ರಜನಿಕಾಂತ್ (Rajinikanth) ಅಭಿನಯದ ಜೈಲರ್ (Jailor) , ಮುಂದಿನ ವಾರ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್ (Rajinikanth) ಹೀರೋ ಆಗಿದ್ದರೂ, ಸಂಥಿಂಗ್ ಡಿಫರೆಂಟ್ ಆಗಿದ್ದಾರೆ. ತಮನ್ನಾ ಭಾಟಿಯಾ (Thamanna Bhatia) , ರಮ್ಯಾಕೃಷ್ಣ (Ramyakrishna) , ಯೋಗಿಬಾಬು (YogiBabu) ಮೊದಲಾದವರು ನಟಿಸಿರೋ ಚಿತ್ರದಲ್ಲಿ ಮಲಯಾಳಂನಿಂದ (Mohanlal) ಮೋಹನ್`ಲಾಲ್, ಹಿಂದಿಯಿಂದ ಜಾಕಿ ಶ್ರಾಫ್ (Jackie Shraff) ಎಲ್ಲರೂ ನಟಿಸಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ (Dr. Shiva Rajkumar) ಕೂಡಾ ನಟಿಸಿದ್ದು, ಜಸ್ಟ್ 10 ನಿಮಿಷ ತೆರೆ ಮೇಲೆ ರಂಜಿಸಲಿದ್ದಾರಂತೆ ಶಿವಣ್ಣ.
ಆ 10 ನಿಮಿಷ ಇರಲಿರುವ ಪಾತ್ರಕ್ಕೆ, 4 ಕೋಟಿ ಸಂಭಾವನೆ ಪಡೆದಿದ್ದಾರಂತೆ. ತಮ್ಮ ಸಂಭಾವನೆಯನ್ನು ಕನ್ನಡದವರಿಗೆ ಇದಕ್ಕೂ ಕಡಿಮೆ ಮಾಡುತ್ತಾರೆ ಶಿವಣ್ಣ. ಆದರೆ ಇದು ರಜನಿಕಾಂತ್ ಸಿನಿಮಾ. ರಜನಿಕಾಂತ್ ಸಂಭಾವನೆ ಈಗಾಗಲೇ 100 ಕೋಟಿ ರೂ. ಗಡಿ ದಾಟಿದೆ. ‘ಜೈಲರ್’ ಚಿತ್ರಕ್ಕೂ ತಲೈವಾ ದೊಡ್ಡ ಮೊತ್ತವನ್ನೇ ಜೇಬಿಗಿಳಿಸಿದ್ದಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಆಗಿ ನಟಿಸೋಕೆ ತಲೈವಾ ಬರೋಬ್ಬರಿ 110 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಗುಸುಗುಸು ಕೇಳಿ ಬರ್ತಿದೆ. ಇದನ್ನು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಷ್ಟು ಹಣವನ್ನು ರಜನಿಕಾಂತ್ ಏನ್ ಮಾಡ್ತಾರಪ್ಪ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿಯೇ ಶಿವಣ್ಣ (Dr. Shiva Rajkumar) ಎಷ್ಟು ಸಂಭಾವನೆ ಪಡೆದಿರಬಹುದು ಎಂದು ಪ್ರಶ್ನೆ ಮೂಡಿತ್ತು. ಏಕೆಂದರೆ ಶಿವಣ್ಣ (Dr. Shiva Rajkumar) ನಟಿಸಿರುವ ಮೊದಲ ತಮಿಳು ಸಿನಿಮಾ ಜೈಲರ್. ರಜನಿಕಾಂತ್ ಜೊತೆ ನರಸಿಂಹ ಎನ್ನುವ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕೇವಲ 11 ನಿಮಿಷಗಳು ಮಾತ್ರ ಸೆಂಚುರಿ ಸ್ಟಾರ್ (Century Star) ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣನ (Dr. Shiva Rajkumar) ಪಾತ್ರ ಸಣ್ಣದೇ ಆದರೂ ಇದಕ್ಕಾಗಿ ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ರಜನಿಗೆ 110 ಕೋಟಿ ಕೊಟ್ಟು, ಶಿವಣ್ಣಂಗೆ 4 ಕೋಟಿ ಕೊಟ್ಟಿರೋ ಜೈಲರ್ ನಿರ್ಮಾಪಕರು ಮೋಹನ್ ಲಾಲ್ ಅವರಿಗೆ 8 ಕೋಟಿ ಕೊಟ್ಟಿದ್ದಾರಂತೆ. ಮೋಹನ್ ಲಾಲ್ ಪಾತ್ರದ ಸ್ಕ್ರಿನ್ ಸ್ಪೇಸ್, ಶಿವಣ್ಣ ಅವರ ಪಾತ್ರಕ್ಕಂತಲೂ ಕಡಿಮೆ ಎನ್ನಲಾಗಿದೆ. (Kavalayya) ತಮನ್ನಾ ಅವರಿಗೆ 3 ಕೋಟಿ ಕೊಟ್ಟಿದ್ದಾರೆ ಎನ್ನಲಾಗಿದ್ದು, ಜಾಕಿ ಶ್ರಾಫ್ ಅವರಿಗೂ ಕೂಡಾ 4 ಕೋಟಿ ಸಂಭಾವನೆ ನೀಡಿದ್ದಾರೆ ಎಂಬ ಮಾತುಗಳಿವೆ.
ರಮ್ಯಾ ಕೃಷ್ಣ 80 ಲಕ್ಷ ರೂ. ಯೋಗಿ ಬಾಬು 1 ಕೋಟಿ ರೂ. ವಸಂತ್ ರವಿ 30 ಲಕ್ಷ ರೂ. ಹೀಗೆ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರಿಗೂ ಸನ್ ಪಿಕ್ಚರ್ಸ್ ಸಂಸ್ಥೆ ಭಾರೀ ಮೊತ್ತದ ಸಂಭಾವನೆಯನ್ನೇ ನೀಡಿದೆಯಂತೆ. ಅಂದಹಾಗೆ ‘ಜೈಲರ್’ ಟ್ರೈಲರ್ ನೋಡಿದವರು ಇದು ಹಾಲಿವುಡ್ನ ‘ನೊಬಡಿ’ ಸಿನಿಮಾದಿಂದ ಸ್ಫೂರ್ತಿ ಪಡೆದಂತೆ ಇದೆ ಎನ್ನುತ್ತಿದ್ದಾರೆ. ಆಗಸ್ಟ್ 10ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ರಾಜ್ಯದಲ್ಲಿಯೂ ರಜನಿಕಾಂತ್ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಗುತ್ತದೆ. ಈ ಬಾರಿ ರಜನಿ ಜೊತೆಗೆ ಶಿವಣ್ಣ (Dr. Shiva Rajkumar) ಕೂಡಾ ಇರೋದ್ರಿಂದ ಬ್ಲಾಕ್ ಬಸ್ಟರ್ ಓಪನಿಂಗ್ ಸಿಗುವ ಸಾಧ್ಯತೆ ಇದೆ. ಮೊದಲ ದಿನದ ಕಲೆಕ್ಷನ್ ಲೆಕ್ಕ 100 ಕೋಟಿ ದಾಟುವ ನಿರೀಕ್ಷೆ ಇದೆ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದಾರೆ.



