ರಾಜ್ಯದಲ್ಲಿ ಹೊಸ ಮದ್ಯದಂಗಡಿ ( liquor shop ) ತೆರೆಯಲು ಅವಕಾಶ ನೀಡುವುದಿಲ್ಲ, ರು, ರಾಜ್ಯದಲ್ಲಿ ಒಂದು ಸಾವಿರ ಮದ್ಯದಂಗಡಿಗಳನ್ನು ( liquor shop ) ತೆರೆಯಲು ಚಿಂತನೆ ನಡೆಸುತ್ತಿರುವುದಾಗಿ ಅಬಕಾರಿ ಸಚಿವರು (excise minister) ಹೇಳಿರುವುದು ಸತ್ಯಕ್ಕೆ ದೂರವಾದ ಮಾತು, ಯಾವುದೇ ಹೊಸ ಮದ್ಯದಂಗಡಿ ತೆರೆಯುವುದಿಲ್ಲ. ಮದ್ಯದಂಗಡಿ ( liquor shop ) ಹೊಸ ಪರವಾನಗಿ ನೀಡುವುದಕ್ಕೆ ಮಹಿಳೆಯರ ವಿರೋಧ ಇದೆ. ಹಣಕಾಸಿನ ಕೊರತೆ ಇದ್ದರೂ ಮದ್ಯದಂಗಡಿ ( liquor shop ) ಹೊಸ ಲೈಸೆನ್ಸ್ ನೀಡಲು ನಾನು ಅನುಮತಿ ನೀಡುವುದಿಲ್ಲ. ಇದು ಸಿಎಂ ಆಗಿರುವ ಸಿದ್ದರಾಮಯ್ಯ CM Siddaramaiah ಅವರು ಮಾಡಿರುವ ವಾಗ್ದಾನ.
ಹಳ್ಳಿ ಹಳ್ಳಿಗೂ ಮದ್ಯದ ಅಂಗಡಿ ( liquor shop ) ಕೊಡುಲು ಆಗೋದಿಲ್ಲ. ಕುಡಿಯುವುದನ್ನು ನೀವು ತಪ್ಪಿಸಲು ಸಾಧ್ಯವಾಗುತ್ತಿಲ್ಲ, ನಾವು ತಪ್ಪಿಸಲು ಸಾಧ್ಯವಾಗುವುದಿಲ್ಲ. ಮದ್ಯದಂಗಡಿ ತೆರೆಯುವ ಬಗ್ಗೆ ಸರ್ಕಾರ ಆರ್ಥಿಕ ಇಲಾಖೆಯ ಮಟ್ಟದಲ್ಲಿ ಆಗಿದ್ದ ತೀರ್ಮಾನ. ಕಳೆದ 30 ವರ್ಷದಿಂದ ಸರ್ಕಾರ ಯಾವುದೇ ( liquor shop ) ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ಕೊಟ್ಟಿಲ್ಲ. ಇದರಿಂದ ಕೆಲವರು ತಮ್ಮ ಲೈಸೆನ್ಸ್ಗಳನ್ನು ಮೂರು ಕೋಟಿ ನಾಲ್ಕು ಕೋಟಿ ರೂಪಾಯಿಗೆ ಮಾರಾಟ ಮಾಡ್ತಿದ್ದಾರೆ. ಎಲ್ಲರೊಂದಿಗೆ ಚರ್ಚೆ ಮಾಡಿ, ಸೂಕ್ತ ಪ್ರದೇಶಗಳಲ್ಲಿ ಬಾರ್ ಗಳನ್ನು ತೆರೆಯಲಾಗುವುದು ಇದು ಡಿಸಿಎಂ ಡಿಕೆ ಶಿವಕುಮಾರ್ DCM DK Shivakumar ಹೇಳುತ್ತಿರುವ ಮಾತು.
ಹಾಗಾದರೆ ಇಬ್ಬರಲ್ಲಿ ಯಾರು ಹೇಳಿದ್ದು ಸರಿ..? ತೀರ್ಮಾನವನ್ನು ಜನರಿಗೇ ಬಿಟ್ಟುಕೊಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೊಂದು ಹೊಸ ಮದ್ಯದಂಗಡಿಗೆ ( liquor shop ) ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ವಿರೋಧವೂ ಇದೆ. ಹೀಗಾದರೆ ನಾವು ಗೃಹಲಕ್ಷ್ಮಿ Gruhalakshmi, ಶಕ್ತಿ ಯೋಜನೆ shakthi scheme ಕೊಟ್ಟು ಉಪಯೋಗವೇನು ಅನ್ನೋದು ಕೆಲವರ ಪ್ರಶ್ನೆ. ಆದರೆ ಗ್ಯಾರಂಟಿ ಭಾಗ್ಯಗಳಿಂದಾಗಿ Gurantee scheme ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡುವುದಕ್ಕೂ ಹಣ ಇಲ್ಲ. ಈಗ ಇರುವ ಮದ್ಯದಂಗಡಿಗಳಿಂದ ನಿರೀಕ್ಷಿತ ಪ್ರಮಾಣದ ಆದಾಯ ಬರುತ್ತಿಲ್ಲ. ಏನು ಮಾಡೋದು ಅನ್ನೋದು ಕೆಲವರ ಪ್ರಶ್ನೆ. ಈ ಎರಡೂ ಪ್ರಶ್ನೆಗಳ ನಡುವೆ ಸಿಎಂ ಮತ್ತು ಡಿಸಿಎಂ ಅವರ ವ್ಯತಿರಿಕ್ತ ಹೇಳಿಕೆಗಳು ಇನ್ನಷ್ಟು ಗೊಂದ ಹುಟ್ಟಿಸಿವೆ.



