SSLC ಪಾಸ್ ಆಗೋಕೆ ಎಷ್ಟು ಅಂಕ ಬೇಕು.. 35 ಬೇಕು ಕಣ್ರೀ ಅಂತೀರೇನೋ.. 35 ಮಾರ್ಕ್ಸ್ ಅನ್ನೋದು ಪಾಸ್ ಮಾರ್ಕ್ಸ್, ಗ್ಯಾರಂಟಿ ಮಾರ್ಕ್ಸ್, ಮಿನಿಮಮ್ ನಂಬರ್, ಸರ್ಕಾರಿ ನಂಬರ್.. ಹೀಗೆ ಥರಹೇವಾರಿ ಹೆಸರುಗಳಲ್ಲಿ ಕರೆಯಲ್ಪಡತ್ತದೆ. ಆದರೆ ಇನ್ನು ಮುಂದೆ 35 ಅಂಗಳು ಬೇಕಿಲ್ಲ, 33 ಅಂಕ ಬಂದರೂ SSLC ಪಾಸ್ ಆಗಬಹುದು.
ಇತ್ತೀಚೆಗೆ ರಾಜ್ಯ ಸರ್ಕಾರ ಗ್ರೇಸ್ ಮಾರ್ಕ್ಸ್ ಕಟ್ ಮಾಡಿತ್ತು. 25 ಅಂಕ ಪಡೆದವರಿಗೂ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡುತ್ತಿದ್ದುದ್ದರ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊರೊನಾ ಟೈಮಲ್ಲಿ ಜಾರಿಗೆ ಬಂದಿದ್ದ ಆಪತ್ಕಾಲದ ನಿಯಮವವನ್ನೇ ಮುಂದುವರಿಸಿದ್ದರ ಬಗ್ಗೆ ಆಕ್ರೋಶಗೊಂಡಿದ್ದರು. ಈ ವರ್ಷದಿಂದಲೇ ಆ ಗ್ರೇಸ್ ಮಾರ್ಕ್ಸ್ ಇಲ್ಲ. ಆದರೆ ಪಾಸ್ ಮಾರ್ಕ್ಸ್ 33ಕ್ಕೆ ಇಳಿದಿದೆ.
35ರ ಬದಲು 33ಕ್ಕೆ ಇಳಿದಿದ್ದು ಏಕೆ..?
ಶಾಲೆಯ ಸಂಘಟನೆಗಳು, ಸ್ಕೂಲ್ ಅಸೋಸಿಯೇಷನ್ನಿನವರು ವಾದ ಏನೆಂದರೆ ಬೇರೆ ಬೇರೆ ಬೋರ್ಡುಗಳಲ್ಲಿ ಪಾಸ್ ಮಾರ್ಕ್ಸ್ 33 ಇದೆ. ನಮ್ಮಲ್ಲಿ ಮಾತ್ರವೇ 35 ಇದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಮತ್ತು ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ ವ್ಯವಸ್ಥೆಯಲ್ಲಿಯೂ ಪಾಸ್ ಮಾರ್ಕ್ಸ್ 33 ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ 35 ಪಾಸ್ ಮಾರ್ಕ್ಸ್ ಇದೆ. ಇದರಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳು ಲಾಭ ಪಡೆಯುವುದಕ್ಕೆ ಆಗುತ್ತಿಲ್ಲ ಎಂದು ವಾದಿಸಿದ್ದವು.
ಇದರಿಂದಾಗಿ ಎಷ್ಟೋ ಶಾಲೆಗಳು ಶಾಲೆಗಳನ್ನು ಬಂದ್ ಮಾಡಿ, ಬೇರೆ ಬೋರ್ಡಿಗೆ ಶಿಫ್ಟ್ ಆಗುತ್ತಿವೆ. ರಾಜ್ಯ ಸರ್ಕಾರಿ ಶಾಲೆಯ ಪಠ್ಯವನ್ನು ಕೈಬಿಡುತ್ತಿವೆ ಎಂದು ಅಸೋಸಿಯಷನ್ ಕಾರ್ಯದರ್ಶಿ ಶಶಿಕುಮಾರ್ ವಾದಿಸಿದ್ದರು. ಈಗ ಆ ಬೇಡಿಕೆಗೆ ಮನ್ನಣೆ ಸಿಕ್ಕಿದೆ. ಈ 33 ಪಾಸ್ ಮಾರ್ಕ್ಸ್ ಸಿಸ್ಟಂ ಈ ಪರೀಕ್ಷೆಯಿಂದಲೇ ಜಾರಿಗೆ ಬರಲಿದೆ.
ಮಾರ್ಚ್ 21ರಿಂದ SSLC ಪರೀಕ್ಷೆಗಳು ಶುರುವಾಗಲಿವೆ. ಆಗ ಈ 33 ಪಾಸ್ ಮಾರ್ಕ್ ವ್ಯವಸ್ಥೆ ಜಾರಿಗೆ ಬರಲಿದೆ. ಆದರೆ 33ಕ್ಕಿಂತ ಕಡಿಮೆ ಅಂಕ ಪಡೆದರೆ ಅವರಿಗೆ ಯಾವುದೇ ಗ್ರೇಸ್ ಮಾರ್ಕ್ಸ್ ಇಲ್ಲ. ಒಂದು ನಂಬರ್ ಕಡಿಮೆ ಬಂದಿದ್ದರೂ ಫೇಲ್ ಎಂದೇ ಘೋಷಿಸಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದೋ ಎರಡೋ ಕಡಿಮೆ ಇದ್ದರೆ ಪಾಸ್ ಮಾಡ್ತಾರೆ ಬಿಡು ಎಂದುಕೊಂಡಿದ್ದವರಿಗೆ ಇನ್ನು ಮುಂದೆ ಹಾಗಾಗುವುದಿಲ್ಲ.
ಒಟ್ಟಿನಲ್ಲಿ ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಂತೂ ಆಗುತ್ತಿದೆ. ಇದು ಶಿಕ್ಷಣ ವ್ಯವಸ್ಥೆಗೆ ಯಾವ ರೀತಿಯ ಲಾಭ ಮಾಡಲಿದೆ ಅಥವಾ ಯಾವ ರೀತಿಯ ಹೊಡೆತ ಬೀಳಲಿದೆ ಎನ್ನುವುದನ್ನು ಈಗಲೇ ಹೇಳೋಕೆ ಆಗಲ್ಲ. ಅಂದಹಾಗೆ ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲಿ 100ಕ್ಕೆ ಪಾಸ್ ಮಾರ್ಕ್ಸ್ 35 ಇದೆ. ಬೇರೆ ಬೋರ್ಡುಗಳಲ್ಲಿಯೂ 100ಕ್ಕೆ 35 ಇದೆಯೋ.. ಅಥವಾ ಕಡಿಮೆ ಅಂಕಗಳಿಗೆ ಇದೆಯೋ..ಎನ್ನುವುದು ಖಚಿತವಿಲ್ಲ.



