Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಮಧು ಬಂಗಾರಪ್ಪಗೆ ಹೇರ್‌ ಕಟ್‌ ಮಾಡೋಕೆ ವಿಜಯೇಂದ್ರ ಯಡಿಯೂರಪ್ಪ ಹೋಗ್ಬೇಕಾ..?

SpeciallU by SpeciallU
May 29, 2024
in News, Politics
Reading Time: 1 min read
0 0
0
ಮಧು ಬಂಗಾರಪ್ಪಗೆ ಹೇರ್‌ ಕಟ್‌ ಮಾಡೋಕೆ ವಿಜಯೇಂದ್ರ ಯಡಿಯೂರಪ್ಪ ಹೋಗ್ಬೇಕಾ..?

ಮಧು ಬಂಗಾರಪ್ಪ ಒಂದು ರೀತಿಯಲ್ಲಿ ವಿವಾದಗಳನ್ನು ಹುಡುಕಿಕೊಂಡು ಹೋಗಿ ತಬ್ಬಿಕೊಳ್ಳೋ ಮನಸ್ಥಿತಿಯವರು. ಸಿದ್ದರಾಮಯ್ಯ ಸಂಪುಟದಲ್ಲಿ ಇತ್ತೀಚೆಗೆ ಮಧು ಬಂಗಾರಪ್ಪ ಟ್ರೋಲ್‌ʻಗಳಿಂದಲೇ ಸುದ್ದಿಯಾದವರು. ಅಂತಹ ಮಧು ಬಂಗಾರಪ್ಪ ಮತ್ತೊಮ್ಮೆ ತಮ್ಮ ಹೇರ್‌ ಕಟಿಂಗ್‌ ವಿಷಯಕ್ಕೆ ಸುದ್ದಿಯಾಗಿದ್ಧಾರೆ. ಮಧು ಬಂಗಾರಪ್ಪ ಅವರಿಗೆ ಕನ್ನಡ ಓದಲು ಬರೆಯುವುದಿಲ್ಲ. ಅದನ್ನು ಸಹಜ ಎಂಬಂತೆ ಹೇಳಿಕೊಳ್ಳೋ ಶಿಕ್ಷಣ ಸಚಿವರು, ತಮ್ಮ ಮಗ ಒಳ್ಳೆ ಮಾರ್ಕ್ಸ್‌ ತೆಗೆದುಕೊಳ್ಳೋಕೆ ನಾನು ಹೇಳಿಕೊಟ್ಟಿದ್ದೇ ಕಾರಣ ಎನ್ನುತ್ತಾರೆ.  ಅಂತಹ ಮಧು ಬಂಗಾರಪ್ಪ ಮತ್ತು ವಿಜಯೇಂದ್ರ ನಡುವಿನ ವಾಕ್‌ ಸಮರ ಸಖತ್‌ ಸುದ್ದಿಯಾಗುತ್ತಿದೆ.

ವಿಜಯೇಂದ್ರ ಹೇಳಿದ್ದು :

ಸಾಮಾನ್ಯವಾಗಿ ಶಾಲೆಗೆ ಮಕ್ಕಳು ಉತ್ತಮ ಬಟ್ಟೆ ಧರಿಸಿ, ಕೂದಲನ್ನು ಸಣ್ಣದಾಗಿ ಕಟ್ಟಿಂಗ್ ಮಾಡಿಸಿಕೊಂಡು ತಲೆಗೆ ಎಣ್ಣೆ ಹಚ್ಚಿಕೊಂಡು ತಲೆ ಬಾಚಿಕೊಂಡು ಬರುತ್ತಾರೆ. ಆದರೆ, ಸ್ವತಃ ಶಿಕ್ಷಣ ಸಚಿವರೇ ಶಾಲೆಗೆ ಬರುತ್ತಾರೆಂದರೆ ಶಿಕ್ಷಕರು ಅವರಿಗೆ ತಲೆ ಬಾಚಿಕೊಂಡು ಬನ್ನಿ ಎನ್ನುವಂತಾಗಿದೆ. ಜೊತೆಗೆ, ಶಿಕ್ಷಣ ಸಚಿವರಿಗೆ ವಿಧಾನಸಭೆಗೆ ಬರುವಾಗಲೇ ನೀವು ತಲೆ ಬಾಚಿಕೊಂಡು ಬನ್ನಿ ಎಂದು ಹೇಳುವಂತಹ ಪರಿಸ್ಥಿತಿ ಬಂದಿದೆ. ಅವರಿಗೆ ಕಟ್ಟಿಂಗ್ ಮಾಡಿಸಿಕೊಂಡು ಬರಲು ಹೇಳಬೇಕಿದೆ. ಅವರಿನ್ನೂ ಚಿತ್ರರಂಗದಲ್ಲಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಅದರಿಂದ ಹೊರಬರಬೇಕು

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಮಧು ಬಂಗಾರಪ್ಪ ಕೊಟ್ಟ ತಿರುಗೇಟು :

ನನಗೆ ಕಟಿಂಗ್ ಮಾಡುವವರು ಫ್ರೀ ಇಲ್ಲ. ವಿಜಯೇಂದ್ರ ಫ್ರೀಯಿದ್ದರೆ ಬಂದು ಕಟಿಂಗ್ ಮಾಡಲಿ. ಬಿಜೆಪಿ ನಾಯಕರು ಡಿಸಿಎಂ ಡಿ.ಕೆ. ಶಿವಕುಮಾರ್ ಗಡ್ಡದ ಬಗ್ಗೆ ಮಾತಾಡಿ 130 ರಿಂದ 67ಕ್ಕೆ ಬಂದರು. ಈಗ ಲೋಕಸಭಾ ಚುನಾವಣೆಯಲ್ಲಿ ನನ್ನ ಕೂದಲಿನ ಬಗ್ಗೆ ಮಾತಾಡಿ 26 ಸಂಸದ ಸ್ಥಾನದಿಂದ 6 ಸ್ಥಾಕಕ್ಕೆ ಕುಸಿಯುತ್ತಾರೆ ನೋಡಿ. ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಬಿಜೆಪಿ ಅವರು ಮಾತಾಡಿದ್ರಾ? ಮೋದಿ ಅವರು ಕೋವಿಡ್ ಟೈಂ ನಲ್ಲಿ ಗಡ್ಡ ಬಿಟ್ಟಿದ್ರು ಅದನ್ನು ಯಾಕೆ ಪ್ರಶ್ನಿಸಲಿಲ್ಲ? ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡೋದು ಒಂದು ವಿಷಯವಾ? ಅದು ಯಾಕೆ ಅವರಿಗೆ?

ಕೆಲ ಮಕ್ಕಳು ನಮ್ಮ ಶಿಕ್ಷಣ ಸಚಿವರು ಒಳ್ಳೇ ಸ್ಟೈಲ್ ಹೇರ್ ಸ್ಟೈಲ್ ನಲ್ಲಿದ್ದಾರೆ ನಮಗ್ಯಾಕೆ ಆ ಥರ ಸ್ಟೈಲ್ ನಲ್ಲಿ ಬಿಡೋಕೆ ಅವಕಾಶ ಇಲ್ಲ ಅಂತಾ ಕೇಳುತ್ತಾರೆ ಏನೂ ಮಾಡಲಿ ಹೇಳಿ? ರಾಜ್ಯದಲ್ಲಿ ಶೇ.40% ಕಮಿಷನ್ ಪಡೆದಿರುವ ಅವರಿಗೆ ಹೇರ್ ಕಟ್ ಮಾಡುವ ಸ್ಥಿತಿ ಏನೂ ಬಂದಿಲ್ಲ. ಹೇರ್ ಕಟ್ ಮಾಡಲು ಅದು ಯಾರು ಬರುತ್ತಾರೋ ಅವರು ನಾನು ಟೈಂ ಕೊಟ್ಟಾಗ ಬರಲಿ. ಅವರ ಕೆಪಾಸಿಟಿ ನೋಡಿ ಆ ಕೆಲಸ ಕೊಡುತ್ತೇನೆ. ನನ್ನ ಕೂದಲು ಚೆನ್ನಾಗಿದೆ. ತಲೆ ಒಳಗಿನ ಮೆದುಳು ಚೆನ್ನಾಗಿದೆ. ಅವರಂತೆ ನನಗೆ ಯಾವ ದುರ್ಬುದ್ಧಿ ಇಲ್ಲ.

ನನ್ನ ತಂದೆ ನನಗೆ ಒಳ್ಳೆ ಬುದ್ದಿ ಕಲಿಸಿದ್ದಾರೆ. ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ತಂದೆಗೆ ಬಹಳ ಪ್ರೀತಿ ಇತ್ತು. ನನಗೆ ಅವರೇ ಸ್ಪೂರ್ತಿ. ಇವರು ಯಾರೋ ಮಾತು ನಾನು ಕೇಳಲ್ಲ ನನ್ನ ತಂದೆ ನಾನು ಹೇರ್ ಕಟ್ ಮಾಡಿಸಿದಾಗ ಎರೆಡು ವಾರ ನನ್ನ ಜೊತೆ ಮಾತನಾಡರಿಲಿಲ್ಲ

ಮಧು ಬಂಗಾರಪ್ಪ ಕೊಟ್ಟ ಟಾಂಗ್‌ಗೆ ವಿಜಯೇಂದ್ರ ಸ್ಪಷ್ಟನೆ :

ಇದು ನಾನು ಹೇಳಿದ್ದಲ್ಲ. ಶಿಕ್ಷಕರ ಜೊತೆ ಮಾತನಾಡುತ್ತಿದ್ಧಾಗ ಶಿಕ್ಷಕರೇ ಹೇಳಿಕೊಂಡಿದ್ದು. ಶಿಕ್ಷಕರಿಗೆ ಅವರ ವಿದ್ಯಾರ್ಥಿಗಳು ಕೇಳ್ತಾರಂತೆ. ಶಿಕ್ಷಣ ಸಚಿವರೇ ಹೇರ್‌ ಕಟ್‌ ಮಾಡಿಸಲ್ಲ. ಅವರಿಗೇ ಕನ್ನಡ ಬರಲ್ಲ ಅಂತಾರಂತೆ. ಶಿಕ್ಷಣ ಸಚಿವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅವರಿನ್ನೂ ಸಿನಿಮಾ ರಂಗದಲ್ಲಿ ಇಲ್ಲ.

ಕೊನೆಯ ಮಾತು : ಪ್ರತಿ ಹುದ್ದೆಗೂ ಒಂದೊಂದು ರೀತಿಯ ಘನತೆ, ಗಾಂಭೀರ್ಯ, ಶಿಸ್ತು ಇರುತ್ತದೆ. ಶಿಕ್ಷಣ ಇಲಾಖೆಯ ಉಸ್ತುವಾರಿ ಹೊತ್ತಿರುವವರಿಗೆ ಸ್ವಲ್ಪ ಹೆಚ್ಚೇ ಘನತೆ ಇರುತ್ತದೆ. ಅಂತಹ ಶಿಕ್ಷಣ ಸಚಿವರೇ ನನಗೆ ಕನ್ನಡ ಬರಲ್ಲ ಎನ್ನುವುದು, ತಲೆ ಬಾಚಿಕೊಳ್ಳದೆ, ಉದ್ದನೆಯ ಕೂದಲು ಬಿಟ್ಟುಕೊಂಡು ತಿರುಗುವುದು ಶೋಭೆಯಂತೂ ಅಲ್ಲ. ಅಬ್ದುಲ್‌ ಕಲಾಂ ಅವರಿಗೆ ಹೋಲಿಸಿಕೊಂಡು ಮಾತನಾಡುವುದು ಮತ್ತೊಮ್ಮೆ ಅವರ ಶಿಕ್ಷಣದ ಬಗ್ಗೆ ಇರುವ ಅಜ್ಞಾನವನ್ನಷ್ಟೇ ಸೂಚಿಸುತ್ತದೆ.

Tags: #ಮಧುಬಂಗಾರಪ್ಪ #ವಿಜಯೇಂದ್ರಯಡಿಯೂರಪ್ಪ #ಹೇರ್‌ಕಟ್‌ #Madhubangarappa #VijayendraYediyurappa #haircut
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.