ಪ್ರಶಾಂತ್ ನೀಲ್, ಪ್ರೀತಿಯ ವಿರೋಧಿಯೇನಲ್ಲ. ಆಕ್ಷನ್ ಜಾಸ್ತಿ ಇರ್ತವೆ, ಅಷ್ಟೇ. ಉಗ್ರಂನಲ್ಲಿಯೂ ಒಂದು ನವಿರಾದ ಪ್ರೇಮಕಥೆ ಇತ್ತು. ತರಲೆ, ತಮಾಷೆಯೂ ಇತ್ತು. ಇವತ್ತಿಗೂ ಉಗ್ರಂ ಚಿತ್ರದಲ್ಲಿ ಹರಿಪ್ರಿಯಾ ಮಾರ್ಕೆಟ್ ಸೀನ್‌ನ್ನು ಜನ ಎಂಜಾಯ್ ಮಾಡ್ತಾರೆ. ಶ್ರೀಮುರಳಿ-ಹರಿಪ್ರಿಯಾ ಲವ್ ಸ್ಟೋರಿಯನ್ನೂ ಫೀಲ್ ಮಾಡ್ತಾರೆ. ಕೆಜಿಎಫ್ʻನಲ್ಲಿಯೂ ಯಶ್ ಮತ್ತು ಶ್ರೀನಿಧಿ ಶೆಟ್ಟಿ ನಡುವೆ ಒಂದು ವಿಚಿತ್ರ ಎನ್ನಿಸಬಹುದಾದ ಲವ್ ಸ್ಟೋರಿ ಕೊಟ್ಟಿದ್ದರು. ಇದೀಗ ಬಘೀರನಲ್ಲಿಯೂ ಅದೇ ರೀತಿಯ ಒಂದು ಸ್ಪೆಷಲ್ ಲವ್ ಸ್ಟೋರಿ ಕಟ್ಟಿಕೊಟ್ಟಿದ್ದಾರೆ.
ಪರಿಚಯವಾದೆ.. ಪರಿಚಯವಾದೆ.. ಪರಿಪರಿಯಾಗಿ ನನಗೇ..
ಎಂದು ಹಿನ್ನೆಲೆಯಲ್ಲಿ ಹಾಡು ಕಿವಿಗಿಂಪಾಗುವಂತೆ ಕೇಳುತ್ತಿದ್ದರೆ.. ಹಾಡಿನ ದೃಶ್ಯವನ್ನು ನೋಡುತ್ತಾ ಸಣ್ಣದೊಂದು ನಗು ತುಟಿಯ ಮೇಲೆ ಮೂಡುತ್ತಿರುತ್ತದೆ. ಇದು ಬಘೀರನ ಪ್ರೇಮಗೀತೆ..
ಸರಳವಾದ ಪ್ರೇಮ ಪದಗಳಲ್ಲಿಯೇ ಹಾಡಿನಲ್ಲೊಂದು ಫೀಲಿಂಗ್ ಕೊಟ್ಟಿದ್ದಾರೆ. ಹಾಡನ್ನು ಚಿತ್ರೀಕರಿಸಿರುವುದು ಹಾಗೆಯೇ ಇದೆ. ಮುಂಜಾನೆ ಎದ್ದ ಕೂಡಲೇ ನಿನ್ನ ನೋಡುವ ನೆಪವ ಹುಡುಕುವೆ ಅನ್ನೋ ಸಾಲು ಸ್ಪೆಷಲ್ ಆಗಿಯೇ ಕೇಳಿಸುತ್ತದೆ. ಅಷ್ಟೆ ಸಿಂಪಲ್ ಆಗಿ ಮನಸ್ಸಿಗೆ ಇಳಿಸುವುದು ದೃಶ್ಯಗಳು. ಹಾಡಿದೆ.. ಡ್ಯಾನ್ಸ್ ಇಲ್ಲ. ಹಾಡಿನಲ್ಲೇ ಒಂದು ಕಥೆಯೂ ಇದೆ.
ದೇವಸ್ಥಾನದಲ್ಲೂ ಪೋಲಿಗಳ ಬೆಂಡೆತ್ತುವ ನಾಯಕ, ಗೊಂದಲದಲ್ಲಿಯೇ ಆತನನ್ನು ಇಷ್ಟಪಡೋ ನಾಯಕ, ರಸ್ತೆಯಲ್ಲಿ ಹೊಡೆದಾಡಿ.. ಸಣ್ಣ ಗಾಯಕ್ಕೂ ರುಕ್ಮಿಣಿಯ ಬಳಿಯೇ ಬ್ಯಾಂಡೇಜ್ ಕಟ್ಟಿಸಿಕೊಳ್ಳೋಕೆ ಶ್ರೀಮುರಳಿ.. ಒಂದಿಷ್ಟು ಫೀಲಿಂಗ್.. ಒಂದಿಷ್ಟು ತರಲೆ ತಮಾಷೆ.. ಹಾಡಂತೂ ಸುಂದರವಾಗಿ ಮೂಡಿ ಬಂದಿದೆ.
ಪ್ರಶಾಂತ್ ನೀಲ್ ಕಥೆಯಲ್ಲಿ ಲವ್ ಸ್ಟೋರಿಗೂ ಜಾಗ ಇದೆ. ಅದನ್ನು ಅಷ್ಟೇ ಅದ್ಭುತವಾಗಿ ತೆರೆ ಮೇಲೆ ತಂದಿರುವ ಎಲ್ಲ ಸೂಚನೆ ಕೊಟ್ಟಿರುವುದು ಡೈರೆಕ್ಟರ್ ಡಾಕ್ಟರ್ ಸೂರಿ. ಪ್ರಮೋದ್ ಮರವಂತೆಯವರ ಚೆಂದದ ಸಾಹಿತ್ಯಕ್ಕೆ, ಅಚ್ಚುಕಟ್ಟಾದ ಸಂಗೀತವನ್ನು ಪ್ರೀತಿಯಿಂದ ಕಟ್ಟಿಕೊಟ್ಟಿರೋದು ಅಜನೀಶ್ ಬಿ ಲೋಕನಾಥ್. ಟ್ರೇಲರಿನಲ್ಲಿ ಪ್ರೀತಿ ಪ್ರೇಮದ ಸುಳಿವನ್ನೂ ಕೊಡದೆ ಇದ್ದ ಸೂರಿ, ಹಾಡಿನಲ್ಲಿ ಪ್ರೇಮದ ಪರಿಚಯ ಮಾಡಿಸಿದ್ದಾರೆ. ರಿತೇಷ್ ಜಿ ರಾವ್ ಹಾಡಿದ್ದಾರೆ. ವಿಜಯ ಕಿರಗಂದೂರು ಅವರ ಹೊಂಬಾಳೆ ಫಿಲಮ್ಸ್, ಚಿತ್ರವನ್ನು ನಿರ್ಮಾಣ ಮಾಡಿದೆ. ಇದೇ ತಿಂಗಳು 31 ರಂದು ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಬರೀ ಮಾಸ್ಕ್ ಮಸಾಲಾ ಚಿತ್ರವಲ್ಲ, ಚಿತ್ರೊದಲ್ಲೊಂದು ಚೆಂದದ ಲವ್ ಸ್ಟೋರಿಯೂ ಇದೆ ಅನ್ನೋ ಕ್ಲೂ ಕೊಟ್ಟಿದ್ದಾರೆ ಶ್ರೀಮುರಳಿ.



