ಇತ್ತೀಚೆಗೆ ರಾಜ್ಯ ವಿಧಾನಪರಿಷತ್ತಿಗೆ ನಾಲ್ವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆ ಪಟ್ಟಿಯಲ್ಲಿ ಡಿ.ಜಿ.ಸಾಗರ್, ದಿನೇಶ್ ಅಮಿನ್ ಮಟ್ಟು, ರಮೇಶ್ ಬಾಬು ಮತ್ತು ಆರತಿ ಕೃಷ್ಣ ಅವರ ಹೆಸರುಗಳಿದ್ದವು. ವಿಶೇಷ ಎಂದರೆ.. ಈ ಪಟ್ಟಿಯಲ್ಲಿದ್ದ ಹೆಸರುಗಳಿಗೆ ಕಾಂಗ್ರೆಸ್ ಹೈಕಮಾಂಡ್ ಓಕೆ ಎಂದು ಹೇಳಿತ್ತು. ಯಾವ ತಕರಾರೂ ಮಾಡಿರಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಓಕೆ ಎಂದಿದ್ದರು. ಒಪ್ಪಿಗೆ ಪತ್ರವನ್ನೂ ಕೊಟ್ಟಿದ್ದರು. ಇಷ್ಟೆಲ್ಲ ಆದ ಮೇಲೆಯೇ ಸಿದ್ದರಾಮಯ್ಯ ನಾಲ್ವರನ್ನೂ ವಿಧಾನಪರಿಷತ್ತಿಗೆ ನೇಮಕ ಮಾಡುವಂತೆ, ಹೆಸರುಗಳನ್ನು ಅನುಮೋದಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಆದರೆ ಆ ಸಮಯದಲ್ಲೇ ಸಿದ್ಧರಾಮಯ್ಯ ಅವರಿಗೆ ಒಂದು ಫೋನ್ ಬಂದಿದೆ. ಅದು ಸುರ್ಜೇವಾಲಾ ಅವರದ್ದು.
ಸಿದ್ದರಾಮಯ್ಯಜೀ.. ಆ ಪಟ್ಟಿಗೆ ಒಂದು ಬ್ರೇಕ್ ಹಾಕಿ. ಎರಡು ಹೆಸರುಗಳ ಬಗ್ಗೆ ಡಿಸ್ಕಷನ್ ಮಾಡಬೇಕಿದೆ ಎಂದಿದ್ದಾರೆ. ಸಿದ್ಧರಾಮಯ್ಯ ಸಿಟ್ಟಾಗಿದ್ದಾರೆ. ಎಲ್ಲವನ್ನೂ ನಿಮಗೆ ತೋರಿಸಿಯೇ ಮಾಡಿದ್ದೇನೆ. ಎಐಸಿಸಿ ಅಧ್ಯಕ್ಷ ಖರ್ಗೆಯವರೂ ಓಕೆ ಎಂದಿದ್ದಾರೆ. ಎಲ್ಲ ಆಗಿ ರಾಜ್ಯಪಾಲರ ಬಳಿಗೆ ಪೈನಲ್ ಹಂತಕ್ಕೆ ಹೋದಾಗ ಇದೇನಿದು ಹೊಸ ತಕರಾರು.. ನಾನ್ಸೆನ್ಸ್.. ಎಂದು ಗರಂ ಆಗಿದ್ಧಾರೆ. ಆದರೆ.. ಸಿದ್ಧರಾಮಯ್ಯ ಅವರಿಗೆ ಸುರ್ಜೇವಾಲಅ ಅವರು ಸೋನಿಯಾ ಗಾಂಧಿಯ ಹೆಸರು ಹೇಳಿದ್ದಾರೆ.
ದಿನೇಶ್ ಅಮಿನ್ ಮಟ್ಟು, ಈಗ ಕಾಂಗ್ರೆಸ್ ಕಾರ್ಯಕರ್ತರೇ ಆಗಿರಬಹುದು. ಆದರೆ ಪತ್ರಕರ್ತರಾಗಿದ್ದಾಗ ದಿನೇಶ್ ಅಮಿನ್ ಮಟ್ಟು ಅವರು ಸೋನಿಯಾ ಗಾಂಧಿಯವರನ್ನು ಟೀಕಿಸಿ ಬರೆದಿದ್ದರು. ಆ ವರದಿಗಳನ್ನು ಯಾರೋ ಸೋನಿಯಾ ಅವರಿಗೆ ಕಳಿಸಿಕೊಟ್ಟು ವಿವರಣೆ ಕೊಟ್ಟಿದ್ದಾರಂತೆ. ಹಾಗಾಗಿ ಗರಂ ಆಗಿರುವ ಸೋನಿಯಾ ತಮ್ಮನ್ನೇ ಟೀಕಿಸಿ ಬರೆದವಿಗೆ ನಮ್ಮ ಪಕ್ಷವೇ ಮಹತ್ವದ ಸ್ಥಾನಮಾನ ಕೊಡುವುದು ಸರಿ ಇರುವುದಿಲ್ಲ ಎಂದಿದ್ದಾರೆ. ಆದರೆ.. ಅಷ್ಟ ಹೊತ್ತಿಗೆ ಸಿದ್ಧರಾಮಯ್ಯ ಶಾಸಕರ ಹೆಸರನ್ನು ರಾಜ್ಯಪಾಲರ ಬಳಿಗೆ ಕಳುಹಿಸಿಕೊಟ್ಟಾಗಿತ್ತು. ಅಂದಹಾಗೆ ಆ ಪಟ್ಟಿಯಲ್ಲಿರುವ ಹೆಸರುಗಳ ಬಗ್ಗೆ ತಕರಾರು ಎತ್ತುವುದುಕ್ಕೆ ಕಾರಣವಾಗಿರುವುದು ಡಿಕೆ ಶಿವಕುಮಾರ್ ಎಂಬ ಮಾತುಗಳೂ ಇವೆ.
ಇನ್ನು ರಮೇಶ್ ಬಾಬು ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ಸಿಗೆ ಬಂದವರು. ಹೀಗಾಗಿ ಪಕ್ಷಕ್ಕಾಗಿ ದುಡಿದ ಸೀನಿಯರ್‌ಗಳಿಗೆ ಚಾನ್ಸು ಕೊಡಿ ಎಂಬ ಮಾತನ್ನೂ ಎತ್ತಿದ್ದಾರಂತೆ ರಾಜ್ಯದ ಕೆಲವು ನಾಯಕರು.
ಆದರೆ ಸಿದ್ಧರಾಮಯ್ಯ ಹಿಂದೆ ಸರಿದಿಲ್ಲ. “ಪತ್ರಕರ್ತರಾಗಿದ್ದಾಗ ದಿನೇಶ್ ಅಮೀನ್ ಮಟ್ಟು ಏನು ಬರೆದಿದ್ದರೋ?ಅದೀಗ ಮುಖ್ಯ ವಿಷಯವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹಾಗೇನಾದರೂ ಅವರು ಬರೆದಿದ್ದರೆ ಅದನ್ನವರು ಕಾಂಗ್ರೆಸ್ ಕಾರ್ಯಕರ್ತರಾಗಿ ಬರೆದಿಲ್ಲ. ಇನ್ನು ಕಳೆದ ಕೆಲ ವರ್ಷಗಳಿಂದ ಕೋಮುವಾದಿಗಳ ವಿರುದ್ಧ ನಾವು ನಡೆಸುತ್ತಿರುವ ಹೋರಾಟಕ್ಕೆ ಅವರು ಭುಜ ನೀಡಿದ್ದಾರೆ. ಹೀಗಾಗಿ ವಿಧಾನ ಪರಿಷತ್ತಿನಲ್ಲಿ ಅವರ ಸೇವೆ ನಮ್ಮ ಪಕ್ಷಕ್ಕೆ ಅಗತ್ಯವಿದೆ. ಇನ್ನು ರಮೇಶ್ ಬಾಬು ಕೂಡ ಇಂಥ ಹೋರಾಟಗಳಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳು ತ್ತಿದ್ದಾರೆ. ಹೀಗಾಗಿ ಅವರ ನೇಮಕಾತಿಯಿಂದ ಪಕ್ಷಕ್ಕೆ ಬಲ ಬರಲಿದೆ” ಅಂತ ವಿವರಿಸಿದ್ದಾರೆ.
ಅಂತಿಮವಾಗಿ ರಾಹುಲ್ ಗಾಂಧಿ ವಿದೇಶದಿಂದ ಬಂದ ಮೇಲೆ ನೋಡೋಣ. ವೇಯ್ಟ್ ಮಾಡಿ ಎಂದಿದ್ದಾರಂತೆ. ರಾಹುಲ್ ಗಾಂಧಿ ವಿದೇಶದಿಂದ ಬಂದ ಮೇಲೆಯೂ ಅದು ಕ್ಲಿಯರ್ ಆಗಿಲ್ಲ. ಸಿದ್ದರಾಮಯ್ಯ ಅವರ ತಾಳ್ಮೆ ಕುಸಿಯುತ್ತಿದೆಯಂತೆ. ಅಂದಹಾಗೆ ಖರ್ಗೆ ಸಹಿ ಹಾಕಿದ್ದ ಪಟ್ಟಿಗೆ ಬ್ರೇಕ್ ಹಾಕುವ ಮೂಲಕ, ಅಧ್ಯಕ್ಷ ಖರ್ಗೆ ಹೆಸರಿಗೆ ಮಾತ್ರ. ತಾವೇ ಸೂಪರ್ ಹೈಕಮಾಂಡ್ ಎಂಬ ಸಂದೇಶ ನೀಡುತ್ತಿದೆ ಸೋನಿಯಾ ಕುಟುಂಬ.



