ಸ್ಟಾರ್ ಸಿನಿಮಾದ ಒಂದು ಅಪ್ ಡೇಟ್ ಬಂದರೆ.. ಅದರ ಅಬ್ಬರವೇ ಬೇರೆ. ಕಿಚ್ಚ ಸುದೀಪ್ ಚಿತ್ರದ ಒಂದು ಪೋಸ್ಟರ್.. ಒಂದು ಟೀಸರ್.. ಟ್ರೇಲರ್.. ಹಾಡು.. ಹೀಗೆ ಪ್ರತಿಯೊಂದೂ ಅಭಿಮಾನಿಗಳ ಪಾಲಿಗೆ ಹಬ್ಬವೇ. ಆದರೆ.. ಈ ಬಾರಿ ಸ್ವಲ್ಪ ಡಿಫರೆಂಟ್. ಅವರ ಹೊಸ ಚಿತ್ರ ಮಾರ್ಕ್ ಚಿತ್ರದ ಟೀಸರ್ ಬಂದಿದೆ. ಆದರೆ.. ಎಲ್ರೂ ಸೈಲೆಂಟ್ ಆಗಿ ಮಾತನಾಡ್ತಿದ್ದಾರೆ. ಯಾಕೆ ಅಂದ್ರೆ.. ಸೈಲೆಂಟ್ ಆಗಿ ಇರಿ ಅಂಥಾ ಟೀಸರಿನಲ್ಲೇ ಹೇಳಿದ್ದಾರೆ. ಇಷ್ಟಕ್ಕೂ ಟೀಸರಿನಲ್ಲಿ ಏನಿದೆ..?
ಮಾರ್ಕ್ ಸಾಯಿಸಲು ಡೀಲ್ ಕೊಡುವ ದೃಶ್ಯದಿಂದ ಟೀಸರ್ ಶುರುವಾಗುತ್ತದೆ ಟೀಸರ್. ಟೀಸರ್ ಶುರು ಆಗ್ತಿದ್ದಂತೆಯೇ ಡಾನ್ ಒಬ್ಬ ತನ್ನ ಗ್ಯಾಂಗಿನಲ್ಲಿರುವ ಎಲ್ಲರಿಗೂ ಒಂದು ಫೋಟೋ ಕಳಿಸಿ.. ಈತನನ್ನು ಮುಗಿಸಿದವರಿಗೆ ಬಾಕ್ಸುಗಟ್ಟಲೆ ದುಡ್ಡು ಕೊಡುವ ಆಮಿಷ ಒಡ್ಡುತ್ತಾನೆ. ದುಡ್ಡೂ ಅಲ್ಲೇ ಇರುತ್ತೆ. ಆದರೆ.. ಅವನನ್ನು ಮುಗಿಸುವುದು ಅಷ್ಟು ಸುಲಭ ಅಲ್ಲ. ಏಕೆಂದರೆ ಅವರು ಮಾರ್ಕ್.
ಅವನು ನನಗಿಂತಾನೂ ಡೇಂಜರಾ ಎನ್ನುತ್ತಾನೆ ಒಬ್ಬ ವಿಲನ್. ಆತನ ಜೊತೆಯಲ್ಲೇ ಇರುವ ಇನ್ನೊಬ್ಬ ವಿಲನ್ ಜೋರಾಗಿ ಹೇಳಬೇಡ. ಮಾರ್ಕ್ ಬಗ್ಗೆ ಮಾತನಾಡಿಕೊಳ್ಳೋದಿದ್ರೆ ಮನಸ್ಸಿನಲ್ಲೇ ಮಾತಾಡ್ಕೋಬೇಕು ಎನ್ನುತ್ತಾನೆ. ಓಪನಿಂಗ್ ಮತ್ತು ಕ್ಲೋಸಿಂಗ್ ಡೈಲಾಗ್ಸ್ ಇವು. ಇದರ ನಡುವೆ ಕಿಚ್ಚ ಸುದೀಪ್ ಎಂಟ್ರಿ, ಲುಕ್, ಸ್ಟೈಲ್ ನೋಡಿದವರು ಫಿದಾ ಆಗ್ತಾರೆ. ಅದಂತೂ ಪಕ್ಕಾ.
ಮ್ಯಾಕ್ಸ್’ ಸಿನಿಮಾದಲ್ಲಿ ವಿಜಯ್ ಕಾರ್ತಿಕೇಯ ಅವರು ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ತುಂಬ ಚೆನ್ನಾಗಿ ತೋರಿಸಿದ್ದರು. ಈ ಬಾರಿ ‘ಮಾರ್ಕ್’ ಸಿನಿಮಾದಲ್ಲಿ ಕೂಡ ಅಂಥದ್ದೇ ಪ್ರಯತ್ನ ನಡೆದಿದೆ. ಮತ್ತಷ್ಟು ರೋಚಕವಾದ ಕಥೆಯನ್ನು ನಿರ್ದೇಶಕರು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ. ಸುದೀಪ್ ಅವರ ಗೆಟಪ್ ಗಮನ ಸೆಳೆಯುತ್ತಿದೆ. ಹೈಪ್ ಹೆಚ್ಚಲು ಅದು ಕೂಡ ಕಾರಣ ಆಗಿದೆ. ‘ಮಾರ್ಕ್’ ಸಿನಿಮಾಗೆ ಶೇಖರ್ ಚಂದ್ರ ಅವರು ಛಾಯಾಗ್ರಹಣ ಮಾಡಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಅಜಯ್ ಮಾರ್ಕಂಡೆ ಎಂಬ ಪಾತ್ರವನ್ನು ಸುದೀಪ್ ಮಾಡಿದ್ದು, ಸುದೀಪ್ ಹೇರ್ ಸ್ಟೈಲ್ ಮಾತ್ರ ಡಿಫರೆಂಟ್ ಆಗಿದೆ. ಸಖತ್ತಾಗಿದೆ.
ನಟ ಸುದೀಪ್ ಅವರ ಮಾರ್ಕ್ ಚಿತ್ರ ಡಿ. 25ಕ್ಕೆ ಬಿಡುಗಡೆಯಾಗುತ್ತಿದೆ. ಜೊತೆಯಲ್ಲೇ 45 ಕೂಡಾ ರಿಲೀಸ್ ಆಗ್ತಿದೆ. ʻನಮ್ಮ ಸಿನಿಮಾ ನೀವು ನೋಡಿ. ನಿಮ್ಮ ಸಿನಿಮಾ ನಾನು ನೋಡ್ತೇನೆ. ಇದು ಪೈಪೋಟಿ ಅಲ್ಲ. ರಜೆ ಇದೆ. ಎರಡೂ ಚಿತ್ರಗಳು ಬರಲಿ. ಇಬ್ಬರೂ ಗೆಲ್ಲೋಣʼ ಎಂದು ಅರ್ಜುನ್ ಜನ್ಯ ಅವರಿಗೆ ಹೇಳಿದ್ದಾರಂತೆ ಸುದೀಪ್. 45 ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಮಲ್ಟಿಸ್ಟಾರ್ ಸಿನಿಮಾ. ಕನ್ನಡ, ತಮಿಳು, ತೆಲುಗು ಟೀಸರ್ ಗಳಲ್ಲಿ ಭರಪೂರ ಆ್ಯಕ್ಷನ್ ಇರುವ ಸುಳಿವು ಇದೆ. ಇದು ಪಕ್ಕಾ ಪೊಲೀಸ್ – ಗ್ಯಾಂಗಸ್ಟರ್ ಗಳ ಕಥೆ ಎಂಬುದು ಗೊತ್ತಾಗುತ್ತದೆ.
ಸತ್ಯ ಜ್ಯೋತಿ ಫಿಲಮ್ಸ್ ಸಿಂಥಿಲ್ ತ್ಯಾಗರಾಜನ್ ನಿರ್ಮಿಸಿರುವ ಚಿತ್ರದಲ್ಲಿ ಸುದೀಪ್ ಅವರ ಜೊತೆ ಡ್ರ್ಯಾಗನ್ ಮಂಜು, ನವೀನ್ ಚಂದ್ರ, ದೀಪಿಕಾ, ಅರ್ಚನಾ ಕೊಟ್ಟಿಗೆ, ರೋಶಿನಿ ಪ್ರಕಾಶ್ ಹಾಗೂ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.



