ಇದು ನಿರೀಕ್ಷಿತವೇ. ಏಕೆಂದರೆ ಬೈರತಿ ರಣಗಲ್ (Bairathi Ranagal) ಸೀಕ್ವೆಲ್ ಅಲ್ಲ. ಪ್ರೀಕ್ವೆಲ್. ಹಾಗಾಗಿ ಮಫ್ತಿಯ ಸೀಕ್ವೆಲ್`ನಲ್ಲಿ ಸಿಬಿಐ ಆಫೀಸರ್ ಆಗಿ ನಟಿಸಿದ್ದ ಶ್ರೀಮುರಳಿ (SriMurali) ಇರಲ್ಲ. ಬೈರತಿ ರಣಗಲ್ ಆ ರೀತಿಯ ಕ್ಯಾರೆಕ್ಟರ್ ರೂಪಿಸಿಕೊಂಡಿದ್ದು ಹೇಗೆ ಅನ್ನೋ ಕಥೆ ಇರೋದ್ರಿಂದ ಶ್ರೀಮುರಳಿ (SriMurali) ಪಾತ್ರದ ಅಗತ್ಯ ಅಲ್ಲಿಲ್ಲ. ಶಾನ್ವಿ ಶ್ರೀವಾತ್ಸವ್ (Shanvi Shreevatsav) ಪಾತ್ರವೂ ಬರೋದಿಲ್ಲ.
ಆದರೆ ಶಿವಣ್ಣನ ತಂಗಿ ವೇದವತಿಯಾಗಿ ನಟಿಸಿದ್ದ (Chaya singh) ಛಾಯಾ ಸಿಂಗ್, ವಿಲನ್ ಆಗಿ ಅಬ್ಬರಿಸಿದ್ದ ರಘುವೀರ್ ಭಂಡಾರಿ ದೇವರಾಜ್ (Dinamic Star Devaraj) ಇರಲೇಬೇಕು. ಇಲ್ಲದಿದ್ದರೆ ಪ್ರೀಕ್ವೆಲ್ ಆಗುವುದೇ ಇಲ್ಲ. (Vasishta Simha) ವಸಿಷ್ಠ ಸಿಂಹ, ಪ್ರಕಾಶ್ ಬೆಳವಾಡಿಯವರ (Prakash Belavadi) ಪಾತ್ರಗಳೂ ಇರುತ್ತವೆಯೋ ಇಲ್ಲವೋ.. ಗೊತ್ತಿಲ್ಲ.
ಗೀತಾ ಪಿಕ್ಚರ್ಸ್ (Geetha Pictures) ಮೂಲಕ ಗೀತಾ ಶಿವರಾಜ್ಕುಮಾರ್ (Geetha Shiva rajkumar) ನಿರ್ಮಾಣ ಮಾಡುತ್ತಿರುವ 2ನೇ ಸಿನಿಮಾ ಭೈರತಿ ರಣಗಲ್ (Bairathi Ranagal) ಸಿನಿಮಾ ಶೂಟಿಂಗ್ ಶುರುವಾಗಿದೆ. . ಕೆಲ ತಿಂಗಳ ಹಿಂದೆ ಈ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಇಂದು (ಆಗಸ್ಟ್ 2) ಚಿತ್ರಕ್ಕೆ ಶೂಟಿಂಗ್ ಆರಂಭ ಆಗಿದೆ. ಭೈರತಿ ರಣಗಲ್ (Bairathi Ranagal) ಶೂಟಿಂಗ್ ಬೇಗ ಪೂರ್ಣಗೊಳಿಸಿ ಸಿನಿಮಾನ ಆದಷ್ಟು ಬೇಗೆ ತೆರೆಗೆ ತರುವ ಆಲೋಚನೆ ಚಿತ್ರತಂಡದ್ದು. ಮಫ್ತಿ (Mufthi) ಚಿತ್ರದ ಪ್ರೀಕ್ವೆಲ್ ಆಗಿ ಭೈರತಿ ರಣಗಲ್ (Bairathi Ranagal) ಸಿನಿಮಾ ಮೂಡಿಬರುತ್ತಿರುವುದರಿಂದ ಇಲ್ಲಿ ಶ್ರೀಮುರಳಿಯವರ ಪಾತ್ರ ಇರುವುದಿಲ್ಲ.
ಶ್ರೀಮುರಳಿ (SriMurali) ಹಾಗೂ ಶಿವಣ್ಣ (Shiva Rajkumar) ಕಾಂಬಿನೇಷನ್ನಲ್ಲಿ 2017ರಲ್ಲಿ ರಿಲೀಸ್ ಆಗಿದ್ದ ಮಫ್ತಿ(Mafti), ಸೂಪರ್ ಹಿಟ್ ಆಗಿತ್ತು. ಮೊದಲಾರ್ಧದಲ್ಲಿ ಶ್ರೀಮುರಳಿ ಹೈಲೈಟ್ ಆದರೆ, ಎರಡನೇ ಭಾಗದಲ್ಲಿ ಶಿವರಾಜ್ಕುಮಾರ್ (Shiva Rajkumar) ಪಾತ್ರ ಗಮನ ಸೆಳೆದಿತ್ತು. ನರ್ತನ್ ಮೊದಲ ಚಿತ್ರದಲ್ಲೇ ಭರ್ಜರಿ ಸಕ್ಸಸ್ ಕೊಟ್ಟಿದ್ದರು. ಜಯಣ್ಣ-ಭೋಗೇಂದ್ರ ನಿರ್ಮಾಣದ ಮಫ್ತಿ ಚಿತ್ರದ ಪ್ರೀಕ್ವೆಲ್ನ್ನು ಈಗ ಗೀತಾ ಶಿವರಾಜ್ ಕುಮಾರ್ (Geetha Shiva Rajkumar) ನಿರ್ಮಾಣ ಮಾಡುತ್ತಿದ್ದಾರೆ.
ಈ ನಡುವೆ ಶಿವರಾಜ್ ಕುಮಾರ್ (Shiva Rajkumar) ಮತ್ತು ರಜನಿಕಾಂತ್ (Jailor) ಕಾಂಬಿನೇಷನ್ ನ ಜೈಲರ್ (Jailor) ಸಿನಿಮಾ ರಿಲೀಸ್ ಆಗುತ್ತಿದ್ದು, ದಕ್ಷಿಣದ ಹೆಸರಾಂತ ಸ್ಟಾರ್ ನಟರೇ ಈ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಒಟ್ಟು ಹತ್ತು ನಿಮಿಷಗಳ ಕಾಲ ತೆರೆಯ ಮೇಲೆ ಕಾಣಲಿದ್ದಾರಂತೆ. ಹತ್ತು ನಿಮಿಷವಿದ್ದರೂ ಕಥೆಗೆ ಮತ್ತೊಂದು ತೂಕವನ್ನು ಕೊಡುವಂತ ಪಾತ್ರ ಅದಾಗಿದೆಯಂತೆ.



