ಶಿವರಾಜ್ʻಕುಮಾರ್ ಅಭಿನಯದ ಘೋಸ್ಟ್ ಮಿಸ್ ಮಾಡಿಕೊಂಡಿದ್ದವರಿಗೆ ಒಂದು ಗುಡ್ ನ್ಯೂಸ್. ಶಿವಣ್ಣನ ಘೋಸ್ಟ್ ಮನೆ ಮನೆಯಲ್ಲಿ, ಮೊಬೈಲುಗಳಲ್ಲಿ, ಲ್ಯಾಪ್ʻಟಾಪುಗಳಲ್ಲಿ, ಕಂಪ್ಯೂಟರುಗಳಲ್ಲಿ ನೋಡಬಹುದು. ನಾಳೆಯಿಂದ.
ಶಿವರಾಜ್ ಕುಮಾರ್ ‘ಘೋಸ್ಟ್’ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ರೆಡಿಯಾಗಿದೆ. ಇದು ಜೀ 5ನಲ್ಲಿ ನವೆಂಬರ್ 17ರಿಂದ ಪ್ರಸಾರ ಆಗಲಿದೆ. ಈ ಸಂಬಂಧ ಸ್ಪೆಷಲ್ ಪ್ರೋಮೋ ಬಿಡುಗಡೆ ಮಾಡಲಾಗಿದೆ.ಆ ಚೀಟಿಯ ಹಿಂಭಾಗಕ್ಕೆ ಶಿವರಾಜ್ ಕುಮಾರ್ ಬೆಂಕಿ ಹಿಡಿದಿರುವ ಅದರಲ್ಲಿ ಒಂದು ಮೆಸೇಜ್ ಕಂಡು ಬರುತ್ತದೆ. ಅದರಲ್ಲಿ ‘ಘೋಸ್ಟ್ʼ ಚಿತ್ರವನ್ನು ಜೀ-5ನಲ್ಲಿ ನವೆಂಬರ್ 17ರಿಂದ ನೋಡಬಹುದು ಎಂಬ ಮೆಸೇಜ್ ಮೂಡುತ್ತದೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಘೋಸ್ಟ್ 25 ದಿನ ಪೂರೈಸಿದ್ದು, ಭರ್ಜರಿ ಕಲೆಕ್ಷನ್ ಕೂಡಾ ಮಾಡಿದ್. ಶ್ರೀನಿ ನಿರ್ದೇಶನದ ಘೋಸ್ಟ್ ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಪ್ಯಾನ್ ಇಂಡಿಯಾ ಸಿನಿಮಾ.
ಬಾಲಿವುಡ್ ನಟ ಅನುಪಮ್ ಕೇರ್, ಮಾಲಿವುಡ್ ಸ್ಟಾರ್ ಜಯರಾಂ, ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ಚಿತ್ರದಲ್ಲಿ ನಾಯಕಿ ಇಲ್ಲ ಎನ್ನುವುದು ವಿಶೇಷ. ಅಂದಹಾಗೆ ಶ್ರೀನಿ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್ ಸ್ಟರ್ ಆಗಿ ಅಬ್ಬರಿಸಿರುವ ಶಿವಣ್ಣನ ʼಘೋಸ್ಟ್ʼ ಸಿನಿಮಾವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಜೀ5 ಒಟಿಟಿಯಲ್ಲಿ ನೋಡಬಹುದು.
ಶಿವಣ್ಣ ಘೋಸ್ಟ್ ಚಿತ್ರದಲ್ಲಿ ಬಿಗ್ ಡ್ಯಾಡಿ ದಳವಾಯಿ ಮುದ್ದಣ್ಣನಾಗಿ ಹಾಗೂ ಆನಂದ್ ಕುಮಾರ್ ಆಗಿ ನಟಿಸಿದ್ದರು. ಒಂದು ಪಾತ್ರ ಡಾನ್ʻದದ್ದಾದರೆ, ಇನ್ನೊಂದು ಪಾತ್ರ ಪೊಲೀಸ್ ಆಫೀಸರ್ʻದು. ಡಬಲ್ ಆಕ್ಟಿಂಗ್. ಎಲ್ಲವನ್ನೂ ಈಗ ಮನೆಯಲ್ಲೇ ಕೂತ್ಕೊಂಡು ನೋಡಬಹುದು. ಝೀ5 ಒಟಿಟಿಗೆ ಚಂದಾದಾರರಾಗಿರಬೇಕಷ್ಟೇ.



