ಡೈವೋರ್ಸ್ ಕೇಸ್ ಯಾವ ಹಂತಕ್ಕೂ ಹೋಗಬಹುದು. ಅಕ್ರಮ ಸಂಬಂಧ, ಮೋಸ ಸಾಮಾನ್ಯವಾಗಿ ಡೈವೋರ್ಸ್ ಹಂತಕ್ಕೆ ಕೋರ್ಟ್ ಮೆಟ್ಟಿಲೇರಿದಾಗ ಕೇಳಿ ಬರುತ್ತಲೇ ಇರುತ್ತವೆ. ದೊಡ್ಮನೆಯ ಮೊದಲ ಡೈವೋರ್ಸ್ ಕೇಸಿನಲ್ಲೂ ಅಫೇರ್, ಕೋಟಿ ಕೋಟಿ ಮೋಸ, ಡಾ.ರಾಜ್ ಹೆಸರು ಬಳಸಿ ಬೆದರಿಕೆ ಮೊದಲಾದ ಆರೋಪಗಳೂ ಕೇಳಿ ಬಂದಿವೆ. ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ಗಂಭೀರ ಆರೋಪಗಳನ್ನೇ ಮಾಡಿದ್ದಾರೆ ಯುವ ರಾಜ್ ಕುಮಾರ್ ಪರ ವಕೀಲರು. ಶ್ರೀದೇವಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿರುವ ವಕೀಲ ಸಿರಿಲ್ ಪ್ರಸಾದ್, ಶ್ರೀದೇವಿ ಅವರಿಗೆ ಮದುವೆಗೆ ಮೊದಲಿನಿಂದಲೇ ಅಫೇರ್ ಇತ್ತು. ಅದು ಯುವ ಅವರಿಗೆ ಮದುವೆ ಆದ ಮೇಲೆ ಗೊತ್ತಾಯಿತು ಎಂದು ಆರೋಪಿಸಿದ್ದಾರೆ.
ಯುವ ಕೊಟ್ಟಿರುವ ಅರ್ಜಿಯಲ್ಲೇನಿದೆ..?
ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸರುವ ವಿಚ್ಛೇದನದ ಅರ್ಜಿಯಲ್ಲಿ ಯುವ ರಾಜ್‌ಕುಮಾರ್, ಪತ್ನಿ ವಿರುದ್ಧ ಕ್ರೌರ್ಯ, ಅಗೌರವದಿಂದ ನೋಡಿಕೊಂಡ ಗಂಭೀರ ಆರೋಪ ಮಾಡಿದ್ದಾರೆ.ಪತ್ನಿಯಿಂದ ನಾನು ಮಾನಸಿಕವಾಗಿ ಟಾರ್ಚರ್ ಅನುಭವಿಸಿದ್ದೇನೆ ಹೇಳಿದ್ದಾರೆ ಯುವ ರಾಜ್ ಕುಮಾರ್. ಯುವ ಸಲ್ಲಿಸಿರುವುದು 5ರ ಪುಟಗಳ ಸುದೀರ್ಘ ಅರ್ಜಿ.
ರಾಧನ್ನ ಎಂಬುವವರ ಜೊತೆ ಅಫೇರ್ ಆರೋಪ..!
ಯುವ ವಕೀಲರ ಪ್ರಕಾರ ಬೇರೆಯವರೊಂದಿಗೆ ಶ್ರೀದೇವಿ ಅಫೇರ್ ಹೊಂದಿದ್ದ ಶ್ರೀದೇವಿ, ಪತಿಯ ಹೆಸರು ಹಾಗೂ ಕುಟುಂಬದ ಹೆಸರು ಹೇಳಿ ಹೆದರಿಸುತ್ತಿದ್ದಾರೆ. ಮೀಡಿಯಾ ಮುಂದೆ ಹೋಗ್ತೀನಿ, ಕೇಸ್ ಹಾಕ್ತೀನಿ ಎಂದು ಹೆದರಿಸ್ತಾರೆ. ಬಾಯ್‌ಫ್ರೆಂಡ್‌ಗೆ ಮದುವೆಯಾಗಿದ್ದರೂ, ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ. ತನ್ನ ಅಕ್ರಮ ಸಂಬಂಧ ಮುಚ್ಚಿಹಾಕಲು ಯುವಗೆ ಸಹ ನಟಿ ಜೊತೆ ಸಂಬಂಧ ಇದೆ ಅಂತ ಸುಳ್ಳು ಕಥೆ ಕಟ್ಟುತ್ತಿದ್ದಾರೆ. ಲಾಯರ್ ಸಿರಿಲ್ ಪ್ರಸಾದ್ ಹೇಳಿರುವಂತೆ ಶ್ರೀದೇವಿಗೆ ರಾಧನ್ನ ಎಂಬುವವರ ಜೊತೆ ಅಕ್ರಮ ಸಂಬಂಧ ಇತ್ತು. ರಾತ್ರಿಯಾದರೆ ಏನಾದರೂ ವಿಷಯ ತೆಗೆದು ಜಗಳ ಮಾಡ್ಕೊಂಡು ರಾಧನ್ನ ಮನೆಗೆ ಹೋಗ್ತಿದ್ದ ಶ್ರೀದೇವಿ, ಬೆಳಗ್ಗೆ ಅಳುತ್ತಾ ವಾಪಸ್ ಬರ್ತಿದ್ಲು ಅಂತಾರೆ ಸಿರಿಲ್ ಪ್ರಸಾದ್.
ಸಹ ನಟಿಯ ಜೊತೆ ಅಫೇರ್ ಆರೋಪ :
ನಟಿಯೊಬ್ಬರ ಜೊತೆ ಸಂಬಂಧ ಕಲ್ಪಿಸಿರುವ ಕುರಿತಂತೆ ಮಾತನಾಡಿರುವ ವಕೀಲರು ಸಿನಿಮಾದ ಫೋಟೋಗಳನ್ನ ತೆಗೆದುಕೊಂಡು ಕೋ-ಆಕ್ಟರ್ ಜೊತೆ ಅಫೇರ್ ಇದೆ ಅಂತ್ಹೇಳಿ ಶ್ರೀದೇವಿ ಮಿಸ್ ಗೈಡ್ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿ ಅದೇ ರೀತಿಯ ಅಭಿಪ್ರಾಯ ರೂಪುಗೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಲೀಗಲ್ ನೋಟಿಸಿನಲ್ಲಿ ಸಪ್ತಮಿ ಗೌಡ ಹೆಸರಿದೆ. ಯುವ ಚಿತ್ರದಲ್ಲಿ ಜೋಡಿಯಾಗಿದ್ದ ಸಪ್ತಮಿ ಗೌಡ, ರೊಮ್ಯಾಂಟಿಕ್ ಫೋಟೋ ಸೆಷನ್ ಮಾಡಿಸಿಕೊಂಡಿರ್ತಾರೆ. ಅವುಗಳನ್ನೇ ಆಕೆ ಸಾಕ್ಷ್ಯ ಎಂದು ದೂರಿದ್ದಾರೆ.
ಡಾ. ರಾಜ್ ಅಕಾಡೆಮಿಯಲ್ಲಿ ವಂಚನೆ :
ಡಾ ರಾಜ್‌ಕುಮಾರ್ ಅಕಾಡೆಮಿ ಮಾಡುವಾಗ ಶ್ರೀದೇವಿ ಪಾರ್ಟ್ನರ್ ಆಗೋಕೆ ಬಂದರು. ಅದರಿಂದ 3 ಕೋಟಿ ರೂಪಾಯಿಗೂ ಅಧಿಕ ಹಣವನ್ನ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಡಾ ರಾಜ್‌ಕುಮಾರ್ ಲರ್ನಿಂಗ್ ಆಪ್ ಶುರು ಮಾಡಿದರು. ಅದರಿಂದಲೂ ಶ್ರೀದೇವಿ ಅವರ ಪರ್ಸನಲ್ ಖಾತೆಗೆ ಹಣ ವರ್ಗಾವಣೆ ಆಗಿದೆ. ಶ್ರೀದೇವಿಯ ಸಹೋದರಿಯ ಖಾತೆಗೂ ಹಣ ವರ್ಗಾವಣೆ ಆಗಿದೆ. ಮೈಸೂರಿನಲ್ಲಿ 20 ಸೈಟ್‌ಗಳನ್ನ ಖರೀದಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದಾರೆ. ನಮಗೆ ಸುಳ್ಳು ಹೇಳಿ ಯುಎಸ್‌ಗೆ ಹೋಗಿ ವ್ಯಾಸಂಗ ಮಾಡುತ್ತಿದ್ದಾರೆ.
ಯುವ ಮಗು ಬೇಡ. ಐವಿಎಫ್ ಮಗು ಬೇಕು :
ರಾತ್ರಿಯ ಹೊತ್ತು ಜಗಳ ಮಾಡುವುದು, ಬಾಯ್ ಫ್ರೆಂಡ್ ಮನೆಗೆ ಹೋಗುವುದು.. ಬೆಳಗ್ಗೆ ಅಳುತ್ತಾ ಬಂದು ಮನೆ ಸೇರಿಕೊಳ್ಳೋದು ಮಾಡ್ತಿದ್ದಾರೆ ಶ್ರೀದೇವಿ. ಮನೆಗೆ ಬಂದಾಗ ಪ್ರತಿಯೊಂದಕ್ಕೂ ತನ್ನ ಬಾಯ್ ಫ್ರೆಂಡ್ ಜೊತೆ ಕಂಪೇರ್ ಮಾಡ್ತಾರೆ ಶ್ರೀದೇವಿ. ಮಗು ಮಾಡಿಕೊಳ್ಳೋಕೆ ಯುವಗೆ ಇಷ್ಟ. ಆದರೆ, ಶ್ರೀದೇವಿಗೆ ಇಷ್ಟ ಇಲ್ಲ. ಲೀಗಲ್ ನೋಟೀಸ್‌ಗೆ ಕೊಡುವ ಉತ್ತರದಲ್ಲಿ ನನ್ನ ಕಕ್ಷಿದಾರರಿಗೆ ಲೈಂಗಿಕ ಸಮಸ್ಯೆ ಇದೆ ಅಂತ ಹೇಳಿದ್ದಾರೆ. ಲೈಂಗಿಕ ಸಮಸ್ಯೆ ಇದ್ದರೆ, ಅಕ್ರಮ ಸಂಬಂಧ ಹೊಂದಲು ಹೇಗೆ ಸಾಧ್ಯ? ತಮ್ಮ ಬಾಯ್ ಫ್ರೆಂಡ್ ಕಡೆಯಿಂದ ಐವಿಎಫ್ ಮಗು ಮಾಡಿಕೊಳ್ತೇನೆ. ನಿನ್ನ ಮಗು ಬೇಡ ಅಂತಾರೆ.ನೀನು ಚೆನ್ನಾಗಿಲ್ಲ, ನನ್ನ ಬಾಯ್ ಫ್ರೆಂಡ್ ಚೆನ್ನಾಗಿದ್ದಾನೆ ಎಂದು ಯುವ ರಾಜ್ಕುಮಾರ್ ಕಾಲೆಳೆಯುತ್ತಾರೆ.ನಿನ್ನ ಬಿಡಲ್ಲ ನಾನು. ಸುಲಭವಾಗಿ ಡಿವೋರ್ಸ್ ತೆಗೆದುಕೊಳ್ಳಲು ಆಗಲ್ಲ. ನಿನ್ನನ್ನು ನಾನು ಬೀದಿಗೆ ತರ್ತೇನೆ ಎಂದು ಬೆದರಿಕೆ ಹಾಕುತ್ತಾರೆ.
ಯುವ ರಾಜ್ ಕುಮಾರ್ ಪರ ವಕೀಲರ ಆರೋಪಗಳು ಗಂಭೀರವಾಗಿಯೇ ಇವೆ. ಆದರೆ ಇವುಗಳಿಗೆ ಶ್ರೀದೇವಿ ಕೊಟ್ಟಿರುವ ಉತ್ತರ ಸತ್ಯ ಗೆಲ್ಲುತ್ತದೆ ಎನ್ನುವುದು. ಯಾವುದು ಸತ್ಯವೋ.. ಯಾವುದು ಸುಳ್ಳೋ.. ದೊಡ್ಮನೆಗೂ ಕಾಲಿಟ್ಟ ಡೈವೋರ್ಸ್ ಕೇಸ್ ಅಭಿಮಾನಿಗಳನ್ನು ಕಂಗೆಡಿಸಿರುವುದಂತೂ ನಿಜ.



