ಸೋಷಿಯಲ್ ಮೀಡಿಯಾದಲ್ಲಿ ಬರೋದು.. ಯಾವ್ಯಾವುದೋ ಅರ್ಥವಾಗದ ಅಡ್ರೆಸ್ಸಿಲ್ಲದ ಹೆಸರಿನ ಪೇಜ್ ಕ್ರಿಯೇಟ್ ಮಾಡ್ಕೊಳ್ಳೋದು.. ಕಮೆಂಟ್ ಮಾಡೋದು.. ಒಂದಷ್ಟು ಜನರ ಕೆಟ್ಟ ಹವ್ಯಾಸ. ಸದ್ಯಕ್ಕೆ ದರ್ಶನ್ ಜೈಲು ಸೇರಿರುವ ಪ್ರಕರಣದಲ್ಲಿಯೂ ಅಂಥಹುದೇ ಆಗಿದ್ದು. ಅದನ್ನು ನಿರ್ಲಕ್ಷಿಸಿದ್ದರೆ.. ಅಥವಾ ಕಂಪ್ಲೇಂಟ್ ಕೊಟ್ಟಿದ್ದರೆ.. ಏನಾಗುತ್ತಿತ್ತೋ ಏನೋ.. ಅದು ಈಗ ಕಲ್ಪನೆ ಮಾಡಿಕೊಳ್ಳೋಕೆ ಆಗಲ್ಲ. ಆದರೆ, ಅಂತಹ ಘಟನೆಗಳು ಎಲ್ಲ ಸೆಲಬ್ರಿಟಿಗಳಿಗೂ ಆಗುತ್ತವೆ. ಸೆಲಬ್ರಿಟಿಗಳೇ ಏನು, ಸಾಮಾನ್ಯರಿಗೂ ಆಗುತ್ತವೆ. ಅದರಲ್ಲೂ ಹೆಣ್ಣು ಮಕ್ಕಳೆಂದರೆ ಏನು ಬೇಕಾದರೂ ಕಮೆಂಟ್ ಮಾಡಬಹುದು, ಯಾರ್ ಏನ್ ಮಾಡ್ಕೊಳ್ತಾರೆ ಅನ್ನೋ ಧೈರ್ಯ ಹಲವರದ್ದು. ಅದೀಗ ಶ್ರೀದೇವಿ ಭೈರಪ್ಪ ಅವರಿಗೂ ತಟ್ಟಿದೆ. ಆದರೆ, ಆ ರೀತಿಯ ಅಸಹ್ಯ ಕಮೆಂಟ್ ಮಾಡಿದವನಿಗೆ ಶ್ರೀದೇವಿ ಭೈರಪ್ಪ ಕೊಟ್ಟ ಉತ್ತರ ಮಾತ್ರ.. ಚಪ್ಪಲಿಯಲ್ಲಿ ಹೊಡೆದಂತಿದೆ. ಒಂದೇ ಸಾಲಿನಲ್ಲಿ ಕಪಾಳಮೋಕ್ಷ ಮಾಡಿದ್ದಾರೆ ಶ್ರೀದೇವಿ.
ಶ್ರೀದೇವಿ ಭೈರಪ್ಪ. ರಾಘವೇಂದ್ರ ರಾಜ್ ಕುಮಾರ್ ಅವರ ಸೊಸೆ. ಪ್ರಸ್ತುತ ಯುವ ರಾಜ್ ಕುಮಾರ್ ಅವರ ಪತ್ನಿ. ಆದರೆ ಡಿವೋರ್ಸಿಗೆ ಕೋರ್ಟ್ ಮೆಟ್ಟಿಲೇರಿದ ಶ್ರೀದೇವಿ ಭೈರಪ್ಪ, ಅಶ್ಲೀಲ ಕಮೆಂಟ್ ಮಾಡುವವರಿಗೂ ಆಹಾರವಾಗಿದ್ದಾರೆ. ಡಿವೋರ್ಸ್ ಇನ್ನೂ ಆಗಿಲ್ಲ. ಹೀಗಾಗಿ ಈಗಲೂ ಅವರು ಅಧಿಕೃತವಾಗಿ ಕಾನೂನು ಪ್ರಕಾರ ದೊಡ್ಮನೆ ಸೊಸೆಯೇ. ಯುವರಾಜ್ ಕುಮಾರ್ ಅವರ ಪತ್ನಿಯೇ.
ಸದ್ಯ ಶ್ರೀದೇವಿ ಭೈರಪ್ಪ ರೀಲ್ಸ್ ವೀಡಿಯೋಗೆ ಯಾರೋ ಒಬ್ಬ ಅಸಹ್ಯ ಕಮೆಂಟ್ ಮಾಡಿದ್ದಾನೆ. ಶ್ರೀದೇವಿ ಭೈರಪ್ಪ ಶೇರ್ ಮಾಡಿರೋ ವಿಡಿಯೋದಲ್ಲಿ ಆತ ತನ್ನ ಹೆಸರನ್ನೂ ಹೇಳ್ಕೊಂಡಿಲ್ಲ.
ಮನೋ-ಹನ್‌೯೬ ಅನ್ನೋ ಹೆಸರಲ್ಲಿ ಕಮೆಂಟ್ ಮಾಡಿರೋ ಆತ “ಯುವರಾಜ್ ಯೂ* ಮಾಡಿಕೊಂಡು ಬಿಸಾಕಿದ. ಜೈ ದೊಡ್ಮನೆ.” ಎಂದು ಕಮೆಂಟ್ ಮಾಡಿದ್ದಾನೆ. ಇದಕ್ಕೆ ಶ್ರೀದೇವಿ ಭೈರಪ್ಪ ಕೊಟ್ಟಿರುವ ಉತ್ತರವೂ ಅಷ್ಟೇ. ಆತನಷ್ಟೇ ಅಲ್ಲ, ಆತನ ಮನೆಯವರಿಗೂ ಕಪಾಳ ಮೋಕ್ಷ ಮಾಡಿದಂತಿದೆ.
“ನೀವು ಓಕೆ ಅಲ್ವಾ? ನಿಮ್ಮ ಮನೆಯಲ್ಲಿರುವ ಮಹಿಳೆಯರು ಸೇಫ್ ಆಗಿರಲಿ ಎಂದು ಭಾವಿಸುತ್ತೇನೆ. ಟೇಕ್ ಕೇರ್ʼʼ ಎಂದು ತಿರುಗೇಟು ನೀಡಿದ್ದಾರೆ. ಇಲ್ಲಿ ಶ್ರೀದೇವಿ ಭೈರಪ್ಪ ಕೊಟ್ಟಿರುವ ಉತ್ತರ ಕಪಾಳಮೋಕ್ಷದಂತೆಯೇ ಇದೆ.
ಈ ರೀತಿಯ ಕಮೆಂಟ್ ಮಾಡುವವರು ತಮ್ಮ ಮನೆಯಲ್ಲಿ ಅಕ್ಕ, ತಂಗಿ, ತಾಯಿ, ಸಂಬಂಧಿಕರನ್ನೂ ಅಷ್ಟೇ ಕೆಟ್ಟದಾಗಿ ನೋಡ್ತಾರೆ ಅನ್ನೋದನ್ನ ಮಾರ್ಮಿಕವಾಗಿ ಹೇಳಿದ್ದಾರೆ ಶ್ರೀದೇವಿ ಭೈರಪ್ಪ. ಈ ರೀತಿಯ ಕಮೆಂಟ್ ಮಾಡೋವ್ರಿಗೆ ಕಾನೂನು ಏನೂ ಮಾಡೋಕೆ ಆಗಲ್ವಾ..?
ಅದಕ್ಕೆ ಉತ್ತರ ಬೇಕೆಂದರೆ ಒಮ್ಮೆ ತಮಿಳುನಾಡಿನ ಪೊಲೀಸರು ಕೈಗೊಂಡ ಕ್ರಮ ನೋಡಬೇಕು. ತಮಿಳಿನಲ್ಲಿ ಮಾಳವಿಕಾ ಮೋಹನ್ ಎಂಬ ನಟಿ ಇದ್ದಾರೆ. ಅವರಿಗೂ ಒಬ್ಬ ಅಪಾಪೋಲಿ ಅಶ್ಲೀಲ ಕಮೆಂಟು ಮಾಡಿದ್ದ. ಮಾಳವಿಕಾ ಕಂಪ್ಲೇಂಟ್ ಕೊಟ್ಟಿದ್ದರು. ಅವನನ್ನು ಹುಡುಕಿರುವ ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ್ದಾರೆ. ಈಗ ಅವನು ಕೋರ್ಟಿಗೆ ಅಲೆಯಬೇಕು. ಕೋರ್ಟು ಕ್ಷಮಿಸುತ್ತದಾ.. ತಪ್ಪು ಮಾಡಿದ್ದು ಪ್ರೂವ್ ಆದರೆ, ಕೋರ್ಟಂತೂ ಕ್ಷಮಿಸುವುದಿಲ್ಲ. ಅಂದರೆ.. ಒಂದು ಕಮೆಂಟು, ಯಾರ್ ಏನ್ ಮಾಡ್ಕೊಳ್ತಾರೆ ಅನ್ನೋ ಹುಂಬತನದ ಧೈರ್ಯ, ಅವನನನ್ನೀಗ ಜೈಲಿಗೆ ತಳ್ಳಿದೆ. ಇದು ಎಲ್ಲರಿಗೂ ಪಾಠವಾಗಲಿ.



