ಶಿವಣ್ಣ ಮತ್ತೊಮ್ಮೆ ಮದುವೆಯಾಗಿದ್ದಾರೆ. ಆದರೆ.. ಅದೇ ಮನ ಮೆಚ್ಚಿದ ಹುಡುಗಿ ಗೀತಾ ಅವರನ್ನೇ ಮದುವೆಯಾಗಿರೋದು ವಿಶೇಷ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಚಿತ್ರರಂಗದ ಆದರ್ಶ ದಂಪತಿ. ಹಲವು ಹೊಸ ಜೋಡಿಗಳಿಗೆ ಶಿವಣ್ಣ-ಗೀತಕ್ಕ ಮಾದರಿಯಾಗಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ 1986 ರಲ್ಲಿ ಮದುವೆ ಆಗಿದ್ದರು. ಗೀತಾ ಶಿವರಾಜ್ ಕುಮಾರ್ ಮಾಜಿ ಸಿಎಂ ಬಂಗಾರಪ್ಪನವರ ಪುತ್ರಿ.
ತೆರೆಯ ಮೇಲೆ ಯಂಗ್ ಆಗಿ ಕಾಣುವ ಶಿವರಾಜುಕುಮಾರ್ ಅವರಿಗೆ ಈಗ 62 ವರ್ಷ. ಆಧ್ಯಾತ್ಮಿಕವಾಗಿ ಈ ಷಷ್ಟಿಪೂರ್ತಿಗೆ ವಿಶೇಷ ಮಹತ್ವವಿದೆ. ಈ ಅವಧಿಯಲ್ಲಿ ವಿವಾಹಿತ ದಂಪತಿ ಬ್ರಹ್ಮಚರ್ಯ ಆಚರಿಸುವ ಮೂಲಕ ಒಟ್ಟಿಗೆ ಇರಬೇಕು. ಶಿವಣ್ಣ ಗೀತಾ ದಂಪತಿ ಷಷ್ಟಿಪೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಮಿಳುನಾಡಿಗೆ ತೆರಳಿದ್ದರು. ಈ ಮೂಲಕ ತಮ್ಮ ಜೀವನದ ಧ್ಯೇಯ ಪೂರೈಸಬೇಕು. ಈ ಪೂಜೆ ಅವಧಿ ಎರಡು ದಿನ ಇರುತ್ತದೆ. ‘ಯಮುನಾ ಪೂಜೆ’ ಮಾಡುವ ಮೂಲಕ ಶುಭ ಅವಧಿಯಲ್ಲಿ ಷಷ್ಟಿ ಪೂಜೆ ಆರಂಭಿಸಲಾಗುತ್ತದೆ.
ಶಿವಣ್ಣ ಗೀತಾ ಅವರಿಗೆ ಷಷ್ಟಿಪೂರ್ತಿ ಕಾರ್ಯಕ್ರಮದಲ್ಲಿ ಮಾಂಗಲ್ಯ ಧಾರಣೆ ಮಾಡಿದ್ದಾರೆ. 60 ವರ್ಷ ಪೂರ್ಣಗೊಳಿಸಿದಾಗ ಷಷ್ಠಿಪೂರ್ತಿ ಪೂಜೆ ನೆರೆವೇರಿಸುತ್ತಾರೆ. 60 ವರ್ಷಗಳ ಕಾಲ ಒಟ್ಟಿಗೆ ಬಾಳುವುದು ಷಷ್ಟಿಪೂರ್ತಿ ಪೂಜೆಯ ಉದ್ದೇಶವಾಗಿದೆ. ತಮಿಳುನಾಡಿನಲ್ಲಿ ಪುರಾತನ ಕಾಲದ ದೇವಸ್ಥಾನ ಹಾಗೇ ತಿರುಕ್ಕಡೈಯೂರ್ ಎಂಬ ಹೆಸರಿನಲ್ಲಿ ಈ ದೇವಸ್ಥಾನ ಪ್ರಸಿದ್ದವಾಗಿದೆ.
ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಇರಲಿಲ್ಲ. ಬಾಲ್ಯದ ಗೆಳೆಯರಷ್ಟೇ ಇದ್ದರು. . ಒಂದು ಸಾವಿರ ವರ್ಷಗಳ ಇತಿಹಾಸ ಇರುವ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನದಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಷಷ್ಟಿಪೂರ್ತಿ ಕಾರ್ಯಕ್ರಮ ನಡೆದಿದೆ. ತಮಿಳುನಾಡಿನಲ್ಲಿ ಪುರಾತನ ಕಾಲದ ದೇವಸ್ಥಾನ ಹಾಗೇ ತಿರುಕ್ಕಡೈಯೂರ್ ಎಂಬ ಹೆಸರಿನಲ್ಲಿ ಈ ದೇವಸ್ಥಾನ ಪ್ರಸಿದ್ದಿ ಪಡೆದಿದೆ.
ವಿಶೇಷ ಮತ್ತು ಅಚ್ಚರಿ ಎಂದರೆ ಈ ಷಷ್ಠಿ ಪೂರ್ತಿಯ ವಿವಾಹಕ್ಕೆ ಶಿವಣ್ಣ ಕುಟುಂಬದವರಾಗಲೀ, ಗೀತಾ ಅವರ ಕುಟುಂಬದವರಾಗಲೀ ಇರಲಿಲ್ಲ. ಇದು ಸ್ವಲ್ಪ ವಿಸ್ಮಯಕ್ಕೆ ಕಾರಣವಾಗಿದೆಯಾದರೂ.. ಇದೇನೂ ಹೊಸದಲ್ಲ. ಬಹುಶಃ ಮತ್ತೊಮ್ಮೆ ಷಷ್ಠಿ ಪೂರ್ತಿಯನ್ನು ತಮ್ಮ ರಾಘವೇಂದ್ರ ಅಥವಾ ತಮ್ಮ ಮಧು ಬಂಗಾರಪ್ಪ ನೆರವೇರಿಸಿದರೂ ಆಶ್ಚರ್ಯವಿಲ್ಲ. ಇದು ಕೇವಲ ಬಾಲ್ಯದ ಗೆಳೆಯರ ಜೊತೆ ನಡೆದಿರುವ ವಿಶೇಷ ಷಷ್ಠಿಪೂರ್ತಿ.



