Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಸ್ಟಾಲಿನ್ ಬಗ್ಗೆ ತುಟಿ ಬಿಚ್ಚದ ಸಿದ್ದರಾಮಯ್ಯ, ಡಿಕೆಶಿ.. ಮೋದಿ ವಿರುದ್ಧ ಸಿಡಿಮಿಡಿ : ನೀರಿನಲ್ಲೂ ರಾಜಕೀಯ  : ಕನ್ನಡ ಸಂಘಟನೆಗಳೂ ಇಬ್ಭಾಗ

SpeciallU by SpeciallU
September 30, 2023
in News, Politics
Reading Time: 1 min read
0 0
0
ಸ್ಟಾಲಿನ್ ಬಗ್ಗೆ ತುಟಿ ಬಿಚ್ಚದ ಸಿದ್ದರಾಮಯ್ಯ, ಡಿಕೆಶಿ.. ಮೋದಿ ವಿರುದ್ಧ ಸಿಡಿಮಿಡಿ : ನೀರಿನಲ್ಲೂ ರಾಜಕೀಯ  : ಕನ್ನಡ ಸಂಘಟನೆಗಳೂ ಇಬ್ಭಾಗ

ಇದು ಈ ಹಿಂದೆ ಆಗಿರಲಿಲ್ಲ. ರಾಜಕೀಯ ಪಕ್ಷಗಳ ಮಾತು ಬಿಡಿ.. ಇದೇ ಮೊದಲ ಬಾರಿಗೆ  ಕನ್ನಡ ಪರ ಸಂಘಟನೆಗಳು ಇಬ್ಭಾಗವಾಗಿವೆ.  ಅವರ ಪ್ರತಿಭಟನೆಗೆ ಇವರು ಹೋಗಲ್ಲ. ಇವರ ಪ್ರತಿಭಟನೆಗೆ ಅವರು ಬರಲ್ಲ. ಹೀಗಾಗಿ ಒಂದೇ ವಾರದಲ್ಲಿ ಎರಡೆರಡು ಬಂದ್ ಕಂಡರೂ ಫಲ ಸಿಕ್ಕಿಲ್ಲ.

ಮಂಗಳವಾರದ ಬಂದ್ನಲ್ಲೂ (Tuesday bundh) ಶುಕ್ರವಾರದ ಬಂದ್ನಲ್ಲೂ (Friday bundh) ವ್ಯತ್ಯಾಸ ಏನೂ ಇರಲಿಲ್ಲ. ಶುಕ್ರವಾರದ ಬಂದ್ ದಿನ ಈದ್ ಮಿಲಾದ್ (Eid milad) ಶುಭಾಶಯ ಕೋರುವುದಕ್ಕೆ ಕಾಂಗ್ರೆಸ್ ಕಚೇರಿಗೆ ಹೋಗಿದ್ದರು ಕರವೇ ನಾರಾಯಣ ಗೌಡ (ka.ra.ve. Narayanagowda). ಇನ್ನೂ ಕೆಲವು ಸೋಷಿಯಲ್ ಮೀಡಿಯಾ ಹೋರಾಟಗಾರರು, ನಮ್ಮನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ ಎಂದು ಟ್ವೀಟ್ ಮಾಡಿದರು. ವಾಟಾಳ್ ನಾಗರಾಜ್ (Vatal nagaraj) ಬುರುಕಾ ಹಾಕಿಕೊಂಡು ಪ್ರತಿಭಟನೆ ಮಾಡಿದ್ರು. ಚಿತ್ರ ನಟ ನಟಿಯರೆಲ್ಲ ಒಗ್ಗಟ್ಟಾಗಿ ನಿಂತರು. ಆದರೆ ಸರ್ಕಾರಕ್ಕೆ ತಾಕಲೇ ಇಲ್ಲ. ಇವರು ಕೂಗಿದಂತೆ ಮಾಡಿದ್ರ. ಅವರು ಕೇಳಿಸಿಕೊಂಡವ್ರಂತೆ ಇದ್ದರು.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಇಲ್ಲಿ ಬಂದ್ ತಾರಕಕ್ಕೇರುವ ಹೊತ್ತಿಗೆ ಸಿದ್ದರಾಮಯ್ಯ (Cm siddaramaiah) ಒಂದು ಟ್ವೀಟ್ ಮಾಡಿದ್ರು. ನನ್ನ ನಡೆ ಕಾವೇರಿ ಕಡೆಗೆ. ಅದು ನಮ್ಮ ಬದ್ಧತೆ ಎಂದು ಮೋದಿ ಫೋಟೋ ಟ್ವೀಟ್ ಮಾಡಿದ್ರು. ಮೋದಿ (PM Narendra modi) ಚುನಾವಣೆಯತ್ತ ಹೋಗ್ತಾರೆ. ನಾವು ಕಾವೇರಿಯತ್ತ ನೋಡುತ್ತೇವೆ ಎಂದರು.

ಸಿದ್ದರಾಮಯ್ಯ ಇದ್ಯಾಕೆ ಹೀಗಾದ್ರು ಅನ್ನೋ ಪ್ರಶ್ನೆ ಕಾಡದೇ ಇರದು. ಏಕೆಂದರೆ ಕಾವೇರಿ ವಿಷಯದಲ್ಲಿ ಸಿಎಂ ಆಗಿದ್ದರೂ, ರಾಜ್ಯ ವಕೀಲರೊಡನೆ ಸಭೆ ನಡೆಸಿದ್ದು ಒಮ್ಮೆ ಮಾತ್ರ. ಅದೂ ಶುಕ್ರವಾರದ ಬಂದ್ ದಿನ. ನ್ಯಾಯಮಂಡಳಿ ಕೂಡಾ ಪ್ರಾಧಿಕಾರದ ತೀರ್ಪನ್ನೇ ಎತ್ತಿ ಹಿಡಿದ ಮೇಲೆ. ಈ ಸಭೆಯನ್ನು ಜೂನ್-ಜುಲೈ ತಿಂಗಳಲ್ಲಿ ಮಾಡಿ, ಆ ದಿನವೇ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರೆ ಈ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ ಎನ್ನುವುದು ತಜ್ಞರ ವಾದ. ಸುಪ್ರೀಂಕೋರ್ಟ್ ವಕೀಲರೂ ಆಗಿರುವ ಧನಂಜಯ್, ಕಾತರಕಿಯವರು ಹೇಳುತ್ತಿರುವುದೂ ಇದನ್ನೇ.

ಅಂದಹಾಗೆ ಈ ಕ್ಷಣದವರೆಗೆ ಸಿದ್ದರಾಮಯ್ಯ ತಮಿಳುನಾಡು ಸಿಎಂ ಸ್ಟಾಲಿನ್ (CM Stalin) ವಿರುದ್ಧ ಒಂದು ಟೀಕೆಯನ್ನೂ ಮಾಡಿಲ್ಲ. ನಮಗೆ ಈ ಪರಿಸ್ಥಿತಿ ಇರುವಾಗ ನೀರು ಕೇಳ್ತಿರೋದು ತಪ್ಪಲ್ವಾ ಎಂದು ಕೂಡಾ ಪ್ರಶ್ನೆ ಮಾಡಿಲ್ಲ. ಆದರೆ ಪ್ರಧಾನಿ ಮೋದಿಯನ್ನು ಟೀಕಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ.ನಮ್ಮ ಬದ್ಧತೆ ಎನ್ನುವ ಈ ಟ್ವೀಟ್ ಕೂಡಾ ಅಷ್ಟೆ.

ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಬೇಕು ಎನ್ನುತ್ತಿರುವ ಸಿದ್ದರಾಮಯ್ಯ, ಒಟ್ಟಿಗೇ ಸಭೆ ನಡೆಸೋಣ, ಮಾತುಕತೆ ಮಾಡೋಣ ಎಂದು ತಮಿಳುನಾಡಿ ಸಿಎಂ ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆಯೇ.. ಫೋನ್ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದಿಲ್ಲ. ಮಾತುಕತೆಯ ಪ್ರಯತ್ನವನ್ನು ಮೊದಲು ನಡೆಸಬೇಕಾದ್ದು ರಾಜ್ಯ ಸರ್ಕಾರ. ವಕೀಲರ ಸಭೆ, ಸುಪ್ರೀಂಕೋರ್ಟಿಗೆ ಮೇಲ್ಮನವಿ ವಿಷಯದಲ್ಲೂ ಕೇಂದ್ರವನ್ನೇ ದೂರಿದ ರಾಜ್ಯ ಸರ್ಕಾರ, ಈ ಸಿಎಂ ಸಭೆಗೂ ಪ್ರಧಾನಿಯನ್ನೇ ಬೊಟ್ಟು ಮಾಡುತ್ತಿದೆ.

ಕನಿಷ್ಠ ಪಕ್ಷ ಮಾತುಕತೆಯ ಪ್ರಸ್ತಾಪ ಇಟ್ಟು, ಅವರು ಯೆಸ್ ಅಂತಾರೋ.. ನೋ ಅಂತಾರೋ.. ಆದ ಮೇಲೆ ತಾನೇ ಪ್ರಧಾನಿಯನ್ನು ಕೇಳೋದು. ಕಾವೇರಿ ನೀರು ಕಿತ್ತುಕೊಳ್ತಿರೋ ಸ್ಟಾಲಿನ್ ಮೇಲಿರುವ ಪ್ರೀತಿ, ಪ್ರಧಾನಿಯ ಮೇಲಿಲ್ಲ. ಇರಲಿ ರಾಜಕೀಯ ಅನ್ನೋಣ ಅಂದ್ರೆ, ಇದು ರಾಜ್ಯದ ಕುಡಿಯುವ ನೀರಿನ ವಿಷಯ.

ಇತ್ತ ಬಿಜೆಪಿ ಮಾಡ್ತಿರೋದು ಅಷ್ಟರಲ್ಲೇ ಇದೆ. ಯಾರೋ ಕರೆಯುವ ಪ್ರತಿಭಟನೆಗೆ ಬಂದು ಕೂರೋದು, ಸರ್ವಪಕ್ಷಗಳ ಸಭೆಯಲ್ಲಿ ನೀವು ಮಾಡಿದ್ದಕ್ಕೆಲ್ಲ ಓಕೆ ಅನ್ನೋದು, ಹೊರಬಂದ ಮೇಲೆ ಟೀಕೆ ಮಾಡೋದು.. ಬಿಜೆಪಿ ಇಷ್ಟೇ ಮಾಡ್ತಿರೋದು. ಅದರ ಮೇಲೆ ಪ್ರಯತ್ನವನ್ನೂ ಮಾಡಿಲ್ಲ.

ಕಾರಣ ಏನೆಂದು ನೋಡಿದರೆ, ತಮಿಳುನಾಡಿನಲ್ಲಿ ಶತಾಯಗತಾಯ ಗೆಲ್ಲಬೇಕು ಅನ್ನೋದು ಕಾಂಗ್ರೆಸ್ ಗುರಿ. ಈಗತಾನೇ ಅಧಿಕಾರಕ್ಕೆ ಬಂದು ಅನ್ನ, ದುಡ್ಡು, ಟಿಕೆಟ್ ಕೊಟ್ಟಿರುವ ಕಾಂಗ್ರೆಸ್ಸಿಗೆ ಗೆಲ್ತೀವಿ ಬಿಡ್ರಿ ಅನ್ನೋ ಆತ್ಮವಿಶ್ವಾಸ ಇದ್ದರೆ, ಅತ್ತ ತಮಿಳುನಾಡಿನಲ್ಲಿ ಈಗ ಕೇಳಿಬರುತ್ತಿರುವ ಬಿಜೆಪಿ ಪರ ಧ್ವನಿಯನ್ನು ಯಾಕೆ ಕಳ್ಕೋಬೇಕು ಅನ್ನೋ ಲೆಕ್ಕಾಚಾರ ಬಿಜೆಪಿಯದ್ದು. ಒಟ್ಟಿನಲ್ಲಿ ಇವರನ್ನು ನಂಬಿ ಕೆಡುತ್ತಿರುವುದು ಮಾತ್ರ ರಾಜ್ಯದ ಮತದಾರ.

ಅಂದಹಾಗೆ ಕಾವೇರಿ ವಿಷಯದಲ್ಲಿ ಮಾತ್ರ ಕನ್ನಡ ಸಂಘಟನೆಗಳು ಧ್ವನಿ ಎತ್ತುತ್ತವೆ ಅನ್ನೋ ಪ್ರಶ್ನೆಗೆ ರಾಜ್ಯದ ಅರ್ಧಕ್ಕರ್ಧ ಜನ ಬದುಕುತ್ತಿರೋದು ಕಾವೇರಿ ಕೊಳ್ಳದಲ್ಲಿ. ಹಾಗಂತ ಮಹದಾಯಿ, ಕೃಷ್ಣೆ ಜನರಿಗೆ ತೊಂದರೆಯಾದಾಗ ಇಲ್ಲಿನವರು ಧ್ವನಿ ಎತ್ತುವುದು ಉತ್ತರ ಅಲ್ಲ. ಉತ್ತರ ಕರ್ನಾಟಕದ ಬಹುತೇಕ ಜನ ಕಾವೇರಿ ಕೊಳ್ಳಲ್ಲಿ ಬದುಕು ಕಟ್ಟಿಕೊಂಡು ಕುಡಿಯುತ್ತಿರುವುದು ಈಗ ಕಾವೇರಿ ನೀರನ್ನೇ.

ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.