Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಜನವರಿ 7ಕ್ಕೆ ಹೊಸ ರೆಕಾರ್ಡ್‌ ಮಾಡ್ತಾರೆ ಸಿದ್ದರಾಮಯ್ಯ..!

SpeciallU by SpeciallU
January 2, 2026
in News, Politics
Reading Time: 1 min read
0 0
0
ಜನವರಿ 7ಕ್ಕೆ ಹೊಸ ರೆಕಾರ್ಡ್‌ ಮಾಡ್ತಾರೆ ಸಿದ್ದರಾಮಯ್ಯ..!

ಇದೇ ಜನವರಿ 7ಕ್ಕೆ ಸಿದ್ಧರಾಮಯ್ಯ ಹೊಸ ದಾಖಲೆ ಬರೆಯಲಿದ್ದಾರೆ. ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಹಣಕಾಸು ವರ್ಷದ ಬಜೆಟ್‌ ಸಿದ್ಧತೆಗೆ ಅಣಿಯಾಗಿದ್ದು, ಜನವರಿ ಮೊದಲ ವಾರದಿಂದಲೇ ಬಜೆಟ್‌ ಸಿದ್ಧತಾ ಪೂರ್ವಭಾವಿ ಪ್ರಕ್ರಿಯೆಗಳು ಶುರುವಾಗಲಿವೆ. ಆದರೆ ಈ ರೆಕಾರ್ಡ್‌ ಕಥೆ ಬೇರೆ. ಇದು ಅರಸು ದಾಖಲೆ.

ಸಿದ್ದರಾಮಯ್ಯ ಅವರದ್ದು ಜನವರಿ 6ಕ್ಕೆ ಒಂದು ದಾಖಲೆಯಾಗಲಿದೆ. 7 ವರ್ಷ 7 ತಿಂಗಳ ಅಧಿಕಾರದ ಅವಧಿ ಪೂರೈಸಲಿದ್ದಾರೆ. ಒಟ್ಟು 7 ವರ್ಷ 238 ದಿನಗಳು ಕಂಪ್ಲೀಟ್‌ ಆಗಲಿವೆ. ನಂತರ ಶುರುವಾಗುವುದೇ ದಾಖಲೆ. “ಅರಸು ದಾಖಲೆ” ಎಂದರೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸಿಎಂ ಆಗಿದ್ದ ದಿನಗಳ ದಾಖಲೆ, ಅಷ್ಟೇ. ಸಿದ್ದರಾಮಯ್ಯ ಅವರು ತಮ್ಮ ಎರಡು ಅವಧಿಗಳಲ್ಲಿ (2013-2018 ಮತ್ತು 2023ರಿಂದ ಇದುವರೆಗೆ) ಒಟ್ಟು ಅಧಿಕಾರಾವಧಿಯಲ್ಲಿ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿಸಿ ಮೀರಿಸಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ವಿಶೇಷ  ಅಂದ್ರೆ, ಸಿದ್ದರಾಮಯ್ಯ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಸೋಲಿಸಿದ್ದು ದೇವರಾಜ ಅರಸು ಅವರನ್ನೇ. ಆದರೆ ಅದು ಡಿ ದೇವರಾಜ ಅರಸು ಅಲ್ಲ, ಸಿದ್ದರಾಮಯ್ಯ ಸೋಲಿಸಿದ್ದ ನಾಯಕರ ಹೆಸರು ಜಯದೇವರಾಜೇ ಅರಸು ಡಿ. ಮೊದಲ ಬಾರಿ ಗೆದ್ದು ಶಾಸಕರಾಗಿದ್ದು ಚಾಮುಂಡೇಶ್ವರಿ ಕ್ಷೇತ್ರದಿಂದಲೇ. ಆಗ ಸಿದ್ಧರಾಮಯ್ಯ ಲೋಕದಳದಿಂದ ಸ್ಪರ್ಧಿಸಿದ್ದರೆ, ಅವರ ಎದುರಾಳಿ ಜಯದೇವರಾಜೇ ಅರಸು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಸಿದ್ಧರಾಮಯ್ಯ ಅವರಿಗೆ 26,614 ಮತಗಳು ಬಂದಿದ್ದರೆ (ಶೇ.43), ಎದುರಾಳಿ ಜಯದೇವರಾಜೇ ಅರಸು ಅವರಿಗೆ 24,454 ಮತಗಳು ಬಂದಿದ್ದವು. 8271 ಮತಗಳ ಅಂತರದಿಂದ ಗೆದ್ದಿದ್ದರು ಸಿದ್ಧರಾಮಯ್ಯ.

ಈಗ ತಾವು ಮೊದಲ ಬಾರಿ ಸೋಲಿಸಿದ ಶಾಸಕರ ಹೆಸರೇ ಇದ್ದ ದೇವರಾಜ ಅರಸು ಅವರ ಮುಖ್ಯಮಂತ್ರಿ ದಾಖಲೆಯನ್ನು ಮುರಿದಿದ್ದಾರೆ ಸಿದ್ದರಾಮಯ್ಯ. ವಿಶೇಷ ಎಂದರೆ, ಆ ದಾಖಲೆಯನ್ನು ಅವರು ಮುರಿದಿದ್ದು ಕಾಂಗ್ರೆಸ್‌ ಸಿಎಂ ಆಗಿ. ಅವರು ಮೊದಲ ಬಾರಿ ಶಾಸಕರಾದಾಗ ಸೋಲಿಸಿದ್ದು ಕಾಂಗ್ರೆಸ್‌ ನಾಯಕರನ್ನೇ.

ಸಿದ್ದರಾಮಯ್ಯ ಇದುವರೆಗೆ ಒಟ್ಟು 9 ಬಾರಿ ಶಾಸಕರಾಗಿದ್ದಾರೆ. ಒಟ್ಟಾರೆಯಾಗಿ 14 ಚುನಾವಣೆ ಎದುರಿಸಿದ್ದಾರೆ. ಆ 14ರಲ್ಲಿ ಮೊದಲ 7 ಚುನಾವಣೆಗಳನ್ನು ಎದುರಿಸಿದ ಪ್ರತಿ ಚುನಾವಣೆಯಲ್ಲೂ ಅವರಿಗೆ ಕಾಂಗ್ರೆಸ್ಸೇ ಎದುರಾಳಿ. ನಂತರ 8 ಚುನಾವಣೆಗಳಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದಾರೆ. ಆ 8ರಲ್ಲಿ ಒಂದು ಚುನಾವಣೆ ಸೋತಿದ್ದಾರಾದರೂ, ಎಂಎಲ್‌ಎ ಸ್ಥಾನಕ್ಕೆ ಧಕ್ಕೆ ಬಂದಿಲ್ಲ. ಹಾಗೆ ಸೋತಾಗ 2 ಕಡೆ ಎಲೆಕ್ಷನ್ನಿಗೆ ನಿಂತಿದ್ದ ಸಿದ್ದರಾಮಯ್ಯ, ಬಾದಾಮಿಯಲ್ಲಿ ಗೆದ್ದಿದ್ದರು. ಅದರ ಅರ್ಥ ಕಾಂಗ್ರೆಸ್ಸಿಗೆ ಬಂದ ಮೇಲೆ ಸಿದ್ದರಾಮಯ್ಯ ಒಮ್ಮೆಯೂ ಶಾಸಕ ಸ್ಥಾನ ಕಳೆದುಕೊಂಡಿಲ್ಲ.

ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಬಂದ ಮೇಲೆ 2 ಬಾರಿ ವಿರೋಧಪಕ್ಷದ ನಾಯಕರಾಗಿ, ಎರಡು ಬಾರಿ ಸಿಎಂ ಆಗಿ ದಾಖಲೆ ಬರೆದಿದ್ದಾರೆ. ಮೊದಲ ಬಾರಿ ಶಾಸಕರಾದಾಗಲೇ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ, ತಾವು ಗೆದ್ದ ಪ್ರತಿ ಸಂದರ್ಭದಲ್ಲೂ ಅಧಿಕಾರದಲ್ಲಿದ್ದರು ಎನ್ನುವುದು ವಿಶೇಷ. ಸಿದ್ದರಾಮಯ್ಯ ಅವರು ಡಿಸಿಎಂ ಆಗಿಯೂ ಎರಡು ಬಾರಿ ಅಧಿಕಾರದಲ್ಲಿದ್ದರು. ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಈಗಾಗಲೇ ದಾಖಲೆ ಬರೆದಿದ್ದಾರೆ.

ಅಲ್ಲಿಯೂ ಅಷ್ಟೇ, ಸಿದ್ದರಾಮಯ್ಯ ಅವರ ಮೊದಲ ಸಿಎಂ ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನೇ ಬ್ರೇಕ್‌ ಮಾಡಿದ್ದಾರೆ. ರಾಮಕೃಷ್ಣ ಹೆಗಡೆ 13 ಬಾರಿ ಬಜೆಟ್‌ ಮಂಡಿಸಿ ದಾಖಲೆ ಬರೆದಿದ್ದರು. ಈಗ ಸಿದ್ದರಾಮಯ್ಯ ಒಟ್ಟು 16 ಬಾರಿ ರಾಜ್ಯ ಬಜೆಟ್ ಮಂಡಿಸಿ ರೆಕಾರ್ಡ್‌ ಬರೆದಿದ್ದಾರೆ.

ಇಲ್ಲೂ ಒಂದು ಸ್ಪೆಷಲ್‌ ರೆಕಾರ್ಡ್‌ ಇದೆ. ಸಿದ್ದರಾಮಯ್ಯ ಅವರು ಮೊದಲು ಬಜೆಟ್‌ ಮಂಡಿಸಿದ್ದು ದೇವೇಗೌಡರು ಸಿಎಂ ಆಗಿದ್ದ ಅವಧಿಯಲ್ಲಿ. ಸಿದ್ದರಾಮಯ್ಯ ಮೊದಲ ಬಾರಿಗೆ ಬಜೆಟ್‌ ಮಂಡಿಸಿದಾಗ ಅಂದರೆ 1995-96ರಲ್ಲಿ ಬಜೆಟ್‌ ಗಾತ್ರ ಸುಮಾರು 13 ರಿಂದ 14 ಸಾವಿರ ಕೋಟಿಯಷ್ಟೇ ಇತ್ತು. ಈಗ ಅದೇ ಸಿದ್ದರಾಮಯ್ಯ 2024-25ರಲ್ಲಿ 4 ಲಕ್ಷ ಕೋಟಿಯ ಬಜೆಟ್‌ ಮಂಡಿಸಿದ್ದಾರೆ. ಇದು ದಾಖಲೆ.

Tags: #ದೇವರಾಜ ಅರಸು #ಸಿದ್ದರಾಮಯ್ಯ #ಹಣಕಾಸು ಬಜೆಟ್‌ #Devaraja Urs #Siddaramaiah #Financial Budget
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.