ದಿನ ಬೆಳಗಾದ್ರೆ ಸಾಕು.. ಒಂದಲ್ಲ ಒಂದು ಬೆಲೆ ಏರಿಕೆ ಫಿಕ್ಸ್ ಆಗ್ತಾ ಇದೆ. ರಾಜ್ಯದ ಜನರಿಗೆ ಗ್ಯಾರಂಟಿ ಶಾಕ್ ಜೊತೆಯಲ್ಲೇ ಮೋದಿ ಸರ್ಕಾರವೂ ಬೆಲೆ ಏರಿಕೆ ಶಾಕ್ ಕೊಡ್ತಾ ಇದೆ. ಇತ್ತ ರಾಜ್ಯ ಸರ್ಕಾರ.. ಅತ್ತ ಕೇಂದ್ರ ಸರ್ಕಾರ ಎರಡೂ ಬ್ಯಾಕ್ ಟು ಬ್ಯಾಕ್ ಬಾರಿಸ್ತಾ ಇವೆ. ಇದೆಲ್ಲದರ ಮಧ್ಯೆ ಬೀದಿಗೆ ಬಿದ್ದಿರೋದು, ರಾಜ್ಯದ ಜನ. ಆದರೆ ಇದೆಲ್ಲದರ ಮಧ್ಯೆ ಸಾಲಗಾರರಿಗೆ ಮಾತ್ರ ಒಂದಿಷ್ಟು ರಿಲೀಫ್ ಸಿಕ್ಕಿದೆ.
ಬೆಲೆ ಏರಿಕೆಯ 10+ ಪಟ್ಟಿ
1. ನೀರಿನ ಬೆಲೆ ಏರಿಕೆ ಜಾರಿ. ಲೀ. ನೀರಿಗೆ ಒಂದು ಪೈಸೆ, 5 ಜನರ ಒಂದು ಕುಟುಂಬ ಕನಿಷ್ಠ 10 ಸಾವಿರ ಲೀ. ಬಳಸುತ್ತದೆ
2. ಸ್ಕೂಲ್ ಬಸ್ ಫೀಸ್ ಕಿ.ಮೀ/2 ರೂ. ಹೆಚ್ಚಳ . ಡೀಸೆಲ್ ಸೆಸ್ 2 ರೂ. ಏರಿಕೆ ಎಫೆಕ್ಟ್ (ಕಳೆದ ವರ್ಷ 3 ರೂ. ಸೆಸ್ ಹಾಕಿತ್ತು ರಾಜ್ಯ) ಹೀಗಾಗಿ ಶಾಲೆಗೆ ಸ್ಕೂಲ್ ಬಸ್ಸಿನ ಶುಲ್ಕ ವರ್ಷಕ್ಕೆ ಕನಿಷ್ಠ 500 ರೂ. ಹೆಚ್ಚಳವಾಗಲಿದೆ.
3. 20 ಲೀ. ನೀರಿನ ದರ 10 ರೂ.ಗೆ ಏರಿಕೆ. ಮೊದಲು ಈ ನೀರಿನ ಬಾಟಲ್ 5 ರೂ. ಗೆ ಸಿಗ್ತಾ ಇದ್ವು.
4. ಗ್ಯಾಸ್ ಸಿಲಿಂಡರ್ ದರ 50 ರೂ. ಏರಿಕೆ. ಇದು ಕೇಂದ್ರ ಸರ್ಕಾರದ ಬೆಲೆ ಏರಿಕೆ ಗಿಫ್ಟು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ಕೂಡಾ ಬೆಲೆ ಏರಿಕೆ, ಸುಂಕ ಹೆಚ್ಚಿಸಿರುವುದು ಯಾಕೆ ಎನ್ನುವುದು ಅರ್ಥವಾಗುತ್ತಲೇ ಇಲ್ಲ.
5. ಕಳೆದ ವರ್ಷ ಬಸ್ ಟಿಕೆಟ್ ದರ ಏರಿಸಿದ್ದ ರಾಜ್ಯ ಸರ್ಕಾರ, ಶೀಘ್ರದಲ್ಲೇ ಬಸ್ ಟಿಕೆಟ್ ದರ ಮತ್ತೆ ಏರಿಕೆ ಮಾಡುವ ಎಲ್ಲ ಸೂಚನೆಗಳೂ ಇವೆ.
6. ನಂದಿನಿ ಹಾಲು, ಮೊಸರು ಲೀ.ಗೆ 4 ರೂ. ಏರಿಕೆಯಾಗಿದೆ. ಆಕ್ಚುವಲಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ 9 ರೂ. ಹೆಚ್ಚಳವಾಗಿದೆ. ಹೇಗೆಂದರೆ ಕಳೆದ ವರ್ಷ ಮೊದಲಿಗೆ 3 ರೂ. ಹೆಚ್ಚಿಸಿತ್ತು. ಆಮೇಲೆ 50 ಮಿಲಿ ಜಾಸ್ತಿ ನೀಡಿ, 2 ರೂ. ಹೆಚ್ಚಳ ಮಾಡಿತ್ತು. ಈಗ ಮತ್ತೆ 4 ರೂ. ಹೆಚ್ಚಿಸಿದೆ. ಆದರೆ, 50 ಮಿಲಿ ಹಾಲು ಕಟ್ ಆಗಿದೆ. ಆ 50 ಮಿಲಿ ಹಾಲಿನ 2 ರೂ. ಮಾತ್ರ ಹಾಗೆಯೇ ಕಂಟಿನ್ಯೂ ಆಗಿದೆ.
7. ಟೀ, ಕಾಫಿ ದರ 5 ರಿಂದ 10 ರೂ. ಹೆಚ್ಚಳವಾಗಿದೆ. ಒಂದಾನೊಂದು ಕಾಲದಲ್ಲಿ ಟೀ, ಕಾಫಿ 2ರಿಂದ 5 ರೂ.ಗೆ ಸಿಗುತ್ತಿತ್ತು. ಈಗ ಏರಿಕೆಯಾಗುತ್ತಿರುವ ಮೊತ್ತವೇ 5 ರೂ.
8. ವಿದ್ಯುತ್ ಯುನಿಟ್‌ಗೆ 36 ಪೈಸೆ ಹೆಚ್ಚಳವಾಗಿದೆ. ಇದು ಗೃಹಜ್ಯೋತಿ ಬಳಕೆದಾರರಿಗೆ ಅನ್ವಯವಾಗಲ್ಲವಂತೆ. ಆದರೆ,ಅವರೂ ಕೂಡಾ ಮಿನಿಮಮ್ ಕಟ್ಟಬೇಕಲ್ವಾ.. ಅದು 25 ರೂ.ಗೆ ಹೆಚ್ಚಾಗಿದೆ.
9. ಕಸ ಸಂಗ್ರಹದ ಸೆಸ್ : 50 ರೂ. ಇದು ಹೊಸದು. ಈ ಎರಡಕ್ಕೂ ಟ್ಯಾಕ್ಸ್ ಇರಲಿಲ್ಲ. ಹೊಸದಾಗಿ ಸೇರ್ಪಡೆಯಾಗಿದೆ. ಕಸ ಸಂಗ್ರಹಕ್ಕೆ ಬೇರೆಯ ರೀತಿಯಲ್ಲಿ ಟ್ಯಾಕ್ಸ್ ಕಲೆಕ್ಟ್ ಆಗ್ತಾ ಇತ್ತು. ಅಂದ್ರೆ ಪ್ರಾಪರ್ಟಿ ಟ್ಯಾಕ್ಸ್, ರೋಡ್ ಟ್ಯಾಕ್ಸ್, ವಾಣಿಜ್ಯ ವ್ಯವಹಾರಗಳಿಂದ ಸಂಗ್ರಹಿಸಲಾಗುತ್ತಿತ್ತು. ಈಗ ಮನೆ ಮನೆಯವರೂ ಕಟ್ಟಬೇಕು. ಮನೆ ಎಷ್ಟು ದೊಡ್ಡದಾಗಿರುತ್ತದೋ.. ಅಷ್ಟು ಹೆಚ್ಚು ಶುಲ್ಕ ಕಟ್ಟಬೇಕು.
10. ಮನೆಯಲ್ಲಿ ಕಾರ್ ಪಾರ್ಕಿಂಗ್ ಶುಲ್ಕ. ಮನೆಯಲ್ಲಿ ಕಾರ್ ಇದ್ದರೆ, ಸ್ವಂತ ಮನೆಯೇ ಆಗಿದ್ದರೂ, ಅದಕ್ಕೆ ಪಾರ್ಕಿಂಗ್ ಶುಲ್ಕ ಪ್ರತ್ಯೇಕವಾಗಿ ಕಟ್ಟಬೇಕು. ಅದು ಕಾರ್ ಇದ್ದ ಪ್ರದೇಶಗಳಿಗೆ ಅಲ್ಲ, ಮನೆಯ ಅಳತೆಗೆ ತಕ್ಕಂತೆ ಬದಲಾಗುತ್ತದೆ.
11. ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ 2 ರೂ. ಹೆಚ್ಚಳ : ಇದನ್ನು ಜನರಿಗೆ ವರ್ಗಾಯಿಸುವುದಿಲ್ಲ ಎನ್ನುವುದೇನೋ ಸರಿ, ಆದರೆ ಕೊಡುವವರಿಗೆ ಕೊಡುವ ಹಣ ಹೋಗುವುದು ಜನರ ಹಣದಿಂದಲೇ ಅಲ್ಲವೇ.. ಕೇಂದ್ರ ಸರ್ಕಾರ ನಾಮ ಗ್ಯಾರಂಟಿ ಅಂತ ಹೇಳಿಲ್ಲ, ಅಷ್ಟೇ.
ಇದೆಲ್ಲದರ ಮಧ್ಯೆ ಸ್ವಲ್ಪ ರಿಲೀಫ್ ಸಿಕ್ಕಿರೋದು ಸಾಲಗಾರಿಗೆ. ಆರ್ ಬಿ ಐ ಸತತ ಎರಡನೇ ತ್ರೈಮಾಸಿಕದಲ್ಲಿ ರೆಪೋ ದರ ಇಳಿಸಿದೆ. ರೆಪೋ ಎಂದರೆ ಬ್ಯಾಂಕಿನವರು, ಆರ್ ಬಿ ಐನಲ್ಲಿ ಇಡಬೇಕಾದ ಠೇವಣಿ. ಅದನ್ನು ಜಾಸ್ತಿ ಮಾಡಿದಷ್ಟೂ, ಬ್ಯಾಂಕುಗಳು ಗ್ರಾಹಕರ ಮೇಲೆ ಬಡ್ಡಿದರ ಹೆಚ್ಚಿಸುತ್ತಾ ಹೋಗುತ್ತವೆ. ಈಗ ಮತ್ತೊಮ್ಮೆ ಶೇ.೦.25ರಷ್ಟು ಇಳಿಸಿದೆ. ಇತ್ತೀಚೆಗೆ ಒಟ್ಟಾರೆ ಇಳಿಕೆಯಾದ ದರ ಶೇ.0.50 ಆಗುತ್ತದೆ. ಕಳೆದ ಬಾರಿ ಇಳಿಸಿದ್ದಾಗ ಒಂದಿಷ್ಟು ಬಡ್ಡಿ ದರ ಇಳಿಕೆಯ ಕೊಡುಗೆ ನೀಡಿದ್ದ ಬ್ಯಾಂಕುಗಳು, ಈ ಬಾರಿಯೂ ಬಡ್ಡಿ ದರ ಇಳಿಸುತ್ತವೆ ಎಂಬ ನಿರೀಕ್ಷೆ ಇದೆ.



