Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ʻತಲೆದಂಡʼಕ್ಕೆ ಶಾಕ್..!‌?

SpeciallU by SpeciallU
February 5, 2025
in Cinema, News
0 0
0
ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ʻತಲೆದಂಡʼಕ್ಕೆ ಶಾಕ್..!‌?

ಇತ್ತೀಚೆಗಷ್ಟೇ 2019ರ ರಾಜ್ಯ ಪ್ರಶಸ್ತಿ ಘೋಷಿಸಿದ್ದ ರಾಜ್ಯ ಸರ್ಕಾರ, ಆ ಪ್ರಶಸ್ತಿಗಳಲ್ಲಿ ಮುಜುಗರವನ್ನೂ ಅನುಭವಿಸಿತ್ತು. ಕಿಚ್ಚ ಸುದೀಪ್‌ ತಮಗೆ ದೊರೆತಿದ್ದ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಈಗ 2020ರ ಪ್ರಶಸ್ತಿಯಲ್ಲಿಯೂ ರಾಜ್ಯ ಸರ್ಕಾರ ಅಂತದ್ದೇ ಮುಜುಗರ ಎದುರಿಸುತ್ತಿದೆ. ಮುಜುಗರ ಎದುರಿಸುವ ಸನ್ನಿವೇಶ ಎದುರಾಗಿದೆ. ಅದಕ್ಕೆ ಕಾರಣವಾಗಿರುವುದು ತಲೆದಂಡ.
ತಲೆದಂಡ. 2020ರಲ್ಲಿ ತೆರೆ ಕಂಡಿದ್ದ ಸಿನಿಮಾ. ಪ್ರವೀಣ್ ಕೃಪಾಕರ್ ನಿರ್ದೇಶನದ ಚಿತ್ರದಲ್ಲಿ ದಿ.ಸಂಚಾರಿ ವಿಜಯ್‌ ಪ್ರಧಾನ ಪಾತ್ರದಲ್ಲಿದ್ದರು. ಮಂಡ್ಯ ರಮೇಶ್‌, ರಮೇಶ್‌ ಪಂಡಿತ್‌, ಚೈತ್ರಾ ಆಚಾರ್‌, ಬಿ ಸುರೇಶ್‌ ಮೊದಲಾದವರು ನಟಸಿದ್ದರು. ಮರ ಗಿಡಗಳನ್ನು ಪ್ರೀತಿಸುವ ಕುನ್ನಗೌಡನ ಕಥೆ ಇದ್ದ ಚಿತ್ರ. ಬಾಕ್ಸಾಫೀಸ್‌ ಗೆಲ್ಲಲಿಲ್ಲವಾದರೂ, ಕೆಲವು ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಹೀಗಾಗಿ 2020ರ ರಾಜ್ಯ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೂ ಚಿತ್ರದ ಮೇಲಿದೆ. ಆದರೆ ಆ ನಿರೀಕ್ಷೆಗೇ ಶಾಕ್‌ ಕಾದಿದೆ.

ಏಕೆಂದರೆ 2020 ಅವಾರ್ಡ್‌ ಕಮಿಟಿ ಕಾಂಟ್ರವರ್ಸಿಗೆ ಸಿಲುಕಿದೆ. ಕಾರಣ ತಲೆದಂಡ. ಸಹಜವಾಗಿಯೇ 2020ರಲ್ಲಿ ರಿಲೀಸ್‌ ಆಗಿದ್ದ ತಲೆದಂಡ ಚಿತ್ರವೂ ಪ್ರಶಸ್ತಿ ರೇಸಿನಲ್ಲಿದೆ. ಆದರೆ ತಲೆದಂಡ ಚಿತ್ರದಲ್ಲಿ ಕೆಲಸ ಮಾಡಿದ್ದ ಸಂಪತ್‌ ಈಗ ಅವಾರ್ಡ್‌ ಕಮಿಟಿಯಲ್ಲಿದ್ದಾರೆ. ನಿಯಮಗಳ ಪ್ರಕಾರ ಪ್ರಶಸ್ತಿ ರೇಸಿನಲ್ಲಿರುವ ಚಿತ್ರದಲ್ಲಿ ಕೆಲಸ ಮಾಡಿರುವ (ಅದು ಯಾವ ವಿಭಾಗವೇ ಆಗಿರಲಿ) ವ್ಯಕ್ತಿಗಳು ಪ್ರಶಸ್ತಿ ಕಮಿಟಿಯಲ್ಲಿ ಇರುವಂತಿಲ್ಲ. ಆದರೆ 2020ರ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ತಲೆದಂಡಕ್ಕೆ ಕೆಲಸ ಮಾಡಿರುವ ಸಂಪತ್‌ ಕೂಡಾ ಇದ್ದಾರೆ. ಸಂಪತ್‌ ತಲೆದಂಡ ಚಿತ್ರದಲ್ಲಿ ಪ್ರೊಡಕ್ಷನ್‌ ಪ್ಲಾನಿಂಗ್‌ ಸಪೋರ್ಟ್‌ ಆಗಿದ್ದರು. ಚಿತ್ರದ ಟೈಟಲ್‌ ಕಾರ್ಡಿನಲ್ಲಿ ಕೂಡಾ ಸಂಪತ್‌ ಅವರ ಹೆಸರಿದೆ. ಹೀಗಾಗಿ ಮತ್ತೊಂದು ರಾಜ್ಯ ಸರ್ಕಾರ ಮತ್ತೊಂದು ಮುಜುಗರ ಎದುರಿಸುವುದು ಶತಃಸಿದ್ಧ. ಮುಜುಗರ ತಪ್ಪಿಸಿಕೊಳ್ಳಲು ಸಂಪತ್‌ ಅವರನ್ನು ಆಯ್ಕೆ ಕಮಿಟಿಯಿಂದ ಹೊರಗಿಡುತ್ತದೆಯೋ.. ಅಥವಾ ತಲೆದಂಡ ಚಿತ್ರವನ್ನೇ ಹೊರಗಿಡುತ್ತದೆಯೋ.. ಎನ್ನುವುದು ಪ್ರಶ್ನೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಏನೇ ಆಗಲಿ.. ತಲೆದಂಡ ಚಿತ್ರಕ್ಕೆ ಶಾಕ್‌ ಕಾದಿದೆ ಎನ್ನುತ್ತಾರೆ ಚಿತ್ರರಂಗ ಹಾಗೂ ಕಮಿಟಿಯಲ್ಲಿರುವ ಹಿರಿಯ ಅಧಿಕಾರಿಗಳು. ಅದಕ್ಕೆ ಕಾರಣವೂ ಇದೆ. ಈ ಹಿಂದೆ ಖ್ಯಾತ ನಿರ್ದೇಶಕ ಭಗವಾನ್‌ ಅವರು ಕಮಿಟಿ ಅಧ್ಯಕ್ಷರಾಗಿದ್ದಾಗ ಅವರು ಒಂದು ಸಿನಿಮಾದಲ್ಲಿ ಕೆಲಸ ಮಾಡಿದ್ದರು ಎಂಬ ಕಾರಣಕ್ಕೆ, ಕಮಿಟಿಯಿಂದಲೇ ಹೊರಬರಬೇಕಾಯ್ತು. ಈಗ ತಲೆದಂಡಕ್ಕೂ ಅದೇ ಗತಿ ಕಾದಿದೆ.
ಅಂದಹಾಗೆ ಪ್ರಶಸ್ತಿ ಆಯ್ಕೆ ಕಮಿಟಿಯಲ್ಲಿ (ಅದು ಆಸ್ಕರ್‌ ಇರಲಿ, ರಾಷ್ಟ್ರ ಪ್ರಶಸ್ತಿಯೇ ಇರಲಿ. ಫಿಲಂಫೇರ್‌ ಇರಲಿ) ಸ್ಪರ್ಧೆಯಲ್ಲಿರುವ ಚಿತ್ರಗಳಲ್ಲಿ ಕೆಲಸ ಮಾಡಿದವರು ಇರುವಂತಿಲ್ಲ. ಇರುವುದಿಲ್ಲ. ಇಷ್ಟು ಸಾಮಾನ್ಯ ವಿಷಯವನ್ನು ಸರ್ಕಾರ ಅದು ಹೇಗೆ ಮರೆತಿತು ಎನ್ನುವುದೇ ಅರ್ಥವಾಗದ ಪ್ರಶ್ನೆ.

Tags: #ರಾಜ್ಯಪ್ರಶಸ್ತಿ #ತಲೆದಂಡಸಿನಿಮಾ #Rajyaprashasti #Taledandacinema
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.