ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ನಡೆಯುವುದು ಹೊಸದೇನಲ್ಲ. ಕೆಲವರು ಕಮಿಟ್ ಆಗ್ತಾರೆ. ಕೆಲವರು ಆಗಲ್ಲ. ವಿತ್ ಅಡ್ಜಸ್ಟ್ ಮೆಂಟ್, ವಿತ್ ಕಮಿಟ್ ಮೆಂಟ್.. ಎನ್ನುವುದಕ್ಕೇ ಒಂದು ರೇಟ್, ʻವಿತೌಟ್ʼ ಎಂಬ ಕೆಲಸಕ್ಕೇ ಒಂದು ರೇಟ್ ಇದೆ. ಅಂಥಾದ್ದರಲ್ಲಿ ಸುಮಾರು 8 ವರ್ಷಗಳ ಹಿಂದೆ ಮಲಯಾಳಂ ಸ್ಟಾರ್ ನಟನ ವಿರುದ್ಧ ಸ್ಟಾರ್ ನಟಿಯೊಬ್ಬರು ದೂರು ನೀಡಿದ್ದರು. ಕಿಡ್ನಾಪ್ & ಹೆರಾಸ್‌ಮೆಂಟ್ ದೂರು ಅದು. ಈಗ ಆ ನಟ ಶಿಕ್ಷೆಯಿಂದ ಬಚಾವ್ ಆಗಿದ್ದಾನೆ. ಆ ನಟನ ಹೆಸರು ದಿಲೀಪ್.
ಸ್ಟಾರ್ ನಟಿಗೆ ಲೈಂಗಿಕ ಕಿರುಕುಳ : 2017ರಲ್ಲಿ ನಡೆದಿದ್ದ ಪ್ರಕರಣ
ಕನ್ನಡದಲ್ಲಿಯೂ ನಟಿಸಿರುವ ಮಲಯಾಳಂ ಮೂಲದ ನಟಿಯನ್ನು ಅಪಹರಿಸಲಾಗಿತ್ತು. ಕಾರಿನೊಳಗೆ ಸುಮಾರು 2 ಗಂಟೆಗಳ ಕಾಲ ಟಾರ್ಚರ್ ಕೊಡಲಾಗಿತ್ತು. 2017ರಲ್ಲಿ ನಡೆದಿದ್ದ ಘಟನೆಯಲ್ಲಿ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದಷ್ಟೇ ಅಲ್ಲದೆ, ಕಿರುಕುಳ ನೀಡಿದ್ದರ ವಿಡಿಯೋ ಕೂಡಾ ಚಿತ್ರೀಕರಿಸಾಗಿತ್ತು. 2017 ಫೆಬ್ರುವರಿ 17ರಂದು ನಡೆದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಹೇಗೋ ತಪ್ಪಿಸಿಕೊಂಡು ಬಂದ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಷ್ಟೇ ಅಲ್ಲ, ಆರೋಪಿಗಳಿಗೆ ಶಿಕ್ಷೆ ಕೊಡಿಸಲೇಬೇಕೆಂದು ಹಠ ತೊಟ್ಟು ನಿಂತರು.
ಪ್ರಕರಣ ಹೊರಬಂದಾಗ ಎಲ್ಲರೂ ಮೆಚ್ಚಿದ್ದು ಈಕೆಯ ಧೈರ್ಯವನ್ನು. ಈ ಪ್ರಕರಣ ಹೊರಬಿದ್ದಾಗ ಮಲಯಾಳಂನಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಬಹುತೇಕ ನಟಿಯರು ಘಟನೆ ಆದ ಮೇಲೆ ಸೈಲೆಂಟ್ ಆಗುತ್ತಾರೆ ಎಂಬ ಆಘಾತಕಾರಿ ವಿಚಾರವೂ ಬೆಳಕಿಗೆ ಬಂದಿತ್ತು. ಆದರೆ, ಈ ನಟಿ ಯಾವುದಕ್ಕೂ ಹೆದರದೆ, ಜಗ್ಗದೆ ಕಾನೂನು ಹೋರಾಟ ನಡೆಸಿದ್ದರು. ಪ್ರಕರಣದಲ್ಲಿ ಕಿರುಕುಳ ನೀಡಿದ್ದವರಿಗೆ ಶಿಕ್ಷೆಯಾಗಿದೆ. ಆದರೆ ಮುಖ್ಯ ಆರೋಪಿ, ಸಂಚ ರೂಪಿಸಿದ್ದ ಆರೋಪ ಹೊತ್ತಿದ್ದ ಸ್ಟಾರ್ ನಟ ದಿಲೀಪ್ ಖುಲಾಸೆಯಾಗಿದ್ದಾನೆ.
6 ಮಂದಿಗೆ ಶಿಕ್ಷೆ.. ಪಿತೂರಿ ಮಾಡಿದವನೇ ಬಚಾವ್
ಪ್ರಕರಣದಲ್ಲಿ ಆಕೆಗೆ ಕಿರುಕುಳ ನೀಡಿದ್ದ 6 ಮಂದಿಗೆ ಶಿಕ್ಷೆಯಾಗಿದೆ. ಆದರೆ, ಇಡೀ ಪ್ರಕರಣದ ಸಂಚು ರೂಪಿಸಿದ್ದ ಆರೋಪ ಹೊತ್ತಿದ್ದ ನಟ ದಿಲೀಪ್ ಖುಲಾಸೆಯಾಗಿದ್ದಾರೆ. ಏಕೆಂದರೆ, ನಟ ದಿಲೀಪ್ ವಿರುದ್ಧ ಸಂಚು ಮಾಡಿದ ಆರೋಪವನ್ನು ಸಾಬೀತು ಮಾಡಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಪ್ರಾಸಿಕ್ಯೂಷನ್ ಕುರಿತು ದೂರು ನೀಡಿದ್ದ ನಟಿ ಈ ಹಿಂದೆಯೇ ಧ್ವನಿ ಎತ್ತಿದ್ದರು. ಆಕೆಯನ್ನು ಅಪಹರಿಸಿದ್ದ 6 ಮಂದಿ, ವಿಡಿಯೋ ಚಿತ್ರೀಕರಣ ಮಾಡಿದ್ದರು. ಬ್ಲಾಕ್ ಮೇಲ್ ವಿಡಿಯೋಗಳಿದ್ದ ಮೆಮೊರಿ ಕಾರ್ಡ್ ಸಿಕ್ಕಿತ್ತಾದರೂ, ಆ ಮೆಮೊರಿ ಕಾರ್ಡ್ ಯಾರ್ ಯಾರ ಕೈಗೋ ಸಿಕ್ಕು, ಅದರ ವೊರಿಜಿನಾಲಿಟಿ ಕಳೆದುಕೊಂಡಿತ್ತು.ಅಂದರೆ ಕೇಸ್‌ನ ಮೂಲಾಧಾರವೇ ಕೈತಪ್ಪಿ ಹೋಗಿತ್ತು.
ಏನೇನೆಲ್ಲ ಉಲ್ಟಾ ಹೊಡೀತು..?
ಕೋರ್ಟಿಗೆ ನೀಡಲಾಗಿದ್ದ ಮೆಮೊರಿ ಕಾರ್ಡ್ ಡ್ಯಾಮೇಜ್ ಆಗಿದ್ದಷ್ಟೇ ಅಲ್ಲ, ಕೆಲವು ಸಾಕ್ಷಿಗಳು ಪ್ರತೀಕೂಲ ಸಾಕ್ಷಿ ಹೇಳಿದರೆ,. ಒಟ್ಟು 261 ಸಾಕ್ಷಿಗಳಿದ್ದರು. ಅವರಲ್ಲಿ 28 ಮಂದಿ ಸಾಕ್ಷಿಯಿಂದಲೇ ಹಿಂದೆ ಸರಿದುಬಿಟ್ಟರು. ಹಾಗೆ ಹಿಂದೆ ಸರಿದ ಸಾಕ್ಷಿಗಳಲ್ಲಿ ಸ್ಟಾರ್ ನಟ-ನಟಿಯರೂ ಇದ್ದರು. ಕೆಲವರು ಪೊಲೀಸರ ಎದುರು ಹೇಳಿದ್ದೇ ಬೇರೆ. ನ್ಯಾಯಾಲಯದಲ್ಲಿ ಹೇಳಿದ್ದೇ ಬೇರೆ..
ಯಾರು ಈ ದಿಲೀಪ್ ಕುಮಾರ್..?
ಮಲಯಾಳಂನಲ್ಲಿ ಸ್ಟಾರ್ ನಟ. ಮಲಯಾಳಂ ಬಿಟ್ಟು ಹೊರಗೆ ಅಷ್ಟಾಗಿ ಪರಿಚಿತ ನಟನೇನೂ ಅಲ್ಲ. ಕನ್ನಡದಲ್ಲಿ 2015ರಲಿಲ ಬಂದಿದ್ದ ವಜ್ರಕಾಯ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹೀರೋಗಳಲ್ಲಿ ಈತನೂ ಒಬ್ಬ. ಶಿವಣ್ಣನ ಜೊತೆ ವಜ್ರಕಾಯ ಟೈಟಲ್ ಸಾಂಗಿನಲ್ಲಿ ಹಾಡಿ ಕುಣಿಯುವ ನಟ, ಮಲಯಾಳಂ ನಟಿ ಮಂಜು ವಾರಿಯರ್ ಅವರನ್ನು ವಿವಾಹವಾಗಿದ್ದ. ಸುಮಾರು 16 ವರ್ಷಗಳ ದಾಂಪತ್ಯ, 2015ರಲ್ಲಿ ಬ್ರೇಕ್ ಆಗಿತ್ತು. ಡಿವೋರ್ಸ್ ಆಗುವುದಕ್ಕೆ ಕಾರಣವಾಗಿದ್ದೇ ಲೈಂಗಿಕ ಕಿರುಕುಳದ ದೂರು ನೀಡಿದ್ದ ನಟಿ. ಹೀಗಾಗಿಯೇ ದ್ವೇಷಕ್ಕಾಗಿ ಕಿರುಕುಳ ನೀಡಿದ್ದ ಎನ್ನುವುದು ಆ ನಟಿಯ ಆರೋಪ.
ಯಾರು ಈ ನಟಿ..?
ಕಿರುಕುಳಕ್ಕೊಳಗಾದ ನಟಿ ಮಲಯಾಳಂನವರು. ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಆದರೆ ಈಕೆ ಕನ್ನಡದಲ್ಲಿ ಸ್ಟಾರ್ ಹೀರೋಯಿನ್. ಈಗ ಕನ್ನಡದವರೇ ಆಗಿರುವ ನಟಿ, ಕನ್ನಡದ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ʻಭಾವನಾʼತ್ಮಕ ದೃಶ್ಯಗಳಲ್ಲಿ ನಟಿಸೋದ್ರಲ್ಲಿ ಫೇಮಸ್ ಆಗಿರುವ ಈಕೆ ಕನ್ನಡಕ್ಕೆ ಬಂದಿದ್ದು ಪುನೀತ್ ಜೊತೆಗಿನ ಸಿನಿಮಾದ ಮೂಲಕ. ಪುನೀತ್ ಜೊತೆ ಹಿಟ್ ಜೋಡಿಯಾಗಿದ್ದ ಈಕೆ ಸುದೀಪ್, ಗಣೇಶ್, ಉಪೇಂದ್ರ, ಶಿವ ರಾಜ್ ಕುಮಾರ್, ಡಾರ್ಲಿಂಗ್ ಕೃಷ್ಣ, ಪ್ರಜ್ವಲ್ ದೇವರಾಜ್.. ಜೊತೆ ನಟಿಸಿದ್ದಾರೆ. ಲೈಂಗಿಕ ಕಿರುಕುಳ ಕೇಸ್ ಆಗಿರೋ ಕಾರಣ, ಹೆಸರು ಹೇಳೋ ಹಾಗಿಲ್ಲ.



