ಕಿಚ್ಚ ಸುದೀಪ್ ಅವರು ಸಖತ್ ಆಗಿ ರೊಮ್ಯಾನ್ಸ್ ಮಾಡ್ತಾರೆ. ಆದರೆ.. ಅವರಿಗೆ ಪದೇ ಪದೇ ಹೀರೋಯಿನ್ ಮಿಸ್ ಆಗುತ್ತಿದೆ. ಕಿಚ್ಚ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಕಾಂಬಿನೇಷನ್ನಿನ K47 ಸಿನಿಮಾ ಘೋಷಣೆಯಾಗಿದೆಯಲ್ಲ.. ಆ ಚಿತ್ರದಲ್ಲೂ ಸುದೀಪ್ ಅವರಿಗೆ ಹೀರೋಯಿನ್ ಇಲ್ಲವಂತೆ.
ಈ ಚಿತ್ರವನ್ನು ಈ ವರ್ಷವೇ ಡಿಸೆಂಬರ್ 25ಕ್ಕೆ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ. ಆದರೆ.. ಸುದೀಪ್ ಸಿನಿಮಾಗಳ ಪ್ಲಾನಿಂಗ್ ಮತ್ತು ವರ್ಕಿಂಗ್ ನಿರೀಕ್ಷೆಯಂತೆ ನಡೆದ ದಾಖಲೆ ಇಲ್ಲ. ಹಾಗೆ ನೋಡಿದರೆ.. ಕನ್ನಡದ ಬಹುತೇಕ ಸಿನಿಮಾಗಳು ಹೇಳಿದ ದಿನಾಂಕಕ್ಕೆ ರಿಲೀಸ್ ಆಗುವುದಿಲ್ಲ. ಹೀಗಾಗಿ.. ಡಿ.25ಕ್ಕೆ ರಿಲೀಸ್ ಎಂದು ಘೋಷಿಸಿದರೂ.. ಅಭಿಮಾನಿಗಳೂ ನಂಬೋದಿಲ್ಲ. ಈ K47 ವಿಶೇಷತೆ ಏನೆಂದರೆ.. ಇದು ಮ್ಯಾಕ್ಸ್ 02 ಅಲ್ಲ.. ಮ್ಯಾಕ್ಸ್ ಚಿತ್ರದಲ್ಲೂ ನಾಯಕಿಯಿಲ್ಲದೆ ರಕ್ತ ಹರಿಸಿದ್ದ ಸುದೀಪ್, ಈ ಬಾರಿಯೂ ರೊಮ್ಯಾನ್ಸ್ ಮಾಡಲ್ಲ. ರೊಮ್ಯಾನ್ಸ್ ಮಾಡೋಕೆ ನಾಯಕಿಯೇ ಇಲ್ಲ.
ನಾವು ಮ್ಯಾಕ್ಸ್ 02 ಮಾಡೋಕೆ ಹೊರಟ್ವಿ. ಆದರೆ.. ಕಥೆ ಕೈ ಹಿಡೀಲಿಲ್ಲ. ಈ ಕಥೆ ಓಕೆ ಆಯ್ತು ಎಂದಿದ್ದಾರೆ ಕಿಚ್ಚ ಸುದೀಪ್. ಅಂದಹಾಗೆ ಸುದೀಪ್ ಅವರ ಕ್ಯಾರೆಕ್ಟರ್ ಮುತ್ತತ್ತಿ ಸತ್ಯರಾಜು ರೀತಿ ಇದೆಯಂತೆ. ʻಮುತ್ತತ್ತಿ ಸತ್ಯರಾಜುʼ ಪಾತ್ರದ ಕಲ್ಪನೆ ರಾಜಮೌಳಿ ಅವರದ್ದು. ವಿಕ್ರಮಾರ್ಕುಡು ಚಿತ್ರದ ರೀಮೇಕ್ ಕನ್ನಡದಲ್ಲಿ ಮಾಡಿದ್ದ ಸುದೀಪ್ ವೀರ ಮದಕರಿ ಮತ್ತು ಮುತ್ತತ್ತಿ ಸತ್ಯರಾಜು ಎರಡೂ ಪಾತ್ರಗಳಲ್ಲಿ ರಂಜಿಸಿದ್ದರು.
ಮುತ್ತತ್ತಿ ಪಾತ್ರ ಸಖತ್ ಆಗಿದೆ. ಜೋವಿಯಲ್.. ಸದಾ ನಗುತ್ತಾ.. ನಗಿಸುತ್ತಾ.. ಯಾಮಾರಿಸಿ ಮೋಸ ಮಾಡುವ ಪಾತ್ರ. ಸುದೀಪ್ ಅವರು ಆ ಪಾತ್ರಕ್ಕೊಂದು ತುಂಟತನದ ಟಚ್ ಕೊಟ್ಟಿದ್ದರು. ಮುತ್ತತ್ತಿ ಜೊತೆ ರೊಮ್ಯಾನ್ಸ್ ಮಾಡಿ ಹಾಡಿ ಕುಣಿದಿದ್ದವರು ರಾಗಿಣಿ ದ್ವಿವೇದಿ. ಕನ್ನಡದಲ್ಲಿ ಅದು ಅವರ ಮೊದಲ ಸಿನಿಮಾ ಆಗಿತ್ತು. ರಾಗಿಣಿಯ ಸೊಂಟಕ್ಕೆ ಹೊಡೆಯುವ ಸೀನ್ʻನ್ನು ಪ್ರೇಕ್ಷಕರು ಎಂಜಾಯ್ ಮಾಡಿದ್ದರು. ಆದರೆ.. ಇಲ್ಲಿ ನಾಯಕಿಯೇ ಇಲ್ಲ.
ಈಗ ಅವರ K47 ಚಿತ್ರದ ಪಾತ್ರವೂ ಅದೇ ರೀತಿ ಇರಲಿದೆಯಂತೆ. ʻʻಈ ಚಿತ್ರದ ಪಾತ್ರ ಮೂರು ಲೇಯರ್‌ಗಳಲ್ಲಿದೆ. ಸಖತ್ ಮನರಂನೆʼʼ ಎನ್ನೋದು ಸುದೀಪ್ ಕೊಡ್ತಿರೋ ಕಾನ್ಫಿಡೆನ್ಸ್.
ನೋಡೋಣ.. ಸುದೀಪ್ ಅವರು ಹೀರೋ ಆಗಿರುವ ಚಿತ್ರಗಳಲ್ಲಿ ಅವರಿಗೆ ನಾಯಕಿಯಿಲ್ಲದ ಮೊದಲ ಸಿನಿಮಾ ಮ್ಯಾಕ್ಸ್. ಈಗ ಆ ಚಿತ್ರದ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ.. ಅದರಲ್ಲೂ ನಾಯಕಿ ಇಲ್ಲ. ಸುದೀಪ್ ಅವರನ್ನ ಹೀರೋಯಿನ್ ಲೆಸ್ ಮಾಡೋಕೆ ಹೊರಟಿದ್ದಾರಾ.. ಎನ್ನೋದು ಅಭಿಮಾನಿಗಳ ಪ್ರಶ್ನೆ.
ಆದರೆ.. ಏನಾದ್ರೂ ಮಾಡು.. ಸಖತ್ ಸಿನಿಮಾ ಮಾಡು. ಮ್ಯಾಕ್ಸ್‌ಗಿಂತ ಅದ್ಧೂರಿಯಾಗಿರಲಿ.. ಕಥೆ.. ಟ್ವಿಸ್ಟು.. ಕಿಕ್ಕು ಎಲ್ಲ ಇರಲಿ ಅನ್ನೋದಷ್ಟೇ ಫ್ಯಾನ್ಸ್ ಇಡ್ತಾ ಇರೋ ಏಕೈಕ ಡಿಮ್ಯಾಂಡು.



