ರಾಜ್ಯದಲ್ಲಿ ಐದು ವರ್ಷಗಳ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ಇಲ್ಲಿ ಕೆಲಸ ಇಲ್ಲದವರು ಮುಖ್ಯಮಂತ್ರಿ ಬದಲಾವನೆ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲಸ ಇಲ್ಲದೇ ಇರೋರು ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾತನಾಡ್ತಾರೆ. ನಮ್ಮ ಸರ್ಕಾರ ಸುಭದ್ರವಾಗಿದೆ. ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡೋದು ಹೈಕಮಾಂಡ್‌ಗೆ ಬಿಟ್ಟಿರೋದು. ನಮ್ಮದು ನ್ಯಾಷನಲ್ ಪಾರ್ಟಿ, ಏನೇ ತೀರ್ಮಾನ ಆದ್ರು ಹೈಕಮಾಂಡ್ ಜೊತೆ ಚರ್ಚೆ ಮಾಡಿನೇ ಆಗೋದು.ಇದು ಸಿದ್ದರಾಮಯ್ಯ ಅವರ ಹೇಳಿಕೆ.
CM will not change, complete 5 years I am the one and only CM : CM Siddaramaiah clarifies
ಆ ಹೇಳಿಕೆ ಪ್ರಕಾರ ಯಾವ ರೀತಿಯ ಒಪ್ಪಂದಗಳೂ ನಡೆದಿಲ್ಲ. ಎಲ್ಲವೂ ಹೈಕಮಾಂಡ್ ಮಟ್ಟದಲ್ಲಿಯೇ ಆಗಿದೆ ಎಂಬ ಸಂದೇಶ ರವಾನಿಸಿದ್ದಾರಷ್ಟೇ ಅಲ್ಲ, ಐದೂವರ್ಷ ತಾವೇ ಸಿಎಂ ಆಗಿರುತ್ತೇವೆ ಎನ್ನುವ ಮೂಲಕ ಅತ್ಯಂತ ಸ್ಪಷ್ಟ ಸಂದೇಶವನ್ನೂ ಕೊಟ್ಟಿದ್ಧಾರೆ.
DK Shivakumar will become cm after 2.5 years. Rumors are rumors
ಇತ್ತೀಚೆಗೆ ಎರಡೂವರೆ ವರ್ಷ ಸಿದ್ದು ಸಿಎಂ, ಇನ್ನೆರಡೂವರೆ ವರ್ಷ ಡಿಕೆ ಸಿಎಂ ಎಂಬ ವಾದ ಕೇಳಿ ಬಂದಿತ್ತು. ಡಿಕೆ ಶಿವಕುಮಾರ್ (DK Shivakumar) ಬಣದಲ್ಲಿ ಗುರುತಿಸಿಕೊಂಡಿರುವ ರವಿ ಗಾಣಿಗ, ಶಿವಗಂಗಾ ಬಸವರಾಜ್, ಇಕ್ಬಾಲ್ ಹುಸೇನ್, ಕದಲೂರು ಉದಯ್ (ravi ganiga, Shivaganga Basavaraj, Iqbal Hussain and kadaluru uday) ಮೊದಲಾಧವರು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂಬರ್ಥದ ಹೇಳಿಕೆ ಕೊಟ್ಟಿದ್ದರು.
ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರ ಹೇಳಿಕೆಗಳಿಗೂ ಇದಕ್ಕೂ ತಾಳಮೇಳ ಕೂಡಿ ಬಂದು ವಿವಾದ ಸೃಷ್ಟಿಯಾಗಿತ್ತು. ಇವುಗಳಿಗೆ ಫುಲ್ ಸ್ಟಾಪ್ ನೀಡುವ ಪ್ರಯತ್ನ ಮಾಡಿದ್ದಾರೆ ಸಿದ್ದರಾಮಯ್ಯ.
ಇದಕ್ಕೂ ಮೊದಲು ವಿವಾದ ತಾರಕಕ್ಕೇರುತ್ತಿರುವುದನ್ನ ಗಮನಿಸಿದ ಕಾಂಗ್ರೆಸ್ ಹೈಕಮಾಂಡ್ ಸುರ್ಜೇವಾಲ ಅವರನ್ನು ಕಳಿಸಿ ಎಲ್ಲರಿಗೂ ಎಚ್ಚರಿಕೆ ಸಂದೇಶ ಕೊಡಿಸಿತ್ತು. ಡಿಕೆ ಮತ್ತು ಸಿದ್ದು ಇಬ್ಬರಿಗೂ ತಮ್ಮ ತಮ್ಮ ಬಣದವರನ್ನು ಸೈಲೆಂಟ್ ಆಗಿರುವಂತೆ ನೋಡಿಕೊಳ್ಳಿ ಎಂದು ಹೇಳಿತ್ತು. ಬೆನ್ನಲ್ಲೇ ಸಿದ್ದರಾಮಯ್ಯ ಅವರ ಈ ಹೇಳಿಕೆ ಹೊರಬಿದ್ದಿದೆ.
ಹಾಗಂತ ಎಲ್ಲವೂ ತಣ್ಣಗಾಗಿಲ್ಲ. ನಾನು ಏನೂ ಮಾತನಾಡುವುದಿಲ್ಲ ಎಂದಿರುವ ಡಿಕೆ ಶಿವಕುಮಾರ್, ಅತ್ತ ಸಿದ್ದರಾಮಯ್ಯ ಅವರ ಮಾತಿಗೆ ಸಹಮತವನ್ನೂ ತೋರಿಸಿಲ್ಲ. (ಅಟ್‌ಲೀಸ್ಟ್ ಬಹಿರಂಗವಾಗಿಯಾದರೂ) ವಿರೋಧವನ್ನೂ ವ್ಯಕ್ತಪಡಿಸಿಲ್ಲ. ಆದರೆ ಡಿಕೆ ಬಣದ ಶಾಸಕರು ಸೈಲೆಂಟ್ ಆಗಿಲ್ಲ. ಮುಂದಿನ ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂದ ಮಾದ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿಕೆ
ಪಕ್ಷದ ಅಧ್ಯಕ್ಷರಾಗಿ ಸಂಘಟನೆ ಮಾಡಿದ್ದಾರೆ. ಕಳೆದ ಚುನಾವಣೆ ವೇಳೆ ಶಕ್ತಿ ಮೀರಿ ಕೆಲಸ ಮಾಡುವ ಮೂಲಕ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್‌ಗೆ ಅವಕಾಶ ಸಿಗಲೇಬೇಕು ರಾಜ್ಯದ ಜನತೆ ಕೂಡಾ ಅದನ್ನೇ ಬಯಸಿದ್ದಾರೆ ಎನ್ನುವ ಮೂಲಕ ಡಿಕೆ ಶಿವಕುಮಾರ ಪರ ಬ್ಯಾಟಿಂಗ್ ಮಾಡಿದ ರಾಮನಗರ ಶಾಸಕ ಇಕ್ಬಾಲ್ ಹುಸೇನ್. ಶಾಸಕ ಕದಲೂರು ವಿಜಯ್ ಅವರು ಒಂದು ಹಂತದವರೆಗೆ ಸೇಫ್ ಗೇಮ್ ಆಡಿ, ಹೈಕಮಾಂಡ್ ತೀರ್ಮಾನ ಮಾಡಿದರೆ ಡಿಕೆ ಶಿವಕುಮಾರ್ ಅವರು ಸಿಎಂ ಆಗುವುದಕ್ಕೆ ಬೆಂಬಲ ಎಂದಿದ್ದಾರೆ.
ಒಟ್ಟಿನಲ್ಲಿ ಸಿಎಂ ಯಾರು ಎನ್ನುವ ಚರ್ಚೆ ಕಾಂಗ್ರೆಸ್‌ನಲ್ಲಿ ಬೆಂಕಿಯಾಗಿ ಸುಡುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳೂ ಆಗಿಲ್ಲ.



