ಆನಂದ್. ಈ ಚಿತ್ರವನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ. ಈ ಚಿತ್ರದ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಾಲೇಜು ಹುಡುಗನಾಗಿ ಎಂಟ್ರಿ ಕೊಟ್ಟರೆ, 7ನೇ ಕ್ಲಾಸ್ ಸುಧಾರಾಣಿ ನಾಯಕಿಯಾಗಿ ಬಂದರು. ಆನಂದ್-ಮಾಲಾ ಜೋಡಿ ಸೂಪರ್ ಹಿಟ್ ಆಯ್ತು. ಅದಾದ ಮೇಲೆ ಶಿವಣ್ಣ-ಸುಧಾರಾಣಿ ಮನ ಮೆಚ್ಚಿದ ಹುಡುಗಿ, ಮಿಡಿದ ಶೃತಿ, ಸಮರ, ರಣರಂಗ.. ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಸೂಪರ್ ಹಿಟ್ ಜೋಡಿಗಳಲ್ಲಿ ಒಂದು. ಹೀಗಾಗಿ ಸುಧಾರಾಣಿ ಮತ್ತು ಶಿವಣ್ಣರ ನಡುವೆ ಇರುವ ಬಾಂಡಿಂಗ್ ಬೇರೆಯೇ.
ಆನಂದ್ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಕಾಲಿಟ್ಟ ಸುಧಾರಾಣಿ ಮತ್ತು ಶಿವರಾಜ್ ಕುಮಾರ್ ನಡುವೆ ಒಂದು ರೀತಿಯ ಅವಿನಾಭಾವ ಬಾಂಧವ್ಯವಿದೆ. ಇದೀಗ ಶಿವಣ್ಣ ಅಮೆರಿಕದಿಂದ ಕ್ಯಾನ್ಸರ್ ಗೆದ್ದು ವಾಪಸ್ ಆಗಿದ್ದಾರೆ. ಕ್ಯಾನ್ಸರ್ ಗೆದ್ದಿದ್ದಾರೆ. ಶಿವಣ್ಣ ಅವರನ್ನು ಚಿತ್ರರಂಗದ ಬಹುತೇಕ ಗಣ್ಯರು, ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮನೆಗೆ ಹೋಗಿ ಆರೋಗ್ಯ ವಿಚಾರಿಸಿದ್ದಾರೆ. ಆದರೆ ಶಿವಣ್ಣ ರಿಟರ್ನ್ ಆಗಿರುವುದು ಆಸ್ಪತ್ರೆಯಿಂದ. ಹೀಗಾಗಿ ಎಲ್ಲರನ್ನೂ ಭೇಟಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಸುಧಾರಾಣಿ ಮತ್ತು ಮಗಳು ನಿಧಿ ಬೇರೆಯದೇ ರೀತಿಯಲ್ಲಿ ವೆಲ್ ಕಂ ಮಾಡಿದ್ದಾರೆ.
ಆನಂದ್ ಚಿತ್ರದ ಕ್ಲೈಮಾಕ್ಸ್ ಸಾಂಗ್ ತಿಮ್ಮಾ ತಿಮ್ಮಾ ಹಾಡಿಗೆ ಮಗಳು ನಿಧಿ ಜೊತೆ ಸ್ಟೆಪ್ಸ್ ಹಾಕಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ʼಶಿವಣ್ಣ ಅವರು ಯುಎಸ್‌ನಿಂದ ವಾಪಸ್ ಬಂದಿದ್ದಕ್ಕೆ ಸೆಲಬ್ರೇಟ್ ಮಾಡಲೇಬೇಕು. ಹಾಗಾಗಿ ಆನಂದ್ ಸಿನಿಮಾದ, ನಮ್ಮ ನೆಚ್ಚಿನ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡುತ್ತಿದ್ದೇವೆʼ ಎಂದು ಬರೆದುಕೊಂಡಿದ್ದಾರೆ.
ಇನ್ನು ತಿಮ್ಮಾ ತಿಮ್ಮಾ.. ಹಾಡು ಆನಂದ್ ಚಿತ್ರದ ಕ್ಲೈಮಾಕ್ಸ್ ವೇಳೆ ಬರುವ ಹಾಡು. ಈ ಹಾಡಿನಲ್ಲಿ ಹಾಡಿ ಕುಣಿಯುವ ಆನಂದ್ ಮತ್ತ ಮಾಲಾ, ಖಳರಿಂದ ಕಿಡ್ನಾಪ್ ಆಗಿದ್ದ ರಾಜೇಶ್ ಅವರನ್ನು ಬಿಡಿಸಿಕೊಂಡು ಹೋಗುತ್ತಾರೆ.
ಇನ್ನು ಶಿವಣ್ಣ ಅವರಿಗೆ ಕನ್ನಡ ಚಿತ್ರರಂಗವೇ ಭರ್ಜರಿಯಾಗಿ ಸ್ವಾಗತ ಕೋರಿದೆ. ಆದರೆ ಸುಧಾರಾಣಿ ಕೋರಿರುವ ಸ್ವಾಗತವೇ ವಿಶೇಷ. ಇತ್ತೀಚೆಗೆ ಸುಧಾರಾಣಿ ಮಗಳು ನಿಧಿ, ಲಾಯರ್ ಆಗಿ ಡಿಗ್ರಿ ಪಡೆದಿದ್ದಾರೆ. ಹೈಕೋರ್ಟ್ ವಕೀಲೆಯಾಗಿ ಪಾಸ್ ಆಗಿದ್ಧಾರೆ. ಪ್ರಾಕ್ಟೀಸ್ ಶುರು ಮಾಡಿದ್ದಾರೆ.
ಆನಂದ್ ಸಿನಿಮಾ ಸಿಂಗೀತಂ ಶ್ರೀನಿವಾಸ ರಾವ್ ಕಥೆ ಬರೆದು ನಿರ್ದೇಶನ ಮಾಡಿದ ಕನ್ನಡ ಸಿನಿಮಾ ಆಗಿದ್ದು, ಈ ಸಿನಿಮಾ ಮೂಲಕ ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಇಬ್ಬರೂ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಈ ಸಿನಿಮಾದ ಹಾಡಾದ ತಿಮ್ಮ ತಿಮ್ಮ ತಿಮ್ಮ ತಿಮ್ಮ, ನಮ್ಮ ಗೆಳೆಯ ತಿಮ್ಮನನ್ನು ಕಚ್ಚಿ ಕೊಂದ ಸರ್ಪವೇ ಹಾಡಿಗೆ ಸುಧಾರಾಣಿ ಪುತ್ರಿ ಜೊತೆ ಹೆಜ್ಜೆ ಹಾಕಿದ್ದಾರೆ. ಶಿವಣ್ಣ ರಾಕಿಂಗ್ ಆಗಿ ಮರಳಿ ಬಂದಿರೋದನ್ನು ನನ್ನ ಫೇವರಿಟ್ ಹಾಡಿನ ಮೂಲಕ ಸೆಲೆಬ್ರೇಟ್ ಮಾಡುವುದಾಗಿ ನಟಿ ವಿಡಿಯೋದಲ್ಲಿ ತಿಳಿಸಿದ್ದಾರೆ.



