ಬಿಜೆಪಿಯಲ್ಲಿದ್ದಾಗ ಯಡಿಯೂರಪ್ಪ ಹೇಗೆ ರಾಜೀನಾಮೆ ಕೊಟ್ಟಿದ್ದರೋ.. ಹಾಗೆಯೇ ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೂ ವೇದಿಕೆ ರೆಡಿಯಾಗುತ್ತಿದೆ ಎಂಬ ಸೂಚನೆಗಳು ಬರುತ್ತಲೇ ಇವೆ. ಡಿಕೆ ಶಿವಕುಮಾರ್ ಪರ ಮತ್ತು ಅದೇ ಕಾಲಕ್ಕೆ ಸಿದ್ಧರಾಮಯ್ಯ ವಿರುದ್ಧ ನಡೆಗಳು ಗೋಚರಿಸುತ್ತಲೇ ಇವೆ. ಎರಡೂ ಪಕ್ಷಗಳು ಲಾಭ, ನಷ್ಟದ ಲೆಕ್ಕಾಚಾರದಲ್ಲಿವೆ. ಇದೆಲ್ಲದರ ಒಂದು explanation ಇಲ್ಲಿದೆ.
ಸಿದ್ಧರಾಮಯ್ಯ ಅವರಿಗೆ ಗೇಟ್ ಪಾಸ್ ರೆಡಿ ಆಗಿದೆ ಅನ್ನೋ ಸಿಗ್ನಲ್ ಸ್ಟೆಪ್ ಬೈ ಸ್ಟೆಪ್ ಸಿಗ್ತಾ ಇದೆ. ಈ ವಿಷಯದಲ್ಲಿ ಜನರಿಗೆ ನೆನಪಾಗ್ತಾ ಇರೋದು ಯಡಿಯೂರಪ್ಪ ಇನ್ಸಿಡೆಂಟ್. ಥೇಟ್.. ಯಡಿಯೂರಪ್ಪ ಅವರಿಗೆ ಆದ ರೀತಿಯೇ.. ಯಡಿಯೂರಪ್ಪ ಅವರಿಗೆ ಆದ ಗತಿನೇ ಸಿದ್ಧರಾಮಯ್ಯ ಅವರಿಗೂ ಆಗುತ್ತೆ ಅನ್ನೋದು ಹಲವರ ನಿರೀಕ್ಷೆ.
2022ರಲ್ಲಿ ಯಡಿಯೂರಪ್ಪ ರಿಸೈನ್ ಘೋಷಣೆ ಮಾಡಿದಾಗ.. ಅದನ್ನ ಬಿಜೆಪಿ ನಾಯಕರೆಲ್ಲ.. ಅವರೇ ಇಷ್ಟಪಟ್ಟು ರಾಜೀನಾಮೆ ಕೊಟ್ಟಿದ್ಧಾರೆ ಅನ್ನೋ ಕಥೆ ಹೇಳಿದ್ರು. ಹಾಗೆ ಹೇಳೋವ್ರಿಗೂ ಇದು ಅದಲ್ಲ, ಈ ಜನ ಪುಂಗಿ ಊದ್ತಿದ್ದಾರೆ ಅನ್ನೋದು ಗೊತ್ತಿತ್ತು. ಈಗ ಅದೇ ರೀತಿ ಸಿದ್ಧರಾಮಯ್ಯ ಅವರಿಗೂ ಆಗುತ್ತಾ..?
ಯಾಕಂದ್ರೆ.. ಯಡಿಯೂರಪ್ಪ ಅವರನ್ನ ಕೆಳಗೆ ಇಳಿಸಿದಾಗ.. ಲಿಂಗಾಯತರ ವೋಟ್ ಬ್ಯಾಂಕ್ ಕೈಕೊಡ್ದೇ ಇರಲಿ ಅಂತಾ ಅದೇ ಲಿಂಗಾಯತ ಸಮುದಾಯಕ್ಕೆ ಸೇರಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ಕಟ್ಟಿದ್ರು.
ಈಗ ಸಿದ್ಧರಾಮಯ್ಯ ಅವರು ರಾಜೀನಾಮೆ ಕೊಟ್ರೆ.. ಅಧಿಕಾರಕ್ಕೆ ಬರೋದು ಡಿಕೆ ಶಿವಕುಮಾರ್. ಆಗ ಸಿದ್ಧರಾಮಯ್ಯ ಅವರ ಜೊತೆ ಇದ್ದ ಹಿಂದುಳಿದ ವರ್ಗದವರು, ದಲಿತರು ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್ಸಿಂದ ದೂರ ಹೋಗದೇ ಇರಲಿ ಅನ್ನೋ ಕಾರಣಕ್ಕಾಗಿ ಸಿದ್ಧರಾಮಯ್ಯ ಅವರಿಗೆ ಒಬಿಸಿ ರಾಷ್ಟ್ರೀಯ ನಾಯಕ ಪಟ್ಟ ಕೊಡೋ ಪ್ರಯತ್ನ ಶುರು ಆಗಿದೆ.
ಜನಕ್ಕೆ ಯಾವ ಅನುಮಾನಾನೂ ಇಲ್ಲ. ಸ್ವಲ್ಪೇ ಸ್ವಲ್ಪ ದಿನಗಳಲ್ಲಿ ನಾನೀಗ ರಾಷ್ಟ್ರಮಟ್ಟದಲ್ಲಿ ಹಿಂದುಳಿದ ವರ್ಗದವರ ಮತಗಳನ್ನ ಒಟ್ಟುಗೂಡಿಸೋ ಜವಾಬ್ದಾರಿ ಹೊತ್ಕೊಂಡಿದ್ದೇನೆ. ಹಾಗಾಗಿ ಪಕ್ಷಕ್ಕಾಗಿ.. ಮುಖ್ಯಮಂತ್ರಿ ಅಧಿಕಾರ ಬಿಡ್ತಿದ್ದೇನೆ. ಜೈ ಹಿಂದ್.. ಜೈ ಕರ್ನಾಟಕ ಮಾತೆ ಅಂಥಾ ಹೇಳಿ ರಾಜೀನಾಮೆ ಕೊಡೋದ್ರ ಮೊದಲ ಹಂತ ಎನ್ನಲಾಗ್ತಾ ಇದೆ.
ಆದರೆ.. ಯಡಿಯೂರಪ್ಪ ಮತ್ತು ಸಿದ್ಧರಾಮಯ್ಯ ಅವರಿಗೆ ಒಂದ್ ವ್ಯತ್ಯಾಸ ಇದೆ. ಎರಡೂ ಸಿಚುಯೇಷನ್ನಿಗಳಿಗೂ ವ್ಯತ್ಯಾಸ ಇದೆ.
ಏನಂದ್ರೆ.. ಯಡಿಯೂರಪ್ಪ.. ಬಿಜೆಪಿಯಲ್ಲಿ ಎಷ್ಟೇ ದೊಡ್ಡ ಲೀಡರ್ ಆದ್ರೂ.. ಆರ್‌ಎಸ್‌ಎಸ್ ಹೇಳಿದ್ದನ್ನ ತಲೆಬಾಗಿ ಕೇಳಿಸ್ಕೊಳ್ತಾ ಇದ್ರು. ಅಪರೂಪ್ಪಕ್ಕೊಂದ್ಸಲ ದೂರ್ವಾಸ ಮುನಿ ಅವತಾರ ತಾಳ್ತಾ ಇದ್ರು ಅನ್ನೋದನ್ನ ಬಿಟ್ರೆ.. ಯಡಿಯೂರಪ್ಪ ಅವರು ಆರ್‌ಎಸ್‌ಎಸ್ ವಿರುದ್ಧ ಹೋದವರಲ್ಲ.
ಆದರೆ.. ಸಿದ್ಧರಾಮಯ್ಯ ಹಾಗಲ್ಲ. ಕಾಂಗ್ರೆಸ್ಸಿಗೆ ಬಂದ ಒಂದೆರಡು ವರ್ಷ ಬಿಟ್ರೆ.. ಮಿಕ್ಕ ಅಷ್ಟೂ ಅವಧಿಯಲ್ಲಿ ತಮಗೆ ಸಿಗಬೇಕಾದ್ದನ್ನ ಪಟ್ಟು ಹಿಡಿದು ಕಿತ್ಕೊಂಡಿದ್ದಾರೆ. ಹೈಕಮಾಂಡ್ ಫೈನಲ್ ಅಂತಾರೆ. ಆದರೆ.. ತಾವು ಹೇಳಿದ್ದನ್ನೇ ಹೈಕಮಾಂಡ್ ಕೂಡಾ ಹೇಳೋ ತರಾ ಮಾಡ್ತಾರೆ. ಅದು ಸಿದ್ದು ಕೆಪಾಸಿಟಿ.
ಇನ್ನು ಬಿಜೆಪಿಯವರು ಯಡಿಯೂರಪ್ಪ ಅವರನ್ನ ಕೆಳಗೆ ಇಳಿಸಿದಾಗ.. ಮುಂದಿನ ಪ್ಲಾನ್ ಏನಂದ್ರೆ… ಏನೂ ಇರಲಿಲ್ಲ. ಅವರಿಗೆ ಒಟ್ಟಿನಲ್ಲಿ ಯಡಿಯೂರಪ್ಪ ರಾಜೀನಾಮೆ ಕೊಡ್ಬೇಕಿತ್ತು. ಅಷ್ಟೇ. ಹೀಗಾಗಿನೇ.. ಅಲ್ಲಿ ಬಸವರಾಜ ಬೊಮ್ಮಾಯಿ ಎಂಬ ಸೌಂಡ್ ಮಾತ್ರ ಬೊಂಬಾಟ್ ಅನ್ನೋ ನಾಯಕ ಸಿಎಂ ಆಗ್ಬೇಕಾಯ್ತು. ಹೀಗಾಗಿ ಬಿಜೆಪಿಗೆ ಹೊಡೆತ ಬಿತ್ತು.
ಆದರೆ.. ಕಾಂಗ್ರೆಸ್ ವಿಷಯದಲ್ಲಿ ಹಾಗಲ್ಲ. ಪಕ್ಷವನ್ನ ಅಧಿಕಾರಕ್ಕೆ ಎಳೆದು ತಂದ ನಾಯಕ ಡಿಕೆ ಶಿವಕುಮಾರ್ ಲೀಡರ್ ಶಿಪ್ ಇದೆ. ಮೆಂಟಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಪ್ರಿಪೇರ್ ಆಗಿದ್ದಾರೆ. ಡಿಕೆ ಅವರನ್ನ ಒಕ್ಕಲಿಗರು ಒಂದು ಹಂತಕ್ಕಾದರೂ ನಮ್ ಜಾತಿ ಲೀಡರ್ ಅಂತಾ ಒಪ್ಕೊಂಡಿದ್ದಾರೆ.
ಅಷ್ಟರಮಟ್ಟಿಗೆ ಕಾಂಗ್ರೆಸ್ ಸೇಫ್. ಬಿಜೆಪಿಯ ಪರಿಸ್ಥಿತಿ ಬರದೇ ಹೋಗಬಹುದು. ಯಾಕಂದ್ರೆ.. ಸಿದ್ಧರಾಮಯ್ಯ ಅವರಿಂದಾಗಿ ಬಂದಿದ್ದಾರೆ ಅಂತಿರೋ ಅಲ್ಪಸಂಖ್ಯಾತ ಅಂದ್ರೆ.. ಮುಸ್ಲಿಮರ ಮತಗಳು ಸಿದ್ಧರಾಮಯ್ಯ ಇದ್ರೂ.. ಹೋದ್ರೂ.. ಚೇಂಜ್ ಆಗಲ್ಲ. ದಲಿತರ ಒಂದು ವರ್ಗ ಕಾಂಗ್ರೆಸ್ ಜೊತೇಲೇ ಇದೆ. ಅದನ್ನ ಹೊತ್ಕೊಂಡ್ ಬಂದೋವ್ರೂ ಸಿದ್ಧರಾಮಯ್ಯ ಅಲ್ಲ. ಅಮ್ಮಮ್ಮಾ ಅಂದ್ರೆ. ಕುರುಬರ ವೋಟು ಸ್ವಲ್ಪ ಆಚೀಚೆ ಆಗಬಹುದು. ಕುರುಬರ ವೋಟು ಹೋದ್ರೆ.. ಇತ್ತ ಕಡೆ ಒಕ್ಕಲಿಗರ ವೋಟು ಬರುತ್ತೆ.
ಯಡಿಯೂರಪ್ಪ ರಾಜೀನಾಮೆ ನಂತರ.. ಲಿಂಗಾಯತರ ಅರ್ಧಕ್ಕರ್ಧ ವೋಟು ಪಕ್ಷದಿಂದ ದೂರ ಆದ ಹಾಗೆ.. ಸಿದ್ಧರಾಮಯ್ಯ ಅವರಿಂದ ಆಗಲ್ಲ ಅನ್ನೋದು ಲೆಕ್ಕಾಚಾರ. ಆದರೆ.. ಅದೆಲ್ಲದಕ್ಕೂ ಮೊದ್ಲು.. ಸಿದ್ಧರಾಮಯ್ಯ ರಾಜೀನಾಮೆ ಕೊಡ್ಬೇಕು. ಡಿಕೆ ಸಿಎಂ ಆಗ್ಬೇಕು. ಸಿದ್ಧರಾಮಯ್ಯ ಅವರಿಗೆ ಯಾವುದೂ ಈಸಿಯಾಗಿ ಸಿಕ್ಕಿಲ್ಲ. ಎಲ್ಲವನ್ನೂ ಫೈಟ್ ಮಾಡ್ಕೊಂಡೇ ಪಡ್ಕೊಂಡಿರೋದು. ಹಾಗೆ ಕಷ್ಟಪಟ್ಟು ಹೊಡೆದಾಡಿ ಗಿಟ್ಟಿಸ್ಕೊಂಡಿದ್ದನ್ನ ಸಡನ್ ಆಗಿ ಕೊಟ್ಬಿಡು ಅಂದ್ರೆ.. ಆಯ್ತು ಅಂತಾ ಕಣ್ಣೀರು ಹಾಕ್ಕೊಂಡು ಕೊಡೋದಿಕ್ಕೆ ಅವರು ಯಡಿಯೂರಪ್ಪ ಅಲ್ಲ. ಸಿದ್ಧರಾಮಯ್ಯ.



