ನೋಟುಗಳ (currency) ಬಗ್ಗೆ ಸೃಷ್ಟಿಯಾಗುವಷ್ಟು ವದಂತಿಗಳು ಬೇರಾವುದರ ಬಗ್ಗೆಯೂ ಸೃಷ್ಟಿಯಾಗುವುದಿಲ್ಲವೇನೋ.. ರಿಯಲ್ ಕಥೆಗಳಿಗಿಂತ ಹೆಚ್ಚು ಅಂತಹ ಕಥೆಗಳನ್ನೇ ಹೆಚ್ಚು ನಂಬಿಕೊಳ್ಳುವವರಿಗೆ ಇತ್ತೀಚೆಗೆ ಒಂದು ಡೌಟ್ ಬಂದಿತ್ತು. ಕೆಲವು ನೋಟುಗಳಲ್ಲಿ (currency) ಸೀರಿಯಲ್ ನಂಬರ್ ಶುರುವಾಗುವ ಮುನ್ನ * ಚಿಹ್ನೆ ಇದೆ. ಇವು ಅಸಲಿಯೋ.. ನಕಲಿಯೋ.. (currency) ಎಂಬ ಪ್ರಶ್ನೆ ಎದ್ದಿತ್ತು. ಖೋಟೋ ನೋಟು ಕಣ್ರೀ ಎಂದವರೂ ಇದ್ದರು. ಅದಕ್ಕೆಲ್ಲ ಫುಲ್ ಸ್ಟಾಪ್ ಇಟ್ಟಿದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India).
ಸ್ಟಾರ್ ಚಿಹ್ನೆ ಹೊಂದಿರುವ ಬ್ಯಾಂಕ್ (Reserve Bank Of India) ನೋಟ್ಗಳು ಕಾನೂನುಬದ್ಧ. ಅದರಲ್ಲಿ ಯಾವುದೇ ಅನುಮಾನ ಬೇಡ. ಇತರ ನೋಟುಗಳಂತೆ ಅದನ್ನೂ ಕೂಡ ಲೀಗಲ್ ಟೆಂಡರ್ ಆಗಿ ಬಳಸಿಕೊಳ್ಳಬಹುದು ಎಂದು ಆರ್ಬಿಐ (RBI) ಸ್ಪಷ್ಟನೆ ನೀಡಿದೆ.
ನಕ್ಷತ್ರ ಚಿಹ್ನೆಯು (Star symbol currency) ನೋಟುಗಳ ಅರ್ಥ, ಅದನ್ನು ಪ್ರಿಟಿಂಗ್ ವೇಳೆ ಬದಲಿ ಮಾಡಿದ ಅಥವಾ ಮರುಮುದ್ರಣ ಮಾಡಿದ ನೋಟು ಎಂದು ಗುರುತಿಸುತ್ತದೆ ಎಂದು ಆರ್ಬಿಐ (Reserve Bank Of India) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. (Reserve Bank Of India) ಪ್ರಿಂಟಿಗ್ ಮಾಡುವಾಗ ದೋಷವಾದಾಗ ಅಥವಾ ತಪ್ಪಾಗಿ ಪ್ರಿಂಟ್ ಆದಾಗ ಅಂಥಾ ನೋಟುಗಳ ಮರುಮುದ್ರಣ ಮಾಡಲಾಗುತ್ತದೆ. ಆದರೆ, ಅದೇ ಸೀರಿಯಲ್ ನಂಬರ್ಗಳ ಮುನ್ನ * ಚಿಹ್ನೆ ಹಾಕಲಾಗುತ್ತದೆ ಎಂದು ಆರ್ಬಿಐ ಹೇಳಿದೆ. ಅಂದರೆ ನೋಟು ಪ್ರಿಂಟ್ ಮಾಡುವಾಗ ಯಾವುದಾದರೂ ನೋಟುಗಳು ತಪ್ಪಾಗಿ ಮುದ್ರಣವಾಗಿದ್ದರೆ, ಏನಾದರೂ ಮಿಸ್ಟೇಕ್ ಇದ್ದರೆ, ಅದೇ ಸೀರಿಯಲ್ ನಂಬರಿನಲ್ಲಿ ಬೇರೊಂದು ನೋಟ್ ಪ್ರಿಂಟ್ ಹಾಕ್ತಾರೆ. ಆ ನೋಟು ಅಂದ್ರೆ ತಪ್ಪಾಗಿ ಪ್ರಿಂಟ್ ಆದ ನೋಟು ಮಾರುಕಟ್ಟೆಗೆ ಬರುವುದೇ ಇಲ್ಲ. ಆದರೆ ನೋಟುಗಳ ಲೆಕ್ಕ ಹಾಕುವುದಕ್ಕೆ ಗೊತ್ತಾಗುವಂತೆ, ಅದೇ ನಂಬರಿನ ಬದಲಿ ನೋಟುಗಳಿಗೆ ಸ್ಟಾರ್ ಚಿಹ್ನೆ ಹಾಕುತ್ತಾರೆ. ಅಷ್ಟೆ.
100 ಸರಣಿ ಸಂಖ್ಯೆಯ ಬ್ಯಾಂಕ್ ನೋಟುಗಳ ಪ್ಯಾಕೆಟ್ನಲ್ಲಿ ದೋಷಪೂರಿತವಾಗಿ ಮುದ್ರಿತ ನೋಟುಗಳನ್ನು ಬದಲಿಸಲು (Reserve Bank Of India) ಬ್ಯಾಂಕ್ ಸ್ಟಾರ್ ಸರಣಿ ಸಂಖ್ಯೆಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ನಕ್ಷತ್ರ ಚಿಹ್ನೆಯ ನೋಟುಗಳು ಇತರ ನೋಟುಗಳಷ್ಟೇ ಕಾನೂನುಬದ್ಧ. ಆದರೆ ಪೂರ್ವಪ್ರತ್ಯಯ ಮತ್ತು ಸರಣಿ ಸಂಖ್ಯೆಯ ನಡುವಿನ ಜಾಗದಲ್ಲಿ ಹೆಚ್ಚುವರಿ ಅಕ್ಷರವಾಗಿ ಸ್ಟಾರ್ ಚಿಹ್ನೆಯನ್ನು ಹೊಂದಿರುತ್ತದೆ.
ಡೋಂಟ್`ವರಿ. ಈ ಹಿಂದೆ 5 ರೂ. 10 ರೂ. ನಾಣ್ಯಗಳ ಬಗ್ಗೆ ಆರ್.ಬಿ.ಐ. (Reserve Bank Of India) ಸ್ಪಷ್ಟನೆ ಕೊಟ್ಟಿದ್ದರೂ, ಇಂದಿಗೂ ಜನ ಆ ನಾಣ್ಯಗಳನ್ನು ಸ್ವೀಕಾರ ಮಾಡುವುದಕ್ಕೆ ಹಿಂದೆ ಮುಂದೆ ನೋಡ್ತಾರೆ. ಇದನ್ನೂ ಹಾಗೆ ಮಾಡಬೇಡಿ. ಸ್ವಲ್ಪ ಬುದ್ದಿವಂತರ ತರಾ ಯೋಚನೆ ಮಾಡಿ.



