ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರ ಸ್ಪೆಷಲ್ ನಗು. ಆ ನಗುವನ್ನು ಶಾಶ್ವತವಾಗಿ ಜೊತೆಯಲ್ಲಿಟ್ಟುಕೊಂಡಿರೋ ಗಣೇಶ್ (Golden Star Ganesh) ಅವರಿಗೆ ಒಂದೇ ದಿನ ಸಂಭ್ರಮದ ಸುದ್ದಿ ಹಾಗೂ ಶಾಕಿಂಗ್ ನ್ಯೂಸ್ ಎರಡೂ ಬಂದಿವೆ. ಮೊದಲಿಗೆ ಸಂಭ್ರಮದ ಸುದ್ದಿ.
ಬಾನದಾರಿಯಲ್ಲಿ (Banadariyalli trailer) ಟ್ರೇಲರ್ ರಿಲೀಸ್ : ಗಣೇಶ್ ಹಾಗು ನಿರ್ದೇಶಕ ಪ್ರೀತಂ ಗುಬ್ಬಿ. ಅರಮನೆ, ಮಳೆಯಲಿ ಜೊತೆಯಲಿ, ದಿಲ್ ರಂಗೀಲದಂತಹ ಕಲರ್ಫುಲ್ ಲವ್ ಸಿನಿಮಾ ಮಾಡಿದ್ದ ಜೋಡಿ ಈಗ ಬಾನ ದಾರಿಯಲ್ಲಿ ಸಿನಿಮಾ ಮೂಲಕ ಮತ್ತೊಮ್ಮೆ ಜೊತೆಯಾಗಿದೆ. ಇದೀಗ ಬಾನದಾರಿಯಲ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
(Banadariyalli trailer) ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕರ್ನಾಟಕಾ ಕ್ರಶ್ ರುಕ್ಮಿಣಿ ವಸಂತ್ (Rukmini Vasanth) ಹಾಗು ರೀಷ್ಮಾ ನಾಣಯ್ಯ (Reeshma Nanaiah) ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಈ ಸಿನಿಮಾದಲ್ಲಿದ್ದು, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಇದೇ ತಿಂಗಳು 28ಕ್ಕೆ (Banadariyalli) ತೆರೆ ಮೇಲೆ ಬರಲಿದೆ. ಗಣೇಶ್ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿದ್ದರೆ, ರುಕ್ಮಿಣಿ ವಸಂತ್ ಸರ್ಫಿಂಗ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ರೀಷ್ಮಾ ನಾಣಯ್ಯ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ದಾರೆ. ಟ್ರೇಲರ್ ನೋಡಿದರೆ ತ್ರಿಕೋನ ಪ್ರೇಮಕಥೆಯೋ.. ಭಗ್ನ ಪ್ರೇಮಕಥೆಯೋ ಎಂಬ ಕುತೂಹಲ ಹುಟ್ಟುವಂತಿದೆ. ಜಾಲಿ ಹುಡುಗನೊಬ್ಬ ಗಂಭೀರವಾಗಿ ಪ್ರೀತಿಯಲ್ಲಿ ಬಿದ್ದು, ಆ ಪ್ರೀತಿಗೆ ಪ್ರೀತಿಸಿದ ಹುಡುಗಿಯ ಪೋಷಕರು ಅಡ್ಡಿ ಆದಾಗ ಹೇಗೆ ಅಡ್ಡಿಯನ್ನು ತೊಲಗಿಸಿ ಪ್ರೀತಿಯನ್ನು ಒಲಿಸಿಕೊಳ್ಳುತ್ತಾನೆ, ಅಸಲಿಗೆ ನಿಜಕ್ಕೂ ಪ್ರೀತಿಯನ್ನು ಒಲಿಸಿಕೊಳ್ಳುತ್ತಾನೋ ಅಥವಾ ಇಲ್ಲವೋ ಎಂಬುದೇ ಕತೆ.
ಬಾನದಾರಿಯಲ್ಲಿ ಚಿತ್ರಕ್ಕೆ ಛಾಯಾಗ್ರಾಹಕಿ ಪ್ರೀತಾ ಜಯರಾಮನ್ ಕಥೆ ಬರೆದಿದ್ದು, ಪ್ರೀತಂ ಅವರೇ ಚಿತ್ರಕಥೆ ಬರೆದಿದ್ದಾರೆ. ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ..ಚಂದ್ರ ಮೇಲೆ ಬಂದ ಹಾಡಿನ ಮೊದಲ ಸಾಲನ್ನೇ ಚಿತ್ರದ ಶೀರ್ಷಿಕೆಯಾಗಿ ಬಳಸಿರುವುದು ವಿಶೇಷ. ಟ್ರೇಲರ್ನಲ್ಲಿ ಮಸೈಮರಾ ಕಾಡಿನ ನೋಟವಂತೂ ಮನಮೋಹಕವಾಗಿದೆ.
ಇನ್ನು ಶಾಕಿಂಗ್ ಸುದ್ದಿಯೇನೆಂದರೆ..
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನೀಡಲಾಗಿದ್ದ ಅರಣ್ಯ ಭೂಮಿಯನ್ನು ಸರ್ಕಾರ ದಿಢೀರ್ ವಾಪಸ್ ಪಡೆದುಕೊಂಡಿದೆ. ಅರಣ್ಯ ಇಲಾಖೆಯ ಮಾಹಿತಿ ಇಲ್ಲದೇ ಜಮೀನು ನೀಡಿದ್ರು. ಅದನ್ನ ವಾಪಸು ಪಡೆಯುವ ಕೆಲಸ ಆಗಿದೆ. ಪ್ರಕರಣ ಈಗ ಕೋರ್ಟ್ ನಲ್ಲಿ ಇದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಬರುವ ಕುಂದುಕರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿ ತಮಗೆ ಸೇರಿದ 1.24 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ನಟ ಗಣೇಶ್ಗೆ ಹೈಕೋರ್ಟ್ ಅನುಮತಿ ನೀಡಿತ್ತು.
ಪ್ರಕರಣ ಸಂಬಂಧ ನಟ ಗಣೇಶ್ ಅವರು ಸಲ್ಲಿಸಿದ್ದ ಮೆಮೊ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ, ಅರ್ಜಿದಾರರು ಕಟ್ಟಡ ನಿರ್ಮಾಣ ಮಾಡಬಹುದು. ಆದರೆ, ಅದು ಪ್ರಕರಣ ಸಂಬಂಧ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶಿಸಿತ್ತು. ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿತ್ತು.
ಇದೀಗ ಮುಂದಿನ ವಿಚಾರಣೆಗೆ ಮುನ್ನವೇ ಅರಣ್ಯ ಇಲಾಖೆಯ ಮಾಹಿತಿ ಇಲ್ಲದೇ ಜಮೀನು ನೀಡಿದ ಹಿನ್ನೆಲೆ ಜಾಗವನ್ನು ಸರಕಾರ ವಾಪಸ್ ಪಡೆಯಲು ತೀರ್ಮಾನಿಸಿದೆ. ಕಟ್ಟಡ ಕಟ್ಟಲು ಅನುಮತಿ ಇದ್ದರೂ ಜಾಗ ವಾಪಸ್ ಕೊಡಬೇಕಾಗಿದ್ದು, ನಟ ಗಣೇಶ್ ಅವರ ಮುಂದಿನ ನಡೆಯೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.



