ʻಹುಲಿ ಉಗುರುʼ (Tiger claw ring) ಹೆಸರೆತ್ತಿದರೆ ಸೆಲಬ್ರಿಟಿಗಳು (celebrities) ನಡುಗುವಂತಾಗಿದೆ. ಹಾಗಂತ ಅಂದುಕೊಂಡರೆ ತಪ್ಪು. ಅವರು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನಡುಗಿದಂತೆ ಇರುತ್ತಾರೆ. ಬಿಗ್ ಬಾಸ್ (Big boss house) ಮನೆಯಿಂದ ಶುರುವಾದ ಹುಲಿ ಉಗುರಿನ ಬೇಟೆ ಈಗ ಇಡೀ ರಾಜ್ಯದಲ್ಲಿ ಹುಲಿ ಉಗುರು ಹೊಂದಿರುವವರ ಮನೆಯಲ್ಲೆಲ್ಲ ಆತಂಕಕ್ಕೆ ದೂಡಿದೆ. ಆದರೆ ಎಲ್ಲರನ್ನೂ ಅಲ್ಲ. ಹಾಗೆ ಹುಲಿ ಉಗುರು ಇಟ್ಟುಕೊಂಡಿರುವವರು ಸ್ಟಾರ್ ನಟರಾಗಿದ್ದರೆ, ರಾಜಕಾರಣಿಗಳಾಗಿದ್ದರೆ, ಪ್ರಭಾವಿಗಳಾಗಿದ್ದರೆ ಅದು ಕೇವಲ ನೋಟಿಸ್, ವಿಚಾರಣೆಗೆ ಸೀಮಿತವಾಗಿ ನಡೆಯುತ್ತದೆ. ಅರ್ಚಕರು, ರೈತರೋ ಆಗಿದ್ದರೆ, ಯಾವ ವಿಚಾರಣೆಯೂ ಇಲ್ಲದೆ ಜೈಲಿಗೆ ಹಾಕಲಾಗುತ್ತದೆ. ಇದು ವಿಚಿತ್ರವಾದರೂ ಸತ್ಯ. ಇದು ಯಾವ ರೀತಿಯ ಕಾನೂನು ಎಂದು ಅರ್ಥವಾಗದೆ ತಲೆ ಕೆಡಿಸಿಕೊಂಡಿದ್ಧಾರೆ ಜನಸಾಮಾನ್ಯರು.
ಬಿಗ್ ಬಾಸ್ ಮನೆಯಲ್ಲಿ ಹಳ್ಳಿಕಾರ್ ಸಂತೋಷ್ (hallikar santhosh) ಅವರನ್ನು ಹುಲಿ ಉಗುರು ಹೊಂದಿದ್ದ ಕಾರಣಕ್ಕೆ ಅರೆಸ್ಟ್ ಮಾಡಿ ಕರೆದುಕೊಂಡು ಹೋದ ಅರಣ್ಯ ಇಲಾಖೆ ಅಧಿಕಾರಿಗಳು (forest dept officers), ಅದಾದ ಮೇಲೆ ಸೆಲಬ್ರಿಟಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದಾರೆ. ಕೆಲವರಿಗೆ ನೋಟಿಸ್ ಕೂಡಾ ಕೊಟ್ಟಿಲ್ಲ. ಕೆಲವರಿಗೆ ಆಗಲೇ ಕ್ಲೀನ್ ಚಿಟ್ ಕೊಟ್ಟುಬಿಟ್ಟಿದ್ದಾರೆ.
ಅರೆಸ್ಟ್ ಆದವರು ವರ್ತೂರು ಸಂತೋಷ್ ಮತ್ತು ಇಬ್ಬರು ಅರ್ಚಕರು :
ಅರೆಸ್ಟ್ ಆಗಿರುವುದು ಬಿಗ್ ಬಾಸ್ ಮನೆಯಲ್ಲಿದ್ದ ಸಂತೋಷ್ (varthudu santhosh) ಮತ್ತು ಚಿಕ್ಕಮಗಳೂರಿನ ಇಬ್ಬರು ಅರ್ಚಕರು ಮಾತ್ರ (chikkamagaluru priests). ಸಂತೋಷ್ ಅವರಷ್ಟೇ ಅಲ್ಲದೆ, ಚಿಕ್ಕಮಗಳೂರಿನ 71 ವರ್ಷದ ನಾಗೇಂದ್ರ ಜೋಯಿಸ್, 41 ವರ್ಷದ ಕೃಷ್ಣಾನಂದ ಹೊಳ್ಳ ಅವರನ್ನು ಅರೆಸ್ಟ್ ಮಾಡಲಾಗಿದೆ. ಮೊದಲು ಅರೆಸ್ಟ್ ಮಾಡಿ ಆನಂತರ ವಿಚಾರಣೆ ನಡೆಯುತ್ತಿದೆ. ಅರೆಸ್ಟ್ ಆದ ನಂತರವೇ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (fcl) ಕಳುಹಿಸಿಕೊಡಲಾಗಿದೆ. ಪರೀಕ್ಷೆ ನಡೆಯುತ್ತಿದೆ.
ದರ್ಶನ್, ನಿಖಿಲ್ ಕುಮಾರಸ್ವಾಮಿಗೆ ಕ್ಲೀನ್ ಚಿಟ್ :
ನಟ ದರ್ಶನ್ (actor Darshan) ಹಾಗೂ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಮನೆಯಲ್ಲಿ ಶೋಧ ನಡೆಸಿದ್ದ ಅಧಿಕಾರಿಗಳು ಹುಲಿ ಉಗುರಿನ ಲಾಕೆಟ್ ವಶಕ್ಕೆ ತೆಗೆದುಕೊಂಡಿದ್ದಾರೆ. ದರ್ಶನ್ ಮನೆಯಲ್ಲಿ ಹಲವು ಹುಲಿ ಉಗುರು ಲಾಕೆಟ್ಗಳು ಪತ್ತೆಯಾಗಿವೆ. ದರ್ಶನ್ ಅರಣ್ಯ ಇಲಾಖೆಯ ರಾಯಭಾರಿಯೂ (forest deportment ambassador) ಹೌದು. ಅವುಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ವರದಿ ಬರುವುದಕ್ಕೂ ಮುನ್ನವೇ ಹೆಚ್ಚುವರಿ ಮುಖ್ಯ ಪ್ರಧಾನ ಕಾರ್ಯದರ್ಶಿ ಕುಮಾರ್ ಪುಷ್ಕರ್ ʻಈ ಹುಲಿ ಉಗುರು ಮೇಲ್ನೋಟಕ್ಕೆ ನಕಲಿʼ ಎಂದಿದ್ದಾರೆ. ಆದರೆ ಪ್ರಯೋಗಾಲಯದ ವರದಿ ಬಂದ ಮೇಲಷ್ಟೇ ಕ್ರಮ ಎಂದಿದ್ದಾರೆ.
ಜಗ್ಗೇಶ್ ಬಚಾವ್ ಆಗ್ತಾರಾ..?
ಇನ್ನು ನಟ ಜಗ್ಗೇಶ್ (actor jaggesh) ಅವರ ವಿಡಿಯೋ ಹೇಳಿಕೆ ಕೂಡಾ ಇದ್ದು, ಇದು ಅಸಲಿ ಹುಲಿ ಉಗುರಿನ ಲಾಕೆಟ್ ಎಂದಿದ್ದರು. ಆದರೆ ಆ ವಿಡಿಯೋ ಹೇಳಿಕೆ ಮೇಲೆ ಕ್ರಮ ತೆಗೆದುಕೊಳ್ಳೋಕೆ ಸಾಧ್ಯ ಇಲ್ಲ. ಏಕೆಂದರೆ ಅವರ ಬಳಿ ಇದ್ದ ಲಾಕೆಟ್ ತುಂಬಾ ಹಳೆಯದು ಎನ್ನುವುದು ಹೆಚ್ಚುವರಿ ಮುಖ್ಯ ಪ್ರಧಾನ ಕಾರ್ಯದರ್ಶಿ ಕುಮಾರ್ ಪುಷ್ಕರ್ ವಿವರಣೆ. ಈ ನಡುವೆ ಜಗ್ಗೇಶ್ ಕೋರ್ಟ್ ಮೆಟ್ಟಿಲೇರಿದ್ದು, ನೋಟಿಸ್ ನೀಡುವ ರೇಡ್ ಮಾಡಿದ್ದು, ಕಾನೂನು ಬಾಹಿರ ಎಂದು ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ಧಾರೆ.
ರಾಕ್ʻಲೈನ್ ವೆಂಕಟೇಶ್ ಮನೆಯಲ್ಲಿ :
ರಾಕ್ ʻಲೈನ್ ವೆಂಕಟೇಶ್ (rockline Venkatesh) ಮನೆಯಲ್ಲಿ ಪರಿಶೀಲನೆ ನಡೆಸಲಾಗಿದ್ದರೂ, ರಾಕ್ʻಲೈನ್ ವೆಂಕಟೇಶ್ ವಿದೇಶದಲ್ಲಿದ್ದಾರೆ. ಮನೆಯಲ್ಲಿ ಅಂತಹ ಲಾಕೆಟ್ ಪತ್ತೆಯಾಗಿಲ್ಲ.
ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ (producer Umapathi srinivas) ಅವರಿಗೂ ಕಂಟಕ ಎದುರಾಗುವ ಸಾಧ್ಯತೆಗಳಿವೆ.
ಲಕ್ಷ್ಮೀ ಹೆಬ್ಬಾಳ್ಕರ್ ಮಗ, ಅಳಿಯನಿಗೆ ನೋಟಿಸ್ ಕೂಡಾ ಇಲ್ಲ :
ಉಳಿದಂತೆ ಸಚಿವೆಯೂ ಆಗಿರುವ ಲಕ್ಷ್ಮೀ ಹೆಬ್ಭಾಳ್ಕರ್ (Lakshmi hebbalkar) ಮಗ ಮೃಣಾಲ್ (Mrinal hebbalkar) ಮತ್ತು ಅಳಿಯ ರತಜ್ ಉಳ್ಳಾಗಡ್ಡಿ ಬಳಿ ಹುಲಿ ಉಗುರಿನ ಲಾಕೆಟ್ ಪತ್ತೆಯಾಗಿದೆ. ಅವರಿಗೆ ನೋಟಿಸ್ ಕೂಡಾ ನೀಡಿಲ್ಲ. ವಿಚಾರಣೆಯೂ ಆಗಿಲ್ಲ. ಇಬ್ಬರೂ ಕಾಂಗ್ರೆಸ್ ಸದಸ್ಯರು. ತಮ್ಮ ಬಳಿ ಇರುವುದು ಕೃತಕ ಹುಲಿ ಉಗುರು ಎನ್ನುವುದು ಅವರ ವಿವರಣೆ.
ಬಿಜೆಪಿಯ ವಿಜು ಗೌಡ ಪಾಟೀಲ್ ಪುತ್ರನ ಮನೆ ಮೇಲೆ ರೇಡ್ : ವಿಜಯಪುರದ ಬಿಜೆಪಿ ಮುಖಂಡ ವಿಜು ಗೌಡ ಪಾಟೀಲ್ ಪುತ್ರನ ಮನೆ ಮೇಲೆ ರೇಡ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿ ಬಳಿಯೂ ಹುಲಿ ಉಗುರು :
ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಯಾಗಿರುವ ದರ್ಶನ್ ಎಂಬುವವರ ಬಳಿಯೂ ಹುಲಿ ಉಗುರಿನ ಲಾಕೆಟ್ ಪತ್ತೆಯಾಗಿದೆ. ದೂರು ಕೂಡಾ ನೀಡಲಾಗಿದೆ. ಇವರ ವಿಚಾರಣೆಯಾಗಲೀ, ನೋಟಿಸ್ ನೀಡಿದ್ದ ವಿವರವಾಗಲಿ ಸಿಕ್ಕಿಲ್ಲ.
ಜ್ಯೋತಿಷಿ ಆರ್ಯವರ್ಧನ್ (jyotishi aryavardhan) ಸೇರಿದಂತೆ ಕೆಲವು ಪ್ರಭಾವಿ ಜ್ಯೊತಿಷಿಗಳು, ಬಿಜೆಪಿ ಮತ್ತು ಜೆಡಿಎಸ್ʻನ ಕೆಲವು ರಾಜಕಾರಣಿಗಳ ಮನೆಯ ಮೇಲೆ ರೇಡ್ ಮಾಡಲಾಗಿದೆ.
ನೋಟಿಸ್ ಕೊಟ್ಟಿದ್ದಾರೆ, ದಿನಾಂಕವನ್ನೇ ಕೊಟ್ಟಿಲ್ಲ. ಹೌದು, ವಿಚಿತ್ರವಾದರೂ ಇದು ಸತ್ಯ. ಸೆಲಬ್ರಿಟಿಗಳಿಗೆ ನೋಟಿಸ್ ಕೊಟ್ಟಿದ್ದೇವೆ, ವಿಚಾರಣೆಗೆ ಕರೆದಿದ್ದೇವೆ ಎಂದು ನೋಟಿಸ್ ಕೊಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳು ಕನಿಷ್ಠ ಯಾವ ದಿನ ವಿಚಾರಣೆಗೆ ಬರಬೇಕು ಎಂದು ಕೂಡಾ ನೋಟಿಸ್ನಲ್ಲಿ ನಮೂದಿಸಿಲ್ಲ. ಕೊಟ್ಟಿರುವ ನೋಟಿಸ್ಗಳಿಗೆ ಯಾವೊಬ್ಬ ಸೆಲಬ್ರಿಟಿಯೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.



