ಧರ್ಮಸ್ಥಳದಲ್ಲಿ ಸಾವಿರಾರು ತಲೆಬುರುಡೆಗಳಿವೆ. ನೂರಾರು ಹೆಣಗಳನ್ನು ನಾನೇ ಹೂತುಹಾಕಿದ್ದೇನೆ ಎಂದು ಬೆಳಕಿಗೆ ಬಂದ ಮಾಸ್ಕ್ ಮ್ಯಾನ್ ಚಿನ್ನಯ್ಯ, ಅರೆಸ್ಟ್ ಆಗಿದ್ದಾನೆ. ಇಡೀ ಕೇಸಿನಲ್ಲಿ ಧರ್ಮಸ್ಥಳ ವಿರುದ್ಧ, ವೀರೇಂದ್ರ ಹೆಗ್ಗಡೆ ವಿರುದ್ಧ ದೊಡ್ಡ ಷಡ್ಯಂತ್ರವೇ ನಡೆದಿದೆ ಎಂಬುದು ಕನ್ನಡಿಯಂತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಿದ್ದರೂ.. ಷಡ್ಯಂತ್ರದ ಆರೋಪ ಹೊತ್ತವರು ಈಗಲೂ ಆರಾಮ್ ಆಗಿಯೇ ಓಡಾಡಿಕೊಂಡಿದ್ದಾರೆ. ಅವರನ್ನು ಎಸ್‌ಐಟಿಯೇ ರಕ್ಷಣೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬರೋಕೆ ಶುರುವಾಗಿದೆ.
ರಾಷ್ಟ್ರಮಟ್ಟದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬುರುಡೆ ಪ್ರಕರಣದ ಷಡ್ಯಂತ್ರದ ಬಗ್ಗೆ ಸ್ಪಷ್ಟ ಸಾಕ್ಷ್ಯವಿದ್ದರೂ ಎಸ್‌ಐಟಿ ಅಧಿಕಾರಿಗಳು ಆ ದಿಕ್ಕಿನಲ್ಲಿ ತನಿಖೆ ನಡೆಸುವಲ್ಲಿ ‘ತಡ’ ಮಾಡುತ್ತಿರುವುದೇ ಈ ಅನುಮಾನ ಹುಟ್ಟುವುದಕ್ಕೆ ಕಾರಣ. ಎಸ್‌ಐಟಿಯ ತನಿಖಾ ಮಾರ್ಗದ ಮೇಲೆಯೇ ಅನುಮಾನ ಹುಟ್ಟುತ್ತಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ತಂದಿದ್ದ ಬುರುಡೆ ಹಾಗೂ ನೂರಾರು ಶವಗಳನ್ನು ಹೂತ್ತಿರುವ ಆರೋಪದ ತನಿಖೆ ಮಾಡುತ್ತಿದ್ದ ಎಸ್‌ಐಟಿ & ಟೀಂ, ಅದೆಷ್ಟು ವೇಗವಾಗಿ ಕೆಲಸ ಮಾಡಿತೆಂದರೆ.. ಬಿಡುವೇ ಇಲ್ಲವೇನೋ.. ಎಂಬಂತೆ ಡ್ಯೂಟಿ ಮಾಡಿತು. ಮಳೆಯನ್ನೂ ಲೆಕ್ಕಿಸದೆ 20ಕ್ಕೂ ಹೆಚ್ಚು ಗುಂಡಿಗಳನ್ನು ಅಗೆದು ಬಗೆದು ತೆಗೆಯಿತು. ಬಳಿಕ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ವಿಚಾರಣೆ ಒಳಪಡಿಸಿದಾಗ ಇಡೀ ಷಡ್ಯಂತ್ರದ ಹಿಂದೆ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ಇನ್ನಿತರರು ಇರುವುದು ಬಹಿರಂಗ ವಾಗಿತ್ತು. ವಿಚಾರಣೆಯ ವೇಳೆ ಚಿನ್ನಯ್ಯ ಸಹ ತಿಮರೋಡಿ ಗ್ಯಾಂಗ್ ಹೇಳಿಕೊಟ್ಟಿದ್ದ ಗಿಳಿಪಾಠ ಮಾತ್ರ ನಾನು ಹೇಳಿದ್ದೇನೆ ಎಂದು ಒಪ್ಪಿಕೊಂಡಿದ್ದ. ಸುಜಾತಾ ಭಟ್ ಕಥೆಯೇ ಕಟ್ಟುಕಥೆ ಎಂದು ಗೊತ್ತಾಗಿತ್ತು. ಎಂಡಿ ಸಮೀರ್, ಜಯಂತ್, ಸೌಜನ್ಯಳ ಮಾವ ವಿಠ್ಠಲ ಗೌಡ.. ಹೀಗೆ ಪ್ರತಿಯೊಬ್ಬರೂ ಸಂಚಿನ ಭಾಗ.. ಯೂಟ್ಯೂಬರ್ಸ್ ಕೂಡಾ ಲೈಕ್ಸ್, ಕಾಸಿಗಾಗಿ ಮಾಡಿದ್ದವರು ಎಂದು ಗೊತ್ತಾಗಿತ್ತು. ಆದರೆ.. SIT ಎಂಬುದು ಇವರ ವಿಚಾರಕ್ಕೆ ಸೈಲೆಂಟ್ ಆಗಿದೆ. ಯಾಕೆ..?
ತಿಮರೋಡಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯಿದೆ ಅಡಿ ಕೇಸ್ ದಾಖಲಾಗಿದ್ದರೂ, ಅರೆಸ್ಟ್ ಆಗಿಲ್ಲ. ತಡೆಯುತ್ತಿರುವುದು ಯಾರು..? ನಿಜಕ್ಕೂ ತಿಮರೋಡಿ ಎಲ್ಲಿದ್ದಾನೆ ಎಂದು ಎಸ್‌ಐಟಿಯವರಿಗೆ ಗೊತ್ತಿಲ್ಲವೇ..?
ಗಿರೀಶ್ ಮಟ್ಟಣ್ಣವರ್ ಹೆಸರನ್ನು ಮಾಧ್ಯಮಗಳಲ್ಲಿಯೇ ಸುಜಾತಾ ಭಟ್ ಹೇಳಿದ್ದಾರೆ. ಇನ್ನುಳಿದಂತೆ ತನಿಖೆಯಲ್ಲೂ ಹೆಸರು ಬಂದಿದೆ. ಅರೆಸ್ಟ್ ಮಾಡುತ್ತಿರುವುದನ್ನು ತಡೆಯುತ್ತಿರುವುದು ಯಾರು..?
ವಿಠ್ಠಲ ಗೌಡನ ಕಟ್ಟುಕಥೆ, ವಿಡಿಯೋ ಸಾಕ್ಷಿಗಳ ಸಮೇತ ಮಾಧ್ಯಮಗಳಲ್ಲಿಯೇ ಎಕ್ಸ್‌ಪೋಸ್ ಆಗಿದೆ. ಯಾಕೆ ಕ್ರಮ ಇಲ್ಲ.
ಎಂಡಿ ಸಮೀರನಿಗೆ ದುಡ್ಡು ಕೊಟ್ಟವರು ಯಾರು..? ಯೂಟ್ಯೂಬರ್ಸ್‌ಗೆ ಹಣ ಹಾಕಿದ್ದು ಯಾರು..? ಇದ್ದಕ್ಕಿದ್ದಂತೆ ಅವರ ವಿಡಿಯೋಗಳು ಮಿಲಿಯನ್ ಗಟ್ಟಲೆ ವೀಕ್ಷಣೆ, ಲೈಕ್ಸ್ ಪಡೆದಿದ್ದು ಹೇಗೆ ಎಂಬುದು ಗೊತ್ತಿದ್ದರೂ.. ಕ್ರಮ ಇಲ್ಲ ಯಾಕೆ..? ಒಂದೂ ಅರ್ಥವಾಗದ ಸ್ಥಿತಿ.
ಇನ್ನು ಸುಜಾತಾ ಭಟ್ ಕಟ್ಟುಕಥೆಯಲ್ಲಿ ವಾಸಂತಿ ಎಂಬ ಮಹಿಳೆ ಹೆಸರು ಬಂದಿತ್ತು. ಇಡೀ ಸ್ಟೋರಿಯೇ ಕಟ್ಟುಕಥೆ ಆಗಿರುವಾಗ.. ಆ ಪ್ರಕರಣವನ್ನು ಸಂಬಂಧಪಟ್ಟ ಪೊಲೀಸರಿಗೆ ಒಪ್ಪಿಸುವುದು ಬಿಟ್ಟು, ಆ ಪ್ರಕರಣದ ತನಿಖೆಯ ಬೆನ್ನು ಹತ್ತಿರೋದು ಏಕೆ..? ಇಷ್ಟಕ್ಕೂ ಷಡ್ಯಂತ್ರದ ಸಂಚು ಹೊರಬಿದ್ದ ಮೇಲೆ ಎಸ್‌ಐಟಿಯವರು, ಧರ್ಮಸ್ಥಳ, ತಲೆಬುರುಡೆ ಕೇಸಿಗೆ ಸಂಬಂಧವೇ ಇಲ್ಲದ ಪ್ರಕರಣಗಳ ಬೆನ್ನು ಬಿದ್ದಿರೋದು ಏಕೆ..? ಜನ ಮರೆಯಲಿ ಎಂದು ಕಾಯಲಾಗುತ್ತಿದೆಯೇ.. ಹೀಗೆ ಅನುಮಾನದ ಮೇಲೆ ಅನುಮಾನಗಳು. ಉತ್ತರ ಕೊಡಬೇಕಿರೋದು ಎಸ್‌ಐಟಿ ಮಾತ್ರ. ಅವರು ಗಪ್ ಚುಪ್.
ಸದ್ಯಕ್ಕೆ ಚಿನ್ನಯ್ಯ ಮಾತ್ರ ಬಲೀ ಕಾ ಬಕ್ರಾ.



