಕೂಡ ಅಗತ್ಯಕ್ಕಿಂತಲೂ ಸ್ವಲ್ಪ ಹೆಚ್ಚಿನ ಜಾಗ್ರತೆ ವಹಿಸಬೇಕು. ನಿಮ್ಮ ವಿರುದ್ಧ ನಿಮ್ಮ ಶತ್ರುಗಳು ದೊಡ್ಡ ಮಟ್ಟದ ಷಡ್ಯಂತ್ರವನ್ನು ರಚಿಸುವಂತಹ ಸಾಧ್ಯತೆ ಇದೆ.
ಇನ್ನು ಆರೋಗ್ಯವೂ ಅಷ್ಟೆ, ಆರೋಗ್ಯ ಏರುಪೇರಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇಟ್ಟುಕೊಳ್ಳಿ. ಇನ್ನು ಈ ಸಂದರ್ಭದಲ್ಲಿ ದಾಂಪತ್ಯ ಕುಟುಂಬ ಎನ್ನುವಂತಹ ಚಿಂತೆಗಳು ನಿಮ್ಮನ್ನು ಹೆಚ್ಚಾಗಿ ಕಾಡಲಿವೆ.
ಒಂದು ವೇಳೆ ಯಾವುದಾದರೂ ಕ್ಷೇತ್ರದಲ್ಲಿ ಹಣವನ್ನು ಹೂಡಿಕೆ ಮಾಡುತ್ತೀರಿ ಎಂಬ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ,
ಲಾಭ ನಷ್ಟದ ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಂಡು ಹೆಜ್ಜೆ ಇಡಿ. ಧನಹಾನಿಯ ಯೋಗ ಹೆಚ್ಚಿದೆ. ಹೀಗಾಗಿ ಬೇಕಾಬಿಟ್ಟಿಯಾಗಿ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಿ.
ಮಕರ ರಾಶಿ :
ಮಕರ ರಾಶಿಯವರ ಮೇಲೆ ರಾಹು ಹಾಗು ಶನಿ ವಕ್ರ ದೃಷ್ಟಿ ಬೀರಲಿದೆ. ಹೀಗಾಗಿ ಮಕರ ರಾಶಿಯವರು ಮಾಡುವಂತಹ ಯಾವುದೇ ಕೆಲಸಗಳೂ ಹೇಳಿಕೊಳ್ಳುವಷ್ಟು ಯಶಸ್ಸು ಪಡೆಯುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಕೂಡ ಮಕರ ರಾಶಿಯವರಿಗೆ ಸಾಕಷ್ಟು ಸಮಸ್ಯೆಗಳು ಹಾಗೂ ಕಷ್ಟಗಳು ಎದುರಾಗಲಿವೆ. ಜಗಳಗಳನ್ನು ಅವಾಯ್ಡ್ ಮಾಢಿ. ಕೆಲಸ ಎಷ್ಟಿದ್ಯೋ ಅಷ್ಟು ಮಾತ್ರ ಮಾಡ್ಕೊಳ್ಳಿ.
ತಂದೆ ತಾಯಿಯ ಆರೋಗ್ಯದಲ್ಲಿ ಕೂಡ ಸ್ವಲ್ಪಮಟ್ಟಿಗೆ ಏರುಪೇರು ಉಂಟಾಗಬಹುದು. ಅಪಾಯವೇನಿಲ್ಲ. ಮನೆಯಲ್ಲಿ ಹಾಗೂ ಜೀವನದಲ್ಲಿ ನಡೆಯುವಂತಹ ಸಮಸ್ಯೆಗಳು ಮಾನಸಿಕವಾಗಿ ಸಾಕಷ್ಟು ಕುಗ್ಗಿಸಲಿವೆ. ಇನ್ನು ವ್ಯಾಪಾರ ಕ್ಷೇತ್ರದಲ್ಲಿ ಕೂಡ ನಿಮ್ಮ ಪ್ರತಿಸ್ಪರ್ಧಿಗಳು ನಿಮಗಿಂತ ಮೇಲೆ ಹೋಗಲಿದ್ದಾರೆ.ಹೊಸ ಕೆಲಸಗಳಿಗೆ ಉದ್ಯಮಗಗಳಿಗೆ ಈ ಸಮಯ ನಿಮಗೆ ಅನುಕೂಲಕರವಾಗಿಲ್ಲ.
ಮೀನ ರಾಶಿ :
ಈ ಸಂದರ್ಭದಲ್ಲಿ ಮೀನ ರಾಶಿಯವರು ಶತ್ರು, ಋಣ ಹಾಗೂ ಆರೋಗ್ಯದ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಿನ ಸಮಸ್ಯೆಯನ್ನು ಕಾಣಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಈ ಸಂದರ್ಭದಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿಗಳು ಇಲ್ಲದೆ ಇರುವ ಕಾರಣದಿಂದಾಗಿ ನೀವು ಸಾಕಷ್ಟು ಸಮಸ್ಯೆ ತಂದುಕೊಳ್ಳುವಂತಹ ಸಾಧ್ಯತೆ ಇದೆ. ವಿವಾದಗಳಿಂದ ಆದಷ್ಟು ದೂರ ಇರಿ. ಬೇಕಾಬಿಟ್ಟಿಯಾಗಿ ಈ ಸಂದರ್ಭದಲ್ಲಿ ಹಣವನ್ನು ಖರ್ಚು ಮಾಡೋದಕ್ಕೆ ಹೋಗಬೇಡಿ. ಸಾಲಗಳೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಲಿದೆ.



