Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಶ್ರೀನಗರ ಕಿಟ್ಟಿ-ರಚಿತಾ ರಾಮ್ ಲವ್ ಸ್ಟೋರಿಯಲ್ಲಿ ರಮ್ಯಾ ಕೇಳಿಸಿದಾಗ.. : ಸಂಜು ವೆಡ್ಸ್ ಗೀತಾ 2

SpeciallU by SpeciallU
August 17, 2023
in Cinema, News
Reading Time: 1 min read
0 0
0
ಶ್ರೀನಗರ ಕಿಟ್ಟಿ-ರಚಿತಾ ರಾಮ್ ಲವ್ ಸ್ಟೋರಿಯಲ್ಲಿ ರಮ್ಯಾ ಕೇಳಿಸಿದಾಗ.. : ಸಂಜು ವೆಡ್ಸ್ ಗೀತಾ 2

ಸಂಜು ಮತ್ತು ಗೀತಾ..

ಸೇರಬೇಕು ಅಂತಾ..

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಬರೆದಾಗಿದೆ ಆ ಬ್ರಹ್ಮನು..

 

ಗಗನವೇ ಬಾಗಿ.. ಭುವಿಯನು ಕೇಳಿದ ಹಾಗೆ..

ಕಡಲು ಕರೆದಂತೆ ನದಿಯನೂ ಭೇಟಿಗೆ..

ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ

ನೀಡುವ ಮುನ್ನ ನಾನೆ ಆಮಂತ್ರಣ

 

ಒಮ್ಮೆ ಬಾರೋ.. ಒಮ್ಮೆ ಬಾರೋ..

ಎಲ್ಲೆ ನೀನಿದ್ದರೂ..

ಒಮ್ಮೆ ಬಾರೋ.. ಒಮ್ಮೆ ಬಾರೋ..

ಹೇಗೆ ನೀ ಇದ್ದರೂ..

ಹಾಡುಗಳನ್ನು ಪ್ರೇಮಿಗಳು ಮರೆಯೋದಾದರೂ ಹೇಗೆ..? ಸಂಜು ವೆಡ್ಸ್ ಗೀತಾ (Sanju Weds Geetha) ಸೃಷ್ಟಿಸಿದ್ದ ಮೋಡಿಯೇ ಅಂಥದ್ದು. ಆ ಚಿತ್ರ ಶ್ರೀನಗರ ಕಿಟ್ಟಿ (Srinagara Kitti) ಮತ್ತು ರಮ್ಯಾ (Ramya/Divya Spandana) ಇಬ್ಬರಿಗೂ ಲೈಫ್ ಟೈಂ ಬೆಸ್ಟ್ ಸಿನಿಮಾ. ನಿರ್ದೇಶನ ಮಾಡಿದ್ದು ನಾಗಶೇಖರ್. ಅವರ ಮಾಸ್ಟರ್ ಪೀಸ್ (Master Piece) ಕೂಡಾ ಅದೇ ಸಂಜು ವೆಡ್ಸ್ ಗೀತಾ . ಈಗ ಮತ್ತೊಮ್ಮೆ ಬರುತ್ತಿದ್ದಾರೆ. ಹಳೇ ಸಂಜು.. ಹೊಸ ಗೀತಾ..

ಹೀರೋ ಅದೇ ಶ್ರೀನಗರ ಕಿಟ್ಟಿ. ಹೀರೋಯಿನ್ ರಚಿತಾ ರಾಮ್ (Rachitha Ram) . ರಮ್ಯಾ (Ramya) ಅಲ್ಲ. ಆದರೆ ಟೀಸರಿನಲ್ಲಿ ರಮ್ಯಾ (Ramya) ವಾಯ್ಸ್ ಇದೆ. ಐ ಲವ್ ಯೂ ಸಂಜು (I Love You Sanju) ಅನ್ನೋ ಸಂಜು ವೆಡ್ಸ್ ಗೀತಾದ (Sanju Weds Geetha) ರಮ್ಯಾ ವಾಯ್ಸ್`ನ್ನೇ ಸದ್ಯಕ್ಕೆ ಉಳಿಸಿಕೊಂಡಿದ್ದಾರೆ ನಾಗಶೇಖರ್ (Nagashekhar) . ರಚಿತಾ ರಾಮ್ (Rachitha Ram) ಸೇರಿದ್ದಾರೆ ಎನ್ನುವುದು ಬಿಟ್ಟರೆ, ಬಹುತೇಕ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಸಿನಿಮಾದಲ್ಲೂ ಇರುತ್ತಾರೆ.

ಸಂಜು ವೆಡ್ಸ್ ಗೀತಾ 2 ಟೀಸರ್ ರಿಲೀಸ್ ಆಗಿದೆ. ಬೆಂಗಳೂರಿನ ಲಲಿತ್ ಅಶೋಕ್ (Hotel Lalith Ashok) ಹೋಟೆಲ್ನಲ್ಲಿ ಅದ್ದೂರಿಯಾಗಿ ‘ಸಂಜು ವೆಡ್ಸ್ ಗೀತಾ-2’ ಚಿತ್ರದ ಮುಹೂರ್ತ, ಟೀಸರ್ ಬಿಡುಗಡೆ ನೆರವೇರಿತು. ನಾಗಶೇಖರ್ ಮೂವೀಸ್, ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮುಹೂರ್ತ ದೃಶ್ಯಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರು ಕ್ಲಾಪ್ ಮಾಡಿದರೆ, ನಾಗಶೇಖರ್ ಅವರ ತಾಯಿ ವರಲಕ್ಷ್ಮೀ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುವ ಮೂಲಕ ನಾಗಶೇಖರ್, ರಾಜರತ್ನನಿಗೆ ಗೌರವ ಸಲ್ಲಿಸಿದ್ದಾರೆ.

ರಮ್ಯಾ (Ramya) ಅವರ ಬದಲಾಗಿ ಯಾರನ್ನು ಹಾಕಿಕೊಳ್ಳೋದು ಅಂತ ನಾನು ತುಂಬ ಯೋಚನೆ ಮಾಡಿದ್ದೆ. ತ್ರಿಷಾ (Thrisha) ಅಥವಾ ರಚಿತಾ ರಾಮ್ ಇಬ್ಬರಲ್ಲಿ ಒಬ್ಬರು ಈ ಸಿನಿಮಾದಲ್ಲಿ ನಟಿಸಬೇಕು ಅಂತ ಅಂದುಕೊಂಡಿದ್ದೆ. ಆಮೇಲೆ ಈ ಪಾತ್ರದಲ್ಲಿ ರಚಿತಾ ರಾಮ್ ಅವರನ್ನು ಹಾಕಿಕೊಳ್ಳಬೇಕು ಅಂತ ಫಿಕ್ಸ್ ಆದೆ. ರಚಿತಾ ರಾಮ್ ಅವರು ಅದ್ಭುತವಾದ ಅಭಿನಯದ ಮೂಲಕವೇ ಅವರು ಹೆಸರು ಮಾಡಿದ್ದಾರೆ. ನನ್ನ ಚಿತ್ರದಲ್ಲಿ ಈ ಪಾತ್ರಕ್ಕೆ ಜೀವ ತುಂಬುವುದೇ ಅಭಿನಯ ಎನ್ನುವ ನಾಗಶೇಖರ್, ಟೀಸರಿನಲ್ಲಿಯೇ ತಾವು ಹಾಡುಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಎಂದು ತೋರಿಸಿದ್ದಾರೆ. ಸಂಜು ವೆಡ್ಸ್ ಗೀತಾ 2ನಲ್ಲೂ ನಾಗಶೇಖರ್ ಹಾಡುಗಳ ಮೆರವಣಿಗೆ ಹೊರಡುತ್ತಾರೆ. 5 ಹಾಡುಗಳು ಕಂಪೋಸ್ಟ್ ಆಗಿದ್ದು, ಶ್ರೀಧರ್ ಸಂಭ್ರಮ್ ಮ್ಯೂಸಿಕ್ ಇದೆ.

ನಾಗಶೇಖರ್ ಸಿನಿಮಾ ಕಥೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ನನ್ನ ಲ್ಯಾಂಡ್ ಮಾರ್ಕ್ ಸಿನಿಮಾಗಳಲ್ಲಿ ಸಂಜು ವೆಡ್ಸ್ ಗೀತಾ ಒಂದು. ಅದ್ಭುತವಾದ ಪ್ರೇಮಕಥೆಯೊಂದಿಗೆ ಮತ್ತೆ ಬರುತ್ತೇವೆ. ಮೊದಲ ಚಿತ್ರಕ್ಕಿಂತ ಈ ಚಿತ್ರದ ಪಾತ್ರ ಇನ್ನೂ ಚೆನ್ನಾಗಿದೆ. ರಚಿತಾ ರಾಮ್ ಅವರ ಜೊತೆ ಮೊದಲಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಳ್ಳುವ ಶ್ರೀನಗರ ಕಿಟ್ಟಿಯವರಂತೂ ಚಿತ್ರದ ಮೇಲೆ ವಿಶ್ವಾಸದಿಂದಿದ್ದಾರೆ.

ನಾಗಶೇಖರ್ ಅವರ ಜೊತೆ ಫಸ್ಟ್ ಟೈಮ್ ಕೆಲಸ ಮಾಡುತ್ತಿದ್ದೇನೆ. ಚಿತ್ರದ ಬಗ್ಗೆ ಅವರಿಗೆ ಡೆಡಿಕೇಶನ್ ಜಾಸ್ತಿ, ಅದನ್ನು ಫೋಟೋಶೂಟ್ ಸಮಯದಲ್ಲೇ ನೋಡಿದೆ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ ರಚಿತಾ ರಾಮ್.

ಚಿತ್ರಕೆಕ ಒಬ್ಬರಲ್ಲ ಇಬ್ಬರು ನಿರ್ಮಾಪಕರಿದ್ದಾರೆ. ಚಲುವಾದಿ ಕುಮಾರ್, ನಾರಾಯಣ ಎಂ.ಸಿ. ಜೊತೆಗೆ ನಾಗಶೇಖರ್ ಇದ್ದಾರೆ. ಚಿತ್ರದ ಕಥೆ, ಟೀಂ ಹಾಗೂ ನಾಗಶೇಖರ್ ಅವರ ಮೇಲೆ ವಿಶ್ವಾಸ ಇಟ್ಟೇ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

Tags: #ಸಂಜು ವೆಡ್ಸ್ ಗೀತಾ2 #ರಮ್ಯಾ #ಶ್ರೀನಗರಕಿಟ್ಟಿ #ರಚಿತಾರಾಮ್ #ನಾಗಶೇಖರ್ #SanjuWedsGeetha2 #Ramya #SrinagarKitty #Rachitharam #Nagasekhar
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.