ಭೈರತಿ ರಣಗಲ್ ಸಿನಿಮಾ ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿದೆ. ಶಿವಣ್ಣ ಕೂಡಾ ಎಂದಿನಂತೆ ಥಿಯೇಟರ್ ಜರ್ನಿ ಮಾಡುತ್ತಿದ್ದಾರೆ. ಅನಾರೋಗ್ಯವಾಗಿರುವುದು ಈ ವ್ಯಕ್ತಿಗೇನಾ.. ಆಪರೇಷನ್ ಆಗಬೇಕಿರೋ ವ್ಯಕ್ತಿ ಇವರೇನಾ.. ಎಂದು ಅಭಿಮಾನಿಗಳು ಅಚ್ಚರಿ ಪಡುವಂತೆ ರಾಜ್ಯವನ್ನೆಲ್ಲ ಸುತ್ತುತ್ತಿದ್ದಾರೆ ಶಿವಣ್ಣ. ಅಭಿಮಾನಗಳು ಭೈರತಿ ರಣಗಲ್ ಸಿನಿಮಾ ಕಣ್ತುಂಬಿಕೊಳ್ತಿದ್ದಾರೆ.
ಬಿಡುಗಡೆಗೂ ಮುನ್ನವೇ ‘ಭೈರತಿ ರಣಗಲ್’ ಸಿನಿಮಾ ಕ್ರೇಜ್ ಹುಟ್ಟಾಗಿತ್ತು. ಅದಕ್ಕೆ ತಕ್ಕಂತೆ ರಿಸಲ್ಟ್ ಕೂಡ ಸಿಕ್ಕಿದೆ. ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಮತ್ತೆ ವರ್ಕ್‌ಔಟ್ ಆಗಿದೆ. ವೀಕ್‌ಡೇಸ್‌ನಲ್ಲಿ ಸಿನಿಮಾದ ಗಳಿಕೆಯಲ್ಲಿ ಇಳಿಕೆ ಕಂಡಿತ್ತು. ಆದರೆ, ವೀಕೆಂಡ್‌ನಲ್ಲಿ ಮತ್ತೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದೆ.
ಭೈರತಿ ಬಾಕ್ಸಾಫೀಸ್ ಲೆಕ್ಕ
ಫಸ್ಟ್ ಡೇ : 2.10 ಕೋಟಿ ರೂ.
2ನೇ ದಿನ : 2.30 ಕೋಟಿ ರೂ.
3ನೇ ದಿನ : 3.40 ಕೋಟಿ ರೂ.
4ನೇ ದಿನ : 1.60 ಕೋಟಿ ರೂ.
5ನೇ ದಿನ 1.30 ಕೋಟಿ ರೂ.
6ನೇ ದಿನ : 1 ಕೋಟಿ ರೂ.
7ನೇ ದಿನ : 90 ಲಕ್ಷ ರೂ.
8ನೇ ದಿನ : 70 ಲಕ್ಷ ರೂ.
9ನೇ ದಿನ : 1.15 ಕೋಟಿ ರೂ.
10ನೇ ದಿನ : 1.17 ಕೋಟಿ ರೂ.
ಒಟ್ಟು 15.62 ಕೋಟಿ ರೂ. ಕಲೆಕ್ಷನ್ ಮಾಡಿದೆ.
‘ಭೈರತಿ ರಣಗಲ್’ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಇನ್ನೂ ಒಂದು ವಾರ ಅವಕಾಶವಿದೆ. ಇನ್ನೊಂದು ವಾರದಲ್ಲಿ ಬಾಕ್ಸಾಫೀಸ್‌ನಲ್ಲಿ ಹೀಗೆ ಕಲೆಕ್ಷನ್ ಮಾಡಿದರೆ, 20 ಕೋಟಿ ರೂಪಾಯಿ ಗಳಿಕೆ ಮಾಡಬಹುದು.
ಮಫ್ತಿ ಪಾತ್ರವನ್ನು ಜನ ತುಂಬ ಮೆಚ್ಚಿಕೊಂಡಿದ್ದರು. ಇಂತಹ ಸ್ವಿಕಲ್ ಪಾತ್ರ ಮಾಡಬೇಂದು ಬಹಳ ದಿನಗಳಿಂದ ಇತ್ತು. ಮಫ್ತಿ 7 ವರ್ಷಗಳ ಹಿಂದೆ ಮಾಡಿದ ಪಾತ್ರವಾಗಿದೆ. ಈಗ ಈ ಪಾತ್ರವನ್ನು ತುಂಬ ಅಚ್ಚುಕಟ್ಟಾಗಿ ನರ್ತನ್ ರವರು ಮಾಡಿದ್ದಾರೆ. ಇದರಿಂದ ಜನ ಚಿತ್ರಕ್ಕೆ ಇಷ್ಟೊಂದು ರೆಸ್ಪಾನ್ಸ್ ಮಾಡುತ್ತಿದ್ದಾರೆ ಎಂದಿದ್ದಾರೆ ಶಿವಣ್ಣ.
ನವೆಂಬರ್ 29 ರಿಂದ ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ಬಿಡುಗಡೆ ಅಗುತ್ತಿದೆ. ಚಿತ್ರವು ಈಗಾಗಲೇ ನವೆಂಬರ್ 21ರಂದು ಯು.ಎ.ಇ, ಒಮಾನ್ ಮತ್ತು ಖತಾರ್ ದೇಶಗಳಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಚಿತ್ರದ ಟ್ರೇಲರ್ ಕೂಡಾ ಈಗಾಗಲೇ ಬಿಡುಗಡೆಯಾಗಿದ್ದು ಭೈರತಿ ರಣಗಲ್ ಬಗ್ಗೆ ಗುಡ್ ರೆಸ್ಪಾನ್ಸ್ ಬರುತ್ತಿದೆ. ಚಿತ್ರವನ್ನು ತೆಲುಗಿನಲ್ಲಿ ಮೈತ್ರಿ ಮೂವೀ ಮೇಕರ್ಸ್ ರಿಲೀಸ್ ಮಾಡುತ್ತಿದೆ. ಆ ಲೆಕ್ಕ ನೋಡಿದರೆ ಕನ್ನಡದಲ್ಲಿ ಪುಷ್ಪ-2 ಬಿಡುಗಡೆಗೆ ಶಿವಣ್ಣ ಮುಖ್ಯ ಅತಿಥಿಯಾಗಬಹುದು. ಇನ್ನು ತಮಿಳು ನಾಡಿನಲ್ಲಿ ಎ.ಪಿ ಇಂಟರ್‍ನ್ಯಾಷನಲ್ ಸಂಸ್ಥೆಯು ತಮಿಳು ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿದೆ.
ನರ್ತನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಭೈರತಿ ರಣಗಲ್’ ಚಿತ್ರದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ, ರಾಹುಲ್ ಬೋಸ್, ಅವಿನಾಶ್, ದೇವರಾಜ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.



