ಶಿವ ರಾಜ್`ಕುಮಾರ್ (Shiva Rajkumar) ಅಭಿನಯದ ಚಿತ್ರ ತೆರೆಕಂಡು ಹೆಚ್ಚೂ ಕಡಿಮೆ 8 ತಿಂಗಳಾಯ್ತು. ವೇದ (Veda) ಚಿತ್ರ ರಿಲೀಸ್ ಆಗಿದ್ದು ಕಳೆದ ಡಿಸೆಂಬರಿನಲ್ಲಿ. ಸಿನಿಮಾ ಹಿಟ್ ಆದ ಮೇಲೆ ಶಿವಣ್ಣ (Shiva Rajkumar) ಸುದ್ದಿಗಳಿಗಂತೂ ಬರ ಇರಲಿಲ್ಲ. ಸಿನಿಮಾಗಳಿಗೂ ಬರ ಇರಲಿಲ್ಲ. ಶಿವಣ್ಣ (Shiva Rajkumar) ಈಗಲೂ ಸಖತ್ ಬ್ಯುಸಿ. ಆದರೆ 2023ರಲ್ಲಿ 8 ತಿಂಗಳಾದರೂ ಶಿವಣ್ಣ ಸಿನಿಮಾ ಪ್ರೇಕ್ಷಕರಿಗೆ ಕಾಣಿಸಿದ್ದು ಕೇವಲ ಅತಿಥಿ ನಟರಾಗಿ.
ಕಬ್ಜ (Kabza) ಚಿತ್ರದಲ್ಲಿ ಹೀರೋ ಉಪೇಂದ್ರ(Upendra). ಶಿವ ರಾಜ್`ಕುಮಾರ್ ಬರೋದು ಕ್ಲೈಮಾಕ್ಸ್‍ನಲ್ಲಿ. ಇನ್ನು ಈಗಲೂ ಥಿಯೇಟರುಗಳಲ್ಲಿ ಆರ್ಭಟಿಸುತ್ತಿರುವ ಜೈಲರ್ (Jailor) ಚಿತ್ರಕ್ಕೆ ಹೀರೋ ರಜನಿಕಾಂತ್ (Rajnikanth) ಅವರೇ ಹೊರತು, ಶಿವಣ್ಣ ಅಲ್ಲ. ಹೀಗಾಗಿಯೇ ಅಕ್ಟೋಬರ್`ನಲ್ಲಿ ಶಿವಣ್ಣ ಹಬ್ಬವನ್ನು ಸೆಲಬ್ರೇಟ್ ಮಾಡೋಕೆ ರೆಡಿಯಾಗಿದ್ದಾರೆ ಶಿವಣ್ಣ ಫ್ಯಾನ್ಸ್.
ಕಳೆದ ತಿಂಗಳಿಂದ ಹಿಟ್ ಮೇಲೆ ಹಿಟ್ ಕೊಡುತ್ತಿದೆ ಕನ್ನಡ ಚಿತ್ರರಂಗ. ಇದೀಗ ಅಕ್ಟೋಬರ್`ವರೆಗೂ ಸಿನಿಮಾಗಳ ಹಬ್ಬ ಕಂಟಿನ್ಯೂ ಆಗಲಿದ್ದು, ಘೋಸ್ಟ್ (Ghost) ಸಿನಿಮಾ ಅಕ್ಟೋಬರ್ 19ಕ್ಕೆ ರಿಲೀಸ್ ಘೋಷಣೆ ಮಾಡಿಕೊಂಡಿದೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದ ಘೋಸ್ಟ್`ನಲ್ಲಿ ಗ್ರಾಫಿಕ್ಸ್ ಕೆಲಸ ಸಖತ್ತಾಗಿದೆ.
ವಿಎಫ್‍ಎಕ್ಸ್‍ನ್ನು ಟೆಹರಾನ್‍ನಲ್ಲಿ ಮಾಡಿಸಿದ್ದು, ಸುಮಾರು 1800 ವಿಎಫ್ಎಕ್ಸ್ ಶಾಟ್ಗಳು ಸಿನಿಮಾದಲ್ಲಿದೆ. ಶಿವರಾಜ್ಕುಮಾರ್ ಅವರನ್ನು ಎಂದೂ ನೋಡಿರದ ಪಾತ್ರದಲ್ಲಿ ನೋಡಬಹುದು. ಅಂದಹಾಗೆ ಈ ಚಿತ್ರದಲ್ಲಿ ನಾಯಕಿಯೇ ಇಲ್ಲವಂತೆ. ಕೆಜಿಎಫ್’ ಖ್ಯಾತಿಯ ನಟಿ ಅರ್ಚನಾ ಜೊಯೀಸ್ (KGF fame actress Archana Jois) ಬಹುಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರಂತೆ.
ಮಲಯಾಳಂ ನಟ ಜಯರಾಮ್ (Malayalam actor Jayaram) ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್ ಕೂಡಾ ನಟಿಸಿದ್ದಾರೆ. ಒಟ್ಟಿನಲ್ಲಿ ಘೋಸ್ಟ್ ಕನ್ನಡದ ಬಹುನಿರೀಕ್ಷಿತ ಸಿನಿಮಾ.
ಈಗಾಗಲೇ (Ghost) ಚಿತ್ರದ ಟೀಸರ್, ಬಿಗ್ ಡ್ಯಾಡಿ ಎಲ್ಲವೂ ಸಖತ್ತಾಗಿಯೇ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿವೆ. ಇದೇ ಮೊದಲ ಬಾರಿಗೆ ಸಂದೇಶ್ ನಾಗರಾಜ್ ಬ್ಯಾನರ್`ನಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಘೋಸ್ಟ್ (Ghost) ಘರ್ಜನೆಯಂತೂ ಜೋರಾಗಿಯೇ ಇದೆ.



