ಜಾತಿಗಣತಿ ವರದಿ (cast survey) ಜಾರಿ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಈಗಲೂ ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ. ಇದು ಡಿಸಿಎಂ ಡಿಕೆ ಶಿವಕುಮಾರ್ ವಾದ. ಜಾತಿ ಗಣತಿ ವರದಿ ಬಿಡುಗಡೆ ಬೇಡ ಎಂಬ ಒಕ್ಕಲಿಗ ಸಮುದಾಯದವರ ಮನವಿ ಪತ್ರಕ್ಕೆ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ DCM DK Shivakumar ಸಹಿ ಹಾಕಿದ್ಧಾರೆ. ‘ನಾನು ಸಹಿ ಮಾಡಬಾರದೇ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜದ ಮೇಲಿನ ಗೌರವ ಹಾಗೂ ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲಾ ನಾಯಕರಲ್ಲೂ ಇರುತ್ತದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ ಜಾತಿ ಗಣತಿ ಬಿಡುಗಡೆ ಮಾಡುತ್ತೇವೆ ಎನ್ನುತ್ತಿರುವುದು ಸಿದ್ದರಾಮಯ್ಯ CM Siddaramaiah. ಜಾತಿ ಗಣತಿ ವರದಿ ಪರವಾಗಿ ಸತೀಶ್ ಜಾರಕಿಹೊಳಿ Satheesh jarakiholi, ಮಹದೇವಪ್ಪ Mahadevappa, ಜಮೀರ್ ಅಹ್ಮದ್ Zameer Ahmad ಮೊದಲಾದವರು ಇದ್ಧಾರೆ. ಆದರೆ ವಿರುದ್ಧವಾಗಿ ಇರುವುದು ಕೇವಲ ಡಿಕೆ ಶಿವಕುಮಾರ್ ಒಬ್ಬರೇ ಅಲ್ಲ, ರವಿ ಗಾಣಿಗ, ಶಿವಲಿಂಗ ಬಸವರಾಜು, ಚೆಲುವರಾಯ ಸ್ವಾಮಿ ಹಾಗೂ ಶಾಮನೂರು ಶಿವಶಂಕರಪ್ಪ, ಶಾಮನೂರು ಮಲ್ಲಿಕಾರ್ಜುನ್ ಹಲವು ವೀರಶೈವ ಲಿಂಗಾಯತ ಮುಖಂಡರೂ ಇದ್ಧಾರೆ.
ಇನ್ನು ಬಿಜೆಪಿಯಲ್ಲೂ ಅಷ್ಟೇ, ಬಿಜೆಪಿ್ ರಾಜ್ಯಾಧ್ಯಕ್ಷ ವಿಜಯೇಂದ್ರ Vijayendra yeddyurappa, ಪ್ರತಿಪಕ್ಷ ನಾಯಕ ಆರ್. ಅಶೋಕ್ R̤ Ashok, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ HD Kumaraswamy ಸೇರಿದಂತೆ ಬಹುತೇಕ ಎಲ್ಲರೂ ವಿರೋಧಿಸಿದ್ಧಾರೆ. ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ ಪಕ್ಷಬೇಧ ಮರೆತು ನಡೆಯುತ್ತಿದೆ. ಕೆಲ ಸಮುದಾಯ ಹಾಗೂ ಅದರ ನಾಯಕರಿಗೆ ಗೊಂದಲಗಳಿವೆ. ಇಷ್ಟಕ್ಕೂ ವಿರೋಧ ಏಕೆ..?
ಜಾತಿಗಣತಿಗೆ ವಿರೋಧ ಏಕೆ?
ಜಾತಿ ಗಣತಿ ಎನ್ನುವುದು ಟಿವಿ ಚಾನೆಲ್ಲುಗಳು ನಡೆಸುವ ಸಮೀಕ್ಷೆಗಳಂತಲ್ಲ. ಪ್ರತಿಯೊಬ್ಬರನ್ನೂ ಸಂಪರ್ಕಿಸಿ, ಅವರ ಧರ್ಮ, ಜಾತಿ, ಉಪಜಾತಿ, ಆರ್ಥಿಕತೆ ಎಲ್ಲವನ್ನೂ ನಮೂದಿಸಬೇಕು. ಆದರೆ ಸುಮ್ಮನೆ ಹುಡುಕ ಹೊರಟರೆ 10 ಜನರಲ್ಲಿ ಐವರು ನಮ್ಮ ಮನೆಗೆ ಸರ್ವೆಗೆ ಬಂದೇ ಇಲ್ಲ ಎನ್ನುತ್ತಾರೆ. ಹಾಗಾದರೆ ಸರ್ಕಾರ ಸರ್ವೆ ಮಾಡಿದ್ದಾದರೂ ಏನನ್ನು?
ಜಾತಿ ಗಣತಿ ಎನ್ನುವುದು ಯಾವುದೋ ಕೋಣೆಯಲ್ಲಿ ಕೂತುಕೊಂಡು ದಾಖಲಿಸಬಹುದಾದ ವರದಿ ಅಲ್ಲ. ಎಲ್ಲಿಯೋ.. ಯಾವುದೋ ಕೋಣೆಯಲ್ಲಿ ಕುಳಿತು ತಯಾರಿಸಿದ ವರದಿ ಸರ್ಕಾರದ ಸಮೀಕ್ಷೆ ಹೇಗಾಗುತ್ತೆ?
ಸಮೀಕ್ಷೆಯ ಸತ್ಯಾಸತ್ಯತೆ ಬಗ್ಗೆಯೇ ಗೊಂದಲಗಳಿರುವಾಗ ಮೂಲ ಪ್ರತಿಗಳು ನಾಪತ್ತೆ ಎಂದು ಖುದ್ದು ಸಮಿತಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ಧಾರೆ. ಅಧ್ಯಕ್ಷರಿಗೇ ಸಿಕ್ಕದ ಸಮೀಕ್ಷೆಯ ಮೂಲ ಪ್ರತಿಗಳು ಎಲ್ಲಿ?
ಸಮೀಕ್ಷೆಯ ಬಗ್ಗೆ ಅಂಕಿ ಅಂಶಗಳ ಬಗ್ಗೆಯೇ ಅನುಮಾನಗಳಿವೆ. ಹೀಗಿರುವಾಗ ಪರಿಶೀಲನೆ ನಡೆಸುವುದಕ್ಕೂ ಮೂಲ ಪ್ರತಿಗಳಿಲ್ಲ ಎಂದರೆ ಸಮೀಕ್ಷೆ ನಡೆಸಿದ್ದು ನಿಜವಾ..? ಸುಳ್ಳಾ..?
ಜಾತಿಗಳ ಮೇಲೆ ಜಾತಿಗಳನ್ನು ಎತ್ತಿಕಟ್ಟುವುದಕ್ಕೆ ನಡೆದ ಕುತಂತ್ರ ಎನ್ನುವುದು ಹಲವು ನಾಯಕರ ಆರೋಪ. ಇವುಗಳಿಗೆ ದಾಖಲೆಗಳ ಮೂಲಕವೇ ಉತ್ತರ ಕೊಡಬೇಕಲ್ಲವೇ.. ಅದನ್ನು ಬಿಟ್ಟು ಕೇವಲ ಹೇಳಿಕೆಗಳ ಮೂಲಕ ಉತ್ತರ ಕೊಡುತ್ತಿರುವುದು ಏಕೆ?
ಇವಿಷ್ಟೇ ಅಲ್ಲ, ಜಾತಿ ಗಣತಿ ವರದಿ ಬಿಡುಗಡೆ ಬೇಡ. ಜಾತಿ ಗಣತಿಯನ್ನು ಸರಿಯಾಗಿ ಮಾಡಿಸಿ ಬಿಡುಗಡೆ ಮಾಡಿ ಎನ್ನುವ ಆಗ್ರಹಕ್ಕೆ ಉತ್ತರವೂ ಸಿಗುತ್ತಿಲ್ಲ.
ಇಂತಹ ಹಲವು ಪ್ರಶ್ನೆಗಳನ್ನು ಕುಮಾರಸ್ವಾಮಿ, ಅಶೋಕ್ ಸೇರಿದಂತೆ ಹಲವರು ಎತ್ತಿದ್ಧಾರೆ. ಸಿದ್ದರಾಮಯ್ಯ ಅವರ ಸರ್ಕಾರದ ಸಚಿವರೇ ಈ ಪ್ರಶ್ನೆ ಕೇಳುತ್ತಿದ್ಧಾರೆ.
ರ್ನಾಟಕ ರಾಜ್ಯದಲ್ಲಿ 2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಅವಧಿಯಲ್ಲಿಯೇ ಜಾತಿಗಣತಿಯನ್ನು (ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಮಾಡಿಸಿದ್ದರು. ಆದರೆ, ಕೆಲವು ಪ್ರಭಲ ಸಮುದಾಯಗಳು ಜಾತಿಗಣತಿ ವರದಿ ಬಿಡುಗಡೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಪುನಃ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 6 ತಿಂಗಳಲ್ಲಿ ಜಾತಿಗಣತಿ ವರದಿಯನ್ನು ಸ್ವೀಕರಿಸಿದ್ದಾರೆ. ‘ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಡೆಸಿದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸಿ, ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ’ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ಜೊತೆಗೆ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಗೆ ಟ್ಯಾಗ್ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಡುವ ಮೊದಲ ಕೆಲಸ ಜಾತಿಗಣತಿ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿದೆ. ಜಾತಿಗಣತಿ ನಡೆಸಿದಾಗಲೇ ಭಾರತ ಮಾತೆಗೆ ಜಯ’ ಎಂದ ರಾಹುಲ್‌ಗಾಂಧಿ ಹೇಳಿರುವುದನ್ನು ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್ ಪೋಸ್ಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಸ್ವಪಕ್ಷೀಯ ಪ್ರಬಲ ಸಮುದಾಯದ ನಾಯಕರು ಜಾತಿಗಣತಿಗೆ ವಿರೋಧ ವ್ಯಕ್ತಪಡಿಸುವುದನ್ನು ತಡೆದಿದ್ದಾರೆ.



