ರಾಜ್ಯ ಸರ್ಕಾರದ ಉಚಿತ ೧೦ ಅಕ್ಕಿ ಪರವಾಗಿ ಐದು ಕೆಜಿ ಅಕ್ಕಿ ಬದಲಾಗಿ ಹಣ ನೀಡುವ ವಿಚಾರದ ಸಾಧನೆ ಮಾಡಿದೆ. ರೇಷನ್ ಕಾರ್ಡುದಾರರಿಗೆ ಹಣ ನೀಡುವ ಕೆಲಸ ಬಹುತೇಕ ಪೂರ್ಣವಾಗುವ ಹಂತದಲ್ಲಿದೆ. ಐದು ಕೆಜಿ ಅಕ್ಕಿ ಹೊಂದಾಣಿಕೆ ಆಗದ ಹಿನ್ನೆಲೆ ಉಳಿದ ಐದು ಕೆಜಿ ಅಕ್ಕಯ ಹಣವನ್ನು ಡಿಬಿಟಿ ಮೂಲಕ ಹಣ ನೀಡುತ್ತಿದೆ. ಅಕ್ಕಿ ಬದಲು ಹಣ ನೀಡಿದರೆ ಪ್ರತಿ ತಿಂಗಳು 700 ಕೋಟಿ ಹಣ ಖರ್ಚು ತಗುಲುತ್ತಿದೆ. ಪ್ರಾಯೋಗಿಕವಾಗಿ ಐದು ನಗರದಲ್ಲಿ ಡಿಬಿಟಿ ಮೂಲಕ ವರ್ಗಾವಣೆ ಯಶಸ್ವಿಯಾಗಿದೆ. ಮೈಸೂರು. ಬೆಂ ಗ್ರಾಮಾಂತರ. ಕೋಲಾರ. ಬಾಗಲಕೋಟೆ ಬೆಂಗಳೂರು ನಗರ. ಈ ಐದು ನಗರಗಳಲ್ಲಿ ಮೊದಲ ಹಂತದಲ್ಲಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ಮೊದಲ ಹಂತದಲ್ಲಿ ಐದು ಜಿಲ್ಲೆಗಳಿಗೆ 115 ಕೋಟಿ ಖರ್ಚು ತಗುಲಿದೆ.
ಐದು ಜಿಲ್ಲೆಗಳಲ್ಲಿ ಒಟ್ಟು ೨೦ ಲಕ್ಷ ಬಿಪಿಎಲ್ ಹಾಗೂ ಅಂತ್ಯೊದಯ ಇದೆ. ಇನ್ನು ಈ ೨೦ ಲಕ್ಷ ಕಾರ್ಡ್ ಗಳಲ್ಲಿ ಒಟ್ಟು 69 ಲಕ್ಷ ಫಲಾನುಭವಿನಗಳು ಇದ್ದಾರೆ. ಇನ್ನು ಎರಡನೇ ಹಂತದಲ್ಲಿ ಧಾರವಾಡ. ಚಿತ್ರದುರ್ಗ. ಕೊಪ್ಪಳ. ಯಾದಗಿರಿ ದಾವಣಗೆರೆ ಈ ಐದು ಜಿಲ್ಲೆಗಳಿವೆ. ಈ ಐದು ಜಿಲ್ಲೆಗಳಲ್ಲಿ ಒಟ್ಟು 13ಲಕ್ಷ ಬಿಪಿಎಲ್ ಕಾರ್ಡ್ನಲ್ಲಿ ಒಟ್ಟು 49 ಲಕ್ಷ ಫಲಾನುಭವಿನಗಳು ಇದ್ದಾರೆ. ಹಾಗೆ ಈ ಐದು ಜಿಲ್ಲೆಯ 49.ಲಕ್ಷ ಫಲಾಭವಿಗಳಿಗೆ 80 ಕೋಟಿ ಹಣ ವರ್ಗಾವಣೆ ಆಗಲಿದೆ. ಎರಡನೇ ಹಂತದ ಡಿಬಿಟಿ ಮೂಲಕ ಹಣ ವರ್ಗಾವಣೆ ಪೂರ್ಣಗೊಂಡಿದೆ.
ಇನ್ನು ಮುರ್ನಾಲ್ಕು ದಿನಗಳಲ್ಲಿ ಹಾಸನ ಚಾಮರಾಜನಗರ ಗದಗ ವಿಜಯಪುರ ಬಳ್ಳಾರಿ ಮಂಡ್ಯ ಹೀಗೆ ಉಳಿದ ಜಿಲ್ಲೆಗಳಿಗೆ ಹಣ ವರ್ಗಾವಣೆ ಮಾಡಲಿದೆ. ಈಗಾಗಲೇ ಎಸ್ಐಸಿ ಕಾರ್ಡ್ ದಾರರ ಖಾತೆಗೆ ದತ್ತಾಂಶ ಸಹ ಕಳುಹಿಸಲಾಗಿದೆ. ಬ್ಯಾಂಕ್ ಖಾತೆ ಇಲ್ಲದೆ ಇರುವವರು ಸುಮಾರು 6 ಲಕ್ಷಕ್ಕೂ ಹೆಚ್ಚು ಕಾರ್ಡುಗಳಿವೆ. ಬ್ಯಾಂಕ್ ಖಾತೆ ಇಲ್ಲದೆ ಇರುವವರು ಹಾಗೂ ಬ್ಯಾಂಕ್ ಎಸಿ ಬಂದ ಆಗಿರುವವರು ಆಧಾರ್ ಗೆ ಬ್ಯಾಂಕ್ ಎಸಿ ಲಿಂಕ್ ಇರದೆ ಇರುವುದು
ಹೀಗೆ ನಾನಾ ಕಾರಣಗಳಿಂದ ಸುಮಾರು 6 ಲಕ್ಷ ಕಾರ್ಡ್ ದಾರರಿಗೆ ಆಧಾರ್ ಜೋಡಣೆ ಇಲ್ಲ ಬ್ಯಾಂಕ್ ಖಾತೆ ಇದ್ದರೂ, ಆಧಾರ್ ಲಿಂಕ್ ಆಗಿಲ್ಲದವರಿಗೂ ಹಣ ವರ್ಗಾವಣೆಯಾವುದುದಿಲ್ಲ. ಹೀಗಾಗಿ ಈ 6 ಲಕ್ಷ ಕಾರ್ಡುಗಳಿಗೆ ಮೊದಲ ತಿಂಗಳ ಹಣ ವರ್ಗಾವಣೆ ಆಗುವುದು ಬಹುತೇಕ ಕಡಿಮೆ. ಸುಮಾರು 15 ಲಕ್ಷ ಜನರು ಡಿಬಿಟಿ ಟ್ರಾನ್ಸ್‍ಫರ್ ಪಡೆಯದೇ ಹೋಗಬಹುದು. ಈ 15 ಲಕ್ಷ ಜನರನ್ನು ಯೋಜನೆ ವ್ಯಾಪ್ತಿಗೆ ತರಲು ಅಹಾರ ಇಲಾಖೆ ಇಂದ ಪ್ರಯತ್ನ ನಡೆಯುತ್ತಿದೆ.
ಇನ್ನು ಅಂತ್ಯೋದಯ ಕಾರ್ಡ್ ನಲ್ಲಿ ಮೂರಕ್ಕಿಂತ ಹೆಚ್ಚು ಇವವರಿಗೆ ಹಣ ಇಲ್ಲಾ. ಮೂರಕ್ಕಿಂತ ಹೆಚ್ಚಿದರೆ ಅವರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಇಲ್ಲಾ. ಏಕೆಂದರೆ ಅಂತ್ಯೋದಲ್ಲಿ 3ಕ್ಕಿಂತ ಹೆಚ್ಚು ಜನ ಸದಸ್ಯರಿರುವ ಕುಟುಂಬಕ್ಕೆ ಕೇಂದ್ರ ಸರ್ಕಾರವೇ 35 ಕೆಜಿ ಅಕ್ಕಿ ನೀಡಲಿದೆ. ಒಟ್ಟು ರಾಜ್ಯಾದ್ಯಂತ ಸುಮಾರು 1.ಕೋಟಿ 28 ಲಕ್ಷ ಪಡಿತದಾರರು ಇದ್ದಾರೆ. ಇಗಾಗ್ಲೇ ಶೇ%90 ರಷ್ಟು ಬ್ಯಾಂಕ್ ಎಸಿ ಹಾಗೂ ಆಧಾರ್ ಲಿಂಕ್ ಆಗಿದೆ. ಡಿಬಿಟಿ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಸಹ ಹಣ ವರ್ಗಾವಣೆ ಆಗರುವ ಬಗ್ಗೆ ಚೆಕ್ ಮಾಡಬಹುದು.



